Apple ವಾಚ್ ಸೀರೀಸ್ 7 ಭಾರತದಲ್ಲಿ ಬೆಲೆ ಎಷ್ಟು..? ಲಭ್ಯತೆ ಯಾವಾಗ..? ಪೂರ್ಣ ವಿವರ ಇಲ್ಲಿದೆ

Apple Watch Series 7: ಆ್ಯಪಲ್ ಸ್ಮಾರ್ಟ್‌ವಾಚ್ ದೇಶದಲ್ಲಿ ಅಕ್ಟೋಬರ್ 15 ರಿಂದ ಮಾರಾಟಕ್ಕೆ ಲಭ್ಯವಾಗುತ್ತಿದ್ದು ವಾರಕ್ಕಿಂತ ಮೊದಲೇ ಪ್ರೀ ಆರ್ಡರ್‌ಗಳು ಲಭ್ಯವಾಗಲಿದೆ. ಆ್ಯಪಲ್ ವಾಚ್ ಸೀರೀಸ್ 7 ದೊಡ್ಡ ಡಿಸ್‌ಪ್ಲೇ ಒಳಗೊಂಡಿದ್ದು ಆ್ಯಪಲ್‌ನ ಅತ್ಯಾಧುನಿಕ ವಾಚ್ಒಎಸ್ 8 ಹೊಂದಿದೆ.

Apple Watch Series 7

Apple Watch Series 7

 • Share this:
  Apple Watch Series 7: ಆ್ಯಪಲ್ ಕಂಪನಿಯು ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಈವೆಂಟ್‌ನಲ್ಲಿ ಐಫೋನ್ 13 ಸೀರೀಸ್‌ನೊಂದಿಗೆ (Iphone 13 Series)  ಆ್ಯಪಲ್ ವಾಚ್ ಸೀರೀಸ್ 7 (Apple watchSeries 7) ಲಾಂಚ್ ಮಾಡಿತ್ತು. ಆದರೆ ಆ ಸಮಯದಲ್ಲಿ ಈ ವಾಚ್‌ನ ಬೆಲೆ ಹಾಗೂ ಆ್ಯಪಲ್ ವಾಚ್ ಅನ್ನು ಯಾವಾಗ ಖರೀದಿಸಬಹುದು ಎಂಬುದರ ಕುರಿತು ಯಾವುದೇ ಅಪ್‌ಡೇಟ್‌ಗಳು ದೊರೆತಿರಲಿಲ್ಲ. ಆದರೆ ಈಗ ಆ್ಯಪಲ್ ವಾಚ್‌ 7 ಸೀರೀಸ್‌ ಭಾರತೀಯ ಬೆಲೆ ಹಾಗೂ ಲಭ್ಯತೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅತ್ಯಾಧುನಿಕ ಆ್ಯಪಲ್ ಸ್ಮಾರ್ಟ್‌ವಾಚ್ ದೇಶದಲ್ಲಿ ಅಕ್ಟೋಬರ್ 15 ರಿಂದ ಮಾರಾಟಕ್ಕೆ ಲಭ್ಯವಾಗುತ್ತಿದ್ದು ವಾರಕ್ಕಿಂತ ಮೊದಲೇ ಪ್ರೀ ಆರ್ಡರ್‌ಗಳು ಲಭ್ಯವಾಗಲಿದೆ. ಆ್ಯಪಲ್ ವಾಚ್ ಸೀರೀಸ್ 7 ದೊಡ್ಡ ಡಿಸ್‌ಪ್ಲೇ ಒಳಗೊಂಡಿದ್ದು ಆ್ಯಪಲ್‌ನ ಅತ್ಯಾಧುನಿಕ ವಾಚ್ಒಎಸ್ 8 ಹೊಂದಿದೆ.

  ಬೆಲೆ, ಫೀಚರ್‌ಗಳು ಹೇಗಿವೆ:

  ಆ್ಯಪಲ್ ವಾಚ್ ಸೀರೀಸ್ 7 ಬೆಲೆ 41,900 ರೂ. ನಿಂದ ನಿಗದಿಪಡಿಸಲಾಗಿದೆ. ಅಕ್ಟೋಬರ್ 8, 1PM IST ಯಿಂದ ಭಾರತದಲ್ಲಿ ಪ್ರೀ-ಆರ್ಡರ್ ಆರಂಭಗೊಳ್ಳಲಿದೆ. ಇನ್ನು ಆ್ಯಪಲ್ ಸ್ಟೋರ್‌ಗಳಲ್ಲಿ ವಾಚ್ ಅಕ್ಟೋಬರ್ 15 ರಿಂದ ಲಭ್ಯವಾಗಲಿದೆ. ಭಾರತದೊಂದಿಗೆ ಆ್ಯಪಲ್ ಕಂಪನಿಯು ತನ್ನ ಆ್ಯಪಲ್ ವಾಚ್ ಸೀರೀಸ್ 7 ಅನ್ನು ಆಸ್ಟ್ರೇಲಿಯ, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಜಪಾನ್, ಮೆಕ್ಸಿಕೋ, ರಷ್ಯಾ, ದಕ್ಷಿಣ ಕೊರಿಯಾ, ಯುಎಇ, ಇಂಗ್ಲೆಂಡ್ ಹೀಗೆ 50ಕ್ಕೂ ಹೆಚ್ಚಿನ ದೇಶಗಳಲ್ಲಿ ಹಾಗೂ ಪ್ರದೇಶಗಳಲ್ಲಿ ಬಿಡುಗಡೆ ಮಾಡಲಿದೆ.

  ಆ್ಯಪಲ್ ವಾಚ್ ಸೀರೀಸ್ 7 ಐದು ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಹಸಿರು, ಮಧ್ಯರಾತ್ರಿ ಬಣ್ಣ (ಮಿಡ್‌ನೈಟ್), ನ್ಯೂ ಬ್ಲೂ, ಸ್ಟಾರ್‌ಲೈಟ್, ಕೆಂಪು ಇದರೊಂದಿಗೆ ಸ್ಪೇಸ್ ಬ್ಲ್ಯಾಕ್ ಟೈಟಾನಿಯಂ ಹಾಗೂ ಟೈಟಾನಿಯಂ ಬಣ್ಣಗಳಲ್ಲಿ ವಾಚ್ ಬಳಕೆದಾರರಿಗೆ ದೊರೆಯಲಿದೆ.

  Read Also: Telegram: ಫೇಸ್​ಬುಕ್​ ತಾತ್ಕಾಲಿಕ ಸ್ಥಗಿತದಿಂದ ವಾಟ್ಸ್​ಆ್ಯಪ್​ಗೆ ನಷ್ಟ, ಟೆಲಿಗ್ರಾಂಗೆ ಲಾಭ!

  ಫ್ಲಿಪ್‌ಕಾರ್ಟ್‌ನಲ್ಲಿ ಉಲ್ಲೇಖಿಸಿರುವ ಬೆಲೆಗಳ ವಿವರ:

  ಆ್ಯಪಲ್ ಮಾಡೆಲ್-ಪ್ರಕಾರದ ಬೆಲೆಗಳನ್ನು ಇನ್ನೂ ಆ್ಯಪಲ್ ವಾಚ್ ಸೀರೀಸ್ 7ಗಾಗಿ ಪ್ರಕಟಿಸಿಲ್ಲ. ಆದರೂ, ಫ್ಲಿಪ್‌ಕಾರ್ಟ್ ಆ್ಯಪಲ್ ವಾಚ್ ಸೀರೀಸ್ 7 ಮಾಡೆಲ್ ಪ್ರಕಾರದ ಬೆಲೆಗಳನ್ನು ಬಹಿರಂಗಪಡಿಸಿತ್ತು. ಇ-ಕಾಮರ್ಸ್ ತಾಣ ಉಲ್ಲೇಖಿಸಿರುವಂತೆ ಆ್ಯಪಲ್ ವಾಚ್ ಸೀರೀಸ್ 7ನ 41mm ಗಾತ್ರದ ಆವೃತ್ತಿಯು 41,900 ರೂ. ಗಳಲ್ಲಿ ದೊರೆಯಲಿದೆ. ಅಂತೆಯೇ ಸೈಟ್ ತಿಳಿಸಿರುವ ಪ್ರಕಾರ ಜಿಪಿಎಸ್ ಮಾಡೆಲ್‌ನ 45mm ಆವೃತ್ತಿಯು 44,900 ರೂ. ಗಳಲ್ಲಿ ಲಭ್ಯವಾಗಲಿದೆ ಎಂದಾಗಿದೆ. ಇನ್ನು ಆ್ಯಪಲ್ ವಾಚ್ ಸೀರೀಸ್ 7 GPS + ಸೆಲ್ಯುಲಾರ್ ಮಾಡೆಲ್ 41mm ಆವೃತ್ತಿ ಬೆಲೆ 50,900 ರೂ ಆಗಿದ್ದರೆ 45mm ಆವೃತ್ತಿಯು 53,900 ರೂ. ಗೆ ಲಭ್ಯವಾಗಲಿದೆ ಎಂದು ರೀಟೇಲ್ ತಾಣ ತಿಳಿಸಿದೆ. ಈ ವಾಚ್‌ಗಳೆಲ್ಲವೂ ಅಲ್ಯುಮಿನಿಯಂ ಮಾಡೆಲ್‌ಗಳಾಗಿವೆ.

  ಆ್ಯಪಲ್ ವಾಚ್ ಸೀರೀಸ್ 7ನ ಸ್ಟೈನ್‌ಲೆಸ್ ಸ್ಟೀಲ್ ಮಾಡೆಲ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಿಸ್ಟ್ ಮಾಡಿರುವಂತೆ ಈ ಕೆಳಗಿನ ಬೆಲೆಗಳನ್ನು ಹೊಂದಿವೆ. 41mm GPS + ಸೆಲ್ಯುಲಾರ್ ಆವೃತ್ತಿಯು 69,000 ರೂ. ಗೆ ಲಭ್ಯವಾಗಲಿದೆ ಹಾಗೂ 45mm GPS + ಸೆಲ್ಯುಲಾರ್ ಆವೃತ್ತಿಯ ಬೆಲೆ 73,900 ರೂ ಆಗಿದೆ. ನೀರು ಹಾಗೂ ಧೂಳು ಪ್ರತಿರೋಧಕ್ಕಾಗಿ ಆ್ಯಪಲ್ ವಾಚ್ ಸೀರೀಸ್ 7 IP6X ಪ್ರಮಾಣೀಕರಣ ಹೊಂದಿದೆ.
  First published: