Apple watch, ಸ್ಮಾರ್ಟ್​ ವಾಚ್​ ಬಳಸುವವರೇ ಕೇಳಿ! ಈ ವೈಶಿಷ್ಟ್ಯ ಆನ್​ ಮಾಡಿ.. ಆರೋಗ್ಯ ಕಾಪಾಡಿಕೊಳ್ಳಿ

Apple Watch: ಕಳೆದ ಅಕ್ಟೋಬರ್‌ನಲ್ಲಿಯೇ ಅವಳಿಗೆ ಕೆಲ ಲಕ್ಷಣಗಳು ಕಂಡುಬಂದಿತ್ತಾದರೂ ಅವಳ ಫೋನ್ ಯಾವುದೇ ಸೂಚನೆ ನೀಡದ ಕಾರಣ ಅವಳು ಅವು ದಣಿವಿನಿಂದಾಗುತ್ತಿರಬಹುದೆಂದು ಸುಮ್ಮನಿದ್ದಳು. ಆದರೆ, ಆ ಸಮಸ್ಯೆ ಉಲ್ಬಣವಾಗುತ್ತ ಕೊನೆಯಲ್ಲಿ ಡಿಸೆಂಬರ್‌ನಲ್ಲಿ ಅವಳು ವೈದ್ಯರ ಭೇಟಿ ಮಾಡಿದ್ದಳು.

Apple Watch / ಆ್ಯಪಲ್ ವಾಚ್

Apple Watch / ಆ್ಯಪಲ್ ವಾಚ್

 • Share this:
  ಇಂದು ಸ್ಮಾರ್ಟ್​ ಫೋನುಗಳು (Smart phone) ಹಾಗೂ ಸ್ಮಾರ್ಟ್​ ವಾಚುಗಳ (Smart watch) ತಂತ್ರಜ್ಞಾನ ಎಷ್ಟರ ಮಟ್ಟಿಗೆ ಪ್ರಗತಿಯಾಗಿದೆ ಎಂದರೆ ನಿಮ್ಮ ಆರೋಗ್ಯದಲ್ಲಾಗುವ (Health) ಚಿಕ್ಕಪುಟ್ಟ ಏರುಪೇರುಗಳನ್ನೂ ಸಹ ಅವು ನಿಮಗೆ ಸೂಚಿಸುತ್ತವೆ. ಹಾಗಾಗಿ, ಆ್ಯಪಲ್ ವಾಚುಗಳನ್ನು (Apple watch) ಜೀವರಕ್ಷಕ (Lifeguard) ಎಂದು ಸಹ ಜನರು ಕೊಂಡಾಡಿದ್ದಾರೆ. ಹಲವು ಜನರಿಗೆ ಆ್ಯಪಲ್ ವಾಚುಗಳು ಮುಂಚಿತವಾಗಿಯೇ ಕೆಲವು ಅವರ ಆರೋಗ್ಯದಲ್ಲಾದ ಚಿಕ್ಕ ಅಡೆ-ತಡೆಗಳ ಬಗ್ಗೆ ಸೂಚನೆ ನೀಡಿ ಅವು ಮುಂದೆ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿ (Health problem) ಪರಿವರ್ತಿತವಾಗದಂತೆ ತಡೆದ ಉದಾಹರಣೆಗಳೂ ಇವೆ. ಆದರೆ, ಆಸ್ಟ್ರೇಲಿಯಾದ (Australia) ಮಹಿಳೆಯೊಬ್ಬಳು ಆ್ಯಪಲ್ ವಾಚ್ ಬಳಸುತ್ತಿದ್ದರೂ ಸಹ ತೀವ್ರವಾದ ಆರೋಗ್ಯ ಸಮಸ್ಯೆ ಎದುರಿಸಬೇಕಾಯಿತು. ಹಾಗಾದರೆ, ಆ್ಯಪಲ್ ವಾಚ್ ಈ ಕುರಿತು ಅವಳಿಗೆ ಯಾವ ಸೂಚನೆಯನ್ನೂ ನೀಡಲಿಲ್ಲವೆ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವವಾಗಬಹುದು. ಅದಕ್ಕೆ, ಉತ್ತರ ಹೌದು.

  ಅವಳು ಬಳಸುತ್ತಿದ್ದ ಆ್ಯಪಲ್ ವಾಚ್ ಅವಳ ಆರೋಗ್ಯದ ಮೇಲೆ ನಿಗಾ ಇಟ್ಟಿತ್ತಾದರೂ ಅವಳಲ್ಲಾಗುತ್ತಿದ್ದ ಏರುಪೇರುಗಳ ಸೂಚನೆ ಅವಳಿಗೆ ಸಿಗುತ್ತಲೇ ಇರಲಿಲ್ಲ. ಹಾಗಾಗಿ ಅವಳು ತನ್ನ ಆರೋಗ್ಯದಲ್ಲಾಗುತ್ತಿದ್ದ ಕೆಲ ಸಮಸ್ಯೆಗಳು ದಣಿವಿನಿಂದಾಗುತ್ತಿರಬಹುದೆಂದು ಭಾವಿಸಿ ನಿರ್ಲಕ್ಷಿಸಿದ್ದಳು. ಕೊನೆಗೆ ಅವು ತೀವ್ರವಾದ ಮೇಲೆ ಅವಳು ವೈದ್ಯರನ್ನು ಸಂಪರ್ಕಿಸಬೇಕಾಯಿತು. ಆಗ ಅವಳಿಗೆ ಗೊತ್ತಾದ ವಿಷಯವೆಂದರೆ ಅವಳು ವಿರಳವಾದ ಥೈರಾಯ್ಡ್‌ ಸಮಸ್ಯೆಯೊಂದರಿಂದ ಬಳಲುತ್ತಿದ್ದಳು. ಕಳೆದ ಅಕ್ಟೋಬರ್‌ನಲ್ಲಿಯೇ ಅವಳಿಗೆ ಕೆಲ ಲಕ್ಷಣಗಳು ಕಂಡುಬಂದಿತ್ತಾದರೂ ಅವಳ ಫೋನ್ ಯಾವುದೇ ಸೂಚನೆ ನೀಡದ ಕಾರಣ ಅವಳು ಅವು ದಣಿವಿನಿಂದಾಗುತ್ತಿರಬಹುದೆಂದು ಸುಮ್ಮನಿದ್ದಳು. ಆದರೆ, ಆ ಸಮಸ್ಯೆ ಉಲ್ಬಣವಾಗುತ್ತ ಕೊನೆಯಲ್ಲಿ ಡಿಸೆಂಬರ್‌ನಲ್ಲಿ ಅವಳು ವೈದ್ಯರ ಭೇಟಿ ಮಾಡಿದ್ದಳು.

  ಆಸ್ಪತ್ರೆಯಲ್ಲಿ ಹಲವು ಪರೀಕ್ಷೆಗಳಿಗೆ ಒಳಗಾದ ಮೇಲೆ ಗೊತ್ತಾಗಿದ್ದೆಂದರೆ ಅವಳು ಥೈರಾಯ್ಡ್‌ ಹೆಮಿಯಾಜಿನಸಿಸ್ (Thyroid hemiagenesis) ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿದ್ದಳು. ಹಾಗಾಗಿ ಅವಳು ಆಗಾಗ ತೂಕ ಹೆಚ್ಚುವಿಕೆ, ಬಳಲುವಿಕೆ, ನಿಶ್ಯಕ್ತತೆ ಮುಂತಾದವುಗಳಿಂದ ಪೀಡಿತರಾಗಿದ್ದರು. ಆದರೆ ಈ ಎಲ್ಲ ಸೂಚನೆಗಳು ಅವಳಿಗೆ ಮುಂಚಿತವಾಗಿಯೇ ವಾಚ್ ನೀಡಲಿಲ್ಲವೇಕೆ..?

  ಅದಕ್ಕೆ ಸರಳ ಉತ್ತರವೆಂದರೆ ಅವರು ಆ್ಯಪ್‌ನಲ್ಲಿ ಆರೋಗ್ಯ ಸಂಬಂಧಿ ಸೂಚನೆಗಳನ್ನು ನೀಡುವ ನೊಟಿಫಿಕೇಶನ್ ವೈಶಿಷ್ಟ್ಯವನ್ನು ಸಕ್ರೀಯಗೊಳಿಸಿದ್ದಿಲ್ಲ. ಹೌದು, ವಾಚ್ ಅವಳ ಆರೋಗ್ಯದಲ್ಲಾಗುತ್ತಿದ್ದ ಸ್ಥಿತಿಗತಿಗಳನ್ನು ದಾಖಲಿಸುತ್ತಿತ್ತಾದರೂ ನೊಟಿಫಿಕೇಶನ್ ಸಕ್ರೀಯವಾಗಿರದ ಕಾರಣ ಆ ಸೂಚನೆಗಳು ಅವಳಿಗೆ ತಲುಪುತ್ತಲೇ ಇರಲಿಲ್ಲ. ನಂತರ ಈ ಬಗ್ಗೆ ವಿಷಯವನ್ನರಿತ ಆಸ್ಟ್ರೇಲಿಯಾದಲ್ಲಿ ನರ್ಸಿಂಗ್ ಮಾಡುತ್ತಿರುವ ವಿದ್ಯಾರ್ಥಿನಿಯಾಗಿರುವ ಲೌರೆನ್ ಈಗ ಈ ಬಗ್ಗೆ ಎಲ್ಲರಿಗೂ ಎಚ್ಚರಿಕೆಯಿಂದಿರುವಂತೆ ವಿನಂತಿಸಿಕೊಂಡಿದ್ದಾರೆ.

  ಅವರು ಪ್ರತಿಯೊಬ್ಬ ಆ್ಯಪಲ್ ಫೋನ್ ಹಾಗೂ ವಾಚ್ ಬಳಕೆದಾರರು ಅದರ ಆ್ಯಪ್‌ನ ನೊಟಿಫಿಕೇಶನ್ ಅನ್ನು ಆನ್ ಮಾಡಿಟ್ಟುಕೊಳ್ಳುವಂತೆ ವಿನಂತಿಸಿದ್ದು ಇದರಿಂದ ಮೊದಲ ಹಂತದಲ್ಲೇ ನಿಮಗೆ ಆರೋಗ್ಯದಲ್ಲುಂಟಾಗುವ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಮಾಹಿತಿ ದೊರೆತು ಅವುಗಳಿಗೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಸಮಸ್ಯೆ ಗಂಭೀರವಾಗದಂತೆ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದೆಂದು ಹೇಳಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೆ ಸಂಬಂಧಿಸಿದಂತೆ ಆ್ಯಪಲ್ ವಾಚ್ ಒಂದರ ಮೇಲೆಯೆ ಸಂಪೂರ್ಣವಾಗಿ ಅವಲಂಬಿತಲಾಗಲು ಸಾಧ್ಯವಿಲ್ಲ, ಆದರೆ, ನಿಮ್ಮ ಆರೋಗ್ಯ ತೀವ್ರವಾಗಿ ಹದಗೆಡುವ ಮುಂಚೆಯೇ ಅದರ ಬಗ್ಗೆ ನಿಮಗೆ ಸೂಚನೆಗಳು ಇದರ ಮೂಲಕ ಸಿಗುತ್ತವೆ ಎಂದಿದ್ದಾರೆ. ಲೌರೆನ್ ಪ್ರಕರಣದಲ್ಲಿ ಅವಳ ದೇಹದಲ್ಲಿ ಆಮ್ಲಜನಕದ ಪ್ರಮಾಣ ತೀವ್ರವಾಗಿ ಕುಸಿದಿತ್ತು. ಆ ನಂತರ ಈ ಅಂಶವು ದಾಖಲಾಗಿರುವುದನ್ನು ಅವರು ಗಮನಿಸಿದ್ದರು.

  ಸಾಮಾನ್ಯವಾಗಿ ಆ್ಯಪಲ್ ವಾಚ್‌ನಲ್ಲಿರುವ ಆ್ಯಪ್‌ ಮೂಲಕ ನಿಮ್ಮ ದೇಹವು ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಪಡೆಯುತ್ತಿದೆ ಎಂಬುದರ ಬಗ್ಗೆ ನಿಗಾ ಇಟ್ಟು ಅಂಕಿ-ಅಂಶಗಳ ದಾಖಲೆ ಪಡೆಯಬಹುದು. ಆ್ಯಪಲ್ ಬಳಕೆದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

  ಇದನ್ನು ಓದಿ: FASTag‌ ಖರೀದಿಸಿಲ್ವಾ? Paytm ಮೂಲಕ ಸುಲಭವಾಗಿ ಸಿಗುತ್ತೆ ನೋಡಿ

  ಆ್ಯಪಲ್ ವಾಚ್ ಮೂಲಕ ಸೂಚನೆ ಹೇಗೆ ಪಡೆಯಬಹುದು?

  -ನಿಮ್ಮ ಹೃದಯಗತಿಯ ಬಗ್ಗೆ ನಿಮಗೆ ಸೂಚನೆ ಬೇಕಿದ್ದರೆ ಮೊದಲಿಗೆ ನಿಮ್ಮ ಐಫೋನ್‌ನಲ್ಲಿರುವ ಆ್ಯಪಲ್ ವಾಚ್ ಆ್ಯಪ್‌ ಅನ್ನು ತೆರೆಯಿರಿ

  - ನಂತರ ಅಲ್ಲಿ ನೀಡಲಾಗಿರುವ ಹಂತಗಳನ್ನು ಪೂರ್ಣಗೊಳಿಸಿ. ಯಾವುದೇ ಹಂತಗಳು ಕಂಡುಬರದಿದ್ದಲ್ಲಿ ಬ್ರೌಸರ್ ಮೇಲೆ ಟ್ಯಾಪ್ ಮಾಡಿ ರೆಸ್ಪಿರೇಟರಿ ಮೇಲೆ ಕ್ಲಿಕ್ ಮಾಡಿ

  - ತದನಂತರ ಬ್ಲಡ್ ಆಕ್ಸಿಜನ್ ಮೇಲೆ ಕ್ಲಿಕ್ ಮಾಡಿ ಅದನ್ನು ಎನೇಬಲ್ ಮಾಡಿಟ್ಟುಕೊಳ್ಳಿ

  - ಈಗ ನಿಮ್ಮ ಆ್ಯಪಲ್ ವಾಚ್‌ನಲ್ಲಿರುವ ಬ್ಲಡ್ ಆಕ್ಸಿಜನ್ ಆ್ಯಪ್‌ ತೆರೆದು ನಿಮ್ಮಲ್ಲಿರುವ ಪ್ರಮಾಣಗಳ ಬಗ್ಗೆ ತಿಳಿಯಿರಿ.

  ಇದನ್ನು ಓದಿ: Instagram‌ನಲ್ಲಿ ನೀವು ಕಳುಹಿಸುವ ಸಂದೇಶ ಬೇರೆಯವರಿಗೆ ಕಿರಿಕಿರಿ ಮಾಡಬಾರದೇ? ‘ಮ್ಯೂಟೆಡ್ ಡಿಎಂ’ ಆಯ್ಕೆ ಮಾಡಿ

  ಬ್ಲಡ್ ಆಕ್ಸಿಜನ್ ಪ್ರಮಾಣ ಪಡೆಯಲು ಮಾಡಬೇಕಾದ ವಿಧಾನಗಳು

  -ಮೊದಲಿಗೆ ಆ್ಯಪಲ್ ವಾಚ್ ನಿಮ್ಮ ಕೈಯಲ್ಲಿ ಸರಿಯಾಗಿ ಕಟ್ಟಲ್ಪಟ್ಟಿರಬೇಕು.

  -ಬ್ಲಡ್ ಆಕ್ಸಿಜನ್ ಆ್ಯಪ್‌ ತೆರೆಯಿರಿ.

  -ಅಲುಗಾಡದಂತೆ ನಿಂತು ನಿಮ್ಮ ಕೈಮುಷ್ಟಿಯು ನೇರವಾಗಿರುವಂತೆ ನೋಡಿಕೊಳ್ಳಿ. ಆ್ಯಪಲ್ ವಾಚಿನ ಡಯಲ್ ಮೇಲ್ಮುಖದಲ್ಲಿರಬೇಕು.

  -ಸ್ಟಾರ್ಟ್ ಮೇಲೆ ಟ್ಯಾಪ್ ಮಾಡಿ ಹಾಗೆ ಅಲುಗಾಡದಂತೆ ಹದಿನೈದು ಸೆಕೆಂಡುಗಳ ಕಾಲ ಕಾಯಿರಿ.

  - ಫಲಿತಾಂಶ ನಿಮಗೆ ಬರುತ್ತದೆ. ತದನಂತರ ಡನ್ ಮೇಲ್ ಕ್ಲಿಕ್ ಮಾಡಿ.
  Published by:Harshith AS
  First published: