Apple Watch: 34 ವರ್ಷದ ಭಾರತೀಯನ ಜೀವ ಉಳಿಸಿದ ಆ್ಯಪಲ್​ ವಾಚ್​!

Apple Watch: ಆ್ಯಪಲ್ ವಾಚ್ ಜೀವ ಉಳಿಸುವ ಸಾಧನವಾಗಿ ಬದಲಾಗುವ ಹಲವಾರು ಕಥೆಗಳನ್ನು ಕೇಳಿರಬಹುದು. ಅದರಂತೆ ಇದೀಗ ಮತ್ತೊಮ್ಮೆ ಅಂತಹದೇ ಘಟನೆ ನಡೆದಿದೆ. ಈ ಬಾರಿ ಆ್ಯಪಲ್ ವಾಚ್ 34 ವರ್ಷದ ಭಾರತೀಯ ಬಳಕೆದಾರನ ಜೀವ ಉಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆ್ಯಪಲ್ ವಾಚ್ (Apple Watch) ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಪರಿಣಾಮಕಾರಿ ಸ್ಮಾರ್ಟ್ ವಾಚ್ (Smart watch) ಆಗಿದೆ. ಇದು ಖಂಡಿತವಾಗಿಯೂ ದುಬಾರಿ ಬೆಲೆಯನ್ನು ಹೊಂದಿದೆ, ಬೆಲೆ ಜೊತೆಗೆ ಅದರ ಕೆಲವು ವೈಶಿಷ್ಟ್ಯಗಳು (Features) ಗ್ರಾಹಕರ ಮನಗೆದ್ದಿದೆ. ಅಂದಹಾಗೆಯೇ ಆ್ಯಪಲ್ ವಾಚ್ ಜೀವ ಉಳಿಸುವ ಸಾಧನವಾಗಿ ಬದಲಾಗುವ ಹಲವಾರು ಕಥೆಗಳನ್ನು ಕೇಳಿರಬಹುದು. ಅದರಂತೆ ಇದೀಗ ಮತ್ತೊಮ್ಮೆ ಅಂತಹದೇ ಘಟನೆ ನಡೆದಿದೆ. ಈ ಬಾರಿ ಆ್ಯಪಲ್ ವಾಚ್ 34 ವರ್ಷದ ಭಾರತೀಯ ಬಳಕೆದಾರನ ಜೀವ ಉಳಿಸಿದೆ.

    ಹರಿಯಾಣದ ಯಮುನಾ ನಗರದ ನಿವಾಸಿ 33 ವರ್ಷದ ನಿತೀಶ್ ಚೋಪ್ರಾ ಅವರು ಅಸೌಖ್ಯದಿಂದ ಬಳಲುತ್ತಿದ್ದರು, ಅವರಿಗೆ ಕಡಿಮೆ ಶಕ್ತಿಯ ಮಟ್ಟಗಳು ಮತ್ತು ಎದೆನೋವು ಹೊಂದಿದ್ದರು. ಹೀಗಾಗಿ ಪತ್ನಿ ನೇಹಾ ಅವರ ಆರೋಗ್ಯದ ಸರಿಯಾದ ಮಾಹಿತಿ ತಿಳಿದುಕೊಳ್ಳಲು ನಿತೀಶ್​ಗೆ ಕಳೆದ ವರ್ಷ ಉಡುಗೊರೆಯಾಗಿ ಆ್ಯಪಲ್ ವಾಚ್ 6 ನೀಡಿದ್ದರು. ಅದರಂತೆ ನಿತೀಶ್​​ ಆ ವಾಚ್​ ಅನ್ನು ಧರಿಸಿದ್ದರು.

    ಅನಾರೋಗ್ಯದಿಂದ ಬಳಸುತ್ತಿದ್ದ ನಿತೀಶ್​ ಅವರ ಆರೋಗ್ಯದ ಮಾಹಿತಿಯನ್ನು ಆ್ಯಪಲ್​ ವಾಚ್​ ನೀಡುತ್ತಿತ್ತು. ಇತ್ತೀಚೆಗೆ ಇಸಿಜಿ ಮಾಹಿತಿಯನ್ನು ಆರ್ಯಪಲ್​ ವಾಚ್​ ನೀಡಿದೆ ಮತ್ತು ಅದರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿರುವುದನ್ನು ಹೇಳಿದೆ. ಆ್ಯಪಲ್​ ವಾಚ್​ ನಿತೀಶ್​ಗಾದ ಆರೋಗ್ಯದ ಕುರಿತಾದ ಸರಿಯಾದ ಮಾಹಿತಿಯನ್ನು ಆ್ಯಪಲ್​ ವಾಚ್​ ತೋರಿಸಿದಂತೆಯೇ ಅವರು ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿದರು. ಆಸ್ಪತ್ರೆಯಲ್ಲಿ ಆಂಜಿಯೋಗ್ರಫಿ ಮಾಡಿದ ನಂತರ, ನಿತೇಶ್ ಅವರ ಅಪಧಮನಿಗಳಲ್ಲಿ 99.9 ಪ್ರತಿಶತದಷ್ಟು ತೊಂದರೆ ಕಾಣಿಸಿದೆ ಎಂದು ತಿಳಿದುಬಂತು.

    ಇದೀಗ ಆರೋಗ್ಯವಾಗಿರುವ ನಿತೇಶ್ ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆ್ಯಪಲ್ ವಾಚ್‌ನ ಈ ರೀತಿಯ ಗಂಭೀರ ವಿಷಯದ ಬಗ್ಗೆ ಎಚ್ಚರಿಸುವ ಸಾಮರ್ಥ್ಯದಿಂದ ಪ್ರೇರೇಪಿಸಲ್ಪಟ್ಟ ನೇಹಾ ಆಪಲ್ ಸಿಇಒ ಟಿಮ್ ಕುಕ್‌ಗೆ ಇಮೇಲ್ ಬರೆದು ಆ್ಯಪಲ್ ವಾಚ್ ತನ್ನ ಗಂಡನ ಜೀವವನ್ನು ಹೇಗೆ ಉಳಿಸಿತು ಎಂದು ತಿಳಿಸಿದರು.

    ಇದನ್ನೂ ಓದಿ: Activa Scooter​ಗೆ ಪರ್ಯಾಯ ಮಾದರಿ ಬಿಡುಗಡೆ ಮಾಡಿದ Honda: ನೂತನ ಸ್ಕೂಟರ್​ ಹೇಗಿದೆ ಗೊತ್ತಾ?

    ನೇಹಾ ತನ್ನ ಇಮೇಲ್‌ನಲ್ಲಿ "ನೀವು ಒದಗಿಸಿದ ತಂತ್ರಜ್ಞಾನದಿಂದಾಗಿ ನಾವು ಆಸ್ಪತ್ರೆಗೆ ತಲುಪಿದ್ದೇವೆ ಮತ್ತು ಅವರು ಈಗ ಆರೋಗ್ಯವಾಗಿದ್ದಾರೆ " ಎಂದು ಬರೆದಿದ್ದಾರೆ. ತನ್ನ ಗಂಡನ ಜೀವ ಉಳಿಸಿದ್ದಕ್ಕಾಗಿ ಆ್ಯಪಲ್ ವಾಚ್‌ಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.

    ಆ್ಯಪಲ್ ಸಿಇಒ ಟಿಮ್ ಕುಕ್ ಅವರು ನೇಹಾ ಅವರ ಮೇಲ್​ಗೆ ಪ್ರತಿಕ್ರಿಯಿಸಿದ್ದು, "ನೇಹಾ, ನೀವು ವೈದ್ಯಕೀಯ ಗಮನವನ್ನು ಪಡೆದುಕೊಂಡಿದ್ದೀರಿ ಮತ್ತು ನಿಮಗೆ ಬೇಕಾದ ಚಿಕಿತ್ಸೆಯನ್ನು ಪಡೆದಿದ್ದೀರಿ ಎಂದು ನನಗೆ ತುಂಬಾ ಖುಷಿಯಾಗಿದೆ. ನಿಮ್ಮ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

    ಆ್ಯಪಲ್ ವಾಚ್ ಇಲ್ಲದಿದ್ದರೆ, ಮೂವತ್ತು ವರ್ಷದ ನಿತೇಶ್ ಅವರ ಅಪಧಮನಿಗಳಲ್ಲಿ ತೊಂದರೆ ಕಾಣಿಸಿದೆ ಎಂದು ಗೊತ್ತಾಗುತ್ತಿರಲಿಲ್ಲ.

    ಇದನ್ನೂ ಓದಿ: Download​ ಮಾಡಿದ ಸಿನಿಮಾವನ್ನು 1 ಸೆಕೆಂಡ್​ನಲ್ಲಿ ಶೇರ್​ ಮಾಡಲು ಈ ಆ್ಯಪ್​ ಬೆಸ್ಟ್​!

    ನೇಹಾ ಈ ಬಗ್ಗೆ ಮಾತನಾಡಿದ್ದು, "ಆ್ಯಪಲ್ ವಾಚ್ ನಿಜವಾಗಿ ಸೂಚನೆಯನ್ನು ನೀಡಿತು, ಏಕೆಂದರೆ ನನ್ನ ಪತಿ 30 ರ ದಶಕದ ಆರಂಭದಲ್ಲಿದ್ದಾರೆ, ಅವರು ನಿರ್ಬಂಧಿಸಿದ ಅಪಧಮನಿಗಳಿಂದ ಬಳಲುತ್ತಿದ್ದಾರೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ಅವರು ಈಗ ಆ್ಯಪಲ್ ವಾಚ್ ಖರೀದಿಸಲು ಬಯಸುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.

    Apple ವಾಚ್ 6 ಬೆಲೆ 40,900 ರೂ ಮತ್ತು Apple Watch Series 6 (GPS + ಸೆಲ್ಯುಲಾರ್) ರೂ 49,900 ರಿಂದ ಪ್ರಾರಂಭವಾಗುತ್ತದೆ. ಕೈಗಡಿಯಾರಗಳನ್ನು ಎರಡು ವಿಭಿನ್ನ ಗಾತ್ರಗಳಲ್ಲಿ ನೀಡಲಾಗುತ್ತದೆ. ಆಪಲ್ ವಾಚ್ 6 ಹಲವಾರು ಪ್ರಮುಖ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವಾಚ್ ಸರಣಿ 6 ರಲ್ಲಿ ಇರುವ ಆಕ್ಸಿಮೀಟರ್ ಸಂವೇದಕವು ಬಳಕೆದಾರರ ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯಬಹುದು. ಒಳಭಾಗದಲ್ಲಿ, Apple Watch Series 6 ಅನ್ನು S6 ಪ್ರೊಸೆಸರ್‌ನಿಂದ ನಡೆಸಲಾಗುತ್ತದೆ, ಇದು ಸರಿಸಾಟಿಯಿಲ್ಲದ ಕಾರ್ಯಕ್ಷಮತೆಗಾಗಿ A13 ಬಯೋನಿಕ್ ಪ್ರೊಸೆಸರ್‌ನ ಆಪ್ಟಿಮೈಸ್ಡ್ ಆವೃತ್ತಿಯಾಗಿದೆ. ಸ್ಮಾರ್ಟ್ ವಾಚ್ 40 ಎಂಎಂ ಮತ್ತು 44 ಎಂಎಂ ಸೇರಿದಂತೆ ಎರಡು ಗಾತ್ರಗಳಲ್ಲಿ ಬರುತ್ತದೆ. ಇದು IP68 ಪ್ರಮಾಣೀಕೃತವಾಗಿದೆ, ಅಂದರೆ ನೀರು ಮತ್ತು ಧೂಳಿನ ವಿರುದ್ಧ ರಕ್ಷಿಸುತ್ತದೆ.
    Published by:Harshith AS
    First published: