HOME » NEWS » Tech » ARE YOU USING A FAKE OXIMETER APP HERES HOW TO FIND OUT HG

ನೀವು ನಕಲಿ ಆಕ್ಸಿಮೀಟರ್​ ಅಪ್ಲಿಕೇಶನ್​ ಬಳಸುತ್ತಿದ್ದೀರಾ? ಪತ್ತೆ ಹಚ್ಚುವುದು ಹೇಗೆ?

ನಕಲಿ ಅಪ್ಲಿಕೇಶನ್​​ಗಳಗಾಗಿ ಪೇಲೋಡ್​ ಮತ್ತು ಥರ್ಡ್​ ಪಾರ್ಟಿ ಅಪ್ಲಿಕೇಶನ್​ ಮೂಲಕ ಈ ರೀತಿಯ ದಾರಿ ಹುಡುಕಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

news18-kannada
Updated:June 5, 2021, 3:27 PM IST
ನೀವು ನಕಲಿ ಆಕ್ಸಿಮೀಟರ್​ ಅಪ್ಲಿಕೇಶನ್​ ಬಳಸುತ್ತಿದ್ದೀರಾ? ಪತ್ತೆ ಹಚ್ಚುವುದು ಹೇಗೆ?
Smartphone
  • Share this:
ಕೊರೊನಾ ಎರಡನೇ ಅಲೆ ಹೆಚ್ಚಾದ ಸಮಯದಲ್ಲಿ ಆಕ್ಸಿಮೀಟರ್​ಗಳ ಬೇಡಿಕೆ ಹೆಚ್ಚಾಗಿದೆ. ಪ್ಲೇ ಸ್ಟೋರ್​ನಲ್ಲಿ ಸಾಕಷ್ಟು ನಕಲಿ ಆಕ್ಸಿಮೀಟರ್​ ಆ್ಯಪ್​ಗಳನ್ನು ಸೈಬರ್​ ಸೆಕ್ಯುರಿಟಿ ಸಂಶೋಧಕರು ಪತ್ತೆಮಾಡಿದ್ದಾರೆ. ಕ್ವಿಕ್​ ಹೀಲ್​ ಸೆಕ್ಯುರಿಟಿ ಲ್ಯಾಬ್ಸ್​ ಈ ಬಗ್ಗೆ ಸಂಶೋಧನೆ ನಡೆಸಿದ್ದು, ಕೆಲವರು ನಕಲಿ ಆ್ಯಕ್ಸಿಮೀಟರ್​ ಆ್ಯಪ್​ ​ ಸೃಷ್ಟಿಸಿ ಅದರ ಮೂಲಕ ಬ್ಯಾಕಿಂಗ್​​ ಮಾಹಿತಿಯನ್ನು ಕದಿಯಲು ಮುಂದಾಗಿದ್ದಾರೆ ಎಂದು ತಿಳಿಸಿದೆ. ನಕಲಿ ಅಪ್ಲಿಕೇಶನ್​​ಗಳಗಾಗಿ ಪೇಲೋಡ್​ ಮತ್ತು ಥರ್ಡ್​ ಪಾರ್ಟಿ ಅಪ್ಲಿಕೇಶನ್​ ಮೂಲಕ ಈ ರೀತಿಯ ದಾರಿ ಹುಡುಕಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರಾಥಮಿಕವಾಗಿ ಸೈಬರ್​ ಕಳ್ಳರು ಅಪ್ಲಿಕೇಶನ್​ ಅನ್ನು ಗುರಿಯಾಗಿಸಿಸುತ್ತಾರೆ. ಇಲ್ಲಿ ಉಚಿತ ಮತ್ತು ಹಣ ನೀಡುವ ಆ್ಯಪ್​ಗಳು ಅವರ ಕೇಂದ್ರ ಬಿಂದುವಾಗಿರುತ್ತದೆ. ಫೈರ್​​ಬೇಸ್​ ಅಥವಾ ಗಿಟ್​​ಹಬ್​ನಂತಹ ವಿಭಿನ್ನ ಸಾಧನದ ಮೂಲಕ QooApp, Huawei, ಮುಂತಾದ ನಕಲಿ ಆ್ಯಪ್​ಗಳಂತೆ ಬಳಕೆದಾರರನ್ನು ತೊಂದರೆಗೆ ಸಿಲುಕಿಸುತ್ತದೆ. ಇನ್ನು ಕೆಲಮೊಮ್ಮ ಸಾಮಾಜಿಕ ಜಾಲತಾಣದಲ್ಲಿ ಲಿಂಕ್​ ಹರಿಬಿಡುವ ಮೂಲಕ ಅಥವಾ ಲಿಂಕ್​ ಮೇಲೆ ಕ್ಲಿಕ್​ ಮಾಡುವ ಮೂಲಕ ಜನರನ್ನು ಸಮಸ್ಯೆಗೆ ದೂಡುತ್ತಾರೆ.

ನಿಮ್ಮ ಅಪ್ಲಿಕೇಶನ್‌ನ ಸತ್ಯಾಸತ್ಯತೆಯನ್ನು ಹೇಗೆ ಪರಿಶೀಲಿಸುವುದು?

1. ಸ್ಮಾರ್ಟ್​ಫೋನ್ ಬಳಕೆದಾರರು ನಕಲಿ ಅಪ್ಲಿಕೇಷನ್​ ಎಂದು ಪರೀಕ್ಷಿಸಬೇಕು. ಕೆಲಮೊಮ್ಮೆ ಆ್ಯಪ್​ನಲ್ಲಿ ತಪ್ಪಾದ ಇಂಗ್ಲಿಷ್ ಅನ್ನು ಬಳಸಿರುತ್ತಾರೆ. ವಿವರಣೆಗಳಲ್ಲಿ ವ್ಯಾಕರಣ ದೋಷಗಳನ್ನು ಇರುತ್ತದೆ ಎಂದು ತಜ್ಞರು ಗಮನಿಸಿದ್ದಾರೆ.

2. ಆ್ಯಪ್​ ಕುರಿತಾಗಿ ವಿಮರ್ಶೆಗಳು ಮತ್ತು ರೇಟಿಂಗ್‌ಗಳು ಸಹ ನಕಲಿ ಆಗಿರುವುದರಿಂದ, ಕಡಿಮೆ ರೇಟಿಂಗ್ ಹೊಂದಿರುವ ವಿಮರ್ಶೆಗಳ ಮೇಲೆ ಹೆಚ್ಚು ಗಮನಹರಿಸಿ ಮತ್ತು ಎಚ್ಚೆರಿಕೆಯಿಂದಿರಿ.

3. ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ಎಸ್‌ಎಂಎಸ್, ಇಮೇಲ್‌ಗಳು ಮತ್ತು ವಾಟ್ಸಾಪ್ ಮೂಲಕ ಹಂಚಿಕೊಂಡ ಲಿಂಕ್‌ಗಳ ಮೂಲಕ ಥರ್ಡ್​ ಪಾರ್ಟಿ ಅಪ್ಲಿಕೇಶನ್ ಡೌನ್​ಲೋಡ್​ ಮಾಡುವುದು ತಪ್ಪಿಸಿ.
Published by: Harshith AS
First published: June 5, 2021, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories