HOME » NEWS » Tech » BAJAJ CHETAK ELECTRIC SCOOTER BOOKINGS REOPEN IN INDIA STG HG

ಮತ್ತೆ ಬಂದಿದೆ ಹಮಾರಾ ಬಜಾಜ್! ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭ

ಬಜಾಜ್ ಆಟೋ ಮಂಗಳವಾರ ಭಾರತದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕಲ್ ಸ್ಕೂಟರ್ ನ ಮರು ಬುಕ್ಕಿಂಗ್ ಆರಂಭ ಮಾಡಿದೆ. 2000 ರೂ ಕೊಟ್ಟು ಬುಕ್ಕಿಂಗ್ ಮಾಡಬಹುದು. ಒಂದು ವೇಳೆ ಕ್ಯಾನ್ಸಲ್ ಮಾಡಿದರೆ, 1000 ರೂ. ವಾಪಸ್ಸು ನೀಡಲಾಗುತ್ತದೆ.

news18-kannada
Updated:April 14, 2021, 7:33 PM IST
ಮತ್ತೆ ಬಂದಿದೆ ಹಮಾರಾ ಬಜಾಜ್! ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭ
ಬಜಾಜ್ ಚೇತಕ್ ಎಲೆಕ್ಟ್ರಿಕಲ್ ಸ್ಕೂಟರ್
  • Share this:
80ರ ದಶಕದಲ್ಲಿ ಮಧ್ಯಮ ವರ್ಗದ ಐಶಾರಾಮಿಯಾಗಿದ್ದ ಬಜಾಜ್ ಸ್ಕೂಟರ್ ಉತ್ಪಾದನೆ ಏಕಾಏಕಿ ಸ್ಥಗಿತಗೊಂಡಿತ್ತು. ಆ ನಂತರ ಸಾಕಷ್ಟು ದ್ವಿ ಚಕ್ರ ವಾಹನಗಳು ಬಂದರೂ ಬಜಾಜ್ ಅನ್ನು ಜನರು ಮಿಸ್ ಮಾಡುತ್ತಲೇ ಇದ್ದರು. ಆದರೆ ಕಳೆದ ವರ್ಷ ಬಜಾಜ್ ಮತ್ತೆ ದ್ವಿ ಚಕ್ರವಾಹನದ ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಅದರಲ್ಲೂ ಮತ್ತೊಮ್ಮೆ ಪರಿಸರ ಕಾಳಜಿ ಮತ್ತು ದುಬಾರಿ ಪೆಟ್ರೋಲ್ ಬೆಲೆ ಭರಿಸಲು ಸಾಧ್ಯವಾಗದ ಮಧ್ಯಮ ವರ್ಗದ ಜನರ ಪಾಲಿಗೆ ಮತ್ತೊಮ್ಮೆ ವರದಾನವಾಗಿ ಬಜಾಜ್ ವಂಡರ್ ಕ್ರಿಯೆಟ್ ಮಾಡಿತ್ತು. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ತಂದ ಬಜಾಜ್ ಕೋವಿಡ್‌ನಿಂದ ಮತ್ತೆ ಸೈಲೆಂಟ್ ಆಗಿತ್ತು. ಈಗ ಮತ್ತೆ ಬಂದಿದೆ ಹಮಾರಾ ಬಜಾಜ್.  ಹೌದು! ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಈಗ ಮತ್ತೊಮ್ಮೆ ಆರಂಭವಾಗಿದೆ.

ಬಜಾಜ್ ಆಟೋ ಮಂಗಳವಾರ ಭಾರತದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕಲ್ ಸ್ಕೂಟರ್ ನ ಮರು ಬುಕ್ಕಿಂಗ್ ಆರಂಭ ಮಾಡಿದೆ. 2000 ರೂ ಕೊಟ್ಟು ಬುಕ್ಕಿಂಗ್ ಮಾಡಬಹುದು. ಒಂದು ವೇಳೆ ಕ್ಯಾನ್ಸಲ್ ಮಾಡಿದರೆ, 1000 ರೂ. ವಾಪಸ್ಸು ನೀಡಲಾಗುತ್ತದೆ. ಬಜಾಜ್ ಚೇತಕ್ ಸ್ಕೂಟರ್‌ನ ಬೆಲೆ 1.15 ಲಕ್ಷ ರೂ ಇದ್ದು, ಎರಡು ವಿಧದಲ್ಲಿ ಲಭ್ಯವಿದೆ. ಬಜಾಜ್ ಚೇತಕ್ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್, ಒಕಿನಾವಾ ಮತ್ತು ಹೀರೋ ಎಲೆಕ್ಟ್ರಿಕ್ ಕೊಡುಗೆಗಳನ್ನು ಮೀರಿಸುವಂತಿದೆ. ಸ್ಕೂಟರ್ ಬುಕ್ಕಿಂಗ್‌ಗಾಗಿ ಬಜಾಜ್ ವೆಬ್ಸೈಟ್‌ಗಳಲ್ಲಿ ಆನ್ಲೈನ್ ಮೂಲಕ ಬುಕ್ ಮಾಡಬಹುದು. ಇಲ್ಲವೇ ಪುಣೆ ಮತ್ತು ಬೆಂಗಳೂರಿನ ಅಧಿಕೃತ ಮಾರಾಟಗಾರರ ಮೂಲಕ ಬುಕ್ ಮಾಡಬಹುದು.

ಐಸಿಇ ಬದಲಿಗೆ ಎಲೆಕ್ಟ್ರಿಕಲ್ ಮೋಟಾರ್ ಇದೆ. ಈಗ ವಿದ್ಯುತ್ ಮೋಟರ್‌ನಿಂದ 3.8 ಕಿಲೋ ವ್ಯಾಟ್‌ / 4.1 ಕಿಲೋ ವ್ಯಾಟ್‌ ಶಕ್ತಿ ಹೊಂದಿದೆ. ಮೋಟಾರು 3 ಕಿಲೋ ವ್ಯಾಟ್‌, ಲಿಥಿಯಂ-ಐಯಾನ್ ಬ್ಯಾಟರಿ ಇದ್ದು, ಎಕೋ ಮೋಡ್‌ನಲ್ಲಿ 95 ಕಿ.ಮೀ ಮತ್ತು 85 ಕಿ.ಮೀ ಸ್ಪೋರ್ಟ್ಸ್ ಮೋಡ್‌ನಲ್ಲಿ ಓಡಿಸಬಹುದು. 70,000 ಕಿ.ಮೀವರೆಗೂ ಬ್ಯಾಟರಿ ಬ್ಯಾಕ್ ಅಪ್ ಇದ್ದು, 5 ಗಂಟೆ ಚಾರ್ಜ್ ಮಾಡಿದರೆ ಸಾಕು. ಮೂರು ವರ್ಷ ಅಥವಾ 50,000 ಕಿ.ಮೀ ಓಡಾಟಕ್ಕೆ ವಾರಂಟಿ ನೀಡಲಾಗುತ್ತದೆ.

ಕಳೆದ ವರ್ಷ ಪ್ರೀಮಿಯಂ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಪರಿಚಯಿಸಿದ ಭಾರತದ ಮೊದಲ ಪ್ರಮುಖ ದ್ವಿಚಕ್ರ ವಾಹನ ಬ್ರ್ಯಾಂಡ್ ಬಜಾಜ್. ಇದ್ದಕ್ಕಿದ್ದಂತೆ ಆಕ್ರಮಿಸಿಕೊಂಡ ಸಾಂಕ್ರಾಮಿಕ ಕಾಯಿಲೆ ಸಾಕಷ್ಟು ಬದಲಾವಣೆಗಳನ್ನು ತಂದಿತು. ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆಯಾದ ಕೇವಲ ದಿನಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿತ್ತು. ಬಜಾಜ್ ಬುಕಿಂಗ್ ನಿಲ್ಲಿಸುವ ಮೊದಲು ಚೇತಕ್ ಬೆಲೆ ಅರ್ಬನ್ 1,15,000 ಮತ್ತು ಪ್ರೀಮಿಯಂ 1,20,000 ರೂ ಆಗಿತ್ತು.

ಆನಂತರ ಜೂನ್‌ನಲ್ಲಿ ಬುಕಿಂಗ್ ಆರಂಭವಾಗಿ ಕೊಂಚ ಸುಧಾರಿಸಿಕೊಂಡಿತ್ತು. 2019 ರ ಕೊನೆಯಲ್ಲಿ ಬಿಡುಗಡೆಯಾದಾಗಿನಿಂದಲೂ, ಬಜಾಜ್ ಚೇತಕ್ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿ ಹೆಚ್ಚು ಬೇಡಿಕೆಯನ್ನು ಹೊಂದಿದೆ.

ಡಿಸೆಂಬರ್ 2020 ರ ಹೊತ್ತಿಗೆ, ಬಜಾಜ್ ಆಟೋ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು 18 ಡೀಲರ್‌ಶಿಪ್‌ಗಳಿಂದ ರೀಟೇಲರ್‌ನಿಂದದ ಮಾರಾಟವಾಗಿದೆ. ಅದರಲ್ಲಿ ಐದು ಪುಣೆ ಮತ್ತು ಉಳಿದವು ಬೆಂಗಳೂರಿನಲ್ಲಿವೆ. ಇದಿಷ್ಟೇ ಅಲ್ಲದೇ ಬಜಾಜ್ ತನ್ನ ಮಾರುಕಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಸಹ ಯೋಜನೆಯನ್ನು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ 2020 ರಲ್ಲೇ ಯುರೋಪ್‌ಗಾಗಿ ಹೊಸ ಡಿಸೈನ್ ಕೂಡ ಸಿದ್ಧ ಪಡಿಸಲಾಗಿತ್ತು.
ಬಜಾಜ್ ಆಟೋ ಈ ವರ್ಷ 24 ನಗರಗಳಿಗೆ ಸ್ಕೂಟರ್ ಒದಗಿಸುವ ಟಾರ್ಗೆಟ್ ಹೊಂದಿದೆ. ದ್ವಿ ಚಕ್ರ ವಾಹನ ಉತ್ಪಾದನೆ ಹೆಚ್ಚಿಸಲು ಅಲ್ಲದೇ ಪರ್ಯಾಯ ಪೂರೈಕೆ ಮೂಲಗಳನ್ನು ಸಿದ್ಧಪಡಿಸಿಟ್ಟುಕೊಂಡಿದೆ.
ಇದಿಷ್ಟೇ ಅಲ್ಲದೇ ಬಜಾಜ್ ತನ್ನ ಎಲ್ಲಾ ದ್ವಿ ಚಕ್ರ ವಾಹನಗಳ ಮೇಲೂ 3000 ರೂಪಾಯಿ ಬೆಲೆ ಹೆಚ್ಚಿಸಿದೆ. ಈ ಸ್ಕೂಟರ್ ಅರ್ಬನ್ ಮತ್ತು ಪ್ರೀಮಿಯಂ ಎರಡು ರೀತಿಯಲ್ಲಿ ಲಭ್ಯವಿದೆ. 5000 ರೂ ಪ್ರೀಮಿಯಂ ಸೌಲಭ್ಯವಿದೆ.
First published: April 14, 2021, 7:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories