ಅಸೂಸ್​ 5ಜೆಡ್​ ಬಿಡುಗಡೆ, ಒನ್​ಪ್ಲಸ್​ 6ಗೆ ಸೆಡ್ಡು?


Updated:July 6, 2018, 2:26 PM IST
ಅಸೂಸ್​ 5ಜೆಡ್​ ಬಿಡುಗಡೆ, ಒನ್​ಪ್ಲಸ್​ 6ಗೆ ಸೆಡ್ಡು?

Updated: July 6, 2018, 2:26 PM IST
ನವದೆಹಲಿ: ತೈವಾನ್‌ ಮೂಲದ ಮೊಬೈಲ್​ ಸಂಸ್ಥೆ ಅಸೂಸ್ ತನ್ನ ನೂತನ ಮೊಬೈಲ್​ ಅಸೂಸ್​ ಜೆನ್​ಫೋನ್​ 5ಜೆಡ್​ನ್ನು ಭಾರತೀಯ ಮೊಬೈಲ್​ ಮಾರುಕಟ್ಟೆಗೆ ಪ್ರವೇಶಿಸಿದೆ.

ಸ್ನಾಪ್​ಡ್ರಾಗನ್​ 845 octa-core SoC ಪ್ರೊಸೆಸರ್​ನೊಂದಿಗೆ ಪ್ರವೇಶಿಸಿರುವ 5ಜೆಡ್​ ಮೂರು ವೇರಿಯಂಟ್ ನೊಂದಿಗೆ ಗ್ರಾಹಕರಿಗೆ ದೊರಕಲಿದೆ. ಫ್ಲಿಪ್​ಕಾರ್ಟ್​ನಲ್ಲಿ ಎಕ್ಸ್​ಕ್ಲೂಸಿವ್​ ಆಗಿ 5ಜೆಡ್​ನ ಮಾರಾಟಕ್ಕೆ ಲಭ್ಯವಿದ್ದು, ಈ ಮೊಬೈಲ್​ ಸಂಪೂರ್ಣ ಮಾಹಿತಿ ಈ ಕೆಳಗಿದೆ.

ಮಿಡ್​ನೈಟ್​ ಬ್ಲೂ ಹಾಗೂ ಮೆಟಿಯರ್ ಸಿಲ್ವರ್ ಬಣ್ಣದಲ್ಲಿ ಮೊಬೈಲ್​ ಲಭ್ಯವಿದೆ, 4GB RAM + 64GB ಮೆಮೊರಿ ಶ್ರೇಣಿಯದಕ್ಕೆ 29,999 ರೂ. 6GB RAM ಮತ್ತು 128GB ಮೆಮೊರಿಯ 32,999 ರೂ. ಹಾಗೂ 8GB RAM ಮತ್ತು 256GB ಮೆಮೊರಿ ಹೊಂದಿರುವ ಮೊಬೈಲ್​ಗೆ 36,999 ರೂ. ಬೆಲೆ ತಗುಲಲಿದೆ. ವಿಶೇಷವೆಂದರೆ ZenMoji (ಲೈವ್ ಎಮೋಜಿ) ಸೌಲಭ್ಯವನ್ನು ನೀಡಲಾಗಿದೆ.

ವಿಶೇಷತೆಗಳು:

ಆಂಡ್ರಾಯ್ಡ್ 8.0 ಓರಿಯೋದೊಂದಿಗೆ ZenUI 5.0 ಆಪರೇಟಿಂಗ್​ ಸಿಸ್ಟಂ ಹೊಂದಿದೆ,
6.2 ಇಂಚುಗಳ HD+ (1080x2246 ಪಿಕ್ಸೆಲ್) ಡಿಸ್​ಪ್ಲೇ,
ಆಂಡ್ರೆನೊ 630 GPU,
Loading...

AI ಫೀಚರ್,
ಫಿಂಗರ್ ಪ್ರಿಂಟ್ ಸೆನ್ಸಾರ್,
12MP ಮತ್ತು 8MP ಸೋನಿ IMX363 ಸೆನ್ಸಾನ್ ವ್ಯವಸ್ಥೆಯ ಡ್ಯುಯಲ್​ ಕ್ಯಾಮೆರಾ
8MP ಸೆಲ್ಫಿ ಕ್ಯಾಮೆರಾ
4K ವಿಡಿಯೋ ರೆಸೊಲ್ಯೂಷನ್,
ಮುಖ ಗುರುತಿಸುವಿಕೆ,
ಬ್ಯಾಟರಿ: 3300mAh
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...