ವಾಟ್ಸ್​ಆ್ಯಪ್​ ಮೇಲೆ ನಿಗಾವಹಿಸಲಿದೆ ಪೊಲೀಸ್ ಇಲಾಖೆ..!

ವಾಟ್ಸ್​ಆ್ಯಪ್​ ಮೇಲೆ ಸುಳ್ಳು ಸುದ್ದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿ ಬಂದಿದ್ದವು.

zahir | news18
Updated:December 5, 2018, 5:50 PM IST
ವಾಟ್ಸ್​ಆ್ಯಪ್​ ಮೇಲೆ ನಿಗಾವಹಿಸಲಿದೆ ಪೊಲೀಸ್ ಇಲಾಖೆ..!
Men pose with smartphones in front of displayed Whatsapp logo in this illustration September 14, 2017. REUTERS/Dado Ruvic
zahir | news18
Updated: December 5, 2018, 5:50 PM IST
ವಾಟ್ಸ್​ಆ್ಯಪ್ ಮೆಸೆಂಜರ್ ಸೇವೆಯಲ್ಲಿ ಅತ್ಯಂತ ಎನ್ಕ್ರಿಪ್ಶನ್ ಬಳಸುವುದರಿಂದ ಸಂದೇಶಗಳು ಎಲ್ಲೂ ಸೋರಿಕೆಯಾಗುತ್ತಿರಲಿಲ್ಲ. ಇದರಿಂದ ಮೆಸೇಜ್ ಕಳುಹಿಸಿದ ಮತ್ತು ಪಡೆದುಕೊಂಡ ವ್ಯಕ್ತಿಗಳು ಮಾತ್ರ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿತ್ತು. ಇದನ್ನೆ ಬಂಡವಾಳವಾಗಿಟ್ಟುಕೊಂಡ ಕ್ರಿಮಿನಲ್​ಗಳು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಲು ವಾಟ್ಸ್​ಆ್ಯಪ್​ನ್ನು ಬಳಸಿಕೊಳ್ಳುತ್ತಿದ್ದರು. ಆದರೀಗ ಆಸ್ಟ್ರೇಲಿಯಾ ಪೊಲೀಸರು ವಾಟ್ಸ್​ಆ್ಯಪ್​ ಮತ್ತು ಟೆಲಿಗ್ರಾಂ ಮೆಸೆಂಜರ್​ ಹದ್ದಿನ ಕಣ್ಣಿಡಲು ಮುಂದಾಗಿದ್ದಾರೆ.

ಅಪರಾಧಿ ಚಟುವಟಿಕೆಗಳಲ್ಲಿ ವಾಟ್ಸ್​ಆ್ಯಪ್​ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ ಪೊಲೀಸರು ಸಮಾಜಿಕ ಜಾಲತಾಣದಲ್ಲಿ ಕಳುಹಿಸುವ ಸಂದೇಶಗಳ ಸಂಪೂರ್ಣ ಮೇಲ್ವಿಚಾರಣೆ ನಡೆಸಲು ಯೋಚಿಸಿದ್ದಾರೆ. ಇದಕ್ಕಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿರುವ ಆಸ್ಟ್ರೇಲಿಯಾ ಸರ್ಕಾರ, ಇನ್ಮುಂದೆ ವಾಟ್ಸ್​ಆ್ಯಪ್​ ಬಳಕೆಯ ಎಲ್ಲ ಮಾಹಿತಿಗಳನ್ನು ಕಲೆಹಾಕಲಿದ್ದಾರೆ. ಇದರಿಂದ ವಾಟ್ಸ್​ಆ್ಯಪ್​ ಮೂಲಕ ಹರಡುವ ದ್ವೇಷಪೂರಿತ ಸಂದೇಶ, ಕಳ್ಳಸಾಗಣೆ, ಡ್ರಗ್ಸ್​ ಮುಂತಾದ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಡಲಿದೆ.

ಇದನ್ನೂ ಓದಿ: ಗಂಭೀರ್ ಗುಡ್​ ಬೈ: ಆಕ್ರಮಣಕಾರಿ ಸ್ವಭಾವದಿಂದ ಮಿಂಚಿದ್ದ ಎಡಗೈ ದಾಂಡಿಗ

ಈಗಾಗಲೇ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಹೊಸ ಬಿಲ್ ಪಾಸಾಗಿದ್ದು, ಸಂದೇಶಗಳ ಗೌಪ್ಯತೆಯನ್ನು ಪಡೆಯಲು ಸ್ಪೈವೇರ್​ನ್ನು ಸ್ಥಾಪಿಸಲು ಸರ್ಕಾರವು ಕಂಪೆನಿಗಳ ಮೇಲೆ ಒತ್ತಡ ಹೇರಲಿದೆ ಎನ್ನಲಾಗಿದೆ. ಈ ಕುರಿತು ಗುಪ್ತಚರ ಮತ್ತು ಭದ್ರತಾ ಇಲಾಖೆ ಈಗಾಗಲೇ ಕಾರ್ಯಾಚರಿಸುತ್ತಿದ್ದು, ಶೀಘ್ರದಲ್ಲೇ ಆಸ್ಟ್ರೇಲಿಯಾ ಪೊಲೀಸರು ವಾಟ್ಸ್​ಆ್ಯಪ್​ ಮೇಲೆ ನಿಯಂತ್ರಂಣ ಹೊಂದಲಿದ್ದಾರೆ ಎನ್ನಲಾಗಿದೆ. ಭಾರತದಲ್ಲೂ ವಾಟ್ಸ್​ಆ್ಯಪ್​ ಮೂಲಕ ಸುಳ್ಳು ಸುದ್ದಿಗಳು ಹರಡುತ್ತಿದ್ದು, ಈ ಹಿಂದೆ ಹಲವು ದಾಳಿ ಮತ್ತು ಕೊಲೆಗಳಿಗೆ ಇಂತಹ ವಂದತಿಗಳು ಕಾರಣವಾಗಿತ್ತು. ಹೀಗಾಗಿ ವಾಟ್ಸ್​ಆ್ಯಪ್​ ಮೇಲೆ ಸುಳ್ಳು ಸುದ್ದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ಅದರಂತೆ ಕೆಲ ದಿನಗಳ ಹಿಂದೆ ವಾಟ್ಸ್​ಆ್ಯಪ್​ ವದಂತಿ, ಸುಳ್ಳು ಸುದ್ದಿಗಳನ್ನು ನಂಬದಂತೆ ಜಾಹೀರಾತನ್ನು ಪ್ರಕಟಿಸಿತ್ತು.

ಇದನ್ನೂ ಓದಿ: ವಾಟ್ಸ್​ಆ್ಯಪ್​ ಯಾಕಿರುವುದು ಎಂದು ತಿಳಿಸಲು ಜಾಹೀರಾತಿನ ಮೊರೆ ಹೋದ ಫೇಸ್​ಬುಕ್

First published:December 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...