ಮಡಚಬಲ್ಲ ಆ್ಯಪಲ್ ಫೋನು; ಇನ್ನೆರಡು ವರ್ಷದಲ್ಲಿ ಮಾರುಕಟ್ಟೆಗೆ


Updated:March 26, 2018, 7:07 PM IST
ಮಡಚಬಲ್ಲ ಆ್ಯಪಲ್ ಫೋನು; ಇನ್ನೆರಡು ವರ್ಷದಲ್ಲಿ ಮಾರುಕಟ್ಟೆಗೆ
ಆ್ಯಪಲ್ ಸಂಸ್ಥೆ

Updated: March 26, 2018, 7:07 PM IST
- ನ್ಯೂಸ್18 ಕನ್ನಡ

ನವದೆಹಲಿ(ಮಾ. 26): ಐಪ್ಯಾಡ್ ಟ್ಯಾಬ್​ಗಳ ರೀತಿ ಬಳಸಬಹುದಾದ ಐಫೋನ್​ಗಳನ್ನು ತಯಾರಿಸಲು ಆ್ಯಪಲ್ ಸಂಸ್ಥೆ ಮುಂದಾಗಿದೆ. ಪುಸ್ತಕದ ರೀತಿಯಲ್ಲಿ ಮಡಚಬಹುದಾದ ಈ ಫೋನುಗಳು 2020ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಐಫೋನ್​ನ ವಿವಿಧ ಪೂರೈಕೆದಾರರ ಜೊತೆ ಈ ನಿಟ್ಟಿನಲ್ಲಿ ಆ್ಯಪಲ್ ಸಂಸ್ಥೆ ಮಾತುಕತೆ ನಡೆಸುತ್ತಿದೆ. ಈ ಸಪ್ಲಯರ್​ಗಳು ನೀಡಿರುವ ಮಾಹಿತಿ ಪ್ರಕಾರ, ಹೊಸ ಐಫೋನನ್ನು ಟ್ಯಾಬ್ಲೆಟ್ ರೀತಿಯಲ್ಲೂ ಉಪಯೋಗಿಸಬಹುದಾಗಿದೆ. ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇಂಥದ್ದೊಂದು ವಿಶೇಷ ಫೀಚರ್ ಇರುವ ಐಫೋನ್​ನ ತಯಾರಿಕೆಗೆ ಏಷ್ಯಾದ ಎಲ್​ಜಿ ಸಂಸ್ಥೆ ಜೊತೆ ಆ್ಯಪಲ್ ಜಂಟಿಯಾಗಿ ಕೆಲಸ ಮಾಡುತ್ತಿದೆ.

ಈ ಫೋಲ್ಡಬಲ್ ಫೋನ್ ತಂತ್ರಜ್ಞಾನನವು ಆ್ಯಪಲ್​ನಿಂದಲೇ ಅಭಿವೃದ್ಧಿಪಡಿಸಲಾಗಿದ್ದು, ಇದರ ಪೇಟೆಂಟ್ ಹಕ್ಕಿಗಾಗಿ ಅರ್ಜಿ ಸಲ್ಲಿಸಿದೆ. ಈ ಫೋನನ್ನು ಪುಸ್ತಕದ ರೀತಿಯಲ್ಲಿ ಮಡಚಬಹುದು. ಜೊತೆಗೆ, ಇದರ ಸ್ಕ್ರೀನ್ ಅನ್ನೂ ಕೂಡ ಅಲ್ಪಸ್ವಲ್ಪ ಬಗ್ಗಿಸಲು ಸಾಧ್ಯವಿದೆ ಎನ್ನಲಾಗಿದೆ.
First published:March 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ