iPhone 14: ಐಫೋನ್ 14 ಬಿಡುಗಡೆಯಾಗುತ್ತಿದ್ದಂತೆಯೇ ಐಫೋನ್​ 13ರ ಬೆಲೆ ಕಡಿತ! ​ಖರೀದಿಸಲು ಇದೇ ಸರಿಯಾದ ಸಮಯ

ಐಫೋನ್ 13 ಮತ್ತು 12ರ ಬೆಲೆಯಲ್ಲಿ ಏರಿಳಿತವಾಗಿದ್ದು, ಐಫೋನ್ 13 ರ ಬೆಲೆ ಭಾರತದಲ್ಲಿ ಇಳಿಕೆಯಾಗಿದೆ ಮತ್ತು ಇದೇ ಸಮಯದಲ್ಲಿ ಐಫೋನ್ 12 ಈಗ ಮೊದಲಿಗಿಂತ ಬೆಲೆಯಲ್ಲಿ ಏರಿಕೆ ಕಂಡಿದೆ. ಐಫೋನ್ 14 ಬಿಡುಗಡೆಯ ನಂತರ, ಆಪಲ್ ಭಾರತೀಯ ಮಾರುಕಟ್ಟೆಯ ವೆಚ್ಚ ನವೀಕೃತಗೊಂಡಿದೆ.

ಆಪಲ್ ಐಫೋನ್

ಆಪಲ್ ಐಫೋನ್

  • Share this:
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ (Mobile Market) ಕಾತುರದಿಂದ ಗ್ರಾಹಕರು (Customers) ಎದುರುನೋಡುತ್ತಿದ್ದ 'ಐಫೋನ್ 14' (iPhone 14) ಸರಣಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಐಫೋನ್ 14' ಸರಣಿ ಫೋನ್ ಗಳು ಎಂಟ್ರಿ ಕೊಡುತ್ತಿದ್ದಂತ್ತೆ ಐಫೋನ್‌ ಮಾರುಕಟ್ಟೆಯಲ್ಲಿ (iPhone market) ಹಿಂದಿನ ಸರಣಿ ಫೋನ್‌ ಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೌದು, ಐಫೋನ್ 13 ಮತ್ತು 12ರ ಬೆಲೆಯಲ್ಲಿ ಏರಿಳಿತವಾಗಿದ್ದು, ಐಫೋನ್ 13 ರ ಬೆಲೆ ಭಾರತದಲ್ಲಿ (India) ಇಳಿಕೆಯಾಗಿದೆ ಮತ್ತು ಇದೇ ಸಮಯದಲ್ಲಿ ಐಫೋನ್ 12 ಈಗ ಮೊದಲಿಗಿಂತ ಬೆಲೆಯಲ್ಲಿ ಏರಿಕೆ ಕಂಡಿದೆ.

ಐಫೋನ್ 13ರ ಬೆಲೆ ಇಳಿಕೆ, ಐಫೋನ್ 12 ಸರಣಿ ದರ ಏರಿಕೆ
ಐಫೋನ್ 14 ಬಿಡುಗಡೆಯ ನಂತರ, ಆಪಲ್ ಭಾರತೀಯ ಮಾರುಕಟ್ಟೆಯ ವೆಚ್ಚ ನವೀಕೃತಗೊಂಡಿದೆ. ಸದ್ಯ ಐಫೋನ್ 13 ರ ಬೆಲೆ ಕಡಿಮೆಯಾಗಿದ್ದು, ನಿರೀಕ್ಷಿಸಿದಂತೆ, ಈಗ ವಾಸ್ತವಿಕವಾಗಿ ಐಫೋನ್ 13ರ ಬೆಲೆಯಲ್ಲಿ ರೂ. 10,000 ಕುಸಿದಿದ್ದು, ಐಫೋನ್ 13 ಮಿನಿ ಬೆಲೆ 6,000 ರೂ ಇಳಿಕೆಯಾಗಿದೆ. ಆದರೆ ವ್ಯತಿರಿಕ್ತವಾಗಿ ಐಫೋನ್ 12 ಬೆಲೆ ಹೆಚ್ಚಾಗಿದೆಯಂತೆ.

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯ
ಐಫೋನ್ 13 ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಐಫೋನ್‌ 13ರ ಅಧಿಕೃತ ಬೆಲೆ 79,900 ರೂ.ಗಳಿಂದ ಪ್ರಾರಂಭವಾಗಿದೆ. ಅಮೆಜಾನ್‌ ಮತ್ತು ಫ್ಲಿಫ್‌ ಕಾರ್ಟ್ 128GB ಮಾದರಿ‌ ಐಫೋನ್‌ ಅನ್ನು ಬರೋಬ್ಬರಿ 10 ಸಾವಿರ ರೂಗಳ ಆಫರ್‌ ದರದಲ್ಲಿ ಮಾರಾಟ ಮಾಡುತ್ತಿವೆ.

ಇದನ್ನೂ ಓದಿ:  Nokia 8210 4G: ಸ್ಮಾರ್ಟ್​ಫೋನ್​ ಯುಗದಲ್ಲಿ ನೋಕಿಯಾ ಫೀಚರ್​ ಫೋನ್​ಗೆ ಭಾರೀ ಬೇಡಿಕೆ! ಕಡಿಮೆ ಬೆಲೆಗೆ ಸೇಲ್​ ಮಾಡುತ್ತಿದೆ ಅಮೆಜಾನ್​

ಇಷ್ಟೇ ಅಲ್ಲದೇ ಹೆಚ್ಚುವರಿಯಾಗಿ, ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯವಿವೆ. ಆದಾಗ್ಯೂ, ಸೆಪ್ಟೆಂಬರ್ 23 ರಂದು ನಡೆಯಲಿರುವ ಫ್ಲಿಪ್‌ಕಾರ್ಟ್‌ನ ಮುಂಬರುವ ಬಿಗ್ ಬಿಲಿಯನ್ ಡೇಸ್ ಸೇಲ್ ಅಥವಾ ಅದೇ ಸಮಯದಲ್ಲಿ ನಡೆಯುವ ಅಮೆಜಾನ್ ಸೇಲ್‌ ನಲ್ಲೂ ಬೆಲೆ ಕಡಿತದ ಬಗ್ಗೆ ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಐಫೋನ್ 13 ಸರಣಿ ಫೋನ್‌ ಗಳ ಪ್ರಸ್ತತ ಬೆಲೆ ಹೀಗಿದೆ.

  • ಐಫೋನ್ 13 ಮಿನಿ 128GB ಬೆಲೆ ರೂ. 64,900

  • ಐಫೋನ್ 13 ಮಿನಿ 256GB ಬೆಲೆ ರೂ. 74,900

  • ಐಫೋನ್ 13 ಮಿನಿ 512GB ಬೆಲೆ ರೂ. 94,900

  • ಐಫೋನ್ 13 128GB ಬೆಲೆ ರೂ. 69,900

  • ಐಫೋನ್ 13 256GB ಬೆಲೆ ರೂ. 79,900.

  • ಐಫೋನ್ 13 512GB ಬೆಲೆ ರೂ. 99,900


ಐಫೋನ್‌ 13ರ ಬೆಲೆ ಪ್ರಸ್ತುತ ಬದಲಾಗಿದ್ದು, ದೀರ್ಘಕಾಲದವರೆಗೆ ಇದೇ ಬೆಲೆಯಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಐಫೋನ್ 12 ಭಾರತದ ಬೆಲೆಗಳು
ಐಫೋನ್ 14 ಭಾರತದ ಮಾರುಕಟ್ಟೆಗೆ ಬಂದ ನಂತರ ಗಮನಾರ್ಹವಾಗಿ ಐಫೋನ್ 12 ಬೆಲೆ ವ್ಯತಿರಿಕ್ತವಾಗಿ ಏರಿಕೆ ಕಂಡಿದೆ. ಫ್ಲಿಪ್‌ ಕಾರ್ಟ್‌ ನಲ್ಲಿ ಐಫೋನ್ 12 ಆರಂಭಿಕ ಬೆಲೆ 49,990 ಇದ್ದು, ಅಮೆಜಾನ್ ಇಂಡಿಯಾ ಸಹ ಐಫೋನ್ 12 ಅನ್ನು ಮಾರಾಟ ಮಾಡುತ್ತಿದೆ.

ಇದನ್ನೂ ಓದಿ: Iphone​ ಜೊತೆಗೆ ಚಾರ್ಜರ್​ ನೀಡದಿದ್ರೆ ಮಾರಾಟವನ್ನು ಸ್ಥಗಿತ ಮಾಡಿ; ಆ್ಯಪಲ್​ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಬ್ರೆಜಿಲ್​

  • ಐಫೋನ್ 12 64GB ಬೆಲೆ ರೂ. 59,900.

  • ಐಫೋನ್ 12 128GB ಬೆಲೆ ರೂ. 64,900.

  • ಐಫೋನ್ 12 256GB ಬೆಲೆ ರೂ. 74,900


ಆಪಲ್‌ ಸಂಸ್ಥೆಯು ಆಯೋಜಿಸಿದ್ದ 'ಫಾರ್ ಔಟ್' ಹೆಸರಿನ ಕಾರ್ಯಕ್ರದಲ್ಲಿ ಇಂದು ಐಫೋನ್ 14 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದ್ದು ನಿರೀಕ್ಷೆಯಂತೆಯೇ 'ಐಫೋನ್ 14' ಸರಣಿಯಲ್ಲಿ ಐಫೋನ್ 14, ಐಫೋನ್ 14 ಫ್ಲಸ್, ಐಫೋನ್ 14 ಪ್ರೋ ಮತ್ತು ಐಫೋನ್ 14 ಪ್ರೋ ಮ್ಯಾಕ್ಸ್ ಎಂಬ ನಾಲ್ಕು ಮಾದರಿ ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ.
Published by:Ashwini Prabhu
First published: