ಅಸೂಸ್ ರೋಗ್ ಗೇಮಿಂಗ್ ಸ್ಮಾರ್ಟ್ಫೋನ್ಗಳಲ್ಲಿ ಹೆಸರುವಾಸಿಯಾಗಿದೆ. ಹಾಗಾಗಿ ಗೇಮಿಂಗ್ ಪ್ರಿಯರು ಈ ಸ್ಮಾರ್ಟ್ಫೋನ್ ಅನ್ನು ಹೆಚ್ಚು ಖರೀದಿಸುತ್ತಾರೆ. ಆದರೀಗ ಅವರಿಗಾಗಿ ಅಸೂಸ್ ಕಂಪನಿ ಹೊಸ ರೋಗ್ ಫೋನ್ 3 ಅನ್ನು ಸಿದ್ಧಪಡಿಸಿದ್ದು, ಇಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಸಂಜೆ 8.15ಕ್ಕೆ ನೂತನ ಸ್ಮಾರ್ಟ್ಫೋನ್ ಬಿಡುಗಡೆಯಾಗುವುದರ ಮೂಲಕ ದೇಶಿಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಮಾಹಿಗಳ ಪ್ರಕಾರ, ನೂತನ ಅಸೂಸ್ ರೋಗ್ ಫೋನ್ 3 ಸ್ಮಾರ್ಟ್ಫೋನ್ 6.59 ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಂ ಸ್ಮಾಪ್ಡ್ರಾಗನ್ 865 ಪ್ಲಸ್ ಎಸ್ಒಸಿಯಿಂದ ಕಾರ್ಯನಿರ್ವಹಿಸುತ್ತಿದೆ. 5G ನೆಟ್ವರ್ಕ್ನಡಿಯಲ್ಲಿ ಬಳಸುವಂತೆ ಸಿದ್ಧಪಡಿಸಿದೆ.
ಗ್ರಾಹಕರಿಗಾಗಿ 16GB RAM ಮತ್ತು 512GB ಸ್ಟೊರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡುತ್ತಿದೆ. ಜೊತೆಗೆ 8GB RAM ಮತ್ತು 128GB ಸ್ಟೊರೇಜ್ ಆಯ್ಕೆಯಲ್ಲಿ ಸಿಗುವ ಸಾಧ್ಯತೆಯೂ ಇದೆ. ಅಷ್ಟು ಮಾತ್ರವಲ್ಲದೆ, ನೂತನ ಸ್ಮಾರ್ಟ್ಫೋನ್ ಎಲ್ಡಿಡಿಆರ್5 ಗ್ರೇಡ್ ಮೆಮೊರಿ ಮತ್ತು ಯುಎಫ್ಎಸ್ 3.1 ಫಾಸ್ಟ್ ಸ್ಟೊರೇಜ್ ಮೀಡಿಯಂ ಹೊಂದಿದೆ.
8 ವರ್ಷ ಬಳಿಕ ಮಗು ಜನನ; ಈ ಗ್ರಾಮಕ್ಕೆ 29ನೇ ಸದಸ್ಯನ ಆಗಮನ
ಕ್ಯಾಮೆರಾ:
ಅಸೂಸ್ ರೋಗ್ ಫೋನ್ 3 ಸ್ಮಾರ್ಟ್ಫೋನ್ನಲ್ಲಿ 64 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮೆರಾ, 13 ಮೆಗಾಫಿಕ್ಸೆಲ್ ಸೆಕಂಡರಿ ಕ್ಯಾಮೆರಾ, 8 ಮೆಗಾಫಿಕ್ಸೆಲ್ ಸೆನ್ಸಾರ್ ಮತ್ತು 2ಎಕ್ಸ್ ಟೆಲಿಫೋಟೊ ಲೆನ್ಸ್ ನೀಡಲಾಗಿದೆ.
ಬ್ಯಾಟರಿ:
ಗೇಮಿಂಗ್ಗಾಗಿ ಈ ಸ್ಮಾರ್ಟ್ಫೋನ್ನಲ್ಲಿ 6000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ದೀರ್ಘ ಕಾಲದ ಬಳಕೆ ಹಾಗೂ ಗೇಮಿಂಗ್ಗೆ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. 30ವ್ಯಾಟ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಆಧುನಿಕ ತಂತ್ರಜ್ಞಾನದಂತೆ ರೋಗ್ ಫೋನ್ 3ನಲ್ಲಿ ಹೆಡ್ಫೋನ್ ಜಾಕ್ ನೀಡಿಲ್ಲ. ಬ್ಲೂಟೂತ್, ವೈ-ಫೈ ನೀಡಲಾಗಿದೆ. ಈ ಫೋನ್ 240 ಗ್ರಾಂ ತೂಕವನ್ನು ಹೊಂದಿದೆ.
ಇನ್ನು ಸ್ಮಾರ್ಟ್ಫೋನಿನ ನಿರ್ದಿಷ್ಟ ಬೆಲೆ ಮತ್ತು ಇತರೆ ಫೀಚರ್ ಬಗ್ಗೆ ಸ್ಮಾರ್ಟ್ಫೋನ್ ಬಿಡುಗಡೆಯಾದ ನಂತರ ತಿಳಿದು ಬರಲಿದೆ. (Live: https://www.youtube.com/watch?v=8jNQ3siT_A0)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ