iPhone 13 ಸೀರೀಸ್‌ನಲ್ಲಿ ಚಾರ್ಜರ್ ಯಾಕೆ ಇಲ್ಲ? Apple ಸಂಸ್ಥೆಯ ತನಿಖೆ ಮಾಡುತ್ತಿರೋ ಬ್ರೆಜಿಲ್

iPhone 13 series: ಕಳೆದ ವರ್ಷದಂತೆ ಈ ಬಾರಿ ಕೂಡ ಆ್ಯಪಲ್ ತನ್ನ ಐಫೋನ್ ಸೀರೀಸ್‌ನಲ್ಲಿ ಪವರ್ ಅಡಾಪ್ಟರ್ ಕೈಬಿಟ್ಟಿದ್ದು, ಅದನ್ನು ಪ್ರತ್ಯೇಕವಾಗಿ ಮಾರಾಟ ಮಾಡುವುದಕ್ಕಾಗಿ ಆ್ಯಪಲ್ ಸಂಸ್ಥೆಯನ್ನು ತನಿಖೆ ಮಾಡುವುದಾಗಿ ನಿಯಂತ್ರಕ ಮಂಡಳಿ ತಿಳಿಸಿದೆ.

iPhone 13

iPhone 13

  • Share this:
    ಆ್ಯಪಲ್‌ನ ಅತ್ಯಾಧುನಿಕ ಐಫೋನ್ 13 ಸೀರೀಸ್ (iPhone 13 series) ಇದೀಗ ಭಾರತ ಹಾಗೂ ಕೆಲವೊಂದು ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಮಾರುಕಟ್ಟೆಗಳ ಪಟ್ಟಿಯಲ್ಲಿ ಬ್ರೆಜಿಲ್ ಹೆಸರು ಇಲ್ಲದಿರುವುದು ಗಮನಾರ್ಹವಾದ ಅಂಶವಾಗಿದ್ದು ಆ್ಯಪಲ್ (Apple)‌ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಪವರ್ ಅಡಾಪ್ಟರ್ ಒದಗಿಸದೇ ಇರುವುದು ಬ್ರೆಜಿಲ್‌ನ ಅಸಂತುಷ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಆ್ಯಪಲ್‌ನ ಈ ನಿರ್ಧಾರದಿಂದ ಕುಪಿತಗೊಂಡಿರುವ ಬ್ರೆಜಿಲ್‌ನ ಗ್ರಾಹಕ ನಿಯಂತ್ರಕ ಮಂಡಳಿಯು ಪವರ್ ಅಡಾಪ್ಟರ್ ಕೈಬಿಟ್ಟಿರುವುದರ ಆ್ಯಪಲ್‌ನ ನಿರ್ಧಾರವನ್ನು ಪ್ರಶ್ನಿಸುವುದಾಗಿ ತಿಳಿಸಿದೆ. ಬ್ರೆಜಿಲ್‌ನ ನಿಯಂತ್ರಕ ಮಂಡಳಿಯು ಆ್ಯಪಲ್ ಮೇಲೆ ಕುಪಿತಗೊಂಡಿರುವುದು ಪವರ್ ಅಡಾಪ್ಟರ್ ಒದಗಿಸದೇ ಇರುವ ವಿಷಯಕ್ಕಾಗಿದೆ. ಹೌದು ಕಳೆದ ವರ್ಷದಂತೆ ಈ ಬಾರಿ ಕೂಡ ಆ್ಯಪಲ್ ತನ್ನ ಐಫೋನ್ ಸೀರೀಸ್‌ನಲ್ಲಿ ಪವರ್ ಅಡಾಪ್ಟರ್ ಕೈಬಿಟ್ಟಿದ್ದು, ಅದನ್ನು ಪ್ರತ್ಯೇಕವಾಗಿ ಮಾರಾಟ ಮಾಡುವುದಕ್ಕಾಗಿ ಆ್ಯಪಲ್ ಸಂಸ್ಥೆಯನ್ನು ತನಿಖೆ ಮಾಡುವುದಾಗಿ ನಿಯಂತ್ರಕ ಮಂಡಳಿ ತಿಳಿಸಿದೆ.

    ಟೆಕ್‌ಟ್ಯುಡೋ ವರದಿಯ ಪ್ರಕಾರ, ಬ್ರೆಜಿಲ್‌ನ ಗ್ರಾಹಕ ಸಂರಕ್ಷಣ ನಿಯಂತ್ರಕ ಕಾಯ್ದೆ ಸಾವೊ ಪಾಲೊ ಮೂಲದ ಪ್ರೋಕಾನ್- SP ಆ್ಯಪಲ್ ಮಾತ್ರವಲ್ಲದೆ ಸ್ಯಾಮ್‌ಸಂಗ್ (Samsung) ಕಂಪನಿಗೆ ಕೂಡ ತನ್ನ ಸ್ಮಾರ್ಟ್‌ಫೋನ್‌ಗಳ ರೀಟೇಲ್ ಬಾಕ್ಸ್‌ಗಳಲ್ಲಿ ಪವರ್ ಅಡಾಪ್ಟರ್ ನೀಡದಿರುವುದಕ್ಕೆ ಸೂಚನೆ ನೀಡುವುದಾಗಿ ತಿಳಿಸಿದೆ. ಕಳೆದ ವರ್ಷ ಐಫೋನ್ 12 ಸೀರೀಸ್‌ನೊಂದಿಗೆ (Iphone 12 Series) ಆ್ಯಪಲ್ ಪವರ್ ಅಡಾಪ್ಟರ್ ಒದಗಿಸುವುದನ್ನು ನಿಲ್ಲಿಸಿದೆ. ಸ್ವಾಭಾವಿಕವಾಗಿಯೇ ಆ್ಯಪಲ್‌ನ ಈ ನಿರ್ಧಾರದ ಕುರಿತು ಭಾರಿ ವಿರೋಧ ವ್ಯಕ್ತವಾಗಿತ್ತು. ಪರಿಸರದ ಮೇಲೆ ಧನಾತ್ಮಕ ಪರಿಣಾಮವನ್ನು ತನ್ನ ನಿರ್ಧಾರವು ಬೀರುತ್ತದೆ ಎಂದು ತಿಳಿಸಿ ಕಂಪನಿಯು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು.

    ಆ್ಯಪಲ್ ಸ್ಮಾರ್ಟ್‌ಫೋನ್ ಬಾಕ್ಸ್‌ನಲ್ಲಿ ಲೈಟ್ನಿಂಗ್ ಕೇಬಲ್ ಒದಗಿಸುವುದರಿಂದ ಹೊಸ ಐಫೋನ್ ಚಾರ್ಜ್ ಮಾಡುವಲ್ಲಿ ಎದುರಾಗುವ ಸಮಸ್ಯೆಗಳು ಕಡಿಮೆಯಾದರೂ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ಹೇಳಲಾಗುವುದಿಲ್ಲ. ಈ ವ್ಯವಸ್ಥೆಯು ಗ್ರಾಹಕರಿಗೆ ತೊಂದರೆಗಳನ್ನುಂಟು ಮಾಡಬಹುದು ಎಂಬ ಕಾರಣಕ್ಕಾಗಿ ಬ್ರೆಜಿಲ್‌ನ ಪ್ರೊಕಾನ್- SP, ತಪ್ಪುದಾರಿಗೆಳೆಯುವ ಜಾಹೀರಾತು, ಚಾರ್ಜರ್ ಇಲ್ಲದೆಯೇ ಡಿವೈಸ್ ಮಾರಾಟ ಮಾಡುವುದು, ನ್ಯಾಯಸಮ್ಮತವಲ್ಲದ ನಿಯಮಗಳು ಮೊದಲಾದ ಕಾರಣಗಳನ್ನು ಮುಂದಿರಿಸಿಕೊಂಡು ಆ್ಯಪಲ್‌ಗೆ $2 ಮಿಲಿಯನ್ ದಂಡ ವಿಧಿಸಿತು.

    ಪ್ರೊಕಾನ್- SP, ಚಾರ್ಜರ್ ಅನ್ನು ಯಾವ ಆಧಾರದ ಮೇಲೆ ರಿಟೇಲ್ ಬಾಕ್ಸ್‌ನಿಂದ ಕೈಬಿಡಲಾಗಿದೆ ಎಂಬುದಾಗಿ ಆ್ಯಪಲ್ ಅನ್ನು ಪ್ರಶ್ನಿಸಿತು. ನವೆಂಬರ್‌ನಲ್ಲಿ ಚಾರ್ಜರ್ ಕೈಬಿಟ್ಟಿದ್ದರಿಂದ ಯಾವುದೇ “ಪರಿಸರ ಪ್ರಯೋಜನವನ್ನು” ಕಂಪನಿ ಪ್ರದರ್ಶಿಸಲಿಲ್ಲ ಎಂಬುದಾಗಿ ನಿಯಂತ್ರಕರು ತಿಳಿಸಿದರು. ಹಾಗೂ ಡಿಸೆಂಬರ್‌ನಲ್ಲಿ ಚಾರ್ಜರ್ ಅನ್ನು ಬಾಕ್ಸ್‌ನಲ್ಲಿ ಇರಿಸುವಂತೆ ಅದು ಆ್ಯಪಲ್‌ಗೆ ನಿರ್ದೇಶಿಸಿತು.

    ಪ್ರೊಕಾನ್ SP ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಫರ್ನಾಂಡೊ ಕ್ಯಾಪೆಜ್ ಟೆಕ್ ಟುಡೊಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಫೋನ್ ಹಾಗೂ ಚಾರ್ಜರ್ ಅನ್ನು ಪ್ರತ್ಯೇಕವಾಗಿ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ ಏಕೆಂದರೆ ಸಂಸ್ಥೆಯು ಡಿವೈಸ್‌ನೊಂದಿಗೆ ಬರುವ ಪವರ್ ಅಡಾಪ್ಟರ್‌ನ ಮೂಲಕವೇ ಚಾರ್ಜ್ ಮಾಡಬೇಕಾಗುತ್ತದೆ ಹಾಗೂ ಇದಕ್ಕಾಗಿಯೇ ಗ್ರಾಹಕರು ಡಿವೈಸ್ ಹಾಗೂ ಅಡಾಪ್ಟರ್‌ ಎರಡಕ್ಕೂ ಪಾವತಿ ಮಾಡಲು ಸಿದ್ಧರಿರುತ್ತಾರೆ. ಇದೀಗ ಕ್ಯಾಪೆಜ್ ಆ್ಯಪಲ್ ಹಾಗೂ ಸ್ಯಾಮ್‌ಸಂಗ್ ಎರಡೂ ಕಂಪನಿಗಳಿಗೆ ನೋಟೀಸ್ ಕಳುಹಿಸುತ್ತಿದ್ದು ಅವರು ಹೇಳುವ ಪ್ರಕಾರ, ರಿಟೇಲ್ ಬಾಕ್ಸ್‌ನಲ್ಲಿ ಪವರ್ ಅಡಾಪ್ಟರ್ ಇಲ್ಲದಿರುವ ಕುರಿತು ಕಂಪನಿಯು ವೆಬ್‌ಸೈಟ್‌ಗಳಲ್ಲಿ ಒದಗಿಸಿರುವ ಮಾಹಿತಿಯು ಸಾಕಷ್ಟಿಲ್ಲ ಎಂದಾಗಿದೆ.

    Read Also: You Broadband | 900 ರೂ. ಗೆ 200Mbps ಪ್ಲ್ಯಾನ್‌ ಒದಗಿಸುವ ಯು ಬ್ರಾಡ್‌ಬ್ಯಾಂಡ್‌: ಜಿಯೋಫೈಬರ್ ಮತ್ತು ಟಾಟಾ ಸ್ಕೈ ಯೋಜನೆ ಹೇಗಿದೆ?

    ಈ ವಿವಾದಗಳ ಕುರಿತು ಆ್ಯಪಲ್ ಯಾವುದೇ ಹೇಳಿಕೆಯನ್ನು ನೀಡಿಲ್ಲ ಆದರೆ ಅದು ಮಾರ್ಚ್‌ನಲ್ಲಿ ಈ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ದೇಶದಲ್ಲಿರುವ (ಬ್ರೆಜಿಲ್) ಎಲ್ಲಾ ಐಫೋನ್‌ಗಳು ಅನಾಟಲ್ ಮಾನಂಡಗಳನ್ನು ಅನುಸರಿಸುವ ಮೂರನೇ-ವ್ಯಕ್ತಿ ಚಾರ್ಜರ್‌ಗಳು (ಬೇರೆ ಬ್ರ್ಯಾಂಡ್ ಚಾರ್ಜರ್‌ಗಳು) ಲಭ್ಯವಿರುವ ಚಾರ್ಜರ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತವೆ. ಅನಾಟಲ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS), ಅಥವಾ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC) ಗೆ ಹೋಲುತ್ತದೆ ಎಂದು ತಿಳಿಸಿತ್ತು.
    First published: