ಈ ಫೋನ್​ನೊಂದಿಗೆ ಪ್ರತಿ ತಿಂಗಳು ಸಿಗಲಿದೆ 10GB ಉಚಿತ ಡೇಟಾ, ಇಂದು 12 ಗಂಟೆಗೆ ಬುಕ್ ಮಾಡಿ


Updated:May 31, 2018, 5:40 PM IST
ಈ ಫೋನ್​ನೊಂದಿಗೆ ಪ್ರತಿ ತಿಂಗಳು ಸಿಗಲಿದೆ 10GB ಉಚಿತ ಡೇಟಾ, ಇಂದು 12 ಗಂಟೆಗೆ ಬುಕ್ ಮಾಡಿ

Updated: May 31, 2018, 5:40 PM IST
ನ್ಯೂಸ್ 18 ಕನ್ನಡ

Asusನ ಲೇಟೆಸ್ಟ್​ ಸ್ಮಾರ್ಟ್​ಫೋನ್ ZenFone Max Pro ಮಾರಾಟ ಇಂದು ರಾತ್ರಿ 12 ಗಂಟೆಯಿಂದ ಆರಂಭವಾಗಲಿದೆ. ಈ ಫೋನ್​ ಎರಡು ವೇರಿಯೆಂಟ್​ಗಳಲ್ಲಿ ಲಭ್ಯವಿದೆ. 3ಜಿಬಿ RAM ಹಾಗೂ 32 ಜಿಬಿ ಸ್ಟೋರೇಜ್​ ಇರುವ ಫೋನ್​ ಬೆಲೆ 10,999 ಹಾಗೂ 4ಜಿಬಿ RAM ಹಾಗೂ 64 ಜಿಬಿ ಸ್ಟೋರೇಜ್​ ಫೋನ್​ ಬೆಲೆ 12,999 ರೂಪಾಯಿ.

Asus ವೊಡಾಫೋನ್​ನೊಂದಿಗೆ ಪಾಲುದಾರಿಕೆ ಮಾಡಿದ್ದು, ಈ ಮೂಲಕ ಪ್ರೀಪೇಯ್ಡ್​ ಹಾಗೂ ಪೋಸ್ಟ್​ಪೇಯ್ಡ್​ ಬಳಕೆದಾರರಿಗೆ ಪ್ರತಿ ತಿಂಗಳು 10ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ವೊಡಾಫೋನ್​ ಪ್ರೀಪೇಯ್ಡ್​ ಗ್ರಾಹಕರು ಈ ಸೇವೆ ಬಳಸಿಕೊಳ್ಳಲು 199 ರೂಪಾಯಿ ಇಲ್ಲವೇ ಅದಕ್ಕೂ ಹೆಚ್ಚಿನ ಮೊತ್ತದ ರೀಚಾರ್ಜ್​ ಮಾಡಬೇಕಿದೆ. ಇನ್ನು ಪೋಸ್ಟ್​ಪೇಯ್ಡ್​ ಗ್ರಾಹಕರು 399 ಅಥವಾ ವೊಡಾಫೋನ್​ ರೆಡ್​ ಪ್ಲಾನ್ಸ್​ ಪಡೆದುಕೊಳ್ಳಬಹುದು. 499 ರೂಪಾಯಿಯ ಬರೆಡ್​ ಪ್ಲಾನ್ ಪಡೆದುಕೊಳ್ಳುವವರಿಗೆ ಎರಡು ವರ್ಷಗಳವರೆಗೆ ಫೋನ್​ ಇನ್ಶೂರೆನ್ಸ್​ ಕೂಡಾ ಸಿಗಲಿದೆ.

ಸ್ಮಾರ್ಟ್​ ಫೋನ್​ ಸ್ಪೆಸಿಫಿಕೇಶನ್ಸ್​ ಏನು?

ಈ ಫೋನ್​ 6 ಇಂಚಿನ ಫುಲ್​ HD ಡಿಸ್ಪ್ಲೇ ಹೊಂದಿದ್ದು, ಆ್ಯಂಡ್ರಾಯ್ಡ್​ ಓರಿಯೋ ಮೇಲೆ ಹೊಂದಿದೆ. 13 ಮೆಗಾ ಪಿಕ್ಸೆಲ್ ಹಾಗೂ 5 ಮೆಗಾ ಪಿಕ್ಸೆಲ್​ನ ಡುಯಲ್ ರೇರ್ ಕ್ಯಾಮರಾ ನೀಡಲಾಗಿದೆ. ಇದರೊಂದಿಗೆ ಕ್ಯಾಮರಾದಲ್ಲಿ LED ಫ್ಲ್ಯಾಷ್ ಸೆಟ್​ಅಪ್​ ಕೂಡಾ ನೀಡಲಾಗಿದೆ. ಇದನ್ನು ಹೊರತುಪಡಿಸಿ ಸಾಫ್ಟ್​ಲೈಟ್​ LEDಯ 8 ಮೆಗಾ ಪಿಕ್ಸೆಲ್​ನ ಫ್ರಂಟ್​ ಕ್ಯಾಮರಾ ಕೂಡಾ ನೀಡಿದ್ದಾರೆ.
First published:May 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...