• Home
  • »
  • News
  • »
  • tech
  • »
  • Asus Desktops: ಅಸುಸ್ ಕಂಪನಿಯಿಂದ ಒಂದೇ ಬಾರಿ ಎರಡು ಡೆಸ್ಕ್​​ಟಾಪ್​ ಬಿಡುಗಡೆ, ಫೀಚರ್ಸ್ ಬಗ್ಗೆ ಇಲ್ಲಿದೆ ಮಾಹಿತಿ

Asus Desktops: ಅಸುಸ್ ಕಂಪನಿಯಿಂದ ಒಂದೇ ಬಾರಿ ಎರಡು ಡೆಸ್ಕ್​​ಟಾಪ್​ ಬಿಡುಗಡೆ, ಫೀಚರ್ಸ್ ಬಗ್ಗೆ ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇದೀಗ ಅಸುಸ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ. ಅಸುಸ್ ಬಿಡುಗಡೆ ಮಾಡುತ್ತಿರುವ ಆಲ್-ಇನ್-ಒನ್ AIO A3 ಸರಣಿಯಲ್ಲಿ A3202 ಮತ್ತು A3402 ಡೆಸ್ಕ್‌ಟಾಪ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದು ಬಹಳಷ್ಟು ಫೀಚರ್ಸ್​ ಅನ್ನು ಹೊಂದಿದೆ.

  • Share this:

    ಎಷ್ಟೇ ರೀತಿಯ ಕಂಪ್ಯೂಟರ್‌ಗಳನ್ನು (Computer) ಅಪ್‌ಗ್ರೇಡ್ ಮಾಡಿದರೂ ಡೆಸ್ಕ್‌ಟಾಪ್‌ಗಳನ್ನು (Desktop) ಹೆಚ್ಚಾಗಿ ಕಚೇರಿ ಕೆಲಸಗಳಿಗೆ ಬಳಸಲಾಗುತ್ತದೆ. ಹಾಗಾಗಿಯೇ ಮಾರುಕಟ್ಟೆಗೆ ಎಷ್ಟೇ ಲ್ಯಾಪ್ ಟಾಪ್ (Laptop), ಮ್ಯಾಕ್ ಡಿವೈಸ್ (Mack Device), ಪಿಸಿ ಬಂದರೂ ಡೆಸ್ಕ್ ಟಾಪ್ ಬೇಡಿಕೆ ಕಡಿಮೆಯಾಗುತ್ತಿಲ್ಲ. ಟೆಕ್ ಬ್ರ್ಯಾಂಡ್‌ಗಳು ಕಾಲಕಾಲಕ್ಕೆ ಇತ್ತೀಚಿನ ವೈಶಿಷ್ಟ್ಯಗಳೊಂದಿಗೆ ಡೆಸ್ಕ್​ಟಾಪ್​ಗಳನ್ನು ಬಿಡುಗಡೆ ಮಾಡುತ್ತವೆ. ಈ ಡೆಸ್ಕ್​​ಟಾಪ್​​ಗಳು ಪಿಸಿ, ಲ್ಯಾಪ್​​ಟಾಪ್​ಗಳಿಗಿಂತ ವೇಗವಾಗಿ ಕಾರ್ಯನಿರ್ವಹಿಸುವುದರಿಂದ ದೊಡ್ಡ ದೊಡ್ಡ ಕಂಪನಿಗಳು ಈ ಡೆಸ್ಕ್​​ಟಾಪ್​ಗಳನ್ನು ಬಳಸುತ್ತಾರೆ. ಇತ್ತೀಚೆಗೆ, ತೈವಾನೀಸ್ ಟೆಕ್ ಕಂಪನಿಯಾಗಿತುವ ಅಸುಸ್ (Asus) ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಡೆಸ್ಕ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಇದರ ವೈಶಿಷ್ಟ್ಯತೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.


    ಇದೀಗ ಅಸುಸ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ. ಆಸಸ್ ಬಿಡುಗಡೆ ಮಾಡುತ್ತಿರುವ ಆಲ್-ಇನ್-ಒನ್ AIO A3 ಸರಣಿಯಲ್ಲಿ A3202 ಮತ್ತು A3402 ಡೆಸ್ಕ್‌ಟಾಪ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದು ಬಹಳಷ್ಟು ಫೀಚರ್ಸ್​ ಅನ್ನು ಹೊಂದಿದೆ.


    ಫೀಚರ್ಸ್​:


    ಅಸುಸ್ ಎ3402 ಡೆಸ್ಕ್‌ಟಾಪ್ 23.8 ಇಂಚಿನ ವೈಡ್‌ಸ್ಕ್ರೀನ್ ನ್ಯಾನೋ ಎಡ್ಜ್ 100 ಪ್ರತಿಶತ SRGB ಡಿಸ್​​ಪ್ಲೇಯನ್ನು ಹೊಂದಿದೆ. ಈ ಡೆಸ್ಕ್​ಟಾಪ್ ಟಚ್ ಸ್ಕ್ರೀನ್ ಆಯ್ಕೆಯಲ್ಲೂ ಲಭ್ಯವಿದೆ. ಇದು ಅಸುಸ್ ಸೋನಿಕ್ ಮಾಸ್ಟರ್ ಪ್ರೀಮಿಯಮ್ ತಂತ್ರಜ್ಞಾನದೊಂದಿಗೆ ಬರುತ್ತದೆ. Dolby Atmos ತಂತ್ರಜ್ಞಾನದ ಸಹಾಯದಿಂದ ಉತ್ತಮ ಧ್ವನಿ ಅನುಭವವನ್ನು ಒದಗಿಸಲು ಈ ಡೆಸ್ಕ್‌ಟಾಪ್ ಆಡಿಯೋ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಎರಡನ್ನೂ ಒಳಗೊಂಡಿದೆ.


    ಇದನ್ನೂ ಓದಿ: Amazon ನಲ್ಲಿ ಇನ್ಮುಂದೆ ಶಾಪಿಂಗ್ ಮತ್ತಷ್ಟು​ ಸುಲಭ! ಹೊಸ ಟೆಕ್ನಾಲಜಿ, ಹೊಸ ಅನುಭವ


    ಎರಡೂ ಡೆಸ್ಕ್‌ಟಾಪ್‌ಗಳು 512 ಜಿಬಿ SSD ಜೊತೆಗೆ  2.5-ಇಂಚಿನ SSD/HDD ಸ್ಲಾಟ್‌ನೊಂದಿಗೆ ಬರುತ್ತವೆ ಎಂದು ತಂತ್ರಜ್ಞರು ಹೇಳಿದ್ದಾರೆ. ಎರಡೂ ಡೆಸ್ಕ್​​ಟಾಪ್ ಮಾದರಿಗಳು ಅಲೆಕ್ಸಾ ಬೆಂಬಲವನ್ನು ಹೊಂದಿವೆ. ಜೊತೆಗೆ ಇದರಲ್ಲಿ ಮೈಕ್ರೋಫೋನ್​ಗಳ ಅಳವಡಿಕೆಯನ್ನು ಮಾಡಲಾಗಿದೆ.


    ಸಾಂಕೇತಿಕ ಚಿತ್ರ


    ಇವುಗಳಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಡಿಸೈನಿಂಗ್, ಆಡಿಯೋ ಮಿಕ್ಸಿಂಗ್ ಮತ್ತು ನೋಟ್ ಟೇಕಿಂಗ್ ಮುಂತಾದ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಫೋಟೋ ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಕೂಡ ಬಳಸಲು ಈ ಡೆಸ್ಕ್​ಟಾಪ್ ಸಹಾಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.


    ಬೆಲೆ ಮತ್ತು ಲಭ್ಯತೆಯ ವಿವರಗಳು


    ಭಾರತದಲ್ಲಿ A3202 ಮತ್ತು A3402 ನ ಬೆಲೆಗಳು 54,990 ರೂಪಾಯಿ ಮತ್ತು 65,990 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಎರಡೂ ಡೆಸ್ಕ್‌ಟಾಪ್‌ಗಳು ಆಸಸ್ ಇ-ಶಾಪ್, ಆಸಸ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಇದಲ್ಲದೆ ಈ ಡೆಸ್ಕ್‌ಟಾಪ್‌ಗಳು ಅಮೆಜಾನ್​, ಫ್ಲಿಪ್​ಕಾರ್ಟ್​​​ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸುವ ಅವಕಾಶವನ್ನು ನೀಡಿದೆ.

    ಇದು ಆಸಸ್​ನಿಂದ ಬಿಡುಗಡೆಯಾಗಿರುವ ಡೆಸ್ಕ್​ಟಾಪ್​ಗಳ ವಿಶೇಷತೆಗಳಾಗಿದ್ದು ಗ್ರಾಹಕರನ್ನು ತೆಗೆದುಕೊಳ್ಳುವಂತೆ ಮಾಡುವುದೇ ಈ ಕಂಪನಿಯ ಉದ್ದೇಶವಾಗಿದೆ. ಪ್ರತಿಯೊಂದು ಕಂಪನಿಯು ತನ್ನ ಬ್ರಾಂಡ್ ಅನ್ನು ರಚಿಸುವಾಗ ಏನಾದರೊಂದು ಲಾಭವನ್ನು ಪಡೆಯಬೇಕೆಂದೆ ಉತ್ಪಾದಿಸುತ್ತದೆ. ಅದೇ ರೀತಿ ಆಸಸ್ ಕಂಪನಿ ಕೂಡ ಸ್ಪೆಷಲ್ ಫೀಚರ್ಸ್​ ಅನ್ನು ಹೊಂದಿರುವ ಡೆಸ್ಕ್​ಟಾಪ್ ಅನ್ನು ಬಿಡುಗಡೆ ಮಾಡಿದೆ.


    ಇತ್ತೀಚೆಗೆ ಬಿಡುಗಡೆಯಾದ ಅಸುಸ್ ಝೆನ್​ಬುಕ್ 17 


    ಕಂಪನಿಯು ಇತ್ತೀಚೆಗೆ ತನ್ನ 17.3-ಇಂಚಿನ ಫೋಲ್ಡ್​ ಮಾಡಬಹುದಾದ OLED ಲ್ಯಾಪ್‌ಟಾಪ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ZenBook 17-Fold OLED ಎಂದು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್ 10 ಕೋರ್‌ಗಳೊಂದಿಗೆ ಇತ್ತೀಚಿನ 12 ನೇ  ಇಂಟೆಲ್ ಕೋರ್ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದರ ಬೆಲೆ ರೂ.3,29,990 ಆಗಿದೆ. ASUS ZenBook 17 Fold OLED 17.3-ಇಂಚಿನ ಡಿಸ್​ಪ್ಲೇಯೊಂದಿಗೆ ಬರುತ್ತದೆ. ಇದನ್ನು ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ (ಬ್ಲೂಟೂತ್ ಕೀಬೋರ್ಡ್‌ನೊಂದಿಗೆ), ಟ್ಯಾಬ್ಲೆಟ್, ರೀಡರ್, ಲ್ಯಾಪ್‌ಟಾಪ್ (ವರ್ಚುವಲ್ ಕೀಬೋರ್ಡ್‌ನೊಂದಿಗೆ) ಆಗಿಯೂ ಬಳಸಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಕೊMಂಡೊಯ್ಯುವ ಅವಕಾಶವನ್ನು ಇದು ನೀಡಿದೆ.

    Published by:Prajwal B
    First published: