ಕಂಡಕಂಡಲ್ಲಿ ಮೊಬೈಲ್​ ಚಾರ್ಜ್​ ಮಾಡುವ ಮೊದಲು ಇದನ್ನೊಮ್ಮೆ ಓದಿ

ಕೆಲ ಹ್ಯಾಕರ್​ಗಳು ಯುಎಸ್​ಬಿ ಕನೆಕ್ಷನ್​ಅನ್ನು ಬದಲಾಯಿಸಿರುವ ಸಾಧ್ಯತೆಗಳಿರುತ್ತವೆಯಂತೆ. ಹೀಗೆ ಮಾಡುವ ಮೂಲಕ ನಿಮ್ಮ ಮೊಬೈಲ್​ ಹ್ಯಾಕ್​ ಮಾಡುವ ಸಾಧ್ಯತೆ ಇರುತ್ತದೆ ಅಥವಾ ಮೊಬೈಲ್​ಗೆ ವೈರಸ್​ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Rajesh Duggumane | news18
Updated:May 24, 2019, 3:48 PM IST
ಕಂಡಕಂಡಲ್ಲಿ ಮೊಬೈಲ್​ ಚಾರ್ಜ್​ ಮಾಡುವ ಮೊದಲು ಇದನ್ನೊಮ್ಮೆ ಓದಿ
ಪ್ರಾತಿನಿದಿಕ ಚಿತ್ರ
Rajesh Duggumane | news18
Updated: May 24, 2019, 3:48 PM IST
ಈಗಿನ ಕಾಲದಲ್ಲಿ ಎನಿಲ್ಲದಿದ್ದರೂ ಜನ ಸಹಿಸಿಕೊಳ್ಳುತ್ತಾರೆ ಆದರೆ, ಮೊಬೈಲ್​ಗೆ ಚಾರ್ಜ್​​ ಇಲ್ಲ ಎನ್ನುವ ವಿಚಾರವನ್ನು ಮಾತ್ರ ಯಾರಿಂದಲೂ ಸಹಿಸಲಾಗದು. ಪ್ರಯಾಣ ಮಾಡುವಾಗ ಕೆಲವರು ಪವರ್​ ಬ್ಯಾಂಕ್​ ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ವಿಮಾನ ನಿಲ್ದಾಣ, ಬಸ್​ ನಿಲ್ದಾಣಗಳಲ್ಲಿ ಸಿಗುವ ಚಾರ್ಜಿಂಗ್​ ಪಾಯಿಂಟ್​ಗಳಲ್ಲಿ ಮೊಬೈಲ್​ಗೆ ಚಾರ್ಜ್​ ಹಾಕುತ್ತಾರೆ. ಆದರೆ, ಎಲ್ಲೆಂದರಲ್ಲಿ ಚಾರ್ಜ್​ ಹಾಕುವ ಮೊದಲು ಸ್ವಲ್ಪ ಎಚ್ಚರದಿಂದ ಇರಿ. ಇಲ್ಲದಿದ್ದರೆ ನಿಮ್ಮ ಮೊಬೈಲ್​ಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಚಾರ್ಜ್​ ಮಾಡುವುದಕ್ಕೂ ಮೊಬೈಲ್​ಗೆ ಅಪಾಯ ಬರುವುದಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೂ ಉತ್ತರವಿದೆ. ಸಾಮಾನ್ಯವಾಗಿ ಸಾರ್ವಜನಿಕ ಚಾರ್ಜಿಂಗ್​ಬೂತ್​ಗಳಲ್ಲಿ ಬೇರೇ ಕೇಬಲ್​ ಹಾಕಲು ಬರುವುದಿಲ್ಲ. ಆದರೆ, ಕೆಲ ಹ್ಯಾಕರ್​ಗಳು ಯುಎಸ್​ಬಿ ಕನೆಕ್ಷನ್​ಅನ್ನು ಬದಲಾಯಿಸಿರುವ ಸಾಧ್ಯತೆಗಳಿರುತ್ತವೆಯಂತೆ. ಹೀಗೆ ಮಾಡುವ ಮೂಲಕ ನಿಮ್ಮ ಮೊಬೈಲ್​ ಹ್ಯಾಕ್​ ಮಾಡುವ ಸಾಧ್ಯತೆ ಇರುತ್ತದೆ ಅಥವಾ ಮೊಬೈಲ್​ಗೆ ವೈರಸ್​ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

“ರಸ್ತೆ ಬದಿಯಲ್ಲಿ ಸಿಗುವ ಟೂತ್​ಬ್ರೆಶ್​​ ಬಳಕೆ ಮಾಡಿಕೊಂಡು ಹಲ್ಲುಜ್ಜುವುದು ಒಂದೇ, ಸಾರ್ವಜನಿಕ ಪ್ರದೇಶಗಳಲ್ಲಿ ಚಾರ್ಜ್​​ ಹಾಕುವುದು ಒಂದೇ. ಇದರ ಸಮಸ್ಯೆಗಳು ಏನು ಎಂಬ ಬಗ್ಗೆ  ಗಮನ ಇರುವುದಿಲ್ಲ. ನಿಮಗೆ ಗೊತ್ತಿಲ್ಲದೆ ಮೊಬೈಲ್​ ಹ್ಯಾಕ್​ ಆಗಿರುತ್ತದೆ,” ಎಂಬುದು ತಜ್ಞರ ಮಾತು. ಹೀಗೆ ಮಾಡುವ ಬದಲು ಪವರ್​ ಬ್ಯಾಂಕ್​ಗಳನ್ನು ಕೊಂಡೊಯ್ಯುವುದು ಉತ್ತಮ ಎನ್ನುವ ಸೂಚನೆ ತಜ್ಞರದ್ದು.

ಇದನ್ನೂ ಓದಿ: ನೀವು ಇನ್​ಸ್ಟಾಗ್ರಾಮ್​ ಬಳಕೆ ಮಾಡುತ್ತಿದ್ದೀರೇ? ಹಾಗಿದ್ದರೆ ಇಲ್ಲಿದೆ ಆಘಾತಕಾರಿ ವಿಚಾರ

First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...