news18-kannada Updated:February 18, 2021, 3:17 PM IST
(Photo: Google)
ಇತ್ತೀಚೆಗೆ ಬಯೋಮೆಟ್ರಿಕ್ ಬಗ್ಗೆ ಪ್ರತಿಯೊಬ್ಬರಿಗೆ ತಿಳಿದಿದೆ. ಸರ್ಕಾರಿ ಕಚೇರಿಯಿಂದ ಹಿಡಿದು ಖಾಸಗಿ ಕಂಪನಿಗಳಲ್ಲಿಯೂ ಇದೀಗ ತನ್ನ ಉದ್ಯೋಗಿಗಳ ಹಾಜರಾತಿಯನ್ನು ಬಯೋಮೆಟ್ರಿಕ್ ಮೂಲಕವೇ ದಾಖಲಿಸಿಕೊಳ್ಳುತ್ತದೆ. ಆದರೆ, ಬಯೋಮೆಟ್ರಿಕ್ ಬಗ್ಗೆ ಇತ್ತೀಚೆಗೆ ಬಂದ ವರದಿಯೊಂದು ಆಘಾತಕಾರಿ ಅಂಶವನ್ನು ಹೊರಹಾಕಿದೆ. ಬಯೋಮೆಟ್ರಿಕ್ ವೇಳೆ ನಿಮ್ಮ ಕೈಗಳ ಹಿಂಭಾಗದಲ್ಲಿರುವ ರಕ್ತನಾಳಗಳಿಂದ ನಿಮ್ಮನ್ನು ಪತ್ತೆ ಹಚ್ಚಬಹುದೆಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕ ಸೈಯದ್ ಷಾ ಹೇಳುವ ಪ್ರಕಾರ, ಕೆಲವು ಬಯೋಮೆಟ್ರಿಕ್ ವಿಧಾನಗಳು ಪ್ರಸಿದ್ಧ ದೌರ್ಬಲ್ಯಗಳನ್ನು ಹೊಂದಿವೆ. ಸೋಷಿಯಲ್ ಮೀಡಿಯಾದಲ್ಲಿ ನೀವು ಹಂಚಿಕೊಂಡ ಫೋಟೋಗಳನ್ನು ಬಳಸಿಕೊಂಡು ಬಯೋಮೆಟ್ರಿಕ್ನಲ್ಲಿನ ಫಿಂಗರ್ಪ್ರಿಂಟ್ ಸಹಾಯದಿಂದ ನಿಮ್ಮ ಮುಖ ಪತ್ತೆ ಹಚ್ಚಲು ಯತ್ನಿಸಬಹುದು ಎಂದು ಸಿಎನ್ಎನ್ಗೆ ತಿಳಿಸಿದ್ದಾರೆ.
ರಕ್ತನಾಳವೇ ನಿಮ್ಮ ಗುರುತು ನೀಡಬಹುದು!
ಇನ್ನು, ಫಿಂಗರ್ಪ್ರಿಂಟ್ ಬಿದ್ದಂತೆ ಕೈಗಳಲ್ಲಿ ಇರುವ ನರ-ನಾಡಿಗಳು ಯಾರಿಗೂ ಸ್ಪಷ್ಟವಾಗಿ ಕಾಣುವುದಿಲ್ಲ. ಇದರಿಂದ ಒಬ್ಬ ವ್ಯಕ್ತಿಯ ಹಸ್ತದ ಒಳಗೆ ಇರುವ ನರ-ನಾಡಿಗಳ ಪ್ರಿಂಟ್ ಅನ್ನು ಬೈಪಾಸ್ ಮಾಡಲು ಕಷ್ಟಕರವಾಗಿರುತ್ತದೆ. ಆದರೆ, ಸಂಶೋಧಕರು ಶೆಲ್ಫ್ ಡೆಪ್ತ್ ಕ್ಯಾಮೆರಾವನ್ನು ಬಳಸಿ 35 ವ್ಯಕ್ತಿಗಳಿಂದ 17,500 ಫೋಟೋಗಳನ್ನು ತೆಗೆದುಕೊಂಡರು. ಸಂಶೋಧನೆ ವೇಳೆ ಭಾಗವಹಿಸಿದವರ ಮುಷ್ಟಿಯನ್ನು ಮಾಡುವಂತೆ ಹೇಳಿ ಇಂಟೆಲ್ ರಿಯಲ್ಸೆನ್ಸ್ ಡಿ 415 ಡೆಪ್ತ್ ಕ್ಯಾಮೆರಾದಲ್ಲಿ ಫೋಟೋವನ್ನು ತೆಗೆದುಕೊಂಡು ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ನಡೆಸಿದಾಗ ಶೇ.99ಕ್ಕಿಂತ ಹೆಚ್ಚು ನಿಖರತೆ ಹೊಂದಿರುವ ವ್ಯಕ್ತಿಯನ್ನು ಗುರುತಿಸಬಹುದು. ರಕ್ತನಾಳಗಳ ಸಹಾಯದಿಂದ ವ್ಯಕ್ತಿಯನ್ನು ಪತ್ತೆಹಚ್ಚಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಜನರನ್ನು ಗುರುತಿಸಲು ರಕ್ತನಾಳಗಳನ್ನು ಬಳಸುವ ಆಲೋಚನೆ ಹೊಸದಲ್ಲ. ಫಿಂಗರ್ಪ್ರಿಂಟ್ ಸಹಾಯದಿಂದ ತಂತ್ರಜ್ಞಾನ ಮೂಲಕ ನಿಮ್ಮ ಮುಖವನ್ನು ಪತ್ತೆ ಹಚ್ಚಬಹುದು ಎಂದು ಆಸ್ಟ್ರೇಲಿಯಾ ತಂಡ ಹೇಳುತ್ತದೆ. ಇದನ್ನು ಪರೀಕ್ಷೆ ನಡೆಸಲು ಅಲ್ಲಿನ ಸಂಶೋಧಕರ ತಂಡವು 35 ಜನರ ಫಿಂಗರ್ಪ್ರಿಂಟ್ ಜೊತಗೆ ಅವರ ಫೋಟೋಗಳನ್ನು 3ಡಿ ಕ್ಯಾಮರಾಗಳಲ್ಲಿ ತೆಗೆದುಕೊಂಡು ಇದನ್ನು ಸಾಬೀತುಪಡಿಸಿದ್ದಾರೆ. ಸಾಮಾನ್ಯವಾಗಿ ಫಿಂಗರ್ಪ್ರಿಂಟ್ ಅನ್ನು ಮೊಬೈಲ್ಗಳಲ್ಲಿ ಹಾಗೂ ಬಯೋಮೆಟ್ರಿಕ್ ಮಷೀನ್ಗಳಲ್ಲಿ ಬಳಸುತ್ತೇವೆ. ಇದರಿಂದ ಅಪಾಯಕಾರಿ ಎಂಬ ಸಂದೇಶವನ್ನು ಇದೀಗ ಆಸ್ಟ್ರೇಲಿಯಾದ ತಂಡ ಹೇಳಿದೆ.
Published by:
Harshith AS
First published:
February 18, 2021, 3:17 PM IST