• Home
  • »
  • News
  • »
  • tech
  • »
  • Artificial Intelligence: ಸ್ಪೆಷಲ್​ ತಂತ್ರಜ್ಞಾನ ಬಳಸಿಕೊಂಡು ತೆಗೆದ ವಿವಾಹ ಜೋಡಿಗಳ ಚಿತ್ರಗಳಿವು! ಸಿಕ್ಕಾಪಟ್ಟೆ ವೈರಲ್ ಆಗಿವೆ

Artificial Intelligence: ಸ್ಪೆಷಲ್​ ತಂತ್ರಜ್ಞಾನ ಬಳಸಿಕೊಂಡು ತೆಗೆದ ವಿವಾಹ ಜೋಡಿಗಳ ಚಿತ್ರಗಳಿವು! ಸಿಕ್ಕಾಪಟ್ಟೆ ವೈರಲ್ ಆಗಿವೆ

ವೈರಲ್​ ಆದ ಫೋಟೋಗಳು

ವೈರಲ್​ ಆದ ಫೋಟೋಗಳು

ಮೊದಲೆಲ್ಲಾ ನಾವು ನಮಗೆ ಬೇಕಾದ ಹಾಡುಗಳನ್ನು ಕ್ಯಾಸೆಟ್ ಹಾಕಿಯೋ ಅಥವಾ ರಿಮೋಟ್ ನಲ್ಲಿ ಬಟನ್ ಒತ್ತಿಯೋ ಹಾಡನ್ನು ಹಾಕುತ್ತಿದ್ದೆವು. ಆದರೆ ಈಗ ಬರೀ ಎಐ ನಿಂದ ತಯಾರಾದ ಸಾಧನದ ಮುಂದೆ ಕುಳಿತು ಇಂತಹ ಹಾಡನ್ನು ಹಾಕು ಅಂತ ಹೇಳಿದರೆ ಸಾಕು, ಕ್ಷಣ ಮಾತ್ರದಲ್ಲಿ ಆ ಹಾಡು ಅಲ್ಲಿ ಪ್ಲೇ ಆಗುತ್ತದೆ.

ಮುಂದೆ ಓದಿ ...
  • Share this:

ಈಗಂತೂ ಬರೀ ತಂತ್ರಜ್ಞಾನದ್ದೆ (Technology) ಹವಾ ಅಂತ ಹೇಳಬಹುದು, ಅದರಲ್ಲೂ ಈಗೆಲ್ಲಾ ಕೃತಕ ಬುದ್ಧಿಮತ್ತೆ (ಎಐ) ಎಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಬಗ್ಗೆನೆ ಮಾತು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮೊದಲೆಲ್ಲಾ ನಾವು ನಮಗೆ ಬೇಕಾದ ಹಾಡುಗಳನ್ನು ಕ್ಯಾಸೆಟ್ ಹಾಕಿಯೋ ಅಥವಾ ರಿಮೋಟ್ ನಲ್ಲಿ ಬಟನ್ ಒತ್ತಿಯೋ ಹಾಡನ್ನು ಹಾಕುತ್ತಿದ್ದೆವು. ಆದರೆ ಈಗ ಬರೀ ಎಐ ನಿಂದ ತಯಾರಾದ ಸಾಧನದ ಮುಂದೆ ಕುಳಿತು ಇಂತಹ ಹಾಡನ್ನು ಹಾಕು ಅಂತ ಹೇಳಿದರೆ ಸಾಕು, ಕ್ಷಣ ಮಾತ್ರದಲ್ಲಿ ಆ ಹಾಡು ಅಲ್ಲಿ ಪ್ಲೇ ಆಗುತ್ತದೆ. ಹೀಗೆ ಅನೇಕ ಕಡೆಗಳಲ್ಲಿ ನಮ್ಮ ಮಾತಿನಿಂದಲೇ ಕೆಲವು ಕೆಲಸಗಳು ಆಗಲು ಶುರುವಾಗಿವೆ ಅಂತ ಹೇಳಬಹುದು. ಇದಕ್ಕೆಲ್ಲಾ ಈ ಎಐ ತಂತ್ರಜ್ಞಾನವೇ ಕಾರಣ ಎಂದು ಹೇಳಬಹುದು. ಈಗ ಎಐ ಸಹಾಯದಿಂದ ರಚಿಸಿದ ಭಾರತದ ರಾಜ್ಯಗಳ ವಿವಾಹ ಜೋಡಿಗಳ ಚಿತ್ರಗಳು ಇಂಟರ್ನೆಟ್ ನಲ್ಲಿ ಇತ್ತೀಚೆಗೆ ದೊಡ್ಡ ಅಲೆಯನ್ನೆ ಸೃಷ್ಟಿಸಿದೆ ನೋಡಿ.


ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ಕಲಾತ್ಮಕ ಚಿತ್ರಗಳ ಫೋಟೋಗಳಿಂದ ಸಾಮಾಜಿಕ ಮಾಧ್ಯಮವು ತುಂಬಿ ತುಳುಕುತ್ತಿದೆ. ತಂತ್ರಜ್ಞಾನಕ್ಕೆ ಧನ್ಯವಾದಗಳನ್ನ ಹೇಳಲೇಬೇಕು ನೋಡಿ.


ಒಂದು ಕಾಲದಲ್ಲಿ ಫೋಟೋ ಎಡಿಟಿಂಗ್ ಕ್ಷೇತ್ರದಲ್ಲಿ ಅಸಾಧ್ಯವಾದ ಕೆಲಸವನ್ನು ಈಗ ಸಾಕಷ್ಟು ಪ್ರಯತ್ನ ಮಾಡದೆ ಕೆಲವೇ ಸೆಕೆಂಡುಗಳಲ್ಲಿ ಪೂರ್ಣಗೊಳಿಸಬಹುದು.


ಇತ್ತೀಚೆಗೆ, ದೆಹಲಿ ಮೂಲದ ಕಲಾವಿದರೊಬ್ಬರು ಎಐ ರಚಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅದು ಭಾರತದ ವಿವಿಧ ರಾಜ್ಯಗಳ ಪುರುಷರು ಮತ್ತು ಮಹಿಳೆಯರು ಮದುವೆ ಉಡುಪಿನಲ್ಲಿ ಹೇಗೆ ಕಾಣುತ್ತಾರೆ ಎಂಬುದನ್ನು ತೋರಿಸುತ್ತದೆ.


ಈಗ, ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ವಿವಿಧ ಭಾರತೀಯ ರಾಜ್ಯಗಳ ವಿವಾಹ ಜೋಡಿಗಳು 'ಸ್ಟೀರಿಯೊಟೈಪಿಕ್' ಎಂದು ಭಾವಿಸಿದಾಗ ಹೇಗಿರಬಹುದು ಎಂದು ಮರುಕಲ್ಪಿಸಿದ್ದಾರೆ.


ಇದನ್ನೂ ಓದಿ: ಆಹಾರ ಹುಡುಕುತ್ತಾ ಬಂದ ಕರಡಿಗೆ ಕಾದಿತ್ತು ಬಿಗ್​ ಶಾಕ್​! ಕಳ್ಳನಂತೆ ಎಸ್ಕೇಪ್​ ಆಗೇಬಿಡ್ತು!​


ಟ್ವಿಟರ್ ಬಳಕೆದಾರರೊಬ್ಬರು ಈ ಚಿತ್ರಗಳನ್ನು ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇವುಗಳು ಆನ್ಲೈನ್ ನಲ್ಲಿ ಬಹುಬೇಗನೆ ಹಿಟ್ ಆಗಿವೆ.


ಪಂಜಾಬ್, ಬಿಹಾರ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್, ರಾಜಸ್ಥಾನ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದಂತಹ ರಾಜ್ಯಗಳ ವಿವಾಹ ಜೋಡಿಗಳನ್ನು ಇಲ್ಲಿ ನೋಡಬಹುದು.


ಕೆಲವರು ಚಿತ್ರಗಳನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಫುಲ್ ಗರಂ ಆಗಿದ್ದಾರೆ..


ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಲು ಹೆಬ್ಬೆರಳುಗಳ ಎಮೋಜೀಯನ್ನು ಹಾಕಿಕೊಂಡರೆ, ಇನ್ನೂ ಕೆಲವು ನೆಟ್ಟಿಗರ ಮೇಲೆ ಈ ಚಿತ್ರಗಳು ಯಾವುದೇ ಪ್ರಭಾವ ಬೀರಲಿಲ್ಲ ಮತ್ತು ಪ್ರಾತಿನಿಧಿಕ ಚಿತ್ರಗಳು ವಾಸ್ತವಕ್ಕೆ ಹತ್ತಿರವಿಲ್ಲ ಎಂದು ಹೇಳಿದ್ದಾರೆ.


ಕೆಲವರು ಇದನ್ನು ವಿಲಕ್ಷಣ ಮತ್ತು ಅವಾಸ್ತವಿಕ ಎಂದು ಕರೆದರು. ಹೆಚ್ಚಿನ ಬಳಕೆದಾರರು ಬಂಗಾಳಿ ದಂಪತಿಗಳ ಪ್ರಾತಿನಿಧ್ಯದಿಂದ ವಿಶೇಷವಾಗಿ ಅಸಮಾಧಾನಗೊಂಡಿದ್ದರು, ಅವರು ದೊಡ್ಡ ಮೀನಿನೊಂದಿಗೆ ಪೋಸ್ ನೀಡುತ್ತಿರುವುದು ಕಂಡು ಬಂದಿದೆ.


ಇನ್ನೊಬ್ಬರು ಕಾಮೆಂಟ್ ಮಾಡಿ "ಯಾವ ಬಂಗಾಳಿಯೂ ಇದನ್ನು ಮಾಡುವುದಿಲ್ಲ... ದಯವಿಟ್ಟು, ಈ ಎಐ ಅನ್ನು ನಿಷೇಧಿಸಿ. ಬಂಗಾಳಿ ವಿವಾಹಗಳಲ್ಲಿ ಹೀಗೆ ಮಾಡುವುದಿಲ್ಲ, ಈ ರೀತಿಯ ಆಚರಣೆಗಳಿಲ್ಲ. ಇಂತಹ ದೊಡ್ಡ ಮೀನು ಎಲ್ಲಿ ಸಿಗುತ್ತದೆ ಹೇಳಿ, ನಾನು ನನ್ನ ಮದುವೆಗೂ ಆರ್ಡರ್ ಮಾಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

Gujarati pic.twitter.com/OyEZDcpOYJ


— ਕਿੱਕਰਸਿੰਘਖਤ੍ਰੀ (@baghardh) December 30, 2022


ಪ್ಲಸ್ ಸೈಜ್ ಎಂದು ಚಿತ್ರಿಸಲಾಗಿರುವ ಗುಜರಾತಿ ದಂಪತಿಗಳ ಚಿತ್ರ ನೋಡಿ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, "ಗುಜರಾತಿಗಳ ಬಗ್ಗೆ ಈ ದ್ವೇಷ ಏಕೆ?" ಎಂದು ಬರೆದಿದ್ದಾರೆ.


ಇನ್ನೊಬ್ಬರು ಆ ಚಿತ್ರಗಳನ್ನು ದೂಷಿಸಿ "ಈ ರೀತಿ ಕಾಣುತ್ತಿದ್ದ ಗುಜರಾತಿಗಳನ್ನು ನೀವು ಎಂದಾದರೂ ಭೇಟಿ ಮಾಡಿದ್ದೀರಾ? ಇಂತಹ ಎಐ ಚಿತ್ರಗಳು ಮತ್ತು ಪೋಸ್ಟ್ ಗಳು ವಾಸ್ತವದಿಂದ ದೂರದಲ್ಲಿವೆ ಮತ್ತು ಇದು ಸಮಯ ವ್ಯರ್ಥವೆಂದು ತೋರುತ್ತದೆ” ಎಂದು ಹೇಳಿದರು.


ಇನ್ನೊಬ್ಬರು ಈ ಚಿತ್ರಗಳನ್ನು ಟೀಕಿಸಿ, "ಏನಿದು.. ಬಿಹಾರಿ ಮತ್ತು ಯುಪಿ ದಂಪತಿಗಳನ್ನು ಏಕೆ ಇಷ್ಟೊಂದು ಕಪ್ಪಾಗಿ ಚಿತ್ರಿಸಿದ್ದಾರೆ? ಇದನ್ನು ಕೂಡಲೇ ನಿಲ್ಲಿಸಬೇಕು. ಗುಜರಾತಿ ಸಂಸ್ಕೃತಿಯ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ” ಎಂದು ಹೇಳಿದರು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು