Hyundai ವಾಹನಗಳಲ್ಲಿ ಕಾಣಿಸಿಕೊಂಡ ಸಮಸ್ಯೆ! ದೋಷಪೂರಿತ ಭಾಗಗಳನ್ನು ಸರಿಪಡಿಸಲು ವಾಹನಗಳನ್ನು ಹಿಂಪಡೆದುಕೊಂಡ ಕಂಪನಿ

ಜರ್ಮನ್ ಕಂಪನಿಯು EQE 350+ ಮತ್ತು EQS 450+ ಶುದ್ಧ ಎಲೆಕ್ಟ್ರಿಕ್ ಸೆಡಾನ್‌ಗಳು ಸೇರಿದಂತೆ ಐದು ಮಾದರಿಗಳ 438 ಘಟಕಗಳನ್ನು ಹಿಂಪಡೆಯಲು ಸಿದ್ಧವಾಗಿದೆ. ಕೆಲವು ದಿನಗಳ ಹಿಂದೆ, ಹ್ಯುಂಡೈ ತನ್ನ Xcent QZ ಟ್ರಕ್‌ನ ಆಲ್ಟರ್​​ನೇಟರ್ ಘಟಕದಲ್ಲಿ ದೋಷವನ್ನು ಕಂಡುಹಿಡಿದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಕ್ಷಿಣ ಕೊರಿಯಾದ (South Korea) ಪ್ರಮುಖ ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ (Hyundai) ಗ್ರಾಹಕರ ಸುರಕ್ಷತೆಗಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕಂಪನಿಗೆ ಸೇರಿದ 70 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯಲು ನಿರ್ಧರಿಸಿದೆ. ಹುಂಡೈ ಮೋಟಾರ್ ತಮ್ಮ ವಾಹನಗಳಲ್ಲಿ  ದೋಷಪೂರಿತ ಭಾಗಗಳನ್ನು ಸರಿಪಡಿಸಲು ಮತ್ತು ಬದಲಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ಸಾರಿಗೆ ಸಚಿವಾಲಯ (Union Ministry of Transport) ಹುಂಡೈ ಕಂಪನಿಯು 70,000 ಕ್ಕೂ ಹೆಚ್ಚು ವಾಹನಗಳನ್ನು ಹಿಂಪಡೆಯಲಿದೆ ಎಂದು ಗುರುವಾರ ತಿಳಿಸಿದೆ.

    Xcient ​QZ ಹೆವಿ ಡ್ಯೂಟಿ ಟ್ರಕ್ ಮತ್ತು ಕೌಂಟಿ ಬಸ್ ಸೇರಿದಂತೆ ಆರು ಮಾದರಿಗಳ 70,582 ಯುನಿಟ್‌ಗಳನ್ನು ಹ್ಯುಂಡೈ ಹಿಂಪಡೆಯುತ್ತಿದೆ ಎಂದು ಭೂ ಮೂಲಸೌಕರ್ಯ ಮತ್ತು ಸಾರಿಗೆ ಸಚಿವಾಲಯವು ಹೇಳಿಕೆಯಲ್ಲಿ ಬಹಿರಂಗಪಡಿಸಿದೆ. ಹ್ಯುಂಡೈ ಕಂಪನಿಯ ಜೊತೆಗೆ, ಪ್ರಮುಖ ಕಾರು ತಯಾರಕ ಮರ್ಸಿಡಿಸ್-ಬೆನ್ಜ್ ಕೊರಿಯಾ ಕೂಡ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಹಿಂಪಡೆಯಲು ತಯಾರಿ ನಡೆಸುತ್ತಿದೆ.

    ಜರ್ಮನ್ ಕಂಪನಿಯು EQE 350+ ಮತ್ತು EQS 450+ ಶುದ್ಧ ಎಲೆಕ್ಟ್ರಿಕ್ ಸೆಡಾನ್‌ಗಳು ಸೇರಿದಂತೆ ಐದು ಮಾದರಿಗಳ 438 ಘಟಕಗಳನ್ನು ಹಿಂಪಡೆಯಲು ಸಿದ್ಧವಾಗಿದೆ. ಕೆಲವು ದಿನಗಳ ಹಿಂದೆ, ಹ್ಯುಂಡೈ ತನ್ನ Xcient QZ ಟ್ರಕ್‌ನ ಆಲ್ಟರ್​​ನೇಟರ್ ಘಟಕದಲ್ಲಿ ದೋಷವನ್ನು ಕಂಡುಹಿಡಿದಿದೆ. ಸಂಭಾವ್ಯ ವಿದ್ಯುತ್ ನಿಲುಗಡೆ ಸಮಸ್ಯೆಗಳ ಕಾರಣ ಟ್ರಕ್‌ಗಳನ್ನು ಹಿಂಪಡೆಯಲು ಕಂಪನಿ ನಿರ್ಧರಿಸಿದೆ. ಕಂಪನಿಯು Mercedes-Benz EQS 450+ ಆಲ್-ಎಲೆಕ್ಟ್ರಿಕ್ ಸೆಡಾನ್ ಅನ್ನು ಸಹ ಹಿಂಪಡೆಯುತ್ತಿದೆ,

    ಇದನ್ನೂ ಓದಿ: No seatbelts: ಈ ಪ್ರದೇಶದಲ್ಲಿ ಪ್ರಯಾಣಿಕರಿಗೆ ಸೀಟ್​ ಬೆಲ್ಟ್​ ಧರಿಸಬೇಡಿ ಎಂಬ ನಿಯಮವಿದೆಯಂತೆ! ಎಂಥಾ ವಿಚಿತ್ರವಿದು

    ಮೇಲಿನ ವಾಹನಗಳ ಮಾಲೀಕರು ಗುರುವಾರ ಮತ್ತು ಶುಕ್ರವಾರ ಕ್ರಮವಾಗಿ ಹುಂಡೈ ಮತ್ತು ಮರ್ಸಿಡಿಸ್-ಬೆಂಜ್ ದುರಸ್ತಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು ಮತ್ತು ಭಾಗಗಳನ್ನು ಉಚಿತವಾಗಿ ಬದಲಾಯಿಸಬಹುದು ಎಂದು ಸಚಿವಾಲಯ ತಿಳಿಸಿದೆ. ಗ್ರೀನ್ ಕಾರ್ ಮಾರುಕಟ್ಟೆಗೆ ಪ್ರವೇಶಿಸಿದ 13 ವರ್ಷಗಳ ನಂತರ ಜುಲೈನಲ್ಲಿ ಈ ವಾಹನಗಳ ಒಟ್ಟು ಮಾರಾಟವು 1 ಮಿಲಿಯನ್ ಗಡಿಯನ್ನು ದಾಟಿದೆ ಎಂದು ಹ್ಯುಂಡೈ ಮೋಟಾರ್ ಕಳೆದ ವಾರ ಹೇಳಿದೆ. ಆಟೋಮೇಕಿಂಗ್

    ಇದನ್ನೂ ಓದಿ: Independence Day 2022: ವಾಟ್ಸ್​ಆ್ಯಪ್​ನಲ್ಲಿ ಹೀಗೆ ಸ್ಟಿಕ್ಕರ್​ ಡೌನ್​ಲೋಡ್​ ಮಾಡಿ ಸ್ನೇಹಿತರಿಗೆ ಶುಭಾಶಯ ತಿಳಿಸಿ

    ಜುಲೈ ತಿಂಗಳೊಂದರಲ್ಲೇ 29,484 ಪರಿಸರ ಸ್ನೇಹಿ ವಾಹನಗಳನ್ನು ಮಾರಾಟ ಮಾಡಿದ್ದು, ಒಟ್ಟು ಮಾರಾಟವನ್ನು 1.024 ಮಿಲಿಯನ್‌ಗೆ ತಲುಪಿದೆ ಎಂದು ಕಂಪನಿ ತಿಳಿಸಿದೆ. ಜುಲೈ 2009 ರಲ್ಲಿ, ಹುಂಡೈ ಮೋಟಾರ್ ಗ್ರೂಪ್ ತನ್ನ ಅವಂಟೆ ಸಬ್-ಕಾಂಪ್ಯಾಕ್ಟ್ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ ಪರಿಸರ ಸ್ನೇಹಿ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿತು. ಅದರ ನಂತರ, ಇದು ದಾಖಲೆಯ ಮಾರಾಟವನ್ನು ದಾಖಲಿಸಿತು.

    ಈ ಮೊದಲು ಅನೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳು ಸಹ ಹಿಂಪಡೆಯುವಿಕೆಯನ್ನು ಎದುರಿಸಿವೆ. ಹಿಂದಿನ ವರ್ಷಗಳಲ್ಲಿ, ಹ್ಯುಂಡೈ ಮೋಟಾರ್ ಇಂಡಿಯಾ, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಗಳು ಸಹ ವಾಹನ ಚಾಲಕರ ಅನುಕೂಲಕ್ಕಾಗಿ ವಾಹನಗಳನ್ನು ಹಿಂಪಡೆದಿವೆ. ಈ ಕಂಪನಿಗಳು ಇಂಧನ ಪಂಪ್‌ಗಳು, ಏರ್‌ಬ್ಯಾಗ್‌ಗಳಲ್ಲಿನ ದೋಷಗಳು ಮತ್ತು ಗುಣಮಟ್ಟ ತಪಾಸಣೆ ತಪ್ಪಿದ ಕಾರಣಕ್ಕಾಗಿ ವಾಹನಗಳನ್ನು ಹಿಂಪಡೆದಿವೆ.

    ವಾಹನಗಳಲ್ಲಿ ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ. ಆದರೆ ಕಂಪನಿಯೇ ಅದನ್ನು ಗುರುತಿಸಿ ಆ ಸಮಸ್ಯೆಯನ್ನು ಸರಿಪಡಿಸಲು ವಾಹನವನ್ನು ಮತ್ತೆ ಹಿಂಪಡೆಯುವುದು ತೀರಾ ಕಡಿಮೆ. ಆದರೆ ಹುಂಡೈ Xcient ​QZ ಹೆವಿ ಡ್ಯೂಟಿ ಟ್ರಕ್ ಮತ್ತು ಕೌಂಟಿ ಬಸ್ ಸೇರಿದಂತೆ ಆರು ಮಾದರಿಗಳನ್ನು ಹಿಂಪಡೆಯುತ್ತಿದೆ.
    Published by:Harshith AS
    First published: