• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Exam Tips: ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ! ಪರೀಕ್ಷಾ ಕೇಂದ್ರಕ್ಕೆ ರೀಚ್ ಆಗಲು ಈ ಆ್ಯಪ್​ಗಳು ಸಹಕಾರಿಯಾಗ್ಬಹುದು

Exam Tips: ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ! ಪರೀಕ್ಷಾ ಕೇಂದ್ರಕ್ಕೆ ರೀಚ್ ಆಗಲು ಈ ಆ್ಯಪ್​ಗಳು ಸಹಕಾರಿಯಾಗ್ಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪರೀಕ್ಷೇಗಳು ವಿದ್ಯಾರ್ಥಿಗಳ ಜೀವನವನ್ನು ನಿರ್ಧರಿಸುವ ಬಹುಮುಖ್ಯ ಅಂಶ ಎನ್ನಬಹುದು. ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವ ತಯಾರಿ ನಡೆಸುವುದರ ಜೊತೆಗೆ ಆ ದಿನದಂದು ಪರೀಕ್ಷೆ ಕೊಠಡಿಗೆ ಸರಿಯಾದ ಸಮಯಕ್ಕೆ ಹಾಜರಾಗುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ಕೆಲವೊಂದು ಆ್ಯಪ್​ಗಳು ಸಹ ಲಭ್ಯವಿದೆ.

ಮುಂದೆ ಓದಿ ...
  • Share this:

    ವಿದ್ಯಾರ್ಥಿಗಳಿಗೆ (Students) ಇನ್ನೇನು ಕೆಲವೇ ತಿಂಗಳುಗಳಲ್ಲಿ ತನ್ನ ತರಗತಿಯ ಅಂತಿಮ ಪರೀಕ್ಷೆಗಳು ಪ್ರಾರಂಭವಾಗುತ್ತದೆ. ಈ ಸಂದರ್ಭಗಳಲ್ಲಿ 10 ನೇ ತರಗತಿ ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಾಲೆಯಿಂದ ಬೇರೆ ಶಾಲೆಗೆ ಹೋಗಿ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಇನ್ನು ಸಿಬಿಎಸ್‌ಸಿ (CBSE) ಮತ್ತು ಐಎಸ್‌ಸಿ (ISC) ಶಾಲೆಗಳಲ್ಲಿ ಓದುತ್ತಿರುವ 12 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು (Board Exams) ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿವೆ. ಐಎಸ್‌ಸಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 13 ರಂದು ಪ್ರಾರಂಭವಾಗಿದ್ದರೆ, 12 ನೇ ತರಗತಿಯ ಸಿಬಿಎಸ್‌ಸಿ ಪರೀಕ್ಷೆ ಫೆಬ್ರವರಿ 15 ರಿಂದ ನಡೆಯಲಿದೆ. ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ಪೂರ್ವ ತಯಾರಿ ನಡೆಸಿರುತ್ತಾರೆ. ಅದೇ ರೀತಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೊಠಡಿಗೆ ಹಾಜರಾಗುವುದು ಸಹ ಮುಖ್ಯವಾಗಿದೆ.


    ಪರೀಕ್ಷೇಗಳು ವಿದ್ಯಾರ್ಥಿಗಳ ಜೀವನವನ್ನು ನಿರ್ಧರಿಸುವ ಬಹುಮುಖ್ಯ ಅಂಶ ಎನ್ನಬಹುದು. ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವ ತಯಾರಿ ನಡೆಸುವುದರ ಜೊತೆಗೆ ಆ ದಿನದಂದು ಪರೀಕ್ಷೆ ಕೊಠಡಿಗೆ ಸರಿಯಾದ ಸಮಯಕ್ಕೆ ಹಾಜರಾಗುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ಕೆಲವೊಂದು ಆ್ಯಪ್​ಗಳು ಸಹ ಲಭ್ಯವಿದೆ.


    ಮೆಟ್ರೋ ಹಾಗೂ ಬಸ್​​ ಅಪ್ಲಿಕೇಶನ್​ಗಳು


    ಹೆಚ್ಚಿನ ವಿದ್ಯಾರ್ಥಿಗಳು ಇತ್ತೀಚೆಗೆ ಬಸ್​​ ಅಥವಾ ಮೆಟ್ರೋಗಳಲ್ಲೇ ಸಂಚಾರ ಮಾಡುತ್ತಾರೆ. ಏಕೆಂದರೆ ಈ ಬಸ್​ ಮತ್ತು ಮೆಟ್ರೋಗಳಲ್ಲಿ ಪಾಸ್​ ವ್ಯವಸ್ಥೆಯನ್ನು ನೀಡಿರುವುದರಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾನೇ ಸಹಕಾರಿಯಾಗುತ್ತದೆ.  ಇದಲ್ಲದೆ ಬಸ್​ ಅಥವಾ ಮೆಟ್ರೋ ರೈಲುಗಳ ಮೂಲಕ ಪ್ರಯಾಣ ಮಾಡುವವರು ಅಪ್ಲಿಕೇಶನ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.


    ಇದನ್ನೂ ಓದಿ: ಅಮೆಜಾನ್​ನಲ್ಲಿ ಈ ಸ್ಮಾರ್ಟ್​​​ಫೋನ್​​ಗಳ ಮೇಲೆ ಬಂಪರ್ ಆಫರ್​!


    ಈ ಆ್ಯಪ್​ಗಳ ಮೂಲಕ ಯಾವೆಲ್ಲಾ ಬಸ್‌ಗಳು ಹಾಗೂ ಮೆಟ್ರೊ ರೈಲುಗಳು ಯಾವ ಮಾರ್ಗವಾಗಿ ಹೋಗುತ್ತವೆ, ಬಸ್‌ ನಂಬರ್‌ ಎಷ್ಟು, ಮೆಟ್ರೋ ಲೈನ್‌ ಕಲರ್‌ ಯಾವುದು, ದರ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಉದಾಹರಣೆಗೆ ಬೆಂಗಳೂರಿನ ಮೆಟ್ರೋದಲ್ಲಿ ಸಂಚಾರ ಮಾಡಬೇಕಾದರೆ ನಮ್ಮ ಮೆಟ್ರೋ ಆ್ಯಪ್ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು. ಈ ಆ್ಯಪ್ ಮೂಲಕ ಎಲ್ಲಿಗೆ ಎಷ್ಟು ದರ, ಎಷ್ಟು ಸಮಯಕ್ಕೆ ನಿಲ್ದಾಣಕ್ಕೆ ಟ್ರೈನ್‌ ಬರಲಿದೆ, ಬೆಳಗ್ಗೆ ಎಷ್ಟಕ್ಕೆ ಕಾರ್ಯಾರಂಭ, ಎಷ್ಟೊತ್ತಿಗೆ ಸಂಚಾರ ನಿಲ್ಲುತ್ತದೆ ಎಂಬೆಲ್ಲಾ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.


    ಸಾಂದರ್ಭಿಕ ಚಿತ್ರ


    ಗೂಗಲ್​ ಮ್ಯಾಪ್ ಅನ್ನು ಬಳಸಿ


    ಗೂಗಲ್​ ಮ್ಯಾಪ್​ ಬಹಳ ಹಿಂದಿನಿಂದ ಜನಪ್ರಿಯತೆಯನ್ನು ಪಡೆದಿದೆ. ಇದು ಕೇವಲ ಒಂದು ಸ್ಥಳವನ್ನು ಮಾತ್ರ ಬಳಕೆದಾರರಿಗೆ ತಿಳಿಸುವುದಿಲ್ಲ. ಈ ಅಪ್ಲಿಕೇಶನ್​ ಬಹಳಷ್ಟು ರೀತಿಯಲ್ಲಿ ಮೊಬೈಲ್​ ಬಳಕೆದಾರರಿಗೆ ಸಹಕಾರಿಯಾಗುತ್ತದೆ. ಇನ್ನು ಗೂಗಲ್​ ಮ್ಯಾಪ್​ ಅನ್ನು ದೇಶದಲ್ಲಿ ಬಹಳಷ್ಟು ಜನರು ಬಳಕೆ ಮಾಡುತ್ತಿದ್ದು, ಬೇಕಾದ ಭಾಷೆಯಲ್ಲಿ ಸೌಲಭ್ಯವನ್ನು ನೀಡುತ್ತದೆ.


    ಅದ್ರಲ್ಲೂ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ, ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣದ ಸಮಯವನ್ನು ಟ್ರ್ಯಾಕ್ ಮಾಡಲು ಈ ಗೂಗಲ್‌ ಮ್ಯಾಪ್ ಹೆಚ್ಚು ಉಪಯುಕ್ತವಾಗಲಿದೆ. ಇದರಿಂದ ಯಾವ ಸಮಯದಲ್ಲಿ ಟ್ರಾಫಿಕ್‌ ಇರಲಿದೆ, ಯಾವೆಲ್ಲಾ ಮಾರ್ಗದ ಮೂಲಕ ಹೋದರೆ ಬೇಗನೆ ಪರೀಕ್ಷಾ ಕೇಂದ್ರವನ್ನು ರೀಚ್ ಆಗಬಹುದು ಎಂಬುದನ್ನು ಸುಲಭವಾಗಿ ಕಂಡುಕೊಂಡು ಅದರಂತೆ ಹೊರಡಲು ಸಿದ್ಧತೆ ಮಾಡಿಕೊಳ್ಳಬಹುದಾಗಿದೆ.


    ಕ್ಯಾಬ್​ ಬುಕಿಂಗ್ ಆ್ಯಪ್


    ಮಹಾನಗರಗಳಲ್ಲಿ ಹಲವಾರು ಕ್ಯಾಬ್‌ ಬುಕಿಂಗ್‌ ಆ್ಯಪ್​ಗಳು ಮೊಬೈಲ್​ ಬಳಕೆದಾರರಿಗೆ ಲಭ್ಯವಿದೆ. ಈ ಆಪ್‌ಗಳಲ್ಲಿ ಪ್ರಮುಖವಾಗಿ ಓಲಾ, ಊಬರ್, ಇನ್‌ಡ್ರೈವ್‌ ಸೇರಿದಂತೆ ಇನ್ನಿತರೆ ಆ್ಯಪ್​ಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.




    ಹೀಗಾಗಿ ವಿದ್ಯಾರ್ಥಿಗಳು ತಕ್ಷಣಕ್ಕೆ ವಾಹನಗಳನ್ನು ಹುಡುಕಲು ಈ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಂಡು ತಮಗೆ ಬೇಕಾದ ವಾಹನವನ್ನು ಸೆಲೆಕ್ಟ್ ಮಾಡಿ ಬರಮಾಡಿಕೊಳ್ಳಬಹುದು. ಈ ಆ್ಯಪ್​ಗಳ ಮೂಲಕ ಯಾವ ಸಮಯಕ್ಕೆ ಎಲ್ಲಿಂದ ಎಲ್ಲಿಯವರೆಗೆ ಸಂಚಾರ ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಬಹುದು ಮತ್ತು ಪರೀಕ್ಷಾ ದಿನ ಆರಾಮದಿಂದ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಹಾಯಕಾರಿಯಾಗಲಿದೆ.

    Published by:Prajwal B
    First published: