HOME » NEWS » Tech » APPLE TO PAY 25 DOLLAR EACH TO AFFECTED IPHONE USERS HG

iPhone: ಆ್ಯಪಲ್ ಸಂಸ್ಥೆ ಐಫೋನ್ ಬಳಕೆದಾರರಿಗೆ ನೀಡಲಿದೆ 1,876 ರೂಪಾಯಿ!; ಯಾಕಾಗಿ?

Batterygate: ಆ್ಯಪಲ್​​ ಸಂಸ್ಥೆ ಬ್ಯಾಟರಿ ಸಮಸ್ಯೆಯನ್ನ ಎದುರಿಸುತ್ತಿರುವ ಐಫೋನ್​ ಬಳಕೆದಾರರಿಗಾಗಿ  1,876 ರೂಪಾಯಿ (25 ಡಾಲರ್​) ನೀಡಲು ಮುಂದಾಗಿದೆ. ಹಾಗಾಗಿ ಸಮಸ್ಯೆಯಿರುವ ಐಫೋನ್​ ಬಳಕೆದಾರರು ಮೊದಲು ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬೇಕು. ನಂತರ ಬಳಕೆದಾರರ ದೂರನ್ನು ದಾಖಲಿಸಿ, ಪರಿಶೀಲನೆ ನಡೆಸಿ ನಂತರ ಹಣವನ್ನು ಪಾವತಿಸಲಿದೆ.

news18-kannada
Updated:July 15, 2020, 7:07 PM IST
iPhone: ಆ್ಯಪಲ್ ಸಂಸ್ಥೆ ಐಫೋನ್ ಬಳಕೆದಾರರಿಗೆ ನೀಡಲಿದೆ 1,876 ರೂಪಾಯಿ!; ಯಾಕಾಗಿ?
ಐಫೋನ್
  • Share this:
ಐಫೋನ್ ಬಳಕೆದಾರರು ಹೊಸ ಓಎಸ್​ ಅಪ್ಡೇಟ್​ ಮಾಡಿಕೊಂಡ ಬಳಿಕ ಕೆಲವು ಫೋನ್​ಗಳ ಬ್ಯಾಟರಿ ಬೇಗನೆ ಖಾಲಿಯಾಗುತ್ತಿದೆ. ಅಷ್ಟು ಮಾತ್ರವಲ್ಲದೆ, ಫೋನ್​ ಕಾರ್ಯಚರಣೆ ನಿಧನವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಆ್ಯಪಲ್​ ಸಂಸ್ಥೆ ಸಮಸ್ಯೆಗೆ ಪರಿಹಾರವೆಂಬಂತೆ ನಿರ್ಣಯವೊಂದನ್ನು ಕೈಗೊಂಡಿದ್ದು, ಬ್ಯಾಟರಿ ಸಮಸ್ಯೆ ಎದುರಿಸುತ್ತಿರುವ ಐಫೊನ್​ ಬಳಕೆದಾರರಿಗೆ ಹಣವನ್ನು ನೀಡಲು ಮುಂದಾಗಿದೆ.

ಆ್ಯಪಲ್​​ ಸಂಸ್ಥೆ ಬ್ಯಾಟರಿ ಸಮಸ್ಯೆಯನ್ನ ಎದುರಿಸುತ್ತಿರುವ ಐಫೋನ್​ ಬಳಕೆದಾರರಿಗಾಗಿ  1,876 ರೂಪಾಯಿ (25 ಡಾಲರ್​) ನೀಡಲು ಮುಂದಾಗಿದೆ. ಹಾಗಾಗಿ ಸಮಸ್ಯೆಯಿರುವ ಐಫೋನ್​ ಬಳಕೆದಾರರು ಮೊದಲು ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬೇಕು. ನಂತರ ಬಳಕೆದಾರರ ದೂರನ್ನು ದಾಖಲಿಸಿ, ಪರಿಶೀಲನೆ ನಡೆಸಿ ನಂತರ ಹಣವನ್ನು ಪಾವತಿಸಲಿದೆ.

ಸದ್ಯ ಅಮೆರಿಕದಲ್ಲಿ  ಈ ನಿಮಮವನ್ನು ಜಾರಿಗೆ ಜಾರಿಗೆ ತಂದಿದೆ. ಆದರೆ ಇತರೆ ದೇಶಗಳಿಗೆ ಆ್ಯಪಲ್​ ಸಂಸ್ಥೆ ಈ ನಿಯಮವನ್ನು ಯಾವಾಗ ಜಾರಿಗೆ ತರಲಿದೆ ಎಂದು ಹೇಳಿಕೊಂಡಿಲ್ಲ. (ಮುಂದೆ ಓದಿ)
Youtube Video

ಯಾವೆಲ್ಲಾ ಐಫೋನ್​ ಬ್ಯಾಟರಿ ಸಮಸ್ಯೆ ಎದುರಿಸುತ್ತಿದೆ?

ಆ್ಯಪಲ್​​ ಸಂಸ್ಥೆ ಐಫೋನ್​ ಬಳಕೆದಾರರಿಗೆ ಹೊಸ ಓಎಸ್​ ಅಪ್ಡೇಟ್​ ನೀಡಿತ್ತು. ಬಳಕೆದಾರರು ಅಪ್ಡೇಟ್​ ಮಾಡಿದಂತೆ ಐಫೋನ್​ 6, 6ಪ್ಲಸ್​, 6ಎಸ್​, 6ಎಸ್​ ಪ್ಲಸ್​, 7, 7 ಪ್ಲಸ್​ ಮತ್ತು ಎಸ್​ಇ ಫೋನ್​​ಗಳಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅನೇಕರು ತಮ್ಮ ಫೋನ್​ ಸಮಸ್ಯೆಯನ್ನು ಟ್ವೀಟ್​ ಮಾಡುವ ಮೂಲಕ ದೂರಿದ್ದರು. ಕೊನೆಗೆ ಆ್ಯಪಲ್​ ಸಂಸ್ಥೆ ಸಮಸ್ಯೆ ಇರುವ ಫೋನ್​ಗಳನ್ನು ಪರಿಶೀಲಿಸಿ ಹಣ ನೀಡಲು ಮುಂದಾಗಿದೆ. ಡಿ. 21. 2017ರ ಮೊದಲು ಖರೀದಿಸಿದ ಐಫೋನ್​ಗಳಿಗೆ ಈ ನಿಯಮವನ್ನು ಜಾರಿಗೊಳಿಸಿದೆ.

Shakuntala Devi Trailer: ಶಕುಂತಲಾ ದೇವಿ ಟ್ರೇಲರ್ ಬಿಡುಗಡೆ; ಕನ್ನಡ ಸಾಧಕಿಯ ಪಾತ್ರವನ್ನು ಮಾಡಿದ ವಿದ್ಯಾ ಬಾಲನ್​ಗೆ ಯ್ಯೂಟೂಬ್​ನಲ್ಲಿ ಉಘೇ ಉಘೇವಿಶ್ವದ ಅತಿ ಹೆಚ್ಚು ಎತ್ತರದ ಮಾಡೆಲ್​ ಈಕೆ; ಹೈಟ್​ ಎಷ್ಟು ಗೊತ್ತಾ?

ಗಂಟಲು ನೋವೆಂದು ಆಸ್ಪತ್ರೆ ಸೇರಿದ ಮಹಿಳೆಗೆ ಕಾದಿತ್ತು ಶಾಕ್​!
Published by: Harshith AS
First published: July 15, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories