• Home
 • »
 • News
 • »
 • tech
 • »
 • Facebook: ನೆಟ್ಟಿಗರ 'ಎದೆಗಾರಿಕೆ'ಗೆ ಮೆತ್ತಗಾದ ಮೆಟಾ, 'ಆ ತರ'ದ ಫೋಟೋಗಳ ರೂಲ್ಸ್ ಬದಲಿಸಿದ ಸೋಶಿಯಲ್ ಮೀಡಿಯಾ ದಿಗ್ಗಜ!

Facebook: ನೆಟ್ಟಿಗರ 'ಎದೆಗಾರಿಕೆ'ಗೆ ಮೆತ್ತಗಾದ ಮೆಟಾ, 'ಆ ತರ'ದ ಫೋಟೋಗಳ ರೂಲ್ಸ್ ಬದಲಿಸಿದ ಸೋಶಿಯಲ್ ಮೀಡಿಯಾ ದಿಗ್ಗಜ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಗ್ನ ಸ್ತನಗಳನ್ನು ತೋರಿಸುವ ಫೋಟೊಗಳ ಮೇಲೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳು ನಿಷೇಧ ಹೇರಿದ್ದವು. ಸಾಮಾಜಿಕ ಜಾಲತಾಣಗಳ ಈ ನಿರ್ಧಾರವನ್ನು ಖಂಡಿಸಿದ ಅನೇಕರು ಹೋರಾಟಕ್ಕೆ ಇಳಿದಿದ್ದರು. 'Free the Nipple' ಎಂಬ ಅಭಿಯಾನದೊಂದಿಗೆ ಸಾಮಾಜಿಕ ಜಾಲತಾಣಗಳ ನಿಷೇಧವನ್ನು ಪ್ರಶ್ನಿಸಿ ಒಂದು ದಶಕದವರೆಗೂ ಹೋರಾಟ ಮಾಡುತ್ತಿದ್ದವು.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • New Delhi, India
 • Share this:

ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಮ್, ಬಳಕೆದಾರರಿಗೆ ಕೆಲ ನಗ್ನ ಫೋಟೋಗಳನ್ನು ಹಂಚಿಕೊಳ್ಳುವುದಕ್ಕೆ ಬ್ರೇಕ್‌ ಹಾಕಿತ್ತು. ಅದರಲ್ಲೂ ವಿಶೇಷವಾಗಿ ನಗ್ನ ಸ್ತನಗಳನ್ನು ತೋರಿಸುವ ಫೋಟೋಗಳನ್ನು ಈ ಎರಡೂ ಸಾಮಾಜಿಕ ಜಾಲತಾಣಗಳು (Social Media) ನಿಷೇಧಿಸಿದ್ದವು. ಆದರೆ ಈ ನಿಷೇಧಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದವು. ಅಭಿಯಾನ, ವಿರೋಧದ ಪರಿಣಾಮವಾಗಿ ಪ್ರಸ್ತುತ ನಗ್ನ ಸ್ತನಗಳನ್ನು ತೋರಿಸುವ ಫೋಟೊಗಳ (Photo) ನಿಷೇಧ ತೆರವಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳು (Instagram) ನಿರ್ಧಾರ ಮಾಡಿವೆ ಎಂದು ವರದಿ (Report) ಹೇಳಿದೆ. ಒಂದು ದಶಕದ ಸುದೀರ್ಘ ಹೋರಾಟದ ನಂತರ ಈ ಮಹತ್ವದ ನಿರ್ಧಾರಕ್ಕೆ ಸಾಮಾಜಿಕ ಮಾಧ್ಯಮಗಳು ಮುಂದಾಗಿವೆ.


ನಿಷೇಧ ವಿರೋಧಿಸಿ ಅಭಿಯಾನ


ನಗ್ನ ಸ್ತನಗಳನ್ನು ತೋರಿಸುವ ಫೋಟೊಗಳ ಮೇಲೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳು ನಿಷೇಧ ಹೇರಿದ್ದವು. ಸಾಮಾಜಿಕ ಜಾಲತಾಣಗಳ ಈ ನಿರ್ಧಾರವನ್ನು ಖಂಡಿಸಿದ ಅನೇಕರು ಹೋರಾಟಕ್ಕೆ ಇಳಿದಿದ್ದರು. 'Free the Nipple' ಎಂಬ ಅಭಿಯಾನದೊಂದಿಗೆ ಸಾಮಾಜಿಕ ಜಾಲತಾಣಗಳ ನಿಷೇಧವನ್ನು ಪ್ರಶ್ನಿಸಿ ಒಂದು ದಶಕದವರೆಗೂ ಹೋರಾಟ ಮಾಡುತ್ತಿದ್ದವು. ಈ ಅಭಿಯಾನವು ಸ್ತನಗಳ ಫೋಟೋಗಳನ್ನು ನಿಷೇಧಿಸಿದ್ದರ ವಿರುದ್ಧವಾಗಿತ್ತು ಮತ್ತು ಲಿಂಗ ತಾರತಮ್ಯ ಎಂಬ ದೊಡ್ಡ ಕೂಗು ಕೇಳಿ ಬಂದಿತ್ತು.


ಸ್ತನ್ಯಪಾನ ಮಾಡುವ ತಾಯಂದಿರು ಸ್ತನಗಳ ಮೇಲಿನ ನಿಷೇಧದ ವಿರುದ್ಧ ಪ್ರತಿಭಟಿಸಲು ಫೇಸ್‌ಬುಕ್‌ನ ಪ್ರಧಾನ ಕಛೇರಿಯಲ್ಲಿ ಜಮಾಯಿಸಿದ್ದರು. ಈ ಅಭಿಯಾನವು ಕಾಲೇಜು ಕ್ಯಾಂಪಸ್‌ಗಳಲ್ಲಿ ವ್ಯಾಪಕ ಬೆಂಬಲವನ್ನು ಗಳಿಸಿತು ಮತ್ತು ರಿಹಾನ್ನಾ, ಮಿಲೀ ಸೈರಸ್ ಮತ್ತು ಲೀನಾ ಡನ್‌ಹ್ಯಾಮ್ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳಿಂದ ಬೆಂಬಲ ಸಹ ಪಡೆದಿತ್ತು.


ಮೇಲ್ವಿಚಾರಣಾ ಮಂಡಳಿ ರಚಿಸಿದ್ದ ಮೆಟಾ


ಅಭಿಯಾನ, ವಿರೋಧಗಳಿಗೆ ಮಣಿದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಈ ಬಗ್ಗೆ ವಿಚಾರಣೆ ಮಾಡಲು ಮೇಲ್ವಿಚಾರಣಾ ಮಂಡಳಿಯನ್ನು ರಚಿಸಿತ್ತು. ಸದ್ಯ ಈ ಮಂಡಳಿ ನೀಡಿರುವ ಹೇಳಿಕೆಯನುಸಾರ ನಗ್ನ ಸ್ತನಗಳ ಫೋಟೋಗಳನ್ನು ನಿಷೇಧಿಸಿದ ತಮ್ಮ ಕಟ್ಟುನಿಟ್ಟಾದ ನಿಯಮವನ್ನು ತೆಗೆದುಹಾಕಲು ಮೆಟಾ ಸಂಸ್ಥೆ ನಿರ್ಧರಿಸಿದೆ.


ದಿ ಗಾರ್ಡಿಯನ್‌ನ ವರದಿಯ ಪ್ರಕಾರ, ಮೆಟಾದ ಮೇಲ್ವಿಚಾರಣಾ ಮಂಡಳಿಯು ನಗ್ನ-ಎದೆಯ ಮಹಿಳೆಯರ ಫೋಟೊಗಳಿಗೆ ನಿರ್ಬಂಧ ಹೇರುವುದರ ಕುರಿತಾಗಿ ಕೂಲಂಕುಷ ಮೇಲ್ವಿಚಾರಣೆ ಮಾಡಿದೆ.


ಇದನ್ನೂ ಓದಿ: Kalika Habba: ಶಾಲೆಗಳಲ್ಲಿ ಆರಂಭವಾಯ್ತು ಕಲಿಕಾ ಹಬ್ಬ! ಮಕ್ಕಳಲ್ಲಿ ಹೆಚ್ಚಿದ ಉತ್ಸಾಹ


ಮೇಲ್ವಿಚಾರಣಾ ಮಂಡಳಿ ನಿರ್ಧಾರಕ್ಕೆ ಮೆಟಾ ಸ್ವಾಗತ!?


ಜನವರಿ 17 ರಂದು ಮೇಲ್ವಿಚಾರಣಾ ಮಂಡಳಿಯು, ಮೆಟಾ ತನ್ನ ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಯ ಸಮುದಾಯದ ಮಾನದಂಡವನ್ನು "ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳನ್ನು ನಾವು ಗೌರವಿಸಬೇಕಿದೆ. ಇದನ್ನು ಬದಲಾಯಿಸುವ ಅಗತ್ಯವಿದೆ" ಎಂದು ಮೆಟಾದ ಮೇಲ್ವಿಚಾರಣಾ ಮಂಡಳಿಯು ಶಿಫಾರಸು ಮಾಡಿದೆ. ಹಾಗೆಯೇ ಮಂಡಳಿಯ ಈ ಶಿಫಾರಸುಗಳನ್ನು ಮೆಟಾ ಅನುಸರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


ಮೆಟಾಗೆ 60 ದಿನಗಳ ಕಾಲಾವಕಾಶ


"ನಮ್ಮ ಪ್ಲಾಟ್‌ಫಾರ್ಮ್‌ಗಳನ್ನು ಎಲ್ಲರಿಗೂ ಸುರಕ್ಷಿತವಾಗಿಸಲು ಸಹಾಯ ಮಾಡಲು ನಾವು ನಿರಂತರವಾಗಿ ನಮ್ಮ ನೀತಿಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ" ಎಂದು ಮೆಟಾ ವಕ್ತಾರರು ಹೇಳಿದ್ದಾರೆ. ಮಂಡಳಿಯ ಶಿಫಾರಸುಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ಮೆಟಾಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ.ಮೇಲ್ವಿಚಾರಣಾ ಮಂಡಳಿ ಮಾಡಿರುವ ಶಿಫಾರಸು


ಮಂಡಳಿಯು ತನ್ನ ಶಿಫಾರಸಿನಲ್ಲಿ, "ಹಳೆಯ ನೀತಿಯು ಲಿಂಗಗಳ ನಡುವೆ ತಾರತಮ್ಯ ಮಾಡುತ್ತದೆ. ಈ ದೃಷ್ಟಿಕೋನ ಬದಲಾಗಬೇಕಿದೆ. ಪುರುಷ ಮತ್ತು ಮಹಿಳೆಯರ ದೇಹಗಳ ನಡುವಿನ ವ್ಯತ್ಯಾಸವನ್ನು ಹಳೆಯ ನೀತಿ ಆಧರಿಸಿದೆ' ಎಂದು ಹೇಳಿದೆ.


ನಗ್ನತೆಯ ಬಗ್ಗೆ ಮಾತನಾಡುವಾಗ ಮೆಟಾ "ಸ್ಪಷ್ಟ, ವಸ್ತುನಿಷ್ಠ, ಹಕ್ಕುಗಳನ್ನು ಗೌರವಿಸುವ ಮಾನದಂಡಗಳನ್ನು ವ್ಯಾಖ್ಯಾನಿಸಬೇಕು" ಎಂದು ಮಂಡಳಿಯು ಸ್ಪಷ್ಟಪಡಿಸಿದೆ. "ಇದರಿಂದಾಗಿ ಎಲ್ಲಾ ಜನರನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ" ಎಂದಿದೆ.


ಶಿಕ್ಷಣ ತಜ್ಞರು, ಹಕ್ಕುಗಳ ತಜ್ಞರು ಮತ್ತು ವಕೀಲರನ್ನು ಒಳಗೊಂಡಿರುವ ಮೇಲ್ವಿಚಾರಣಾ ಮಂಡಳಿಯನ್ನು ಮೆಟಾ ಕಂಪನಿ ರಚನೆ ಮಾಡಿತ್ತು ಮತ್ತು ಈ ಬಗ್ಗೆ ಸ್ಪಷ್ಟನೆಯನ್ನು ಕೋರಿತ್ತು.


ಮೆಟಾದ ಕಟ್ಟುನಿಟ್ಟಾದ ನಗ್ನತೆಯ ನೀತಿಯು ತೀವ್ರ ಚರ್ಚೆಯ ವಿಷಯವಾಗಿದೆ. 2018 ರಲ್ಲಿ ಸಿಇಒ ಮಾರ್ಕ್ ಜುಕರ್‌ಬರ್ಗ್ ಮೆಟಾ ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

First published: