iPhone: ಉದ್ಯೋಗಿಗಳ ಬ್ಯಾಗ್ ತಪಾಸಣೆ ಪ್ರಕರಣ, ಆ್ಯಪಲ್ ಸಂಸ್ಥೆ ವಿರುದ್ಧ ಕ್ರಮ!

ಆಪಲ್ ಫೋನ್ ತಯಾರಿಕಾ ಸಂಸ್ಥೆಯಲ್ಲಿ ರಿಟೈಲ್ ಉದ್ಯೋಗಿಗಳು ಆಗಮನ/ನಿರ್ಗಮನದ ವೇಳೆಗಳಲ್ಲಿ ಅವರ ಬ್ಯಾಗ್ ತಪಾಸಣೆಯ ನಿಯಮ ಹೊಂದಿದ್ದು ಇದರಿಂದ ಉದ್ಯೋಗಿಗಳು ಬಹು ಸಮಯದವರೆಗೆ ಕಾಯಬೇಕಿತ್ತು. ತಮ್ಮ ಶಿಫ್ಟ್ ಅವಧಿಯಿಲ್ಲದ ಸಮಯದಲ್ಲೂ ಈ ರೀತಿ ಕಾಯುವಂತೆ ಮಾಡಿರುವ ಕಾರಣ ಅವರಿಗೆ ಪರಿಹಾರ ಮೊತ್ತ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿತ್ತು ಹಾಗೂ ಅದೀಗ ಇತ್ಯರ್ಥಗೊಂಡಿದೆ ಎನ್ನಬಹುದಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ದೊಡ್ಡ ದೊಡ್ಡ ಟೆಕ್ ಕಂಪನಿಗಳಲ್ಲಿ (Tech companies) ಸಾವಿರಾರು ಸಂಖ್ಯೆಗಳಲ್ಲಿ ಸಾಮಾನ್ಯವಾಗಿ ಉದ್ಯೋಗಿಗಳು (Employees) ಕೆಲಸ ಮಾಡುತ್ತಿರುತ್ತಾರೆ. ಅದರಲ್ಲೂ ಆಪಲ್ ಫೋನ್ (Apple Phone) ತಯಾರಿಕೆಯಂತಹ ದೈತ್ಯ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಿಟೈಲ್ ಸಿಬ್ಬಂದಿಗಳನ್ನು ಹೊಂದಿದ್ದು ಶಿಸ್ತುಬದ್ಧಿನ ನಿರ್ವಹಣಾ ಉಪಕ್ರಮಗಳನ್ನು ಹೊಂದಿರುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಸಂಸ್ಥೆಯಲ್ಲಿ ರಿಟೈಲ್ ಉದ್ಯೋಗಿಗಳು (Retail employee) ಆಗಮನ/ನಿರ್ಗಮನದ ವೇಳೆಗಳಲ್ಲಿ ಅವರ ಬ್ಯಾಗ್ ತಪಾಸಣೆಯ ನಿಯಮ ಹೊಂದಿದ್ದು ಇದರಿಂದ ಉದ್ಯೋಗಿಗಳು ಬಹು ಸಮಯದವರೆಗೆ ಕಾಯಬೇಕಿತ್ತು. ತಮ್ಮ ಶಿಫ್ಟ್ (Shift) ಅವಧಿಯಿಲ್ಲದ ಸಮಯದಲ್ಲೂ ಈ ರೀತಿ ಕಾಯುವಂತೆ ಮಾಡಿರುವ ಕಾರಣ ಅವರಿಗೆ ಪರಿಹಾರ ಮೊತ್ತ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿತ್ತು ಹಾಗೂ ಅದೀಗ ಇತ್ಯರ್ಥಗೊಂಡಿದೆ ಎನ್ನಬಹುದಾಗಿದೆ.

ಉದ್ಯೋಗಿ ಬ್ಯಾಗ್ ತಪಾಸಣೆಯ ಮೇಲಿನ ಮೊಕದ್ದಮೆಯನ್ನು ಇತ್ಯರ್ಥಗೊಳಿಸಲು $30.5 ಮಿಲಿಯನ್ ಅನ್ನು ಆ್ಯಪಲ್ ಇಂಕ್‌ (AAPL.O) ಪಾವತಿಸುವ ಸೆಟಲ್‌ಮೆಂಟ್ ಅನ್ನು ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಧೀಶರು ಅನುಮೋದಿಸಿದ್ದು, ಈ ರೀತಿಯಾಗಿ ದಶಕಗಳ ಕಾಲದ ಕಾನೂನು ಹೋರಾಟಕ್ಕೆ ಇತಿಶ್ರೀ ಹಾಡಿದೆ.

ದೀರ್ಘಾವಧಿಯ ಮೊಕದ್ದಮೆ ಅಂತ್ಯ:
ಈ ಸೆಟಲ್‌ಮೆಂಟ್ ಅನ್ನು ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯ ಯುಎಸ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ವಿಲಿಯಂ ಅಲ್ಸುಪ್ ಅನುಮೋದಿಸಿದ್ದು, 2013 ರಲ್ಲಿ ಆ್ಯಪಲ್ ಮೇಲೆ ದಾಖಲಾದ ದೀರ್ಘಾವಧಿಯ ಮೊಕದ್ದಮೆಯನ್ನು ಅಂತ್ಯಗೊಳಿಸಿದೆ.

ಎಲ್ಲಾ ಶ್ರೇಣಿಯ ಸದಸ್ಯರಿಗೆ ಪಾವತಿಯು ಆರ್ಥಿಕ ಪರಿಹಾರವನ್ನು ನೀಡುತ್ತಿದ್ದು ಹಾನಿ ಸಮಸ್ಯೆಗಳಿಗೆ ಸಂಬಂಧಿಸಿದ ಮುಂದಿನ ದಾವೆಗಳ ಅಪಾಯದ ವಿರುದ್ಧ ಸಮತೋಲಿತವಾಗಿದ್ದಾಗ ಅಂತಹ ಚೇತರಿಕೆಯು ನ್ಯಾಯಯುತ, ಸಮಂಜಸ ಮತ್ತು ಸಮರ್ಪಕವಾಗಿದೆ ಎಂದು ಕಂಡುಕೊಳ್ಳುತ್ತದೆ ಎಂಬುದಾಗಿ ನ್ಯಾಯಾಧೀಶರಾದ ಅಲ್ಸುಪ್ ಅನುಮೋದನೆಯಲ್ಲಿ ತಿಳಿಸಿದ್ದಾರೆ. ಇನ್ನು ಕಡ್ಡಾಯ ಭದ್ರತಾ ತಪಾಸಣೆಗೆ ಒಳಗಾದ ನೌಕರರಿಗೆ ಪಾವತಿಸಬೇಕು ಎಂಬ ತೀರ್ಪನ್ನು 2020 ರಲ್ಲಿ ಕ್ಯಾಲಿಫೋರ್ನಿಯಾ ಸುಪ್ರೀಂ ಕೋರ್ಟ್ ನೀಡಿತ್ತು.

ಇಂತಹುದ್ದೇ ಮೊಕದ್ದಮೆಗೆ ಒಳಗಾದ ಇತರ ಸಂಸ್ಥೆಗಳು ಯಾವುವು?
ಆ್ಯಪಲ್ ಮಾತ್ರವಲ್ಲದೆ ವಾಲ್‌ಮಾರ್ಟ್ ಹಾಗೂ ಅಮೆಜಾನ್‌ನಂತಹ ಯುಎಸ್‌ನ ಪ್ರಮುಖ ಉದ್ಯೋಗದಾತ ಸಂಸ್ಥೆಗಳು ಇದೇ ರೀತಿಯ ಮೊಕದ್ದಮೆಗಳನ್ನು ಎದುರಿಸಿವೆ. ಅಮೆಜಾನ್ ಹಾಗೂ ಸಿಬ್ಬಂದಿಗಳನ್ನು ಒದಗಿಸುವ ಏಜೆನ್ಸಿಯೊಂದು ಇಂತಹುದ್ದೆ ಪ್ರಕರಣಗಳಲ್ಲೊಂದನ್ನು ಪರಿಹರಿಸಲು 42,000 ಗೋದಾಮಿನ ಕೆಲಸಗಾರರಿಗೆ $ 8.7 ಮಿಲಿಯನ್ ಪಾವತಿಸಲು ಒಪ್ಪಿಕೊಂಡಿತು.

ಇದನ್ನೂ ಓದಿ: Earbuds: ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೋ ಬೆಲೆ ಎಷ್ಟು ಗೊತ್ತಾ?

ಬ್ಯಾಗ್ ತಪಾಸಣೆಯ ಹೆಸರಿನಲ್ಲಿ ಕಾಯುತ್ತಿದ್ದ ರಿಟೇಲ್ ಉದ್ಯೋಗಿಗಳು
ಆ್ಯಪಲ್ ಸಂಸ್ಥೆಯ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ರಿಟೇಲ್ ಉದ್ಯೋಗಿಗಳು ತಾವು ಕೆಲಸ ಮಾಡಿದ ಸ್ಟೋರ್‌ನಿಂದ ಹೊರಡುವ ಮೊದಲು ಬ್ಯಾಗ್ ತಪಾಸಣೆಯ ಹೆಸರಿನಲ್ಲಿ ಕೆಲವು ನಿಮಿಷ ಇಲ್ಲದಿದ್ದರೆ ಹೆಚ್ಚು ದೀರ್ಘ ಸಮಯಗಳವರೆಗೆ ಕಾಯಿಸುತ್ತಿದ್ದರು ಎಂಬುದಾಗಿ ಫಿರ್ಯಾದಿಗಳು ಆರೋಪಿಸಿದ್ದಾರೆ.

ಸಂಸ್ಥೆ ಹಾಗೂ ಫರ್ಯಾದಿಗಳ ವಕೀಲರು ವರದಿಯ ಕುರಿತು ತಕ್ಷಣವೇ ಪ್ರತಿಕ್ರಿಯಿಸಲಿಲ್ಲ. ಅಲ್ಸುಪ್ 2015 ರಲ್ಲಿ ಪ್ರಕರಣವನ್ನು ವಜಾಗೊಳಿಸಿದ್ದು, ಕೆಲಸಗಾರರು ಕೆಲಸಕ್ಕೆ ಬರುವಾಗ ವೈಯಕ್ತಿಕ ವಸ್ತುಗಳನ್ನು ತರುವ ಅಗತ್ಯವಿಲ್ಲದಿದ್ದುದರಿಂದ ಭದ್ರತಾ ತಪಾಸಣೆಯ ಸಮಯದಲ್ಲಿ ಕಾರ್ಮಿಕರು ಕಂಪನಿಯ ನಿಯಂತ್ರಣದಲ್ಲಿರಲಿಲ್ಲ ಎಂದು ತಿಳಿಸಿದ್ದಾರೆ.

ಮತ್ತೆ ಜೀವಂತಗೊಂಡ ಪ್ರಕರಣ:
ರಾಜ್ಯ ಕಾನೂನಿನ ಅಡಿಯಲ್ಲಿ ಶಿಫ್ಟ್ ನಂತರ ತಪಾಸಣೆ ಸಮಯದ ನಷ್ಟವನ್ನು ಸರಿದೂಗಿಸಬೇಕೇ ಎಂಬುದನ್ನು ನಿರ್ಧರಿಸಲು ಕ್ಯಾಲಿಫೋರ್ನಿಯಾ ಸುಪ್ರೀಂ ಕೋರ್ಟ್‌ಗೆ ಫೆಡರಲ್ ಮೇಲ್ಮನವಿ ನ್ಯಾಯಾಲಯವು ಕೇಳಿದೆ. 2020 ರಲ್ಲಿ ರಾಜ್ಯ ನ್ಯಾಯಾಲಯವು ಆ್ಯಪಲ್ ವಿರುದ್ಧ ತೀರ್ಪು ನೀಡಿದ್ದು ಉದ್ಯೋಗಿಗಳು ವೈಯಕ್ತಿಕ ವಸ್ತುಗಳನ್ನು ಕೆಲಸದ ವೇಳೆಯಲ್ಲಿ ತರಬಾರದು ಎಂಬುದಾಗಿ ನಿರೀಕ್ಷಿಸುವುದು ಅಪ್ರಾಯೋಗಿಕವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: NOKIA 8210 Phone: ಇದು 4G ಫೀಚರ್ ಫೋನ್, 1 ಬಾರಿ ಚಾರ್ಜ್ ಮಾಡಿದ್ರೆ 1 ತಿಂಗಳು ಬರುತ್ತೆ!

ಫೆಡರಲ್ ನ್ಯಾಯಾಲಯವು ನಂತರ ಪ್ರಕರಣವನ್ನು ಮತ್ತೆ ಕಾರ್ಯರೂಪಕ್ಕೆ ತಂದಿತು ಮತ್ತು ಕಳೆದ ವರ್ಷ ಅಲ್ಸುಪ್ ಅವರು ಫಿರ್ಯಾದಿಗಳಿಗೆ ಸಾರಾಂಶ ತೀರ್ಪು ನೀಡಲು ಮತ್ತು ಹಾನಿಯ ಮೇಲೆ ವಿಚಾರಣೆಗೆ ಆದೇಶಿಸಲು ಯೋಜಿಸಿದೆ ಎಂದು ತಿಳಿಸಿತು.
Published by:Ashwini Prabhu
First published: