ಬಿಡುಗಡೆಗೂ ಮುನ್ನಾ ದಿನವೇ ಅಸೂಸ್​ ಮೊಬೈಲ್​ ಮಾಹಿತಿ ಲೀಕ್​!


Updated:April 22, 2018, 4:43 PM IST
ಬಿಡುಗಡೆಗೂ ಮುನ್ನಾ ದಿನವೇ ಅಸೂಸ್​ ಮೊಬೈಲ್​ ಮಾಹಿತಿ ಲೀಕ್​!
Image: Evan Blass

Updated: April 22, 2018, 4:43 PM IST
ನ್ಯೂಸ್​ 18 ಕನ್ನಡ

ಬೆಂಗಳೂರು: ಮೊಬೈಲ್​ ಮಾಹಿತಿಗಳ ಲೀಕ್​ ಮಾಸ್ಟರ್​ ಎಂದೇ ಖ್ಯಾತಿ ಪಡೆದಿರುವ ಇವಾನ್​ ಬ್ಲಾಸ್​ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಅಸೂಸ್​ ಝೆನ್​ಫೋನ್​ ಮ್ಯಾಕ್ಸ್​ ಪ್ರೋ ಎಂ1 ಮೊಬೈಲ್​ ಮಾಹಿತಿಯನ್ನು ಅಂತರ್ಜಾಲದಲ್ಲಿ ಲೀಕ್​ ಮಾಡಿದ್ದಾರೆ.

ಕಳೆದ ವಾರವಷ್ಟೇ ಜತೆಗೂಡಿರುವ ಫ್ಲಿಪ್​ಕಾರ್ಟ್​ ಹಾಗೂ ಅಸೂಸ್​ ಝೆನ್​ ಪೋನ್​ ನಾಳೆ (ಸೋಮವಾರ ಏ.23ರಂದು) ತಮ್ಮ ನೂತನ ಝೆನ್​ಪೋನ್​ ಶ್ರೇಣಿಯ ಝೆನ್​ಫೋನ್​ ಮ್ಯಾಕ್ಸ್​ ಪ್ರೋ ಎಂ1 ಬಿಡುಗಡೆಗೆ ಮುಂದಾಗಿತ್ತು. ಈ ಮಧ್ಯೆ ಇವಾನ್​ ಬ್ಲಾಸ್​ ಟ್ವಿಟರ್​ ಖಾತೆಯಲ್ಲಿ ನೂತನ ಮೊಬೈಲ್​ನ ಮಾಹಿತಿ ಹಾಗೂ ಚಿತ್ರವನ್ನು ಲೀಕ್​ ಮಾಡಲಾಗಿದೆ.


Loading...

ಝೆನ್​ಫೋನ್​ ಮ್ಯಾಕ್ಸ್​ ಪ್ರೋ ಎಂ1ಗೆ ಸ್ನ್ಯಾಪ್​ಡ್ರಾಗನ್​ 635 ಪ್ರೊಸೆಸರ್​ ಅಳವಡಿಸಲಾಗಿದ್ದು, ಮಾಹಿತಿಗಳ ಪ್ರಕಾರ 4 ಜಿಬಿ ರ‍್ಯಾಮ್ ಸೌಲಭ್ಯ ಕೂಡಾ ನೀಡಲಾಗಿದೆ. ಇನ್ನು ಡ್ಯುಯಲ್​ ರೆಯರ್​ ಕ್ಯಾಮೆರಾದೊಂದಿಗೆ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಆದರೆ ಕ್ಯಾಮೆರ ಮೆಗಾಪಿಕ್ಸಲ್​ ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗಿಲ್ಲ.ಒಟ್ಟಾರೆ ಹಳೇ ಡಿಸೈನ್​ಗೆ ಹೋಲಿಸಿದರೆ ಹೊಸದಾಗಿ ಮಾರುಕಟ್ಟೆಗೆ ಬರಲು ಮುಂದಾಗಿರುವ ಅಸೂಸ್​ ಮೊಬೈಲ್​ಗಳು ಉತ್ತಮ ಡಿಸೈನ್​ನಿಂದ ಮಾರುಕಟ್ಟಗೆ ಪ್ರವೇಶಿಸಲಿದೆ ಎನ್ನಬಹುದು.

 
First published:April 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...