ನಿಮ್ಮ ನೆರೆಮನೆಯವರ ಬಗ್ಗೆಯೂ ಮಾಹಿತಿ ನೀಡುತ್ತೆ ಗೂಗಲ್, ಲಾಂಚ್ ಆಯ್ತು ಈ ಆ್ಯಪ್!


Updated:May 31, 2018, 5:13 PM IST
ನಿಮ್ಮ ನೆರೆಮನೆಯವರ ಬಗ್ಗೆಯೂ ಮಾಹಿತಿ ನೀಡುತ್ತೆ ಗೂಗಲ್, ಲಾಂಚ್ ಆಯ್ತು ಈ ಆ್ಯಪ್!

Updated: May 31, 2018, 5:13 PM IST
ನ್ಯೂಸ್ 18 ಕನ್ನಡ

ಭಾರತದಲ್ಲಿ ಮೊಬೈಲ್ ಪೇಮೆಂಟ್ ಆ್ಯಪ್, ಫುಡ್​ ಡೆಲಿವರಿ ಸರ್ವಿಸ್ ಹಾಗೂ ನ್ಯಾಷನಲ್ ವೈ ಫೈ ನೆಟ್ವರ್ಕ್​ ಎನಿಶಿಯಲ್ ಲಾಂಚ್ ಮಾಡಿದ ಬಳಿಕ ಇದೀಗ ಗೂಗಲ್ 'ನೆಕ್ಸಟ್ ಬಿಲಿಯನ್' ಟೀಂ ಒಂದು Q & A ಆ್ಯಪ್ ಲಾಂಚ್ ಮಾಡಿದೆ. ಈ ಆ್ಯಪ್​ನ ಹೆಸರು ನೇಬರ್ಲಿ(Neighbourly) ಎಂದಿದೆ. ಇದನ್ನು ಸ್ಥಳೀಯ ಮಾಹಿತಿ ಶೇರ್ ಮಾಡುವ ನಿಟ್ಟಿನಲ್ಲಿ ಮಾಡಲಾಗಿದೆ. ಇದರ ಹಿಂದಿನ ಮುಖ್ಯ ಉದ್ದೇಶವೆಂದರೆ ಸ್ಥಳೀಯ ಜನರಿಗೆ ತಮ್ಮ ಸುತ್ತ ಮುತ್ತಲಿನ ಕುರಿತಾಗಿ ಮಾಹಿತಿ ನೀಡುವುದಾಗಿದೆ.

ಹೇಗೆ ಕಾರ್ಯ ನಿರ್ವಹಿಸಲಿದೆ Neighbourly ಆ್ಯಪ್

ಈ ಆ್ಯಪ್​ಗೆ ಸೈನ್​ ಅಪ್ ಆಗಲು ನೀವು ನಿಮ್ಮ ಹೆಸರನ್ನಷ್ಟೇ ನಮೂದಿಸಿದರೆ ಸಾಕು. ನೀವು ಸೈನ್​ ಅಪ್ ಮಾಡುತ್ತಿದ್ದಂತೆಯೇ ಜಿಪಿಎಸ್​ ಬಳಸಿ ನಿಮ್ಮ ಸುತ್ತ ಮುತ್ತಲಿನ ಕುರಿತಾದ ಮಾಹಿತಿ ನೀಡುತ್ತದೆ.

ಸುರಕ್ಷತೆಯ ಕುರಿತಾಗಿಯೂ ಕಾಳಜಿ ವಹಿಸಲಾಗಿದೆ

ಕಂಪೆನಿಯು ಬಳಕೆದಾರರ ಸುರಕ್ಷತೆಯ ಕುರಿತಾಗಿಯೂ ಸಂಪೂರ್ಣಕಾಳಜಿ ವಹಿಸಿಯೇ ಬಳಕೆದಾರರಿಗೆ ಇಂತಹುದ್ದೊಂದು ಆ್ಯಪ್ ನೀಡಿದೆ. ಇನ್ನು ಬಳಕೆದಾರರಿಗೆ ಯಾವುದೇ ಒಂದು ಕಂಟೆಂಟ್​ ಸರಿ ಅನಿಸುತ್ತಿಲ್ಲವಾದರೆ ಅದನ್ನು ರಿಪೋರ್ಟ್​ ಮಾಡಬಹುದಾಗಿದೆ. ಫ್ಲ್ಯಾಗ್ ಮಾಡಿದ ಬಳಿಕ ಸ್ಥಳೀಯ ಕಂಟೆಂಟ್ ಮಾಡರೇಟರ್​ ಮಾಹಿತಿಯನ್ನು ಪರಿಶೀಲಿಸಿ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಇದನ್ನು ಹೊರತುಪಡಿಸಿ ಯಅವುದೇ ಒಬ್ಬ ವ್ಯಕ್ತಿ ಮತ್ತೊಬ್ಬರ ಫೋಟೋ ಸೇವ್​ ಮಾಡುವ ಆಯ್ಕೆಯನ್ನೂ ಇಲ್ಲಿ ನೀಡಿಲ್ಲ. ಸ್ಕ್ರೀನ್​ಶಾಟ್​ ತೆಗೆದುಕೊಳ್ಲಲೂ ಸಾಧ್ಯವಿಲ್ಲ.

ಗೂಗಲ್​ನ ಈ ಆ್ಯಪ್​ನ್ನು ಈಗಾಗಲೇ 1000ಕ್ಕೂ ಅಧಿಕ ಮಂದಿ ಟೆಸ್ಟ್​ ಮಾಡಿದ್ದು, ಅವರೆಲ್ಲರೂ ಸುಮಾರು 30-35 ಶೇಕಡಾ ಪ್ರಶ್ನೆಗಳಿಗೆ ಕೇವಲ 54 ನಿಮಿಷದೊಳಗೆ ಉತ್ತರ ಕಂಡುಕೊಂಡಿದ್ದಾರೆ. ಆರಂಭದಲ್ಲಿ ಈ ಆ್ಯಪ್​ನ ಬೀಟಾ ವರ್ಶನ್​ ಮುಂಬೈನಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಬೇರೆ ನಗರಗಳಲ್ಲಿ ನೆಲೆಸುವವರಿಉ ಈ ಅ್ಯಪ್​ ಬಳಸಲು ಇನ್ನೂ ಕೊಂಚ ಸಮಯ ಕಾಯಬೇಕಿದೆ.
First published:May 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ