HOME » NEWS » Tech » APPLE WWDC EVENT 2021 KEY ANNOUNCEMENTS APPLE IOS 15 MACOS MONTEREY WATCHOS 8 AND NEW PRIVACY FEATURES STG HG

ಆ್ಯಪಲ್ ಐಫೋನ್, ಮ್ಯಾಕ್ ಮತ್ತು ಆ್ಯಪಲ್ ವಾಚ್‍ನ ಹೊಸ ಸಾಫ್ಟ್‌ವೇರ್‌ನಲ್ಲಿ ಏನಿದೆ ವಿಶೇಷ..? 

WWDC 2021 highlights: ಐಓಎಸ್15 ನೂತನ ಅಧಿಕೃತ ಐಫೋನ್ ಅಪರೇಟಿಂಗ್ ಆವೃತ್ತಿ. ಉತ್ತಮವಾದ ಫೇಸ್ ಟೈಮ್ ಸೇರಿದಂತೆ ಹಲವಾರು ಸುಧಾರಣೆಗಳನ್ನು ಹೊಸ ಐಓಎಸ್ ಅಪ್‍ಡೆಟ್ ಹೊಂದಿದೆ.

news18-kannada
Updated:June 9, 2021, 4:00 PM IST
ಆ್ಯಪಲ್ ಐಫೋನ್, ಮ್ಯಾಕ್ ಮತ್ತು ಆ್ಯಪಲ್ ವಾಚ್‍ನ ಹೊಸ ಸಾಫ್ಟ್‌ವೇರ್‌ನಲ್ಲಿ ಏನಿದೆ ವಿಶೇಷ..? 
Apple WWDC Event 2021
  • Share this:

ಆ್ಯಪಲ್ ತನ್ನ ಡಿಜಿಟಲ್- ಓನ್ಲಿ ವಾರ್ಷಿಕ ವಿಶ್ವ ವ್ಯಾಪಿ ಸಭೆಯನ್ನು ಸೋಮವಾರ ಪ್ರಾರಂಭಿಸಿತು. ಆ ಸಭೆಯಲ್ಲಿ ಐಫೋನ್, ಮ್ಯಾಕ್ ಮತ್ತು ಆ್ಯಪಲ್ ವಾಚ್‍ನ ಹೊಸ ಸಾಫ್ಟ್‌ವೇರ್‌ ಅನ್ನು ಅನಾವರಣಗೊಳಿಸಿತು. ಈ ಸಭೆಯಲ್ಲಿ ಘೋಷಿಸಲಾದ ಎಲ್ಲಾ ಸಾಫ್ಟ್‍ವೇರ್‌ಗಳು ಡೆವಲಪರ್‌ಗಳಿಗೆ ತಕ್ಷಣವೇ ಲಭ್ಯವಾಗಲಿವೆ. ಈ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ.


ಐಓಎಸ್15



ಐಓಎಸ್15 ನೂತನ ಅಧಿಕೃತ ಐಫೋನ್ ಅಪರೇಟಿಂಗ್ ಆವೃತ್ತಿ. ಉತ್ತಮವಾದ ಫೇಸ್ ಟೈಮ್ ಸೇರಿದಂತೆ ಹಲವಾರು ಸುಧಾರಣೆಗಳನ್ನು ಹೊಸ ಐಓಎಸ್ ಅಪ್‍ಡೆಟ್ ಹೊಂದಿದೆ. ಈಗ ಫೇಸ್‍ಟೈಮ್, ಪ್ರಾದೇಶಿಕ ಆಡಿಯೋ, ಪೋಟ್ರೆಟ್ ಮೋಡ್‍ನಿಂದ ಬ್ಲರ್ ಬ್ಯಾಕ್‍ಗ್ರೌಂಡ್ಸ್​​ವರೆಗೆ, ಮತ್ತು ಒಂದೇ ಸಮಯದಲ್ಲಿ ಅನೇಕ ಜನರೊಂದಿಗೆ ಮಾತನಾಡಬಲ್ಲ ಗ್ರಿಡ್ ವ್ಯೂ ಹೊಂದಿದೆ. ಅದಲ್ಲದೇ, ಬಳಕೆದಾರರು ಫೇಸ್ ಟೈಮ್ ಕರೆಗಳ ವೇಳಾಪಟ್ಟಿ ಲಿಂಕ್‍ಗಳನ್ನು ಕಳುಹಿಸಲು ಸಾಧ್ಯವಾಗುವಂತಹ ಹೊಸ ವ್ಯವಸ್ಥೆಯನ್ನು ಕೂಡ ಆ್ಯಪಲ್ ರೂಪಿಸಿದೆ. ಶೇರ್ ಟೈಮ್ ಎಂಬ ಹೊಸ ಫೀಚರ್ ಮೂಲಕ ಬಳಕೆದಾರರು ತಮ್ಮ ಸ್ಕ್ರೀನ್ ಅಥವಾ ಸಂಗೀತವನ್ನು ಇತರರೊಂದಿಗೆ ಶೇರ್ ಮಾಡಬಹುದು. ಇನ್ನೊಂದು ದೊಡ್ಡ ಸುದ್ದಿ ಏನೆಂದರೆ, ಈಗ ಫೇಸ್‍ಟೈಮ್ ಆ್ಯಂಡ್ರಾಯ್ಡ್ ಮತ್ತು ವಿಂಡೋಸ್‍ಗೆ ಬ್ರೌಸರ್ ಮೂಲಕ ಸಪೋರ್ಟ್ ಮಾಡಬಲ್ಲದು.


ಐ ಮೆಸೇಜನ್ನು ಸಹ ಪುನರ್ ವಿನ್ಯಾಸ ಮಾಡಲಾಗುತ್ತಿದೆ. “ಶೇರ್ಡ್‌ ವಿತ್ ಯು” ಎಂಬ ಈ ಹೊಸ ಫೀಚರ್ ಜನರು ನಿಮಗೆ ಕಳುಹಿಸಿದ ಲಿಂಕ್‍ಗಳನ್ನು ಸೇವ್ ಮಾಡಿ, ಒಂದೇ ಜಾಗದಲ್ಲಿ ಸಂಗ್ರಹಿಸಿಡುತ್ತದೆ. ಇದು ಸಫಾರಿ, ಆ್ಯಪಲ್ ಮ್ಯೂಸಿಕ್, ಆ್ಯಪಲ್ ಟೀವಿ ಮತ್ತು ಆ್ಯಪಲ್ ಪಾಡ್‌ಕ್ಯಾಸ್ಟ್‌ಗಳ ಜೊತೆ ಕೂಡ ಕಾರ್ಯ ನಿರ್ವಹಿಸುತ್ತದೆ.


ಚಟುವಟಿಕೆಗಳ ಆಧಾರದ ಮೇಲೆ ಐಓಎಸ್‍ನ ನೋಟಿಫಿಕೇಶನ್‍ಗಳನ್ನು ಕೂಡ ಮರುವಿನ್ಯಾಸ ಮಾಡಲಾಗಿದೆ. ಅದು ಲಾಕ್‍ಸ್ಕ್ರೀನ್‍ನಲ್ಲಿ ಹೊಚ್ಚ ಹೊಸ ವಿನ್ಯಾಸದೊಂದಿಗೆ ಸ್ಪಷ್ಟವಾಗಿ ಕಂಡುಬರಲಿದೆ. ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ವಿಧದ ನೋಟಿಫಿಕೇಶನ್‍ಗಳನ್ನು ಸೆಟ್ ಮಾಡಿಕೊಳ್ಳಬಹುದು.


ಐಓಎಸ್ 15, ಕ್ಯಾಮರಾದಲ್ಲೂ ಸುಧಾರಣೆ ತಂದಿದೆ. ಫೋಟೊಗಳನ್ನು ಗ್ಯಾಲರಿಗೆ ಸೇರಿಸುವ ಮತ್ತು ಆ್ಯಪಲ್ ಮ್ಯೂಸಿಕ್‍ನಿಂದ ಸಂಗೀತ ಸೇರಿಸುವ ಮೆಮೋರೀಸ್ ಎಂಬ ಫೀಚರ್ ಕೂಡ ಇರಲಿದೆ. ಆ್ಯಪಲ್ ವ್ಯಾಲೆಟ್ ಆ್ಯಪನ್ನು ಕೂಡ ವಿಸ್ತರಿಸಲಿದೆ.


ಇದಲ್ಲದೆ, ಆ್ಯಪಲ್ ತನ್ನ ಮ್ಯಾಪ್ ಸಾಫ್ಟ್‌ವೇರನ್ನು 3ಡಿ ಡೇಟಾದೊಂದಿದೆ ನವೀಕರಿಸಿದೆ. ಇಂದಿನ ಪ್ರಕಟಣೆಯಲ್ಲಿ, “ಕನ್‍ವರ್ಸೇಶನ್ ಬೂಸ್ಟ್” ಎಂಬ ಹೊಸ ಏರ್‌ ಪಾಡ್ ಫಿಚರ್ ಬಗ್ಗೆ ತಿಳಿಸಲಾಗುವುದು.

ಐಪ್ಯಾಡ್ ಓಎಸ್15


ಐಓಎಸ್‍ನಂತೆ, ಐಪ್ಯಾಡ್ ಓಎಸ್ ಕೂಡ ಹೊಸ ಫೀಚರ್‌ಗಳನ್ನು ಹೊಂದಲಿದೆ. ಐಪ್ಯಾಡ್ ಓಎಸ್15 ಬಳಕೆದಾರರು, ಐಪ್ಯಾಡ್ ಆ್ಯಪ್‍ಗಳನ್ನು , ವಿಜೆಟ್ಸ್‌ಗಳನ್ನು ಸ್ಕ್ರೀನ್‍ನಲ್ಲಿ ಹಾಕುವ ಮೂಲಕ ಮರು ಹೊಂದಿಸಬಹುದು ಮತ್ತು ಐಓಎಸ್‍ಗಾಗಿ ಕಳೆದ ವರ್ಷ ಘೋಷಿಸಿದ ಅ್ಯಪ್ ಲೈಬ್ರೆರಿ ಫೀಚರ್ ಸ್ವಯಂಚಾಲಿತವಾಗಿ ಅಪ್ಲಿಕೇಶನ್‍ಗಳನ್ನು ಆಯೋಜಿಸುತ್ತದೆ. ಐಪ್ಯಾಡ್ ಪರದೆಯಲ್ಲಿ ಎರಡು ಆ್ಯಪ್‍ಗಳನ್ನು ಸುಲಭವಾಗಿ ಅಕ್ಕಪಕ್ಕ ಇಡಬಲ್ಲ ಹೊಸ ಮಲ್ಟಿ ಟಾಸ್ಕಿಂಗ್ ಇಂಟರ್‌ ಫೇಸನ್ನು ಕೂಡ ಆ್ಯಪಲ್ ಪರಿಚಯಿಸಿತು. ಆ್ಯಪಲ್ ಪೆನ್ಸಿಲ್ ಬಳಸಿ, ನೋಟ್ಸ್ ಮಾಡಿಕೊಳ್ಳಬಹುದಾದ ಕ್ವಿಕ್ ನೋಟ್ಸ್ ಎಂಬ ಫೀಚರನ್ನು ಕೂಡ ಪರಿಚಯಿಸಲಾಗಿದೆ. ಹೊಸ ನವೀಕೃತ ಅನುವಾದ ಆ್ಯಪನ್ನು ಕೂಡ ಘೋಷಿಸಲಾಗಿದೆ.


ಹೊಸ ಪ್ರೈವೆಸಿ ಫೀಚರ್ ಐಕ್ಲೌಡ್+ ಘೋಷಣೆ


ಕಂಪೆನಿಯು ಐಕ್ಲೌಡ್+ ಎಂಬ ಹೊಸ ಪ್ರೈವೆಸಿ ಫೀಚರ್ ಅನ್ನು ಘೋಷಿಸಿದ್ದು, ಆನ್‍ಲೈನ್ ಖಾಸಗಿತನಕ್ಕೆ ಸಂಬಂಧಿಸಿದ ಹೆಚ್ಚುವರಿ ಫೀಚರ್‌ಗಳನ್ನು ಹೊಂದಿದೆ. ಐಕ್ಲೌಡ್+ನ ದೊಡ್ಡ ವೈಶಿಷ್ಟ್ಯ ಏನೆಂದರೆ ಖಾಸಗಿ ರಿಲೇ, ಅದು ವಿಪಿಎನ್ ರೀತಿಯಲ್ಲೇ ಕೆಲಸ ಮಾಡುತ್ತದೆ.


ವಾಚ್ ಓಎಸ್8


ವಾಚ್ ಓಎಸ್8 ಒಂದು ದೊಡ್ಡ ವಾಚ್ ಸಾಫ್ಟ್‌ವೇರ್‌ ಆಗಿದ್ದು, ಹೊಸ ವಾಚ್ ಫೇಸಸ್‍ಗಳನ್ನು ಹೊಂದಿರುವುದು ಮಾತ್ರವಲ್ಲ, ಬಳಕೆದಾರರು ವಾಚ್‍ನಲ್ಲಿ ತಮ್ಮ ಬೆರಳಿನ ಮೂಲಕ ಸಂದೇಶ ಬರೆದು ಕಳುಹಿಸುವಂತಹ ಹೊಚ್ಚ ಹೊಸ ಫೀಚರ್‌ಗಳನ್ನು ಹೊಂದಿದೆ. ನಿದ್ದೆ ಮಾಡುವಾಗ ಉಸಿರಾಟದ ಪ್ರಮಾಣವನ್ನು ಪತ್ತೆ ಹಚ್ಚುವ ಮೈಂಡ್‍ಫುಲ್‍ನೆಸ್ ಎಂಬ ಉಸಿರಾಟದ ಆ್ಯಪ್, ವ್ಯಾಯಾಮಕ್ಕಾಗಿ ವರ್ಕೌಟ್ ಆ್ಯಪ್ ಕೂಡ ಇದರಲ್ಲಿದೆ.


ಹೋಮ್‍ಪಾಡ್ ಮಿನಿ ಸ್ಟೀರಿಯೋ ಸ್ಪೀಕರ್‌ನಂತೆ ಕೆಲಸ ಮಾಡುತ್ತದೆ. ಬಳಕೆದಾರರು ಆ್ಯಪಲ್ ಟೀವಿಯಲ್ಲಿ ಸಂಗೀತ ಅಥವಾ ಸಿನಿಮಾ ತೋರಿಸುವಂತೆ ಹೋಮ್‍ಪಾಡ್ ಮಿನಿಗೆ ಸೂಚನೆ ನೀಡಬಹುದು. ಆ್ಯಪಲ್ ಟೀವಿಯ ಸಂಪರ್ಕದಲ್ಲಿದ್ದಾಗ ಹೋಮ್‍ಪಾಡ್ ಮಿನಿ ಸ್ಟೀರಿಯೋ ಸ್ಪೀಕರ್‌ನಂತೆ ಕೂಡ ಈಗ ಬಳಸಲು ಸಾಧ್ಯವಿದೆ.



Youtube Video


ಮ್ಯಾಕ್ ಓಎಸ್ ಮಾಂಟೆರೆ


ಆ್ಯಪಲ್ ಮ್ಯಾಕ್ ಓಎಸ್‍ನ ಹೊಸ ಆವೃತ್ತಿಯನ್ನು ಘೋಷಿಸಿದ್ದು, ಅದನ್ನು ಮಾಂಟೆರೆ ಎಂದು ಹೆಸರಿಸಲಾಗಿದೆ. ಮ್ಯಾಕ್ ಮತ್ತು ಐಪ್ಯಾಡ್‍ನಲ್ಲಿ ಒಂದೇ ಮೌಸ್ ಮತ್ತು ಕೀಬೋರ್ಡನ್ನು ಬಳಸುವುದು ಸೇರಿದಂತೆ ಹಲವಾರು ಹೊಸ ಫೀಚರ್‌ಗಳನ್ನು ಮ್ಯಾಕ್ ಓಎಸ್ ಮಾಂಟೆರೆ ಒಳಗೊಂಡಿದೆ. ಆ್ಯಪಲ್ ಸಫಾರಿ ವೆಬ್ ಬ್ರೌಸರನ್ನು ಕೂಡ ಮರುವಿನ್ಯಾಸ ಮಾಡಲಾಗಿದೆ. ಆ್ಯಪಲ್, ಮ್ಯಾಕ್ ಇಂಟರ್‌ಫೇಸ್‌ಗೆ ಹೊಸ ಶಾರ್ಟ್‍ಕಟ್ಟನ್ನು ಕೂಡ ಸೇರಿಸಿದೆ.


First published: June 9, 2021, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories