WhatsApp: ನಿಮ್ಮ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್ ಆಗಿದ್ಯಾ? ಚಿಂತಿಸದಿರಿ ಅದನ್ನು ಮತ್ತೆ ಓಪನ್ ಮಾಡಲು ಈ ರೀತಿ ಮಾಡಿ

ನಿಮ್ಮ ಖಾತೆ ಏನಾದರೂ ಬ್ಯಾನ್ ಆಗಿದ್ದರೆ ಆ ಖಾತೆಗಾಗಿ ಮೇಲ್ಮನವಿ ಸಲ್ಲಿಸಲು ಶೀಘ್ರದಲ್ಲಿಯೇ ಅನುಮತಿ ನೀಡುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ವಾಟ್ಸಪ್ ನ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ವಾಟ್ಸಪ್ ನ ಬೆಂಬಲವನ್ನು ಸಂಪರ್ಕಿಸಲು ಬಳಕೆದಾರರು ಅಪ್ಲಿಕೇಶನ್‌ನಲ್ಲಿಯೇ ಆಯ್ಕೆಯನ್ನು ಮಾಡಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜಗತ್ತಿನಲ್ಲಿ ಯಾರೋ ಒಬ್ಬ ವ್ಯಕ್ತಿಗೆ ಬ್ಯಾಂಕ್ ಖಾತೆ (Bank Account) ಇಲ್ಲದಿರಬಹುದು ಆದರೆ ಈ ಟೆಕ್ನಾಲಜಿ (Technology) ಬಂದ ಮೇಲೆ ಪ್ರತಿಯೊಬ್ಬರು ಈ ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ. ಅಷ್ಟೊಂದು ಫೇಮಸ್ ಅಪ್ಲಿಕೇಶನ್ (Famous Application) ಇದಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ವಾಟ್ಸಪ್ ನಿಂದ (WhatsApp) ಎಷ್ಟೆಲ್ಲ ಪ್ರಯೋಜನಗಳು ಇವೆಯೋ ಹಾಗೆಯೇ ಅದರಿಂದ ಅನೇಕರು ತೊಂದರೆಗೆ ಒಳಗಾಗಿದ್ದಾರೆ ಎಂದು ನಾವು- ನೀವು ದಿನನಿತ್ಯ ಪತ್ರಿಕೆಗಳು- ವಾರ್ತೆಗಳಲ್ಲಿ (News) ನೋಡುತ್ತಲೇ ಇರುತ್ತೇವೆ. ಈ ವಾಟ್ಸಪ್ ಬಂದ ಮೇಲೆ ಎಲ್ಲರೂ ಈ ಅಪ್ಲಿಕೇಶನ್ ಗೆ ತುಂಬಾನೇ ಅಡಿಕ್ಟ್ ಆಗಿದ್ದಾರೆ.

ಸಾವಿರಾರು ಖಾತೆಗಳನ್ನು ಬ್ಯಾನ್ ಮಾಡುತ್ತಿರುವ ವಾಟ್ಸಪ್
ಪ್ರತಿ ತಿಂಗಳು, ವಾಟ್ಸಪ್ ಅಪ್ಲಿಕೇಶನ್ ಸಾವಿರಾರು ಖಾತೆಗಳನ್ನು ಬ್ಯಾನ್ ಮಾಡುತ್ತಿದೆ. ಈ ಬ್ಯಾನ್ ಮಾಡಲಾದ ಖಾತೆಗಳನ್ನು ಮತ್ತೆ ಓಪನ್ ಮಾಡುವುದಕ್ಕೆ ವಾಟ್ಸಪ್ ಮತ್ತೊಂದು ಅವಕಾಶ ನೀಡುತ್ತಿದೆ. ಅದರ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ ಬನ್ನಿ.

ನಿಮ್ಮ ಖಾತೆ ಏನಾದರೂ ಬ್ಯಾನ್ ಆಗಿದ್ದರೆ ಆ ಖಾತೆಗಾಗಿ ಮೇಲ್ಮನವಿ ಸಲ್ಲಿಸಲು ಶೀಘ್ರದಲ್ಲಿಯೇ ಅನುಮತಿ ನೀಡುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ವಾಟ್ಸಪ್ ನ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ವಾಟ್ಸಪ್ ನ ಬೆಂಬಲವನ್ನು ಸಂಪರ್ಕಿಸಲು ಬಳಕೆದಾರರು ಅಪ್ಲಿಕೇಶನ್‌ನಲ್ಲಿಯೇ ಆಯ್ಕೆಯನ್ನು ಮಾಡಬಹುದು.

16 ಲಕ್ಷಕ್ಕೂ ಹೆಚ್ಚು ಭಾರತೀಯ ವಾಟ್ಸಪ್ ಖಾತೆ ಬ್ಯಾನ್
ಪ್ರತಿ ತಿಂಗಳು, ವಾಟ್ಸಪ್ ನ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸದ ಸಾವಿರಾರು ಖಾತೆಗಳನ್ನು ವಾಟ್ಸಪ್ ಬ್ಯಾನ್ ಮಾಡುತ್ತದೆ. ಕೆಲವು ವಾರಗಳ ಹಿಂದೆ, ಈ ವಾಟ್ಸಪ್ 16 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ಬ್ಯಾನ್ ಮಾಡಿತ್ತು. ಬ್ಯಾನ್ ಮಾಡಲಾದ ಖಾತೆಗಳಿಗೆ ಎರಡನೇ ಅವಕಾಶವನ್ನು ನೀಡಲು ವಾಟ್ಸಪ್ ಬಯಸಿದೆ ಎಂದು ಈಗ ಇದರಿಂದ ಸ್ಪಷ್ಟಗೊಂಡಿದೆ.

ಇದನ್ನೂ ಓದಿ:  Flikart: ಮೊದಲ ಬಾರಿಗೆ ಕಡಿಮೆ ಬೆಲೆಗೆ ಖರೀದಿಗೆ ಸಿಗುತ್ತಿದೆ Moto G71 ಸ್ಮಾರ್ಟ್​ಫೋನ್!

ನಿಮ್ಮ ವಾಟ್ಸಪ್ ಅಕೌಂಟ್ ಬ್ಯಾನ್ ಆಗಿದ್ರೆ ಹೇಗೆ ತಿಳಿಯುತ್ತದೆ
ನಿಮ್ಮ ಖಾತೆ ಏನಾದರೂ ಬ್ಯಾನ್ ಆಗಿದ್ದರೆ, ನೀವು ನಿಮ್ಮ ವಾಟ್ಸಪ್ ಅನ್ನು ತೆರೆದಾಗ "ನಿಮಗೆ ಈ ಖಾತೆಯನ್ನು ವಾಟ್ಸಪ್ ಬಳಸಲು ಅನುಮತಿಯನ್ನು ನೀಡಲಾಗುವುದಿಲ್ಲ' ಎಂಬ ಸಂದೇಶ ಕಾಣಿಸುತ್ತದೆ ಹಾಗೆಯೇ ನಂತರದಲ್ಲಿ “ನಿಮ್ಮ ಖಾತೆಯ ಚಟುವಟಿಕೆಯು ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನಮಗೆ ಕಂಡು ಬಂದರೆ ನಾವು ನಿಮ್ಮ ಖಾತೆಗಳನ್ನು ಬ್ಯಾನ್ ಮಾಡುತ್ತೇವೆ, ಉದಾಹರಣೆಗೆ ಅದು ಸ್ಪ್ಯಾಮ್ ಒಳಗೊಂಡಿದ್ದರೆ ಅಥವಾ ವಾಟ್ಸಪ್ ನ ಬಳಕೆದಾರರ ಸುರಕ್ಷತೆಗೆ ಆ ಖಾತೆಯು ಅಪಾಯವನ್ನುಂಟುಮಾಡಿದರೆ ಆ ಖಾತೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡುತ್ತೇವೆ" ಎಂದು ನಿಯಮಗಳಲ್ಲಿ ನೀಡಲಾಗಿರುತ್ತದೆ.

ಬಳಕೆದಾರರು ತಮ್ಮ ನಿಷೇಧಿತ ವಾಟ್ಸಪ್ ಖಾತೆಗೆ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ ಅಪ್ಲಿಕೇಶನ್‌ನಲ್ಲಿಯೇ ವಾಟ್ಸಪ್ ಸಪೋರ್ಟ್ ಅನ್ನು ಸಂಪರ್ಕಿಸುವ ಆಯ್ಕೆಯನ್ನು ಬಳಕೆದಾರರು ಪಡೆಯುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ.

ಕ್ಲೋಸ್ ಆದ ವಾಟ್ಸಾಪ್ ಅಕೌಂಟ್ ಮರಳಿ ಪಡೆಯುವುದು ಹೇಗೆ
ಪ್ರಸ್ತುತ, ಈ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಆಯ್ಕೆಯನ್ನು ನೀವು ಪಡೆಯುವುದಿಲ್ಲ ಆದರೆ ನಿಮ್ಮ ಖಾತೆಯನ್ನು ಮರಳಿ ಪಡೆಯಲು ವಿಮರ್ಶೆಯ ವಿನಂತಿಯನ್ನು ಆಯ್ಕೆ ಮಾಡಲು ನೀವು ವಾಟ್ಸಪ್ ನ ಇತ್ತೀಚಿನ ಬೀಟಾ ಆವೃತ್ತಿಯು ಅಪ್ಲಿಕೇಶನ್‌ನಲ್ಲಿ ಬ್ಯಾನ್ ಆದ ಖಾತೆಗಳಿಗೆ ಹಿಂತೆಗೆದುಕೊಳ್ಳುವ ಆಯ್ಕೆಯನ್ನು ತೋರಿಸುತ್ತದೆ ಮತ್ತು ನೀವು ಅದನ್ನು ಒಮ್ಮೆ ಆಯ್ಕೆ ಮಾಡಿದರೆ, ವಾಟ್ಸಪ್ ಸಪೋರ್ಟ್ ತಂಡವು "ತಮ್ಮ ಸೇವಾ ನಿಯಮಗಳಿಗೆ ವಿರುದ್ಧವಾದ ಕಾನೂನುಬಾಹಿರ ಚಟುವಟಿಕೆಯನ್ನು ಪರಿಶೀಲನೆ ನಡೆಸುತ್ತದೆ" ಎಂದು ಒಂದು ಸಂದೇಶವನ್ನು ಕಳಿಸುತ್ತದೆ.

ಇದನ್ನೂ ಓದಿ:  Big Battery Mobile: ಚಾರ್ಜ್ ಬಗ್ಗೆ ತಲೆ ಕೆಡಿಸ್ಕೋಬೇಡಿ! ಈ ಸ್ಮಾರ್ಟ್​ಫೋನ್ ಜೊತೆಗಿದ್ರೆ ಸಮಸ್ಯೆನೇ ಇರೋಲ್ಲಾ

ಈ ತಂಡವು ವಿಮರ್ಶೆಯನ್ನು ಸಲ್ಲಿಸಿದ ನಂತರ, ನಿಮ್ಮ ಖಾತೆಯನ್ನು ತಪ್ಪಾಗಿ ಬ್ಯಾನ್ ಮಾಡಲಾಗಿದೆ ಎಂದು ಮನಗಂಡರೆ ಪ್ಲಾಟ್‌ಫಾರ್ಮ್ ನಿಮ್ಮ ಖಾತೆಯನ್ನು ಮತ್ತೆ ಸಕ್ರಿಯಗೊಳಿಸುವ ಸಾಧ್ಯತೆಗಳಿವೆ. ನಿಮ್ಮ ಖಾತೆಯು ಸೇವಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು WhatsApp ಕಂಡುಕೊಂಡರೆ, ನಿಮ್ಮ ಹಳೆಯ ಖಾತೆಯನ್ನು ಮರುಬಳಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ನಿಮಗೆ ಮೂರನೇ ಅವಕಾಶವೂ ಸಿಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ವಾಟ್ಸಪ್ ನ ಸಪೋರ್ಟ್ ತಂಡದಿಂದ ಸಂದೇಶ ಬರುತ್ತದೆ.
Published by:Ashwini Prabhu
First published: