Self Service Repair: ನಿಮ್ಮ ಐಫೋನ್ ಅನ್ನು ನೀವೇ ರಿಪೇರಿ ಮಾಡಬಹುದು ಹೇಗೆ ಗೊತ್ತೇ? ಇಲ್ಲಿದೆ ವಿವರ

Apple's Self Service Repair programme: ಇದೀಗ ಈ ತರಬೇತಿ ವರವಾಗುವ ಲಕ್ಷಣಗಳು ಕಾಣುತ್ತಿವೆ ಏಕೆಂದರೆ ಆ್ಯಪಲ್ ಸಂಸ್ಥೆ ತನ್ನ ಸ್ವಯಂ-ಸೇವಾ ದುರಸ್ತಿ (Self Service Repair) ಯೋಜನೆಯ ಅಡಿಯಲ್ಲಿ ಟೆಕ್ ನಿಷ್ಣಾತ ಬಳಕೆದಾರರು ಹಾಗೂ ನಿಪುಣರಿಗೆ ತಮ್ಮ ಮನೆಯಿಂದಲೇ ಐಫೋನ್ ಹಾಗೂ ಇತರ ಉತ್ಪನ್ನಗಳ ದುರಸ್ತಿ ನಡೆಸಲು ಅವಕಾಶವನ್ನೊದಗಿಸಲು ನಿರ್ಧರಿಸಿದೆ.

 iPhone 13 /ಐಫೋನ್ 13

iPhone 13 /ಐಫೋನ್ 13

 • Share this:
  ಕೋವಿಡ್-19 (Covid-19) ಸಾಂಕ್ರಾಮಿಕದ ನಂತರ ನಾವು ಮನೆಯಲ್ಲಿದ್ದುಕೊಂಡೇ ಅದೆಷ್ಟೋ ಅಂಶಗಳನ್ನು ಕಲಿತುಕೊಂಡೆವು. ಹೊರಗಡೆ ಹೋದರೆ ಎಲ್ಲಿ ವೈರಸ್ (Virus) ನಮ್ಮನ್ನು ಮುತ್ತಿಕೊಳ್ಳುತ್ತದೆಯೋ ಎಂಬ ಭಯದಿಂದ ಇಂದಿಗೂ ಅದೆಷ್ಟೋ ಜನ ತಮ್ಮಷ್ಟಕ್ಕೆ ಕೆಲವೊಂದಿಷ್ಟು ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅದು ರಿಪೇರಿಯಾಗಿರಬಹುದು, ಬಟ್ಟೆ ಐರನ್ ಮಾಡುವುದು, ಇಲ್ಲವೇ ಸೌಂದರ್ಯ ಆರೈಕೆಗಳಾಗಿರಬಹುದು. ಮೊದಲೆಲ್ಲಾ ಪ್ರತಿಯೊಂದಕ್ಕೂ ಹೊರಗಿನ ಸೌಲಭ್ಯಗಳನ್ನು ಅವಲಂಬಿಸಿದ್ದ ಜನ ಇಂದು ಅವುಗಳ ಕುರಿತು ಕಲಿತುಕೊಂಡಿದ್ದಾರೆ.

  ಈಗ ಇದೇ ಸಾಲಿಗೆ ಎಲೆಕ್ಟ್ರಾನಿಕ್ಸ್ (Electronics) ರಿಪೇರಿಗಳನ್ನು ಸೇರಿಸಬಹುದು. ಹೌದು ಕೆಲವೊಂದಷ್ಟು ಜನ ತಮ್ಮ ದುಡಿಮೆಯ ಭಾಗವಾಗಿ ಮನೆಯಲ್ಲಿದ್ದುಕೊಂಡೇ ಎಲೆಕ್ಟ್ರಾನಿಕ್ಸ್ ಪರಿಕರಗಳ ರಿಪೇರಿಯ ಬಗ್ಗೆ ತರಬೇತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಈ ತರಬೇತಿ ವರವಾಗುವ ಲಕ್ಷಣಗಳು ಕಾಣುತ್ತಿವೆ ಏಕೆಂದರೆ ಆ್ಯಪಲ್ ಸಂಸ್ಥೆ ತನ್ನ ಸ್ವಯಂ-ಸೇವಾ ದುರಸ್ತಿ (Self Service Repair) ಯೋಜನೆಯ ಅಡಿಯಲ್ಲಿ ಟೆಕ್ ನಿಷ್ಣಾತ ಬಳಕೆದಾರರು ಹಾಗೂ ನಿಪುಣರಿಗೆ ತಮ್ಮ ಮನೆಯಿಂದಲೇ ಐಫೋನ್ ಹಾಗೂ ಇತರ ಉತ್ಪನ್ನಗಳ ದುರಸ್ತಿ ನಡೆಸಲು ಅವಕಾಶವನ್ನೊದಗಿಸಲು ನಿರ್ಧರಿಸಿದೆ.

  ಮನೆಯಲ್ಲಿಯೇ ಆ್ಯಪಲ್​ ಉತ್ಪನ್ನ ರಿಪೇರಿ!

  ಈ ಯೋಜನೆಯಿಂದ ಐಫೋನ್ ಡಿಸ್‌ಪ್ಲೇ (Iphone Display), ಬ್ಯಾಟರಿ (Battery) ಹಾಗೂ ಕ್ಯಾಮೆರಾ (Camera) ದುರಸ್ತಿಯನ್ನು ಮನೆಯಲ್ಲೇ ನಿರ್ವಹಿಸಬಹುದಾಗಿದ್ದರಿಂದ ಆಗಾಗ್ಗೆ ಆ್ಯಪಲ್ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವೂ ಇರುವುದಿಲ್ಲ. ಅದೇ ರೀತಿ ಈ ಪ್ರಕ್ರಿಯೆಯು ದುರಸ್ತಿ ತಜ್ಞರ ತಂಡಕ್ಕೆ ನೆರವನ್ನು ನೀಡಲಿದೆ. ಅದೇ ರೀತಿ ಬಳಕೆದಾರರ ಜ್ಞಾನದ ನೆಲೆಯನ್ನೂ ಹೆಚ್ಚಿಸಲಿದೆ.

  ಈ ಯೋಜನೆ ಇದೀಗ ಆರಂಭಿಕ ಪ್ರಗತಿಯಲ್ಲಿದ್ದು ತದನಂತರ ಸಂಸ್ಥೆಯು ಮುಂದಿನ ವರ್ಷದ ನಂತರ ಮನೆಯಲ್ಲೇ ಹೆಚ್ಚುವರಿ ರಿಪೇರಿಗಳನ್ನು ನಡೆಸಲು ಇನ್ನಷ್ಟು ಅವಕಾಶಗಳನ್ನೊದಗಿಸಲಿದೆ.

  ಶೀಘ್ರದಲ್ಲೇ ಸೇವೆ

  ಮೊದಲಿಗೆ ಐಫೋನ್ 12 (Iphone 12) ಹಾಗೂ ಐಫೋನ್ 13 (Iphone 13) ಡಿವೈಸ್‌ಗಳಿಗೆ ಸೇವೆಯು ಲಭ್ಯವಿದ್ದು ಶೀಘ್ರದಲ್ಲೇ M1 ಚಿಪ್‌ಗಳನ್ನು ಒಳಗೊಂಡಿರುವ Mac ಕಂಪ್ಯೂಟರ್‌ಗಳಿಗೆ ಯೋಜನೆಯನ್ನು ಮುಂದುವರಿಸಲಾಗುತ್ತದೆ. ಸ್ವಯಂ ಸೇವಾ ದುರಸ್ತಿ ಕ್ರಮವು ಮುಂದಿನ ವರ್ಷದ ಆರಂಭದಲ್ಲಿ ಯುಎಸ್‌ನಲ್ಲಿ (US) ಲಭ್ಯವಿದ್ದು 2022 ರ ನಂತರ ವಿಶ್ವದ ಹೆಚ್ಚುವರಿ ದೇಶಗಳಿಗೆ ಈ ಉಪಕ್ರಮವನ್ನು ವಿಸ್ತರಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

  ಇದನ್ನು ಓದು: Spam call: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

  ಇನ್ನು ಉದ್ಯಮ ತಜ್ಞರು ಹೇಳಿರುವಂತೆ ಈ ಯೋಜನೆಯು ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ (Smartphone) ಉದ್ಯಮಕ್ಕೆ ಮತ್ತು ನಿರ್ದಿಷ್ಟವಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್‌ಗೆ ಹೊಸ ಆರಂಭವನ್ನು ನೀಡುತ್ತದೆ. ಆ್ಯಪಲ್‌ನ ನೈಜ ಭಾಗಗಳ ದುರಸ್ತಿಗೆ ಅವಕಾಶಗಳನ್ನು ಒದಗಿಸುವುದರ ಮೂಲಕ ಮಾರಾಟದ ನಂತರ ಸೇವಾ ಮಾರುಕಟ್ಟೆಯಲ್ಲಿ ಹೊಸ ಆದಾಯದ ಅವಕಾಶಗಳನ್ನು ಸಂಸ್ಥೆಯು ತೆರೆಯಬಹುದು. ಟೆಕ್-ಬುದ್ಧಿವಂತ ಬಳಕೆದಾರರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿರುವ ಸಂಭಾವ್ಯ ಆ್ಯಪಲ್‌ ರಿಪೇರಿ ಪ್ರಮಾಣೀಕರಣ ಕಾರ್ಯಕ್ರಮವನ್ನು ಸಂಸ್ಥೆ ಆರಂಭಿಸಬಹುದು. ಇದರಿಂದ ಸಂಸ್ಥೆಗೆ ವಿಶ್ವಾಸಾರ್ಹ ದುರಸ್ತಿ ತಜ್ಞರ ಸಮೂಹ ದೊರೆಯುತ್ತದೆ. ಎಂದು ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್ (IIG) ಮುಖ್ಯಸ್ಥರಾದ ಪ್ರಭು ರಾಮ್ ತಿಳಿಸಿದ್ದಾರೆ.

  ಗ್ರಾಹಕರು ಇದನ್ನು ಆರಂಭಿಸುವುದಕ್ಕಾಗಿ ಅವರಿಗೆ ದುರಸ್ತಿ ಕೈಪಿಡಿ (ರಿಪೇರಿ ಮ್ಯಾನುವಲ್) ಅನ್ನು ಒದಗಿಸಲಾಗುತ್ತದೆ. ಆ್ಯಪಲ್‌ ಸೆಲ್ಫ್ ಸರ್ವಿಸ್ ರಿಪೇರಿ ಆನ್‌ಲೈನ್ ಸ್ಟೋರ್ ಅನ್ನು ಬಳಸಿಕೊಂಡು ಗ್ರಾಹಕರು ಆ್ಯಪಲ್‌ ನೈಜ ಭಾಗಗಳು ಹಾಗೂ ಸಾಧನಗಳಿಗೆ ಪ್ರವೇಶವನ್ನು ಪ್ಲೇಸ್ ಮಾಡುತ್ತಾರೆ. ದುರಸ್ತಿಯ ನಂತರ, ಮರುಬಳಕೆಗಾಗಿ ಬಳಸಿದ ಭಾಗವನ್ನು ಹಿಂದಿರುಗಿಸುವ ಗ್ರಾಹಕರು ತಮ್ಮ ಖರೀದಿಗೆ ಕ್ರೆಡಿಟ್ ಪಡೆಯುತ್ತಾರೆ.

  ಇದನ್ನು ಓದು: Viral Story: ಶಾರ್ಟ್ಸ್ ಹಾಕಿಕೊಂಡು ಹೋದ ವ್ಯಕ್ತಿಗೆ ಪ್ರವೇಶ ನಿರ್ಬಂಧಿಸಿದ ಬ್ಯಾಂಕ್ ಸಿಬ್ಬಂದಿ! ಮುಂದೇನಾಯ್ತು ಗೊತ್ತಾ?

  ಕೌಂಟರ್‌ಪಾಯಿಂಟ್ ರಿಸರ್ಚ್‌ನ ಹಿರಿಯ ವಿಶ್ಲೇಷಕ ಗ್ಲೆನ್ ಕಾರ್ಡೋಜಾ ಪ್ರಕಾರ, ಅನೇಕ ಗ್ರಾಹಕರು ಇದನ್ನು ಮೌಲ್ಯವರ್ಧನೆಯಾಗಿ ನೋಡಬಹುದು, ಮುಂದಿನ ವರ್ಷದ ಆರಂಭದಲ್ಲಿ ಈ ಸೇವೆ ಪ್ರಾರಂಭವಾದಾಗ ಮಾತ್ರ ಗ್ರಾಹಕರ ವೆಚ್ಚ ಮತ್ತು ಶ್ರಮವು ತಿಳಿಯುತ್ತದೆ ಎಂದು ತಿಳಿಸಿದ್ದಾರೆ.ಗ್ರಾಹಕರು ಅಗತ್ಯ ಬಿದ್ದಾಗ ಮಾತ್ರ ರಿಪೇರಿಗೆ ಖರ್ಚು ಮಾಡಲು ಯೋಚಿಸುತ್ತಾರೆ. ಯುಎಸ್ ಮತ್ತು ಇತರ ಪ್ರಬುದ್ಧ ಮಾರುಕಟ್ಟೆಗಳಲ್ಲಿ ಐಫೋನ್ 12 ಮತ್ತು 13 ಸರಣಿಯ ಮಾಲೀಕರು ಭಾಗಗಳು, ಉಪಕರಣಗಳು ಮತ್ತು ಕೈಪಿಡಿಗಳನ್ನು ಖರೀದಿಸಲು ಅಥವಾ ಅಧಿಕೃತ ಸೇವಾ ಕೇಂದ್ರಕ್ಕೆ ನೇರವಾಗಿ ನೀಡಲು ಆಯ್ಕೆಯನ್ನು ಹೊಂದಿರುತ್ತಾರೆ. ಯಾವುದೇ ರೀತಿಯಲ್ಲಿ, ಉಪಕರಣಗಳ ಮಾರಾಟ ಅಥವಾ ಸೇವಾ ಶುಲ್ಕಗಳಿಂದ ಸಂಸ್ಥೆ ಲಾಭವನ್ನು ಪಡೆಯುತ್ತದೆ, ”ಎಂದು ಕಾರ್ಡೋಜಾ ತಿಳಿಸಿದ್ದಾರೆ.

  ಪ್ರಭು ರಾಮ್ ಪ್ರಕಾರ, ಸಂಸ್ಥೆಯು ತಮ್ಮ ಐಫೋನ್‌ಗಳನ್ನು ಸ್ವತಃ ರಿಪೇರಿ ಮಾಡಲು ಹಾಗೂ ಅಂತಹ ಸಾಮರ್ಥ್ಯಗಳಿಂದ ಪ್ರಯೋಜನ ಪಡೆಯುವ ತಂತ್ರಜ್ಞಾನದ ತಿಳುವಳಿಕೆಯುಳ್ಳ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
  Published by:Harshith AS
  First published: