ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಗೊಂಡಿರುವ NoPo ನ್ಯಾನೊ ಟೆಕ್ನಾಲಜೀಸ್ ಪ್ರಪಂಚದಲ್ಲೇ ಅತ್ಯಂತ ಶಕ್ತಿಶಾಲಿ ಹಾಗೂ ಸಣ್ಣ ವಸ್ತುವಾದ ಕಾರ್ಬನ್ ನ್ಯಾನೊಟ್ಯೂಬ್‌ಗಳನ್ನು ತಯಾರಿಸುವ ಸಂಸ್ಥೆಗಳಲ್ಲಿ ಒಂದಾಗಿದೆ. SWCNT ಗಳು ಅಥವಾ ಕಾರ್ಬನ್ ನ್ಯಾನೊಟ್ಯೂಬ್‌ಗಳನ್ನು ತಯಾರಿಸುವ ಈ ಸಂಸ್ಥೆ ಸಣ್ಣ ವ್ಯಾಸದ ಕಾರ್ಬನ್ ನ್ಯಾನೊಟ್ಯೂಬ್‌ಗಳನ್ನು ತಯಾರಿಸುವ ವಿಶ್ವದ ಏಕೈಕ ಕಂಪನಿಯಾಗಿ ಹೊರಹೊಮ್ಮಿದೆ. ಇಷ್ಟಲ್ಲದೆ ಈ ಸಂಸ್ಥೆ, ಉದ್ಯಮ ಜಗತ್ತಿನಲ್ಲಿ ಕೂಡ ಪ್ರಚಂಡ ಕಂಪನಿಗಳನ್ನೇ ಸೆಳೆದಿದ್ದು, NITI ಆಯೋಗ್, ನೌಕಾಪಡೆ ಮತ್ತು ಎಲಾನ್ ಮಸ್ಕ್ ಅವರ ಟೆಸ್ಲಾ ಮೋಟರ್ಸ್‌ನ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
NoPo ಸಂಸ್ಥಾಪಕ ಗಧಾದರ್ ಅವರ ಗುರಿಯೇ ಈ ನ್ಯಾನೊಟ್ಯೂಬ್ ಮೂಲಕ ಮಂಗಳ ಗ್ರಹವನ್ನು ತಲುಪುವುದು. ಈ ಉದ್ದೇಶದಿಂದ ಸ್ಥಾಪನೆಯಾದಂತಹ ಈ ಸಂಸ್ಥೆ ಇಂದು ವಿಶ್ವದಲ್ಲೇ ಬಹಳ ಜನಪ್ರಿಯತೆಯನ್ನು ಪಡೆದಿದೆ. ಇದೀಗ ಇದರ ಕಾರ್ಯವೈಖರಿ ಮೂಲಕ ಟೆಸ್ಲಾದ ಮೇಲೂ ಪ್ರಭಾವ ಬೀರಿದೆ.
ಮಾನವನ ಕೂದಲಿನ ಎಳೆಗಿಂತಲೂ ತೆಳು
ಈ ನ್ಯಾನೊಟ್ಯೂಬ್‌ಗಳು ಏಕಪದರವಿರುವ ಇಂಗಾಲದ ಪರಮಾಣುಗಳ ಸಿಲಿಂಡರಾಕಾರದ ರಚನೆಗಳಾಗಿದ್ದು, ಅತ್ಯಂತ ಸೂಕ್ಷ್ಮ ವಸ್ತು ಎಂದೆನಿಸಿದ್ದು ಮಾನವನ ಕೂದಲಿನ ಒಂದು ಎಳೆಗಿಂತ 10,000 ಪಟ್ಟು ತೆಳ್ಳಗಿರುತ್ತದೆ ಎಂದರೆ ಇದರ ಸಾಮರ್ಥ್ಯವನ್ನು ನೀವು ಮೆಚ್ಚಿಕೊಳ್ಳಲೇಬೇಕು.
ಇದನ್ನೂ ಓದಿ: ಯಮಹಾ ಎಲೆಕ್ಟ್ರಾನಿಕ್ ಸ್ಕೂಟರ್! ಹೇಗಿದೆ ನೋಡಿ ಈ ಸೂಪರ್ ಮಾಡೆಲ್
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ಈ ನ್ಯಾನೊಟ್ಯೂಬ್ ಉಕ್ಕಿನ 100 ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿದೆ ಅಂತೆಯೇ ಅತ್ಯುತ್ತಮ ವಿದ್ಯುತ್ ಹಾಗೂ ಉಷ್ಣ ವಾಹಕತೆಯನ್ನು ಪಡೆದುಕೊಂಡಿದೆ.
ಮಂಗಳ ಗ್ರಹಕ್ಕೆ ಕಾಲಿಡುವ ಗುರಿ
NoPo ಸಂಸ್ಥಾಪಕ ಗಧಾದರ್ ರೆಡ್ಡಿ ಮಂಗಳ ಗ್ರಹದ ಮೇಲೆ ಕಾಲಿಡುವ ಕನಸು ಕಂಡ ಒಬ್ಬ ಸಮರ್ಥ ಉದ್ಯಮಿ. ನ್ಯಾನೊಟ್ಯೂಬ್‌ಗಳ ತಯಾರಿಯ ಹರಿಕಾರರಾಗಿರುವ ಗಧಾದರ್ ಉತ್ಕಟವಾದ ಉದ್ದೇಶಗಳನ್ನು ಹೊಂದಿದ್ದಾರೆ.
ಕಂಪನಿಯ ಕುರಿತು ಮೆಚ್ಚುಗೆ ಸೂಚಿಸುವ ಗಧಾದರ್, ಸಂಸ್ಥೆಯನ್ನು 2011 ರಲ್ಲಿ ಹುಟ್ಟುಹಾಕಿದರು. ಈ ಸಂಸ್ಥೆ ಹುಟ್ಟಿಗೆ ಕಾರಣ ಗದಾಧರ್ ಬಾಹ್ಯಾಕಾಶ, ಮಂಗಳ ಗ್ರಹ ಮತ್ತು ವೈಜ್ಞಾನಿಕ ವಿಷಯಗಳಲ್ಲಿ ಅವರು ಹೊಂದಿದ್ದ ಆಸಕ್ತಿ, ಅಂತೆಯೇ ಕಾಲ್ಪನಿಕ ಬರಹಗಾರ ಆರ್ಥರ್ ಸಿ. ಕ್ಲಾರ್ಕ್ ಅವರ 'ಸ್ಪೇಸ್ ಎಲಿವೇಟರ್‌ಗಳು' ಎಂಬ ಕೃತಿಯಾಗಿತ್ತು.
ಎಲಿವೇಟರ್‌ಗಳನ್ನು ಇಂಗಾಲದ ನ್ಯಾನೊಟ್ಯೂಬ್‌ಗಳಿಂದ ತಯಾರಿಸಲಾಗುತ್ತದೆ ಎಂಬುದನ್ನು ಅರಿತುಕೊಂಡ ಗಧಾದರ್ ಹಲವಾರು ಭವಿಷ್ಯದ ಗುರಿಗಳನ್ನು ತಮ್ಮ ಯೋಜನೆಗಳೊಂದಿಗೆ ಹೊಂದಿದ್ದಾರೆ. ಭೂಮಿಯ ಕಕ್ಷೆಗೆ ಪ್ರವೇಶವನ್ನು ಈ ನ್ಯಾನೊಟ್ಯೂಬ್‌ಗಳ ಮೂಲಕ ಸಾಮಾನ್ಯಗೊಳಸಿದ ನಂತರ ಅಂತಿಮವಾಗಿ ಮಂಗಳ ಗ್ರಹವನ್ನು ತಲುಪುವ ಗುರಿಯನ್ನು ಗಧಾದರ್ ಹೊಂದಿದ್ದಾರೆ.
ಗಧಾದರ್ ರೆಡ್ಡಿಯವರ ಸುದ್ದಿ ಮಾದ್ಯಮದಲ್ಲಿ ಅನುಭವದ ಮಾತು
ನಾಸಾದ ಬಾಹ್ಯಾಕಾಶ ಯಾನದ ಕಲಾಕೃತಿ ಮತ್ತು ಜನಪ್ರಿಯ ಯೂಟ್ಯೂಬ್ ಸೈನ್ಸ್ ಚಾನೆಲ್ ಕುರ್ಜ್‌ಗೆಸಾಗ್ಟ್ ವಿನ್ಯಾಸಗೊಳಿಸಿದ ಇನ್ಫೋಗ್ರಾಫಿಕ್ಸ್‌ನಿಂದ ಅಲಂಕರಿಸಲಾದ NoPo ನ ಕಾನ್ಫರೆನ್ಸ್ ರೂಮ್‌ನಲ್ಲಿ ರೆಡ್ಡಿ ತಮ್ಮ ಸಂಸ್ಥೆಯ ಯಶೋಗಾಥೆಯ ಕುರಿತು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದು, ದೊಡ್ಡ ಪ್ರಭಾವವನ್ನುಂಟು ಮಾಡಲು ಬಯಸುವವರ ಜೀವನವನ್ನೇ ಉದಾಹರಣೆಯಾಗಿ ತೆಗೆದುಕೊಂಡಾಗ ಆ ವ್ಯಕ್ತಿಗಳು ಧೈರ್ಯಶಾಲಿ ಗುರಿಯನ್ನು ಹೊಂದಿದ್ದರು ಎಂಬುದು ಮನದಟ್ಟಾಗುತ್ತದೆ ಎಂಬುದನ್ನು ರೆಡ್ಡಿ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಾಹ್ಯಾಕಾಶದ ಪ್ರಯಾಣ ಅಂದರೆ ಅದಕ್ಕೆ ತಗುಲುವ ಖರ್ಚುವೆಚ್ಚಗಳೂ ಹಾಗೆಯೇ ಇರುತ್ತದೆ ಹಾಗಾಗಿಯೇ ಈ ಪ್ರಯಾಣಕ್ಕೆ ಸೂಕ್ತವಾಗಿರುವ ಬಲವಾದ ಹಾಗೂ ಹಗುರವಾದ ವಸ್ತುಗಳ ಅಗತ್ಯವನ್ನು ರೆಡ್ಡಿ ಒತ್ತಿಹೇಳಿದ್ದಾರೆ. ಕ್ವಾಂಟಮ್ ಭೌತಶಾಸ್ತ್ರದಲ್ಲಿ ಅವರ ಶೈಕ್ಷಣಿಕ ಆಸಕ್ತಿಯು ಕಾರ್ಬನ್ ನ್ಯಾನೊಟ್ಯೂಬ್‌ಗಳಲ್ಲಿ ಕೆಲಸ ಮಾಡುವ ಕಲ್ಪನೆಯನ್ನು ನೀಡಿತು ಎಂದು ತಿಳಿಸಿದ್ದಾರೆ.
ಕ್ರಾಂತಿಕಾರಿ ಉತ್ಪನ್ನಗಳು
ಕೈಗಾರಿಕಾ ರಿಯಾಕ್ಟರ್‌ಗಳಲ್ಲಿ ಹೆಚ್ಚು ಕಾರ್ಯಕ್ಷಮತೆಯ ವಸ್ತುಗಳನ್ನು ಉತ್ಪಾದಿಸುವ ಯೋಜನೆಗಳಿಗಿಂತ ಭಿನ್ನವಾಗಿ, NoPo ನ್ಯಾನೊಟೆಕ್ನಾಲಜೀಸ್ ತನ್ನ ಸಣ್ಣ ಕಟ್ಟಡದಲ್ಲಿ ಎಲ್ಲಾ ಉತ್ಪಾದನೆಯನ್ನು ನಿರ್ವಹಿಸುತ್ತದೆ. ಕಾರ್ಬನ್ ನ್ಯಾನೊಟ್ಯೂಬ್‌ಗಳು ಇಂದು ಕ್ರಾಂತಿಕಾರಿ ಉತ್ಪನ್ನಗಳು ಎಂದೆನಿಸಿದ್ದು, ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಪರಿಚಯಗೊಳ್ಳುತ್ತಿದ್ದರೂ ಇದು ಖ್ಯಾತಿ ಪಡೆದುಕೊಳ್ಳುವುದು ಅಷ್ಟೇನೂ ದೂರವಿಲ್ಲ.
ಅದಾಗ್ಯೂ ತಜ್ಞರು ಅವುಗಳನ್ನು ಕೈಗಾರಿಕಾ-ಪ್ರಮಾಣದ ಬಳಕೆಗೆ ಸೂಕ್ತವಾಗಿಸಲು ಅವುಗಳನ್ನು ಸಂಸ್ಕರಿಸುವ ಪ್ರಕ್ರಿಯೆಯಲ್ಲಿ ಇನ್ನೂ ಕೆಲಸ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ರೆಡ್ಡಿ ಕಂಪನಿ ಮುಂಚೂಣಿಯಲ್ಲಿದೆ.
ಟೆಸ್ಲಾ ಮೋಟಾರ್ಸ್ಗಳ ಬ್ಯಾಟರಿಗೆ ಇದು ಅಗತ್ಯ
NoPo ನ ನ್ಯಾನೊಟ್ಯೂಬ್‌ಗಳು ಇದೀಗ ಭವಿಷ್ಯದ ಅಗತ್ಯಗಳಿಗೆ ಬೇಡಿಕೆಯಲ್ಲಿರುವ ಸಾಮಾಗ್ರಿ ಎಂದೆನಿಸಿದ್ದು ಟೆಸ್ಲಾ ಮೋಟಾರ್ಸ್ ಬ್ಯಾಟರಿಗಳನ್ನು ತಯಾರಿಸಲು ಹಾಗೂ ಭಾರತೀಯ ಸರಕಾರವು ತ್ಯಾಜ್ಯನೀರಿನ ಸಂಸ್ಕರಣೆಗೆ ಈ ನ್ಯಾನೊಟ್ಯೂಬ್‌ಗಳನ್ನು ಬಳಸುವ ಆಶಯ ಹೊಂದಿದೆ.
NITI ಆಯೋಗ್ ಮತ್ತು ಭಾರತೀಯ ನೌಕಾಪಡೆಯಿಂದ ಹೆಚ್ಚು ಅಪೇಕ್ಷಿತ ಅನುದಾನಗಳೊಂದಿಗೆ, ಕಂಪನಿಯು ದೇಶಾದ್ಯಂತ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಫಿಲ್ಟರ್ ವ್ಯವಸ್ಥೆಯನ್ನು ಪರಿವರ್ತಿಸಲು ಆಶಿಸುತ್ತಿದೆ.
ಕಾರ್ಬನ್ ನ್ಯಾನೊಟ್ಯೂಬ್‌ಗಳನ್ನು ಅಭಿವೃದ್ಧಿಪಡಿಸಲು, ರೆಡ್ಡಿ ಅವರು 2011 ರಲ್ಲಿ ಅವುಗಳನ್ನು ರಚಿಸಲು ಸಾಧ್ಯವಾದ ಕೆಲವು ಶೈಕ್ಷಣಿಕ ಪ್ರಯೋಗಾಲಯಗಳ ಅನ್ವೇಷಣೆ ನಡೆಸಿದ್ದಾರೆ.
ನ್ಯಾನೊಟ್ಯೂಬ್‌ಗಳನ್ನು ಹೆಚ್ಚಿನ ಒತ್ತಡದ ಕಾರ್ಬನ್ ಮಾನಾಕ್ಸೈಡ್ ಅಥವಾ HiPCO ಎಂದು ಕರೆಯಲಾಗುವ ಪ್ರಕ್ರಿಯೆಯ ಮೂಲಕ ಉತ್ಪಾದಿಸಲಾಗುತ್ತದೆ, ಇದನ್ನು ರಿಚರ್ಡ್ ಸ್ಮಾಲಿ 1999 ರಲ್ಲಿ US ನ ರೈಸ್ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಪಡಿಸಿದ್ದರು.
ಇಂಗಾಲದ ಮಾನಾಕ್ಸೈಡ್‌ನಿಂದ ನ್ಯಾನೊಟ್ಯೂಬ್‌ಗೆ
NoPo ನ್ಯಾನೊಟ್ಯೂಬ್‌ಗಳನ್ನು ತಾಪಮಾನ ಮತ್ತು ತೇವಾಂಶ-ನಿಯಂತ್ರಿತ ರಿಯಾಕ್ಟರ್ ಚೇಂಬರ್‌ನಲ್ಲಿ ತಂಡವು ಉತ್ಪಾದಿಸುತ್ತದೆ. ಕಾರ್ಬನ್ ಮಾನಾಕ್ಸೈಡ್ ಅನ್ನು ಒಂದು ತುದಿಯಲ್ಲಿ ಕಾರ್ಬನ್‌ಗೆ ಮೂಲವಾಗಿ ಬಳಸುತ್ತೇವೆ ಎಂದು ತಿಳಿಸಿರುವ ತಂಡವು ಇನ್ನೊಂದು ತುದಿಯಲ್ಲಿ ಕಬ್ಬಿಣವನ್ನು ವೇಗವರ್ಧಕವಾಗಿ ಬಳಸುತ್ತದೆ ಎಂದು ತಿಳಿಸಿದೆ.
ಇದು ಹೆಚ್ಚಿನ ತಾಪಮಾನ ಮತ್ತು ಒತ್ತಡದಲ್ಲಿ ಕಬ್ಬಿಣದ ಕಣಗಳನ್ನು, ಇಂಗಾಲ ಮತ್ತು ಇಂಗಾಲದ ಡೈಆಕ್ಸೈಡ್‌ಗಳಾಗಿ ವಿಭಜಿಸುತ್ತದೆ. ಕಬ್ಬಿಣದ ಕಣಗಳ ಮೇಲೆ ಕಾರ್ಬನ್ ಪರಮಾಣುಗಳ ಸಮೂಹವು ವಿವಿಧ ವ್ಯಾಸಗಳೊಂದಿಗೆ 1 ಮಿಮೀ ಉದ್ದದ ನ್ಯಾನೊಟ್ಯೂಬ್‌ಗಳನ್ನು ರೂಪಿಸುತ್ತದೆ ಎಂದು NoPo ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಟೊ ಗಾಡ್ವಿನ್ ತಿಳಿಸಿದ್ದಾರೆ.
2018 ರಿಂದ, NoPo ಅದರ ಪೇಟೆಂಟ್ ಪ್ರಕ್ರಿಯೆಯ ಮೂಲಕ HiPCO ವಿಧಾನವನ್ನು ಅಳೆಯುವ ಏಕೈಕ ಕಂಪನಿಯಾಗಿದೆ. ನ್ಯಾನೊಟ್ಯೂಬ್‌ಗಳನ್ನು ಆಹಾರ ಭದ್ರತೆ, ಬೆಳೆ ರಕ್ಷಣೆ, ಕೀಟನಾಶಕ ಪತ್ತೆ, ಸಸ್ಯಗಳ ಆಂತರಿಕ ನ್ಯಾನೊಸೆನ್ಸಿಂಗ್, ನ್ಯಾನೊ ಗೊಬ್ಬರ ಮತ್ತು ಮಾಲಿನ್ಯ ನಿಯಂತ್ರಣಕ್ಕೂ ಬಳಸಬಹುದು.
ನ್ಯಾನೊಟ್ಯೂಬ್‌ಗಳ ಬಳಕೆ
ಇಂದು ನ್ಯಾನೊಟ್ಯೂಬ್‌ಗಳನ್ನು ಬ್ಯಾಟರಿಗಳು, ವಿರೋಧಿ ತುಕ್ಕು ಬಣ್ಣಗಳು, ಬಾಳಿಕೆ ಬರುವ ಪಾಲಿಮರ್ಗಳು ಮತ್ತು ಫೈಬರ್ಗ್ಲಾಸ್ಗೆ ವಾಹಕ ವಿದ್ಯುದ್ವಾರಗಳನ್ನು ತಯಾರಿಸಲು ಬಳಸಲಾಗುತ್ತದೆ.
ಬುಲೆಟ್ ಪ್ರೂಫ್ ಉಡುಪುಗಳು, ಕಡಿಮೆ ಶಕ್ತಿಯ ಬಳಕೆ ಮತ್ತು ಕಡಿಮೆ ಮಾಲಿನ್ಯಕಾರಕಗಳನ್ನು ಹೊರಸೂಸುವ ಉತ್ಪಾದನಾ ಕೈಗಾರಿಕೆಗಳು, ಮಾನವ ದೇಹದಲ್ಲಿನ ಮೂಳೆಗಳು ಮತ್ತು ಅಂಗಾಂಶಗಳನ್ನು ಪುನರ್ ರೂಪಿಸಲು, ವಿವಿಧ ಮೇಲ್ಮೈಗಳ ಮೇಲೆ ಲೇಪನಗಳಾಗಿ ಮತ್ತು ರಹಸ್ಯ ತಂತ್ರಜ್ಞಾನ ಸೇರಿದಂತೆ ವಿವಿಧ ಸಂಯೋಜಿತ ವಸ್ತುಗಳನ್ನು ರಚಿಸಲು ನ್ಯಾನೊಟ್ಯೂಬ್‌ಗಳನ್ನು ಶೀಘ್ರದಲ್ಲೇ ಬಳಸಲಾಗುತ್ತದೆ ಎಂಬುದು ಗಧಾದರ್ ಅವರ ಹೇಳಿಕೆಯಾಗಿದೆ.
ಜಾಗತಿಕ ನ್ಯಾನೊಟ್ಯೂಬ್ ಮಾರುಕಟ್ಟೆಯು 2017 ರಲ್ಲಿ 15.3 ಶತಕೋಟಿ ಮೌಲ್ಯದ್ದಾಗಿದೆ ಮತ್ತು 2030 ರ ವೇಳೆಗೆ 103.2 ಶತಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.
ನೀರಿನ ಸಂಸ್ಕರಣೆಯಲ್ಲಿ ಕ್ರಾಂತಿಗಳು
2016 ರ ಅಧ್ಯಯನದಿಂದ ಸ್ಫೂರ್ತಿ ಪಡೆದ ನ್ಯಾನೊಟ್ಯೂಬ್‌ಗಳ ರೀತಿಯಲ್ಲೇ NoPo ತಯಾರಿಸುವ ಉಪಕರಣವು ನೀರಿನ ಶುದ್ಧೀಕರಣ ಮತ್ತು ಶೋಧನೆಯಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ತೋರಿಸಿದೆ.
ತಂಡವು ನೀರಿನ ಶುದ್ಧೀಕರಣಕ್ಕಾಗಿ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಆರಂಭಿಕ ಮತ್ತು ಪ್ರಭಾವಶಾಲಿ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಲು ಮತ್ತು ಹಣಕಾಸಿನ ನೆರವು ನೀಡಲು ಕರ್ನಾಟಕ ಸರ್ಕಾರ ನೀಡುವ 2017 ರ ಸಾಹಸೋದ್ಯಮ ಎಲಿವೇಟ್ 100 ರ ಮೊದಲ ಪ್ರಶಸ್ತಿ ಪುರಸ್ಕೃತ ಸಂಸ್ಥೆಗಳಲ್ಲಿ ಒಂದೆನಿಸಿದೆ.
ಮಂಗಳ ಗ್ರಹಕ್ಕೆ ಹೋಗುವ ತಮ್ಮ ಕನಸನ್ನು ನನಸಾಗಿಸಲು ಬಾಹ್ಯಾಕಾಶ ವಾಹನಗಳು, ರಾಕೆಟ್ ಮೂಲಮಾದರಿಗಳು ಮತ್ತು ಬಾಹ್ಯಾಕಾಶ ಹಾರಾಟದ ಸಿಮ್ಯುಲೇಟರ್‌ಗಳನ್ನು ನಿರ್ಮಿಸಲು ಗದಾಧರ್ ಇದೀಗ ಇತರ ಸಂಸ್ಥೆಗಳೊಂದಿಗೆ ಪಾಲುದಾರರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ