ಟೆಲಿಕಾಂ ಕಂಪೆನಿಗಳಲ್ಲಿ ಜಿಯೋ (Jio), ಏರ್ಟೆಲ್ (Airtel), ಬಿಎಸ್ಎನ್ಎಲ್ (BSNL), ವೊಡಫೋನ್ ಐಡಿಯಾ (Vodafone Idea) ಕಂಪೆನಿಗಳು ಭಾರೀ ಜನಪ್ರಿಯತೆಯನ್ನು ಪಡೆದಿದೆ. ಇದೀಗ ಈ ಕಂಪೆನಿಗಳು ತನ್ನ ಗ್ರಾಹಕರಿಗಾಗಿ ಹೊಸ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಮೂಲಕ ಗ್ರಾಹಕರು ಅಧಿಕ ಡೇಟಾ, ಅಧಿಕ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಟೆಲಿಕಾಂ ಕಂಪೆನಿಗಳು (Telecom Company) ಇತ್ತೀಚೆಗೆ ತನ್ನ ವಿಶೇಷ ರೀಚಾರ್ಜ್ ಆಫರ್ಗಳನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿವೆ. ಅದ್ರಲ್ಲೂ ಇದೀಗ ಟೆಲಿಕಾಂ ಕಂಪೆನಿಗಳು ದೇಶದೆಲ್ಲೆಡೆ 5ಜಿ ನೆಟ್ವರ್ಕ್ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದು, 2023ರ ಒಳಗಡೆ 5ಜಿ ದೇಶದ ಮೂಲೆ ಮೂಲೆಯಲ್ಲೂ ವಿಸ್ತರಿಸುವ ಗುರಿಯನ್ನು ಹೊಂದಿದೆ.
ಜಿಯೋ, ಏರ್ಟೆಲ್, ವಿಐ ಟೆಲಿಕಾಂ ಹಾಗೂ ಬಿಎಸ್ಎನ್ಎಲ್ ಟೆಲಿಕಾಂನ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್ಗಳು ದೀರ್ಘಾವಧಿ ವ್ಯಾಲಿಡಿಟಿಯಲ್ಲಿ ಹೆಚ್ಚು ಗಮನ ಸೆಳೆದಿವೆ. ಈ ಎಲ್ಲ ಸಂಸ್ಥೆಗಳು 365 ದಿನಗಳ ವ್ಯಾಲಿಡಿಟಿಯ ಕೆಲವು ಯೋಜನೆಗಳ ಆಯ್ಕೆ ಹೊಂದಿದ್ದು, ಆದರೆ ಪ್ರಯೋಜನಗಳಲ್ಲಿ ಮಾತ್ರ ಬೇರೆ ಬೇರೆ ರೀತಿಯದ್ದಾಗಿರುತ್ತದೆ.
ಜಿಯೋನ 2999 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಯೋಜನೆ
ಜಿಯೋ ಟೆಲಿಕಾಂನ 2999 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಎಕ್ಸ್ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್ಬ್ಯಾಕ್ ಸೇವೆಗಳು ಲಭ್ಯ.
ಇದನ್ನೂ ಓದಿ: ಜಿಯೋದಿಂದ ಮೊದಲ 5ಜಿ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ! ಆಫರ್ಸ್ ಹೇಗಿದೆ?
ಏರ್ಟೆಲ್ನ 2999 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಯೋಜನೆ
ಏರ್ಟೆಲ್ ಟೆಲಿಕಾಂನ 2999 ರೂ. ಪ್ರೀಪೇಯ್ಡ್ ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2 ಜಿಬಿ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಡಿಸ್ನಿ ಹಾಟ್ಸ್ಟಾರ್ ಪ್ಲಸ್ ಓಟಿಟಿ ಪ್ರಯೋಜನ ದೊರೆಯಲಿದೆ. ಏರ್ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ವೆಂಕ್ ಮ್ಯೂಸಿಕ್, ಫಾಸ್ಟ್ಟ್ಯಾಗ್ ಕ್ಯಾಶ್ಬ್ಯಾಕ್ ಕೊಡುಗೆ ದೊರೆಯಲಿದೆ.
ವೊಡಫೋನ್ ಐಡಿಯಾದ 3099 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಯೋಜನೆ
ವೊಡಫೋನ್ ಐಡಿಯಾದ ಟೆಲಿಕಾಂನ ಈ ಪ್ಲ್ಯಾನ್ನಲ್ಲಿ ಪ್ರತೀದಿನ ಗ್ರಾಹಕರು 1.5 ಜಿಬಿ ಡೇಟಾ ಪ್ರಯೋಜನವನ್ನು ಬಳಸಬಹುದಾಗಿದೆ. ಅದರೊಂದಿಗೆ ಯಾವುದೇ ನೆಟವರ್ಕ್ಗೆ ಅನ್ಲಿಮಿಟೆಡ್ ಕಾಲ್ ಮಾಡುವ ಪ್ರಯೋಜನವನ್ನು ಪಡೆಯುತ್ತಾರೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಅನ್ನು ಮಾಡಬಹುದಾಗಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹಾಗೆಯೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ.
ಬಿಎಸ್ಎನ್ಎಲ್ನ 2999 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಯೋಜನೆ
ಬಿಎಸ್ಎನ್ಎಲ್ ಟೆಲಿಕಾಂನ 2999 ರೂಪಾಯಿಯ ಪ್ರೀಪೇಯ್ಡ್ ಯೋಜನೆ ವಾರ್ಷಿಕ ಅವಧಿಯ ಪ್ಲ್ಯಾನ್ ಆಗಿದೆ. ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 3 ಜಿಬಿ ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಹಾಗೂ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮಾಡುವ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಹೆಚ್ಚುವರಿಯಾಗಿ 90 ದಿನಗಳ ವ್ಯಾಲಿಡಿಟಿ ಸಹ ಲಭ್ಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ