news18-kannada Updated:March 2, 2021, 3:37 PM IST
ಅಸೂಸ್ ಕಂಪೆನಿ ROG 5 ಹೆಸರಿನ ಸ್ಮಾರ್ಟ್ಫೋನನ್ನು ತಯಾರಿಸಿದ್ದು, ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಇದೇ ಮಾರ್ಚ್ 10ರಂದು ಮಾರುಕಟ್ಟೆಗೆ ಧಾವಿಸಲಿದೆ. ಹೀಗಿರುವಾಗ ನೂತನ ಸ್ಮಾರ್ಟ್ಫೋನ್ ಏನೆಲ್ಲಾ ಫೀಚರ್ ಅನ್ನು ಅಳವಡಿಸಿಕೊಂಡಿರಲಿದೆ ಎಂಬ ಕುತೂಹಲತೆ ಸ್ಮಾರ್ಟ್ಫೋನ್ ಪ್ರಿಯರಲ್ಲಿ ಮನೆಮಾಡಿದೆ. ಅದಕ್ಕೆ ಅನುಗುಣವಾಗಿ ಅವರ ಕುತೂಹಲತೆಯಂತೆ ಅಸೂಸ್ ರೋಗ್ 5 ಸ್ಮಾರ್ಟ್ಫೋನ್ 18GB RAM ಆಯ್ಕೆಯಲ್ಲಿ ಬರಲಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಗ್ರೀಕ್ಬೆಂಚ್ ವೆಬ್ಸೈಟ್ ಈ ಬಗ್ಗೆ ಮಾಹಿತಿ ಹೊರಹಾಕಿದೆ. ಆ ಮೂಲಕ ಸ್ಮಾರ್ಟ್ಫೋನ್ ಪ್ರಿಯರಿಗೆ ಅಚ್ಚರಿ ಮೂಡಿಸಿದೆ. ಮಾರ್ಚ್ 10ರಂದು ಮಾರುಕಟ್ಟೆ ಪ್ರವೇಶಿಸುವ ಅಸೂಸ್ ರೋಗ್ 5 ಫೋನ್ 18GB RAM ಹೊಂದಿದೆ ಎಂದಿದೆ. ಒಂದು ವೇಳೆ ಈ ವಿಚಾರ ನಿಜವಾದರೆ ಸ್ಮಾರ್ಟ್ಫೋನ್ ಇತಿಹಾಸದಲ್ಲಿ ಅಸೂಸ್ ಹೊಸದಾದ ದಾಖಲೆಯೊಂದನ್ನ ಬರೆಯಲಿದೆ.
Asus ROG 5 ಕ್ವಾಲ್ ಕ್ಯಾಂ ಫ್ಲಾಗ್ಶಿಪ್ನಡಿಯಲ್ಲಿ ಸ್ನಾಪ್ಡ್ರ್ಯಾಗನ್ 888 ಪ್ರೊಸೆಸರ್ ಚಿಪ್ಸೆಟ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಗ್ರೀಕ್ಬೆಂಚ್ ವರದಿಯಂತೆ ಅಸೂಸ್-ಐ005ಡಿಬಿ ಮಾಡೆಲ್ ನಂಬರ್ನಲ್ಲಿ ಪರಿಚಯಿಸಲಿದೆ. ಆ ಮೂಲಕ ಅಧಿಲ RAM ಆಯ್ಕೆಯಲ್ಲಿ ಪರಿಚಯಿಸುತ್ತಿದೆ ಎಂದು ತಿಳಿಸಿದೆ.
ಅಸೂಸ್ ರೋಗ್ ಫೋನ್ 3 ಈ ಮೊದಲು 16GB RAM ಮೂಲಕ ಮಾರುಕಟ್ಟೆ ಪ್ರವೇಶಿಸಿತ್ತು. ಇದೀಗ 6.7 ಇಂಚಿನ ಎಫ್ಹೆಚ್ಡಿ+ ಡಿಸ್ಪ್ಲೇಯೊಂದಿಗೆ, ಆ್ಯಂಡ್ರಾಯ್ಡ್ 11 ಬೆಂಬಲದೊಂದಿಗೆ 18GB RAM ಆಯ್ಕೆಯ ಮೂಲಕ ಅಸೂಸ್ ರೋಗ್ 5 ಅನ್ನು ಪರಿಚಯಿಸುತ್ತಿದೆ.
ಅಸೂಸ್ ರೋಗ್ 5 ಸ್ಮಾರ್ಟ್ಫೋನ್ ಮಾರ್ಚ್ 10ರಂದು 4:15 ರಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ಆದರೆ ನೂತನ ಸ್ಮಾರ್ಟ್ಫೋನ್ ಕುರಿತಂತೆ ಹೆಚ್ಚಿನ ಮಾಹಿತಿ ಮತ್ತು ಬೆಲೆ ಬಗ್ಗೆ ಬಿಡುಗಡೆಗೊಂಡ ನಂತರವಷ್ಟೇ ತಿಳಿದುಬರಬೇಕಿದೆ.
Published by:
Harshith AS
First published:
March 2, 2021, 3:35 PM IST