Apple ವಾಚ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ? ಈ ಟಿಪ್ಸ್‌ಗಳನ್ನು ಅನುಸರಿಸಿ ನೋಡಿ

Apple Watch : ದೋಷ ಕಂಡುಬರುವುದು ಹಾಗೂ ಡಿವೈಸ್‌ಗಳು ಸ್ಪಂದಿಸದೇ ಇರುವುದು ಸರ್ವೇ ಸಾಮಾನ್ಯವಾದ ಸಮಸ್ಯೆಗಳಾಗಿವೆ. ಇದಕ್ಕಾಗಿ ನೀವು ಗಾಬರಿ ಪಡಬೇಕಾಗಿಲ್ಲ ಅಥವಾ ಹೆದರಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಆ್ಯಪಲ್ ವಾಚ್‌ನಲ್ಲಿರುವ ಆ್ಯಪ್ ಫ್ರೋಜನ್ ಆಗಿದ್ದಲ್ಲಿ ಈ ಹಂತಗಳನ್ನು ಅನುಸರಿಸಿ

Apple Watch

Apple Watch

  • Share this:
    ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಆ್ಯಪಲ್ ವಾಚ್ ತನ್ನದೇ ಹೆಗ್ಗುರುತನ್ನ ಸೃಷ್ಟಿಸಿಕೊಂಡಿದೆ. ಆದರೂ ಇತರ ಕೆಲವು ಗ್ಯಾಜೆಟ್‌ಗಳಂತೆಯೇ ಆ್ಯಪಲ್ ವಾಚ್‌ಗಳಲ್ಲೂ ಏನಾದರೂ ದೋಷಗಳು ಕಂಡುಬರುವುದು ಸರ್ವೇ ಸಾಮಾನ್ಯವಾಗಿದೆ. ನಿಮ್ಮ ಆ್ಯಪಲ್ ವಾಚ್‌ನಲ್ಲಿ ಯಾವುದಾದರೂ ದೋಷಗಳನ್ನು ನೀವು ಎದುರಿಸುತ್ತಿದ್ದಲ್ಲಿ (ಇತ್ತೀಚೆಗೆ ಬಿಡುಗಡೆಗೊಂಡ ಆ್ಯಪಲ್ ವಾಚ್ ಸೀರೀಸ್ 7 ಒಳಗೊಂಡಂತೆ) ನಿಮ್ಮ ನಿರೀಕ್ಷಯಂತೆಯೇ ವಾಚ್ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ವಾಚ್‌ನಲ್ಲಿರುವ ದೋಷವನ್ನು ಪರಿಹರಿಸಲು ಈ ಕೆಳಗಿನ ಹಂತಗಳನ್ನು ನೀವು ಅನುಸರಿಸಬಹುದಾಗಿದೆ. 

    ಹೆಚ್ಚಿನ ಸ್ಮಾರ್ಟ್ ಡಿವೈಸ್‌ಗಳು ಹಾಗೂ ಕಂಪ್ಯೂಟರ್‌ಗಳಲ್ಲಿ ದೋಷ ಕಂಡುಬರುವುದು ಹಾಗೂ ಡಿವೈಸ್‌ಗಳು ಸ್ಪಂದಿಸದೇ ಇರುವುದು ಸರ್ವೇ ಸಾಮಾನ್ಯವಾದ ಸಮಸ್ಯೆಗಳಾಗಿವೆ. ಇದಕ್ಕಾಗಿ ನೀವು ಗಾಬರಿ ಪಡಬೇಕಾಗಿಲ್ಲ ಅಥವಾ ಹೆದರಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಆ್ಯಪಲ್ ವಾಚ್‌ನಲ್ಲಿರುವ ಆ್ಯಪ್ ಫ್ರೋಜನ್ ಆಗಿದ್ದಲ್ಲಿ ಈ ಹಂತಗಳನ್ನು ಅನುಸರಿಸಿ

    ಹಂತ 1: ಡಿಜಿಟಲ್ ಕ್ರೌನ್ ಒತ್ತಿ- ನಿಮ್ಮ ವಾಚ್‌ನಲ್ಲಿರುವ ದೊಡ್ಡ ಚಕ್ರದಂತಿರುವ ಬಟನ್ ಅನ್ನು ಒತ್ತಿ ಹಾಗೂ ಹೋಮ್ ಸ್ಕ್ರೀನ್‌ಗೆ ಹಿಂತಿರುಗಿ. ಆ್ಯಪ್ ಅನ್ನು ಪುನಃ ಲಾಂಚ್ ಮಾಡಲು ಪ್ರಯತ್ನಿಸಿ.

    ಹಂತ 2: ಡಿಜಿಟಲ್ ಕ್ರೌನ್ ಕೆಳಗಿರುವ ಬಟನ್ - ಸ್ಲೈಡರ್‌ಗಳು ಕಾಣಿಸಿಕೊಳ್ಳುವವರೆಗೆ ಬದಿಯ ಬಟನ್ ಒತ್ತಿ ಹಿಡಿದುಕೊಳ್ಳುವ ಮೂಲಕ ಆ್ಯಪ್ ಅನ್ನು ಬಲವಂತವಾಗಿ ತ್ಯಜಿಸಲು ಪ್ರಯತ್ನಿಸಿ.

    ಹಂತ 3: ಇದೀಗ ಡಿಜಿಟಲ್ ಕ್ರೌನ್ ಒತ್ತಿ. ಇದು ನಿಮ್ಮನ್ನು ಹೋಮ್ ಸ್ಕ್ರೀನ್‌ಗೆ ಕರೆದೊಯ್ಯುತ್ತದೆ.

    ಆ್ಯಪಲ್ ವಾಚ್ ಮಂದವಾಗಿದ್ದರೆ ಹಾಗೂ ನಿಧಾನವಾಗಿ ಚಲಿಸುತ್ತಿದ್ದರೆ

    ಹಂತ 1: ನಿಮ್ಮ ಆ್ಯಪಲ್ ವಾಚ್ ಉತ್ತಮವಾಗಿ ಪ್ರತಿಕ್ರಿಯಿಸುತ್ತಿಲ್ಲ ಅಥವಾ ವಿಚಿತ್ರವಾಗಿ ವರ್ತಿಸುತ್ತಿದ್ದರೆ ಅದನ್ನು ರಿಸ್ಟಾರ್ಟ್ ಮಾಡಲು ಪ್ರಾರಂಭಿಸಿ.

    ಹಂತ 2: ಪವರ್ ಆಫ್ ಆಯ್ಕೆ ಗೋಚರಿಸುವವ ಮೆನು ಬರುವವರೆಗೆ ಬದಿ ಬಟನ್ ಅನ್ನು ಒತ್ತಿಹಿಡಿದುಕೊಳ್ಳಿ.

    ಹಂತ 3: ಪವರ್ ಆಫ್ ಆಯ್ಕೆಯನ್ನು ತಟ್ಟಿ ಹಾಗೂ ವಾಚ್ ಆಫ್ ಆಗುತ್ತದೆ.

    ಹಂತ 4: ಅದನ್ನು ಆನ್ ಮಾಡಲು ಬದಿಯ ಬಟನ್ ಅನ್ನು ಒತ್ತಿಹಿಡಿದುಕೊಳ್ಳಿ.

    ಹಂತ 5: ನಿಮ್ಮ ಸಮಸ್ಯೆ ಇನ್ನೂ ಪರಿಹಾರವಾಗದೇ ಇದ್ದರೆ, ಐಫೋನ್ ರಿಸ್ಟಾರ್ಟ್ ಮಾಡಲು ಪ್ರಯತ್ನಿಸಿ.

    ಇದನ್ನೂ ಓದಿ: Smartphone Tips: ಹಳೆ ಫೋನ್​​ನಿಂದ ಹೊಸ ಫೋನ್​​ಗೆ Numbers, Photos ವರ್ಗಾಹಿಸುವ ಸುಲಭ ವಿಧಾನ ಇಲ್ಲಿದೆ

    ಆ್ಯಪಲ್ ವಾಚ್ ಪ್ರತಿಕ್ರಿಯಿಸುತ್ತಿಲ್ಲ. ನೀವು ಅದನ್ನು ರಿಸ್ಟಾರ್ಟ್ ಮಾಡುವ ಪ್ರಯತ್ನಗಳಿಗೆ ಆ್ಯಪಲ್ ವಾಚ್ ಸ್ಪಂದಿಸುತ್ತಿಲ್ಲ ಎಂದಾದಲ್ಲಿ ಅದನ್ನು ಬಲವಂತವಾಗಿ ರಿಸ್ಟಾರ್ಟ್ ಮಾಡಬೇಕಾಗುತ್ತದೆ. ಹೀಗೆ ಮಾಡಲು, ಡಿಜಿಟಲ್ ಕ್ರೌನ್‌ ಹಾಗೂ ಸೈಡ್ ಬಟನ್ ಅನ್ನು ಕನಿಷ್ಠ ಪಕ್ಷ 10 ಸೆಕೆಂಡ್‌ಗಳ ಕಾಲ ಒತ್ತಿ ಹಿಡಿದುಕೊಳ್ಳಿ ಇದರಿಂದ ನಿಮ್ಮ ಆ್ಯಪಲ್ ವಾಚ್ ಸ್ವಯಂಚಾಲಿತವಾಗಿ ರಿಸ್ಟಾರ್ಟ್ ಆಗುತ್ತದೆ.

    ಆ್ಯಪಲ್ ವಾಚ್ ಅನ್ನು ಐಫೋನ್‌ಗೆ ಸಂಪರ್ಕಿಸಲು ಸಾಧ್ಯವಿಲ್ಲ. ಆ್ಯಪಲ್ ವಾಚ್ ಹಾಗೂ ಐಫೋನ್ ಅನ್ನು ಕನೆಕ್ಟ್ ಮಾಡಲು ಸಾಧ್ಯವಿಲ್ಲದಿದ್ದರೆ, ಈ ಹಂತಗಳನ್ನು ಅನುಸರಿಸಿ:

    ಹಂತ 1: ಮೊದಲಿಗೆ, ನಿಮ್ಮ ಐಫೋನ್‌ನಲ್ಲಿ ಬ್ಲ್ಯೂಟೂತ್ ಟಾಗಲ್ ಮಾಡಲು ಪ್ರಯತ್ನಿಸಿ. ಏರ್‌ಪ್ಲೇನ್ ಮೋಡ್ ಸಕ್ರಿಯಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿ.

    ಹಂತ 2: ನಿಮ್ಮ ಆ್ಯಪಲ್ ವಾಚ್ ಇನ್ನೂ ಫಿಕ್ಸ್ ಆಗಿಲ್ಲ ಎಂದಾದಲ್ಲಿ ನಿಮ್ಮ ಆ್ಯಪಲ್ ವಾಚ್ ಹಾಗೂ ಐಫೋನ್ ಎರಡನ್ನೂ ರಿಸ್ಟಾರ್ಟ್ ಮಾಡಲು ಪ್ರಯತ್ನಿಸಿ.

    ಒಮ್ಮೊಮ್ಮೆ ಸಾಫ್ಟ್‌ವೇರ್‌ನಲ್ಲಿ ದೋಷಗಳು ಇರುತ್ತವೆ. ನಿಮ್ಮ ಆ್ಯಪಲ್ ವಾಚ್ ದೋಷಮುಕ್ತವಾಗಿವೆ ಹಾಗೂ ಉತ್ತಮವಾಗಿ ಚಾಲನೆಯಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಲು, ಅದನ್ನು ಯಾವಾಗಲೂ ಅಪ್‌ಡೇಟ್ ಆಗಿ ಇರಿಸಿಕೊಳ್ಳಿ. ಈ ಎಲ್ಲಾ ಹಂತಗಳನ್ನು ಅನುಸರಿಸಿ ಕೂಡ ನಿಮ್ಮ ಆ್ಯಪಲ್ ವಾಚ್ ಸಾಮಾನ್ಯ ಸ್ಥಿತಿಗೆ ಮರಳಲಿಲ್ಲ ಎಂದಾದಲ್ಲಿ ಆ್ಯಪಲ್ ಬೆಂಬಲವನ್ನು ಸಂಪರ್ಕಿಸಬೇಕಾಗುತ್ತದೆ.
    Published by:Kavya V
    First published: