Apple Watch: ಅಪಘಾತದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯ ಜೀವ ಉಳಿಸಿದ ಆ್ಯಪಲ್ ವಾಚ್; ಹೇಗೆ ಗೊತ್ತಾ?

ಇನ್ನು ಮುಂದೆ ಯಾರಾದರೂ ರಸ್ತೆಯಲ್ಲೋ ಅಥವಾ ಇನಿತರ ಅಜ್ಞಾತ ಸ್ಥಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೆ ಅಥವಾ  ಅನಾರೋಗ್ಯ, ಅಪಘಾತದಿಂದಲೋ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರೆ ಅಂತಹ ಸಂದರ್ಭದಲ್ಲಿ ಈ ವಾಚ್​ಗಳು ನೆರವಿಗೆ ಬರಲಿವೆ.

ಮುಹಮ್ಮದ್ ಫಿತ್ರಿ

ಮುಹಮ್ಮದ್ ಫಿತ್ರಿ

  • Share this:
ಅಪಘಾತ (Accident) ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಅಪಘಾತ ಸಾಮಾನ್ಯ ಎನ್ನುವಂತಾಗಿವೆ. ಅಪಘಾತವಾದ ವ್ಯಕ್ತಿಯನ್ನು ಆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್​ಗಳಿಗೆ (Ambulance) ಆ ವೇಳೆ ಮಾಹಿತಿ ಕೊಡುವುದು ತುಂಬಾ ಮುಖ್ಯವಾಗಿರುತ್ತದೆ. ಆದರೆ, ಆ ಕೆಲಸವನ್ನು ಯಾರೂ ಮಾಡದಿದ್ದಾಗ ಅಪಘಾತಕ್ಕೆ ಒಳಗಾದ ವ್ಯಕ್ತಿ ಜೀವಕ್ಕೆ ಅಪಾಯ ಎದುರಾಗುತ್ತದೆ. ಆದರೆ, ತಂತ್ರಜ್ಞಾನ ಎಂಬುದು ಇದೀಗ ತುರ್ತು ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸುವಷ್ಟು ಮುಂದುವರೆದಿದೆ. ಇಲ್ಲಿ ಆಪಲ್ ವಾಚ್​ (Apple Watch) ತನ್ನ ಯಜಮಾನ ಅಪಘಾತದಿಂದ ಪ್ರಜ್ಞೆ ಕಳೆದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಸಂದರ್ಭದಲ್ಲಿ ಆ್ಯಪಲ್ ವಾಚ್ ತುರ್ತು ಸಂಖ್ಯೆಗೆ ಕರೆ ಮಾಡಿ ಆತನ ಜೀವವನ್ನು ಉಳಿಸಿರುವ ಘಟನೆ ನಡೆದಿದೆ.

ಮೋಟಾರ್ ಬೈಕ್ ಮತ್ತು ವ್ಯಾನ್ ನಡುವೆ ಅಪಘಾತ ಸಂಭವಿಸಿ 24 ವರ್ಷದ ಮುಹಮ್ಮದ್ ಫಿತ್ರಿ ಬೈಕ್​ನಿಂದ ನೆಲಕ್ಕೆ ಉರುಳಿ ಬಿದ್ದಿದ್ದಾರೆ. ಆ ಬಳಿಕ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಮುಹಮ್ಮದ್ ಸ್ಪಂದಿಸದೇ ಇದ್ದಾಗ ಆತ ಕಟ್ಟಿಕೊಂಡಿದ್ದ ಆ್ಯಪಲ್ ವಾಚ್ ತಕ್ಷಣ ಕಾರ್ಯಪ್ರವೃತ್ತವಾಗಿ ತುರ್ತು ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಿದೆ. ನಂತರ ಸಿಂಗಾಪುರ ಸಿವಿಲ್ ಡಿಫೆನ್ಸ್ ಫೋರ್ಸ್ ಸದಸ್ಯರು ಸ್ಥಳಕ್ಕೆ ಧಾವಿಸಿ ಮೋಟಾರ್ ಬೈಕ್ ಸವಾರನನ್ನು ಸ್ಥಳೀಯ ಖೂ ಟೆಕ್ ಪ್ಯೂಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದಲ್ಲಿ ಹಾನಿಗೆ ಒಳಗಾಗಿರುವ ಆ್ಯಪಲ್ ವಾಚ್.


ಸ್ಥಳೀಯ ವರದಿಗಳ ಪ್ರಕಾರ, ಈ ಘಟನೆಯನ್ನು ಪೊಲೀಸರು ಹಿಟ್ ಅಂಡ್ ರನ್ ಪ್ರಕರಣದಡಿ ತನಿಖೆ ನಡೆಸುತ್ತಿದ್ದಾರೆ. ಮುಹಮ್ಮದ್ ಕಟ್ಟಿಕೊಂಡಿದ್ದ ಆ್ಯಪಲ್ ವಾಚ್ ಸ್ವಯಂಚಾಲಿತವಾಗಿ ತುರ್ತು ಸೇವೆಗಳಿಗೆ ಕರೆ ಮಾಡಿದೆ. ಅದಷ್ಟೇ ಅಲ್ಲದೇ, ಮುಹಮ್ಮದ್​ನ ಗೆರ್ಲ್​ ಫ್ರೆಂಡ್​ ಸೇರಿದಂತೆ ಪ್ರಮುಖ ಕಾಂಟ್ಯಾಕ್ಟ್​ಗಳಿಗೆ ಕರೆ, ಎಚ್ಚರಿಕೆ ಸಂದೇಶ ನೀಡಿದೆ ಎಂದು ಲಿಯಾನ್ಹೆ ವನ್ಬಾವೊ ತಿಳಿಸಿದ್ದಾರೆ.

ಆ್ಯಪಲ್ ವಾಚಿನ ವಿಶೇಷವೇನು?

ಸರಣಿ ನಾಲ್ಕರಿಂದ ಆ್ಯಪಲ್ ವಾಚ್ ಮಾದರಿಗಳು ವ್ಯಕ್ತಿ ಬೀಳುವುದನ್ನು ಪತ್ತೆ ಮಾಡಲಿವೆ. ಮತ್ತು ಆ ವೇಳೆ ಎಚ್ಚರಿಕೆಯ ಶಬ್ದವನ್ನು ಮಾಡಲಿದೆ. ನಂತರ, ಕನಿಷ್ಠ ಒಂದು ನಿಮಿಷದವರೆಗೆ ಆ ವ್ಯಕ್ತಿ ತನ್ನ ಪ್ರಜ್ಞೆ ಕಳೆದುಕೊಂಡಿದ್ದರೆ, ಈ ವಾಚ್​ ತುರ್ತು ಸೇವೆಗಳನ್ನು ಹಾಗೂ ಆ ವ್ಯಕ್ತಿಯ ನಿರ್ದಿಷ್ಟ ಮೊಬೈಲ್​ ಸಂಖ್ಯೆಗಳನ್ನು ಸಂಪರ್ಕಿಸುತ್ತದೆ. ಸ್ಮಾರ್ಟ್ ವಾಚ್‌ಗಳ ಇತರ ತಯಾರಕರು ಈ ಕಾರ್ಯವನ್ನು ಪ್ರೋಗ್ರಾಂ ಮಾಡಿದ್ದಾರೆ.   ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 3 ನಂತಹ ಮಾದರಿಗಳಲ್ಲೂ ಈ ಸೇವೆ ಇದೆ.

ಇನ್ನು ಮುಂದೆ ಯಾರಾದರೂ ರಸ್ತೆಯಲ್ಲೋ ಅಥವಾ ಇನಿತರ ಅಜ್ಞಾತ ಸ್ಥಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೆ ಅಥವಾ  ಅನಾರೋಗ್ಯ, ಅಪಘಾತದಿಂದಲೋ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರೆ ಅಂತಹ ಸಂದರ್ಭದಲ್ಲಿ ಈ ವಾಚ್​ಗಳು ನೆರವಿಗೆ ಬರಲಿವೆ. ಸ್ವಲ್ಪ ದುಬಾರಿ ಎನಿಸಿದರೂ ಇವುಗಳು ಪ್ರಾಣವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿವೆ.

ಇದನ್ನು ಓದಿ: iPhone 13 ಸೀರೀಸ್‌ನಲ್ಲಿ ಚಾರ್ಜರ್ ಯಾಕೆ ಇಲ್ಲ? Apple ಸಂಸ್ಥೆಯ ತನಿಖೆ ಮಾಡುತ್ತಿರೋ ಬ್ರೆಜಿಲ್

ಐಫೋನ್ ಖರೀದಿಸಿದರೆ ಏರ್​ ಪಾಡ್ ಉಚಿತ

ದಸರಾ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ಹಲವು ಸ್ಮಾರ್ಟ್​ಫೋನ್​ ಕಂಪನಿಗಳು ಮತ್ತು ಆನ್ಲೈನ್​ ಇ- ಕಾಮರ್ಸ್​ ಮಳಿಗೆಗಳು ಗ್ರಾಹಕರಿಗಾಗಿ ಆಫರ್‌ಗಳನ್ನು ಮತ್ತು ರಿಯಾಯಿತಿಗಳನ್ನು ಪರಿಚಯಿಸಿದೆ. ಅದರಂತೆ ಐಫೋನ್ ಖರೀದಿದಾರರಿಗೆ ಆ್ಯಪಲ್​ ಕಂಪನಿ ಕೂಡ ಹಬ್ಬದ ಕೊಡುಗೆಯನ್ನು ಘೋಷಿಸಿದೆ. ಆ್ಯಪಲ್ ಸ್ಟೋರ್ ನಿಂದ IPhone  12 ಅಥವಾ Iphone 12 mini ಖರೀದಿಸಿದರೆ, ಉಚಿತವಾಗಿ ಏರ್‌ಪಾಡ್‌ಗಳನ್ನು (Airpod) ಖರೀದಿಸುವ ಅವಕಾಶ ನೀಡಲಿದೆ. ಒಂದು ವಾರಗಳ ಕಾಲ ಸೇಲ್​ ನಡೆಯಲಿದ್ದು, ಅಕ್ಟೋಬರ್ 7 ರಿಂದ ಆ್ಯಪಲ್​ ಫೆಸ್ಟಿವಲ್(Apple Festive Offer)  ಆಫರ್​ ಆರಂಭವಾಗಲಿದೆ. ಗ್ರಾಹಕರಿಗಾಗಿ ಆಕರ್ಷಕ ಕೊಡುಗೆ ನೀಡಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಮ್ಮ ವಾರ್ಷಿಕ ಹಬ್ಬದ ಆ್ಯಪಲ್​ ಐಫೋನ್​ಗಳ​ ಮೇಲಿನ ದರ ಕಡಿತ ಮಾರಾಟ ಮಾಡಿ ಮಾರಲಿದೆ.
Published by:HR Ramesh
First published: