iPhone Battery: ನಿಮ್ಮ ಐಫೋನ್ ಬ್ಯಾಟರಿ ಹೆಚ್ಚು ಸಮಯ ಬರಬೇಕಾ? ಹಾಗಿದ್ರೆ ನೀವು ಈ ತಪ್ಪುಗಳನ್ನು ಮಾಡ್ಬೇಡಿ

ಒಂದೇ ಚಾರ್ಜ್‌ನಲ್ಲಿ ಇಡೀ ದಿನ ಉಳಿಯಲು ಹೆಣಗಾಡುವ ಹಳೆಯ ಐಫೋನ್ ಅನ್ನು ಬಳಸುತ್ತಿದ್ದರೆ ಅಥವಾ ಇತ್ತೀಚಿನ ಐಫೋನ್ 13 ಅನ್ನು ಅದರ ಅಲಂಕಾರಿಕ ಬ್ಯಾಟರಿ ಉಳಿಸುವ ವೈಶಿಷ್ಟ್ಯಗಳೊಂದಿಗೆ ಬಳಸುತ್ತಿದ್ದರೆ ಅದರ ಬ್ಯಾಟರಿ ಲೈಫ್ ನಿಮ್ಮ ಕೈಯಲ್ಲಿಯೇ ಇರುತ್ತದೆ. ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು, ನೀವೆಲ್ಲಾ ಹೇಗೆ ಅಂದರೆ ಒಂದು ಹೊತ್ತಿನ ಊಟ (Lunch) ಇಲ್ಲದೇ ಇದ್ದು ಬಿಡುತ್ತೇವೆ ಆದರೆ ಫೋನ್ ನಲ್ಲಿ ಚಾರ್ಜ್ ಇಲ್ಲದೇ ಇದ್ದರೆ ಇರೋದೇ ಇಲ್ಲ. ಎಲ್ಲಿ ಚಾರ್ಜರ್ ಪಾಯಿಂಟ್ ಇರುತ್ತೋ ಅಂತಾ ಹುಡುಕುತ್ತನೇ ಇರುತ್ತೇವೆ. ಫೋನ್ ಬ್ಯಾಟರಿ (Phone Battery) ಉಳಿಸಲು ಏನು ಮಾಡಬೇಕೋ ಅದೆಲ್ಲಾ ಸರ್ಕಸ್ ಗಳನ್ನು ಮಾಡುತ್ತಿರುತ್ತೇವೆ. ಇದು ಲಕ್ಸುರಿ ಫೋನ್ ಐಫೋನ್ ಬಳಕೆದಾರರಿಗೆ ಹೊರತಾಗಿಲ್ಲ. ನೀವೇ ಗಮನಿಸಿದಂತೆ, ಇನ್ಸ್ಟಾಗ್ರಾಮ್ ನಲ್ಲಿ (Instagram) ನಾಲ್ಕು ರೀಲ್ಸ್ ನೋಡುವಷ್ಟರಲ್ಲಿ ಡೆಟಾ ಜೊತೆಗೆ ಫೋನ್ ಚಾರ್ಜ್ ಮುಗಿದಿರುತ್ತದೆ. ಅಯ್ಯೋ ಈ ಬ್ಯಾಟರಿ ನಿಲ್ಲೋದೆ ಇಲ್ಲಾಪ್ಪಾ ಅನ್ನೋ ಗೊಣಗಾಟ ಬೇರೆ. ಹಾಗಾದರೆ ಒಂದೇ ಚಾರ್ಜ್‌ನಲ್ಲಿ ಇಡೀ ದಿನ ಉಳಿಯಲು ಹೆಣಗಾಡುವ ಹಳೆಯ ಐಫೋನ್ (iPhone) ಅನ್ನು ಬಳಸುತ್ತಿದ್ದರೆ ಅಥವಾ ಇತ್ತೀಚಿನ ಐಫೋನ್ 13 ಅನ್ನು ಅದರ ಅಲಂಕಾರಿಕ ಬ್ಯಾಟರಿ ಉಳಿಸುವ ವೈಶಿಷ್ಟ್ಯಗಳೊಂದಿಗೆ ಬಳಸುತ್ತಿದ್ದರೆ ಅದರ ಬ್ಯಾಟರಿ ಲೈಫ್ ನಿಮ್ಮ ಕೈಯಲ್ಲಿಯೇ ಇರುತ್ತದೆ. ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡದೇ ತಪ್ಪಿಸಿದರೆ ಫೋನಿನ ಬ್ಯಾಟರಿ ಬಾಳಕೆಯನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳಬಹುದು ಎನ್ನುತ್ತಾರೆ ಆಪಲ್ ತಜ್ಞರು. ಆಪಲ್ ತನ್ನ ಬಳಕೆದಾರರಿಗೆ ಕೆಲವು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಲು ಮತ್ತು ತಮ್ಮ ಐಫೋನ್ ಬ್ಯಾಟರಿಯನ್ನು ಆರೋಗ್ಯಕರವಾಗಿಡಲು ಈ ಸಲಹೆಗಳನ್ನು ನೀಡಿದೆ. ಅವುಗಳು ಹೀಗಿವೆ

ಐಫೋನ್ ಬಳಕೆದಾರರು ಈ ತಪ್ಪುಗಳನ್ನು ತಪ್ಪಿಸಬೇಕು
1) ನಿಮ್ಮ ಐಫೋನ್ ಅನ್ನು ವಿಪರೀತ ತಾಪಮಾನದಿಂದ ದೂರವಿಡಬೇಕು ಎಂದು ಆಪಲ್ ಹೇಳುತ್ತದೆ. ಬ್ಯಾಟರಿ ಸಾಮರ್ಥ್ಯವನ್ನು ಶಾಶ್ವತವಾಗಿ ಹಾನಿಗೊಳಿಸಬಹುದಾದ 35 ° C ಗಿಂತ ಹೆಚ್ಚಿನ ತಾಪಮಾನಕ್ಕೆ ಬಳಕೆದಾರರು ಫೋನ್ ಅನ್ನು ಒಡ್ಡುವುದನ್ನು ತಪ್ಪಿಸಬೇಕು.

2)
ಬ್ಯಾಟರಿ ಚಾರ್ಜಿಂಗ್ ಸಮಯದಲ್ಲಿ ನಿಮ್ಮ ಐಫೋನ್ ಕೇಸ್ ಅನ್ನು ತೆಗೆದಿಡುವುದನ್ನು ಮರೆಯಬಾರದು. ಏಕೆಂದರೆ ಮೊಬೈಲ್ ಕೇಸ್ ಕೆಲವು ಸಂದರ್ಭಗಳಲ್ಲಿ ಹೆಚ್ಚುವರಿ ಶಾಖವನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ಇದು ಬ್ಯಾಟರಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: 80W SUPERVOOC ಮತ್ತು ಶಕ್ತಿಶಾಲಿ ಹೊಸ SoC ಯೊಂದಿಗೆ ಶೀಘ್ರದಲ್ಲೇ ಬರಲಿದೆ OnePlus Nord 2T 5G: ಏನು ನಿರೀಕ್ಷಿಸಬೇಕು ಎಂಬುದು ಇಲ್ಲಿದೆ!

3)
ನಿಮ್ಮ ಐಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಬಿಡಬೇಡಿ. ಅಂದರೆ ನಿಮ್ಮ ಫೋನ್‌ನಲ್ಲಿನ 100 ಪ್ರತಿಶತ ಬ್ಯಾಟರಿ ಆಗುವವರೆಗೂ ಚಾರ್ಜ್ ಮಾಡಬಾರದು. ಜೊತೆಗೆ ನಿಮ್ಮ ಫೋನ್ ಬ್ಯಾಟರಿ ಎಲ್ಲಾ ಮುಗಿದು ಸ್ವಿಚ್ ಆಫ್ ಆಗುವವರೆಗೂ ಸಹ ಇಟ್ಟುಕೊಳ್ಳಬಾರದು ಎನ್ನುತ್ತಾರೆ ಆಪಲ್ ಫೋನ್ ತಜ್ಞರು.

ಬಳಕೆದಾರರು ಅನುಸರಿಸಬೇಕಾದ ಐಫೋನ್ ಬ್ಯಾಟರಿ ಟಿಪ್ಸ್
1) ನಿಮ್ಮ ಐಫೋನ್ iOS ನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿದೆಯೇ ಎಂದು ಯಾವಾಗಲೂ ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ನಂತರ ಸೆಟ್ಟಿಂಗ್‌ಗಳಿಗೆ ಹೋಗಿ ಇತ್ತೀಚಿನ ನವೀಕರಣಗಳನ್ನು ಪರಿಶೀಲಿಸಿಕೊಳ್ಳಬೇಕು. ಮತ್ತು ಅಪ್ಡೇಟ್ ಆಗದಿದ್ದರೆ ಹೊಸ ನವೀಕರಣವನ್ನು ಪಡೆಯಬೇಕು. ಇದರಿಂದಾಗಿ ಐಫೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ.

2)  ಐಫೋನ್‌ನ ಬ್ಯಾಟರಿಯನ್ನು ಆಪ್ಟಿಮೈಜ್ ಮಾಡಲು ನಿಮ್ಮ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ. ಬ್ಯಾಟರಿ ಬಾಳಿಕೆಯನ್ನು ವಿಸ್ತರಿಸಲು ಸ್ಕ್ರೀನ್ ಬೆಳಕನ್ನು ಮಂದಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ ಅಥವಾ ಸ್ವಯಂ-ಪ್ರಕಾಶಮಾನದ ಮೂಡ್ ಅನ್ನು ಆನ್ ಮಾಡಿ. ಇದನ್ನು ಪಡೆಯಲು ಸೆಟ್ಟಿಂಗ್ ಗೆ ಹೋಗಿ ಅಲ್ಲಿ ನೀವು ಹೊಂದಿಸಿಕೊಳ್ಳಬೇಕು.

3) ಅಲ್ಲದೆ, ವೈ-ಫೈ ಸಂಪರ್ಕವನ್ನು ಹೆಚ್ಚಾಗಿ ಬಳಸಿ. Wi Fi ಸಂಪರ್ಕವು ಸೆಲ್ಯುಲಾರ್ ನೆಟ್‌ವರ್ಕ್‌ಗಿಂತ ಕಡಿಮೆ ಶಕ್ತಿಯನ್ನು ಬಳಸುತ್ತದೆ ಎಂದು ಆಪಲ್ ಸೂಚಿಸುತ್ತದೆ. ಆದ್ದರಿಂದ, ನಿಮ್ಮ ವೈ-ಫೈ ಅನ್ನು ಯಾವಾಗಲೂ ಆನ್‌ನಲ್ಲಿ ಇರಿಸುವುದು ಉತ್ತಮ.

ಇದನ್ನೂ ಓದಿ: Tracking your location: ಹುಷಾರ್​! ಈ ಆ್ಯಪ್​ಗಳು ನಿಮ್ಮ ಲೊಕೇಶನ್​ ಟ್ರ್ಯಾಕ್​ ಮಾಡುತ್ತವೆ

4) ಲೋ ಪವರ್ ಮೂಡ್ ಬ್ಯಾಟರಿ ಹೆಚ್ಚು ಹೊತ್ತು ಬರಲು ಬಳಸಬಹುದಾದ ಉತ್ತಮ ಮಾರ್ಗವಾಗಿದೆ. ಇದು ಡಿಸ್ಲ್ಪೈ ಹೊಳಪನ್ನು ಕಡಿಮೆ ಮಾಡುತ್ತದೆ, ಸಾಧನದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ ಮತ್ತು ನಿಮ್ಮ ಐಫೋನ್ ಕಡಿಮೆ ಬ್ಯಾಟರಿ ಅವಧಿಯನ್ನು ಹೊಂದಿರುವಾಗ ಸಿಸ್ಟಮ್ ಅನಿಮೇಷನ್‌ಗಳನ್ನು ಕಡಿಮೆ ಮಾಡುತ್ತದೆ.

5) ನಿಮ್ಮ ಬ್ಯಾಟರಿ ಬಳಕೆಯ ಮಾದರಿಯನ್ನು ಪರಿಶೀಲಿಸಿ. ನೀವು ಸೆಟ್ಟಿಂಗ್‌ಗಳಿಂದ ಬ್ಯಾಟರಿ ವಿಭಾಗವನ್ನು ಪ್ರವೇಶಿಸಬಹುದು. ಇದು ಪ್ರತಿ ಅಪ್ಲಿಕೇಶನ್ ಬಳಸುವ ನಿಮ್ಮ ಬ್ಯಾಟರಿಯ ಪ್ರಮಾಣವನ್ನು ತೋರಿಸುತ್ತದೆ.

ಹೀಗೆ ಕೆಲವು ತಪ್ಪುಗಳನ್ನು ತಪ್ಪಿಸುವ ಮತ್ತು ಕೆಲವು ಉಪಯುಕ್ತ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಐಫೋನ್ ಬಳಕೆದಾರರು ತಮ್ಮ ಫೋನಿನ ಬ್ಯಾಟರಿಯನ್ನು ಹೆಚ್ಚು ಹೊತ್ತು ವಿಸ್ತರಿಸಬಹುದು.
Published by:Ashwini Prabhu
First published: