HOME » NEWS » Tech » BAJAJ AUTO LTD ON TUESDAY REPORTED A 6 PER CENT INCREASE IN TOTAL SALES AT 375017 UNITS IN FEBRUARY STG HG

ಫೆಬ್ರವರಿಯಲ್ಲಿ 3.32 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡಿದ ಬಜಾಜ್ ಆಟೋ!

ದೇಶೀಯ ದ್ವಿಚಕ್ರ ವಾಹನ ಮಾರಾಟವು 1,48,934 ಯುನಿಟ್‌ಗಳಾಗಿದ್ದು, ಫೆಬ್ರವರಿ 20ರಲ್ಲಿ ಕಂಪನಿಯು 1,46,876 ಯುನಿಟ್‌ಗಳನ್ನು ಮಾರಾಟ ಮಾಡಿದ್ದರಿಂದ ಶೇ.1ರಷ್ಟು ಅಲ್ಪ ಬೆಳವಣಿಗೆ ಕಂಡಿದೆ.

news18-kannada
Updated:March 1, 2021, 4:29 PM IST
ಫೆಬ್ರವರಿಯಲ್ಲಿ 3.32 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡಿದ ಬಜಾಜ್ ಆಟೋ!
Bajaj
  • Share this:
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲೊಂದಾಗಿರುವ ಬಜಾಜ್ 2021ರ ಫೆಬ್ರವರಿ ತಿಂಗಳ ತನ್ನ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಪುಣೆ ಮೂಲದ ಬಜಾಜ್ ಆಟೋ ಫೆಬ್ರವರಿ ತಿಂಗಳಿನಲ್ಲಿ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಒಟ್ಟು 3,32,563 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.7ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ 3,10,222 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ದೇಶೀಯ ದ್ವಿಚಕ್ರ ವಾಹನ ಮಾರಾಟವು 1,48,934 ಯುನಿಟ್‌ಗಳಾಗಿದ್ದು, ಫೆಬ್ರವರಿ 20ರಲ್ಲಿ ಕಂಪನಿಯು 1,46,876 ಯುನಿಟ್‌ಗಳನ್ನು ಮಾರಾಟ ಮಾಡಿದ್ದರಿಂದ ಶೇ.1ರಷ್ಟು ಅಲ್ಪ ಬೆಳವಣಿಗೆ ಕಂಡಿದೆ. ರಫ್ತಿಗೆ ಸಂಬಂಧಿಸಿದಂತೆ ಕಂಪನಿಯು ಕಳೆದ ತಿಂಗಳು 1,83,629 ಯುನಿಟ್‌ಗಳನ್ನು ವಿದೇಶಕ್ಕೆ ರಫ್ತು ಮಾಡಿದೆ. 2020ರ ಇದೇ ತಿಂಗಳಿಗೆ ಹೋಲಿಸಿದರೆ ಇದು ಶೇ.12ರಷ್ಟು ನೇರ ಬೆಳವಣಿಗೆಯಾಗಿದೆ. ಕಂಪನಿಯು ಫೆಬ್ರವರಿ 2020ರಲ್ಲಿ ಒಟ್ಟು 1,63,346 ಯುನಿಟ್‌ಗಳನ್ನು ವಿದೇಶಗಳಿಗೆ ರವಾನಿಸಿದೆ.

ಬಜಾಜ್ ಆಟೋ 2020-2021ರ ಆರ್ಥಿಕ ವರ್ಷದಲ್ಲಿ ತನ್ನ ಒಟ್ಟು ದ್ವಿಚಕ್ರ ವಾಹನ ಮಾರಾಟ 32,75,760 ಎಂದು ಘೋಷಿಸಿದೆ. ಈ ಅಂಕಿ ಅಂಶಗಳಲ್ಲಿ ಒಟ್ಟು 16,47,778 ಯೂನಿಟ್ ಗಳನ್ನು ರಫ್ತು ಮಾಡಿದ್ದರೆ, 16,27,982 ಯೂನಿಟ್ ಗಳನ್ನು ದೇಶೀಯವಾಗಿ ಮಾರಾಟ ಮಾಡಲಾಗಿದೆ. ಏಪ್ರಿಲ್ 2019 ರಿಂದ ಫೆಬ್ರವರಿ 2020ರ ಅವಧಿಯಲ್ಲಿ ಮಾರಾಟವಾದ ಹಿಂದಿನ 37,36,592 ಯುನಿಟ್‌ಗಳಿಗೆ ಹೋಲಿಸಿದರೆ ಇದು ಶೇ.12ರಷ್ಟು ಕಡಿಮೆಯಾಗಿದೆ.

ಜನವರಿ 21ರ ಮಾರಾಟಕ್ಕೆ ಸಂಬಂಧಿಸಿದಂತೆ ಕಂಪನಿಯು ಶೇ.16ರಷ್ಟು ಬೆಳವಣಿಗೆ ಸಾಧಿಸಿದೆ. ಇದು ಕಳೆದ ತಿಂಗಳು 3,84,936 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ತನ್ನ ಬೈಕುಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಬಜಾಜ್ ಆಟೋ ಇತ್ತೀಚೆಗೆ ಭಾರತದಲ್ಲಿ ತನ್ನ ಆನ್‌ಲೈನ್ ಮಾರಾಟ ವೇದಿಕೆಯನ್ನು ಪ್ರಾರಂಭಿಸಿದೆ. ಕಂಪನಿಯು ಈಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮೋಟಾರ್‌ ಬೈಕುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಿದೆ. ಬಜಾಜ್ ತನ್ನದೇ ಆದ ಉತ್ಪನ್ನ ಶ್ರೇಣಿಯ ಬೈಕ್ ಗಳ ಹೊರತಾಗಿಯೂ ಕೆಟಿಎಂ ಮತ್ತು ಹಸ್ಕ್‌ ವರ್ನಾ ಬ್ರಾಂಡ್‌ನ ಬೈಕ್‌ಗಳನ್ನು ಸಹ ರಿಟೇಲ್ ಮಾರಾಟ ಮಾಡುತ್ತಿದೆ.
Published by: Harshith AS
First published: March 1, 2021, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories