• Home
  • »
  • News
  • »
  • tech
  • »
  • Xiaomi Smartphones: ಸ್ಮಾರ್ಟ್​​​ಫೋನ್​ ಖರೀದಿಸುವ ಪ್ಲ್ಯಾನ್​ನಲ್ಲಿದ್ದೀರಾ? ಇಲ್ಲಿದೆ ನೋಡಿ ಒಂದೇ ಕಂಪೆನಿಯ ಟಾಪ್ 4 ಮೊಬೈಲ್​ಗಳು

Xiaomi Smartphones: ಸ್ಮಾರ್ಟ್​​​ಫೋನ್​ ಖರೀದಿಸುವ ಪ್ಲ್ಯಾನ್​ನಲ್ಲಿದ್ದೀರಾ? ಇಲ್ಲಿದೆ ನೋಡಿ ಒಂದೇ ಕಂಪೆನಿಯ ಟಾಪ್ 4 ಮೊಬೈಲ್​ಗಳು

ಸ್ಮಾರ್ಟ್​​ಫೋನ್ಸ್​

ಸ್ಮಾರ್ಟ್​​ಫೋನ್ಸ್​

ಶಿಯೋಮಿ ಕಂಪೆನಿಯಿಂದ ಇತ್ತೀಚೆಗೆ ಬಹುತೇಕ ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗಿದೆ. ಅದೇ ರೀತಿ ಈ ಕಂಪೆನಿಯಿಂದ ಬಿಡುಗಡೆಯಾದ ಸ್ಮಾರ್ಟ್​​ಫೋನ್​ಗಳಿಗೆ ಈಗಂತೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಹಾಗಿದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್​ ಸ್ಮಾರ್ಟ್​​ಫೋನ್​ಗಳು ಯಾವುದೆಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಮುಂದೆ ಓದಿ ...
  • Share this:

    ಭಾರತದಲ್ಲಿ ಸ್ಮಾರ್ಟ್​​ಫೋನ್​ಗಳಿಗೆ (Smartphones) ಎಲ್ಲಿಲ್ಲದ ಬೇಡಿಕೆ. ಮೊಬೈಲ್​ ಕಂಪೆನಿಗಳು ಸಹ ಹೊಸ ಹೊಸ ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಜನಪ್ರಿಯ ಸ್ಮಾರ್ಟ್​​ಫೋನ್​ ಕಂಪೆನಿಗಳಲ್ಲಿ ಶಿಯೋಮಿ ಕಂಪೆನಿ (Redmi Smartphones) ಸಹ ಒಂದಾಗಿದೆ. ಈ ಕಂಪೆನಿ ಬಜೆಟ್​ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ  ವರ್ಷದಲ್ಲಿ ಶಿಯೋಮಿ ಕಂಪೆನಿಯಿಂದ (Xiaomi Company) ಹಲವಾರು ಮೊಬೈಲ್​ಗಳು ಬಿಡುಗಡೆಯಾಗಿದ್ದು ಭಾರೀ ಬೇಡಿಕೆಯಲ್ಲಿದೆ. ಸ್ಮಾರ್ಟ್​​ಫೋನ್​ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಈ ಕಂಪೆನಿಯ ಸ್ಮಾರ್ಟ್​ಫೋನ್​ಗಳು ಉತ್ತಮವಾಗಿದೆ.


    ಶಿಯೋಮಿ ಕಂಪೆನಿಯಿಂದ ಇತ್ತೀಚೆಗೆ ಬಹುತೇಕ ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗಿದೆ. ಅದೇ ರೀತಿ ಈ ಕಂಪೆನಿಯಿಂದ ಬಿಡುಗಡೆಯಾದ ಸ್ಮಾರ್ಟ್​​ಫೋನ್​ಗಳಿಗೆ ಈಗಂತೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಹಾಗಿದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್​ ಸ್ಮಾರ್ಟ್​​ಫೋನ್​ಗಳು ಯಾವುದೆಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.


    ಶಿಯೋಮಿ 11ಟಿ ಪ್ರೋ 5ಜಿ ಸ್ಮಾರ್ಟ್​ಫೋನ್​


    ಶಿಯೋಮಿ 11ಟಿ ಪ್ರೋ 5ಜಿ ಸ್ಮಾರ್ಟ್​ಫೋನ್​ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 ಎಸ್​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ.




    ಹಾಗೆಯೇ 8ಜಿಬಿ ರ್‍ಯಾಮ್ ಮmತ್ತು 128ಜಿಬಿ, 8ಜಿಬಿ ರ್‍ಯಾಮ್ ಮತ್ತು 256ಜಿಬಿ ಮತ್ತು 12ಜಿಬಿ ರ್‍ಯಾಮ್ ಮತ್ತು 256ಜಿಬಿ ಸಾಮರ್ಥ್ಯದ ಸ್ಟೋರೇಜ್​ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.


    ರೆಡ್​ಮಿ ನೋಟ್​ 12 5ಜಿ ಸ್ಮಾರ್ಟ್​​ಫೋನ್​


    ರೆಡ್​ಮಿ ನೋಟ್​ 12 5ಜಿ ಸ್ಮಾರ್ಟ್​​ಫೋನ್​ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲ್ಡ್​ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್​​ಫೋನ್​ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4 ಜೆನ್​ 1 ಎಸ್​ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.


    ಹಾಗೆಯೇ 4ಜಿಬಿ ರ್‍ಯಾಮ್ ಮತ್ತು 128ಜಿಬಿ, 4ಜಿಬಿ ರ್‍ಯಾಮ್ ಮತ್ತು 128ಜಿಬಿ ಮತ್ತು 6ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​ ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇನ್ನು ಈ ಸ್ಮಾರ್ಟ್​​ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್​ ಸೆನ್ಸಾರ್​ ಅನ್ನು ಹೊಂದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.


    ರೆಡ್​ಮಿ ಕೆ50ಐ ಸ್ಮಾರ್ಟ್​ಫೋನ್​


    ರೆಡ್​ಮಿ ಕೆ50ಐ ಸ್ಮಾರ್ಟ್​ಫೋನ್​ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಫುಲ್​ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್​ಪ್ಲೇಯು 144Hz ರಿಫ್ರೇಶ್‌ ರೇಟ್‌ ಅನ್ನು ಒಳಗೊಂಡಿದೆ. ಹಾಗೆಯೇ ಮೀಡಿಯಾ ಟೆಕ್‌ ಡೈಮೆನ್ಸಿಟಿ 8100 ಎಸ್​​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್​​ಫೋನ್​ ಆಂಡ್ರಾಯ್ಡ್‌ 12 ಓಎಸ್‌ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ.


    ಸ್ಮಾರ್ಟ್​​ಫೋನ್ಸ್​


    ಇದರೊಂದಿಗೆ ಈ ಫೋನ್ 8ಜಿಬಿ ರ್‍ಯಾಮ್ ಮತ್ತು 256ಜಿಬಿ ಮತ್ತು 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹಾಗೆಯೇ ಈ ಸ್ಮಾರ್ಟ್​​ಫೊನ್​ 5,080mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದೆ. ಈ ಬ್ಯಾಟರಿಯು 67W ವೇಗದ ಚಾರ್ಜ್ ಆಗುತ್ತದೆ.


    ರೆಡ್​​ಮಿ ನೋಟ್​ 10ಟಿ 5ಜಿ ಸ್ಮಾರ್ಟ್​ಫೋನ್​


    ರೆಡ್​​ಮಿ ನೋಟ್​ 10ಟಿ 5ಜಿ ಸ್ಮಾರ್ಟ್​ಫೋನ್​ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್​ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 700 ಎಸ್​​ಓಸಿ ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸಲಿದೆ.


    ಇದನ್ನೂ ಓದಿ: ವಾಟ್ಸಾಪ್​ನಲ್ಲಿ ಹೊಚ್ಚ ಹೊಸ ಫೀಚರ್​ ಬಿಡುಗಡೆ! ಇನ್ಮುಂದೆ ಯಾವುದೇ ಮೆಸೇಜ್ ಅನ್ನು ಸುಲಭದಲ್ಲಿ ನೋಡ್ಬಹುದು


    ಹಾಗೆಯೇ ಈ ಫೋನ್ 4ಜಿಬಿ ರ್‍ಯಾಮ್ ಮತ್ತು 64ಜಿಬಿ ಮತ್ತು 6ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​ ಸ್ಟೋರೇಜ್‌ ಆಯ್ಕೆಗಳನ್ನು ಹೊಂದಿದೆ. ಈ ಸ್ಮಾರ್ಟ್​​ಫೋನ್​ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿದೆ.

    Published by:Prajwal B
    First published: