Asus ZenFone 6: ‘ಝೆನ್​ಫೋನ್​ 6‘ ​​​ಬಿಡುಗಡೆ: 48 ಮೆಗಾಫಿಕ್ಸೆಲ್ ಫ್ಲಿಪ್​​​​ ಕ್ಯಾಮೆರಾದೊಂದಿಗೆ ಬಂದಿದೆ ಹೊಸ ಸ್ಮಾರ್ಟ್​ಫೋನ್​

zenfone 6: ವಿಶೇಷವೆಂದರೆ ಆಸೂಸ್​ ಕಂಪೆನಿ ‘ಯೆನ್​ಫೋನ್​ 6‘  ಸ್ಮಾರ್ಟ್​ಫೋನ್ ಮೊದಲ ಬಾರಿಗೆ ಫ್ಲಿಪ್​ ಕ್ಯಾಮೆರಾ​ವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾವು ಸೆಲ್ಫಿ ಮತ್ತು ಬ್ಯಾಕ್​ ಕ್ಯಾಮೆರಾವಾಗಿ ಮಾರ್ಪಾಡಾಗುತ್ತದೆ.

news18
Updated:May 17, 2019, 7:36 PM IST
Asus ZenFone 6: ‘ಝೆನ್​ಫೋನ್​ 6‘ ​​​ಬಿಡುಗಡೆ: 48 ಮೆಗಾಫಿಕ್ಸೆಲ್ ಫ್ಲಿಪ್​​​​ ಕ್ಯಾಮೆರಾದೊಂದಿಗೆ ಬಂದಿದೆ ಹೊಸ ಸ್ಮಾರ್ಟ್​ಫೋನ್​
zenfone-6
news18
Updated: May 17, 2019, 7:36 PM IST
ಪ್ರತಿಷ್ಠಿತ ಅಸೂಸ್​​ಸ  ಸ್ಮಾರ್ಟ್​ಫೋನ್​ ಕಂಪನಿ ಗ್ರಾಹಕರಿಗಾಗಿ ನೂತನ ‘ಝೆನ್​ಫೋನ್​ 6‘ ಹೆಸರಿನ ಸ್ಮಾ ರ್ಟ್​ಫೋನ್​​​​​ವೊಂದನ್ನು ಪರಿಚಯಿಸಿದೆ. ಹೆಚ್ಚಿನ ಸ್ಮಾರ್ಟ್​ಫೋನ್​ಗಳು ಪಾಪ್​ ಅಪ್​ ಕ್ಯಾಮೆರಾದ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವಾಗ ‘ಯೆನ್​ಫೋನ್​ 6‘ ಸ್ಮಾರ್ಟ್​ಫೋನ್​​ ಪ್ಲಿಪ್​​​​ ಕ್ಯಾಮೆರಾವನ್ನು ಅಳವಡಿಸಿಕೊಂಡು ಗ್ರಾಹಕರಿಂದ ಮೆಚ್ಚುಗೆ ಪಡೆದಿದೆ.

ಝೆನ್​​ಫೋನ್​ 6 ಸ್ಮಾರ್ಟ್​ಫೋನ್​ 6.4 ಇಂಚಿನ HD ಡಿಸ್​ಪ್ಲೇಯನ್ನು ಹೊಂದಿದೆ. ಎಲ್​ಸಿಡಿ ಮಾದರಿಯ ಸ್ಕ್ರೀನ್​ ಅಳವಡಿಸಲಾಗಿದೆ. ಅಲ್ಲದೇ ಡಿಸ್​​ಪ್ಲೇ ಕರ್ವ್​ ಮಾದರಿಯಲ್ಲಿದ್ದು, ಸ್ಮಾರ್ಟ್​ಫೋನ್​ ಅಂದವನ್ನು ಹೆಚ್ಚಿಸಿದೆ.

ನೂತನ ಸ್ಮಾರ್ಟ್​ಫೋನ್​​ ​​ ಸ್ನಾಪ್​​ ಡ್ರಾಗನ್​​ 8555 ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸುತ್ತಿದೆ. ಅಂತೆಯೇ, ಈ ಫೋನ್​​ 2 ಮಾದರಿ RAM ​ ಹೊಂದಿದ್ದು, 6 GB ಮತ್ತು 8 GBಗಳಲ್ಲಿ ದೊರೆಯಲಿದೆ. ಸ್ಮಾರ್ಟ್​ಫೋನ್​ನಲ್ಲಿ 64GB, 128 GB, 256 GB  ಮಾದರಿಗಳಲ್ಲಿ ಸ್ಟೊರೇಜ್​​ ನೀಡಲಾಗಿದೆ.

ವಿಶೇಷವೆಂದರೆ ಅಸೂಸ್​ ಕಂಪೆನಿ ‘ಝೆನ್​ಫೋನ್​ 6‘  ಸ್ಮಾರ್ಟ್​ಫೋನ್ ಮೊದಲ ಬಾರಿಗೆ ಫ್ಲಿಪ್​ ಕ್ಯಾಮೆರಾ​ವನ್ನು ಅಳವಡಿಸಿದ್ದು, ಈ ಕ್ಯಾಮೆರಾವು ಸೆಲ್ಫಿ ಮತ್ತು ಬ್ಯಾಕ್​ ಕ್ಯಾಮೆರಾವಾಗಿ ಮಾರ್ಪಾಡಾಗುತ್ತದೆ. ಅಲ್ಲದೇ, ಸೆಲ್ಫಿಗಾಗಿ ಪ್ರತ್ಯೇಕ ಕ್ಯಾಮೆರಾವನ್ನು ಒದಗಿಸಿಲ್ಲ. ಸ್ಮಾರ್ಟ್​ಫೋನ್​ನಲ್ಲಿರುವ ಬ್ಯಾಕ್​ ಕ್ಯಾಮೆರಾ ಸೆಲ್ಫಿ ತೆಗೆಯುವಾಗ ಮುಂಬದಿಗೆ ತಿರುಗುತ್ತದೆ.

ಇದನ್ನೂ ಓದಿ: ವಿಜಯಪುರದ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಕೊಲೆ

ಇನ್ನು ಸೋನಿ IMX​586 ಸೆನ್ಸಾರ್​​ದೊಂದಿಗೆ 48 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ಹೊಂದಿದೆ. ಸೆಕಂಡರಿ ಕ್ಯಾಮೆರಾ ವೈಲ್ಡ್​​ ಆ್ಯಂಗಲ್​ ಲೆನ್ಸ್​​ನೊಂದಿದೆ 13 ಮೆಗಾಫಿಕ್ಸೆಲ್​​​ ಕ್ಯಾಮೆರಾವನ್ನು ಅಳವಡಿಸಿದ್ದಾರೆ.ನೂತನ  ಝೆನ್​ಫೋನ್​6 ಸ್ಮಾರ್ಟ್​ಫೋನ್​​ ದೀರ್ಘಕಾಲದ ಬಳಕೆಗಾಗಿ 5000mAh​ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದರೊಂದಿದೆ 4.0 ವೇಗದ ಚಾಜಿಂಗ್​ ಸೌಲಭ್ಯವನ್ನು ನೀಡಲಾಗಿದೆ. ​

ಝೆನ್​ಫೋನ್​ 6 ಸ್ಮಾರ್ಟ್​ಪೋನ್​​ ವಿಶೇಷತೆಗಳು?

ಡಿಸ್​ಪ್ಲೇ: 6.4ಇಂಚಿನ ಪೂರ್ಣ HD ಡಿಸ್​​​​ಪ್ಲೇ
ಪ್ರೊಸೆಸರ್: ಸ್ನಾಪ್​​ ಡ್ರಾಗನ್​​ 8555 ಪ್ರೊಸೆಸರ್
RAM: 6 GB ಮತ್ತು 8 GB RAMಗಳಲ್ಲಿ ಲಭ್ಯವಿದೆ
ಸ್ಟೊರೇಜ್​​​: 64GB, 128 GB, 256 GB ಸ್ಟೊರೇಜ್​ ನೀಡಲಾಗಿದೆ.
ಕ್ಯಾಮೆರಾ:  48MP + 13MP ಪ್ಲಿಪ್​ ಕ್ಯಾಮೆರಾ ನೀಡಲಾಗಿದೆ
ಬ್ಯಾಟರಿ: 5,000 mAh ಸಾಮರ್ಥ್ಯ ಹೊಂದಿದೆ

ಬೆಲೆ:  6  RAM ಮತ್ತು 64 ಸ್ಟೊರೇಜ್​ ಸ್ಮಾರ್ಟ್​ಫೋನ್​ ಬೆಲೆ 39,000 ರೂ. 6GB RAM​ 128 ಸ್ಟೊರೇಜ್​ ಸ್ಮಾರ್ಟ್​ಫೋನ್​ ಬೆಲೆ 44,00 ರೂ, 8 GB RAM ಮತ್ತು 256 GB 47,000 ರೂ ಆಗಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ