HOME » NEWS » Tech » APPLES FOLDABLE IPHONE EXPECTED TO LAUNCH IN 2023 HG

2023ಕ್ಕೆ ಮಡಚುವ ಐಫೋನ್​ ​ಮಾರುಕಟ್ಟೆಗೆ!

Apples foldable iPhone: ಆ್ಯಪಲ್​​ ಮಡಚುವ ಐಫೋನ್​ ಅಧಿಕೃತವಾಗಿ ಪ್ರಾರಂಭವಾಗಿಲ್ಲ ಎಂದು ವಿಶ್ಲೇಷಕ ಕುವೊ ತಿಳಿಸಿದ್ದಾರೆ. ಆದರೆ ಅದರ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಅಭಿವೃದ್ಧಿಯ ಸುಗಮದಲ್ಲಿದೆ ಎಂದು ತಿಳಿಸಿದ್ದಾರೆ.

news18-kannada
Updated:March 3, 2021, 11:01 AM IST
2023ಕ್ಕೆ ಮಡಚುವ ಐಫೋನ್​ ​ಮಾರುಕಟ್ಟೆಗೆ!
Apples foldable
  • Share this:
ಈಗಾಗಲೇ ಆ್ಯಂಡ್ರಾಯ್ಡ್​​ ಮಡಚುವ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿದೆ. ಅದರಂತೆ ಜನಪ್ರಿಯ ಆ್ಯಪಲ್​ ಕಂಪೆನಿ ಕೂಡ ಮಡಚುವ ಐಫೋನ್​ ಅನ್ನು ಸಿದ್ಧಪಡಿಸುತ್ತಿದೆ. ಇದೀಗ ಐಫೋನ್​ ಪೋಲ್ಡೆಡ್​​ ಸ್ಮಾರ್ಟ್​ಫೋನ್​ 2023ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗುತ್ತಿದೆ.

ವಿಶ್ಲೇಷಕ ಮಿಂಗ್​ -ಚಿ ಕುವೊ ಅವರು ಐಫೊನ್​ ಮಡಚುವ ಫೋನ್​​ 2023ರಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದ್ದಾರೆ. ಮ್ಯಾಕ್​ರೂಮರ್ಸ್​​​​ ವರದಿ ಪ್ರಕಾರ ಮಡಚುವ ಐಫೋನ್​ 2023ರಲ್ಲಿ ಪ್ರಾರಂಭವಾಗಬಹುದು. ಮತ್ತು ಇದರ ಡಿಸ್​ಪ್ಲೇ 7.5 ರಿಂದ 8 ಇಂಚಿನ ಡಿಸ್​ಪ್ಲೇ ಹೊಂದಿದೆ ಎಂದಿದೆ.

ಆ್ಯಪಲ್​​ ಮಡಚುವ ಐಫೋನ್​ ಅಧಿಕೃತವಾಗಿ ಪ್ರಾರಂಭವಾಗಿಲ್ಲ ಎಂದು ವಿಶ್ಲೇಷಕ ಕುವೊ ತಿಳಿಸಿದ್ದಾರೆ. ಆದರೆ ಅದರ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಅಭಿವೃದ್ಧಿಯ ಸುಗಮದಲ್ಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಐಫೋನ್​ ಮಡಚುವ ಫೋನನ್ನು ನಿರ್ಮಿಸಲು ಎಲ್​ಜಿ ಸಂಸ್ಥೆ ಸಹಾಯ ಮಾಡುತ್ತಿದೆ ಎಂಬ ವದಂತಿಯೊಂದು ಹರಡಿತ್ತು. ಅದರ ಜೊತೆಗೆ ಸ್ಯಾಮ್​ಸಂಗ್​ ಹೆಸರು ಕೇಳಿಬಂದಿತ್ತು.
Youtube Video

ಸ್ಯಾಮ್​ಸಂಗ್​ ಈಗಾಗಲೇ ಗ್ಯಾಲಕ್ಸಿ ಝೆಡ್​ ಫ್ಲಿಪ್​ ಸ್ಮಾರ್ಟ್​ಫೋನನ್ನು ಪರಿಚಯಿಸಿದೆ. ಅಂದಹಾಗೆಯೇ, ಮಡಚುವ ಐಫೋನ್​ನಲ್ಲಿ ಸೆರಾಮಿಕ್​ ಶೀಲ್ಡ್​ ಗ್ಲಾಸ್​​ ಬಳಸಲಾಗುತ್ತಿದೆ.
Published by: Harshith AS
First published: March 3, 2021, 10:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories