ಆ್ಯಪಲ್ ಫೋನ್ ಪ್ರಿಯರಿಗೆ ಸಿಹಿ ಸುದ್ದಿ: ಇನ್ಮೇಲೆ ಐಫೋನ್ ಖರೀದಿಸಲು ಚಿಂತಿಸಬೇಕಿಲ್ಲ..!

ಭಾರತ ಸರ್ಕಾರವು ಐಫೋನ್ ಉತ್ಪನ್ನಗಳ ಬಗೆಗೆ ನಿಯಮವನ್ನು ಜಾರಿಗೆ ತರಲಾಗಿದ್ದು, ಶೇ. 30 ರಷ್ಟು ಉತ್ಪನ್ನಗಳನ್ನು ಭಾರತದಿಂದಲೇ ತಯಾರಿಸಬೇಕು ಎಂಬ ನಿಯಮವನ್ನು ರೂಪಿಸಿತ್ತು.

news18-kannada
Updated:September 2, 2019, 9:24 PM IST
ಆ್ಯಪಲ್ ಫೋನ್ ಪ್ರಿಯರಿಗೆ ಸಿಹಿ ಸುದ್ದಿ: ಇನ್ಮೇಲೆ ಐಫೋನ್ ಖರೀದಿಸಲು ಚಿಂತಿಸಬೇಕಿಲ್ಲ..!
ಐಫೋನ್
  • Share this:
ಆ್ಯಪಲ್​ ಬಳಕೆದಾರರಿಗೆ ಕಂಪೆನಿ ಸಿಹಿಸುದ್ದಿಯನ್ನು ನೀಡಿದೆ. ಇನ್ನು ಕೆಲ ತಿಂಗಳಿನಲ್ಲಿ ಆ್ಯಪಲ್​​ಫೋನ್​ ಅನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಭಾರತದಲ್ಲಿ ಐಫೋನ್​​ಗಳಿಗೆ ಭಾರೀ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಮಾರಾಟದಿಂದ ಲಾಭ ಪಡೆಯಲು ಐಫೋನ್​ ಕಂಪೆನಿ ಆನ್​ಲೈನ್​ ಮಾರಾಟಕ್ಕೆ ಮುಂದಾಗಿದೆ.

ಭಾರತ ಸರ್ಕಾರವು ಐಫೋನ್ ಉತ್ಪನ್ನಗಳ ಬಗೆಗೆ ನಿಯಮವನ್ನು ಜಾರಿಗೆ ತರಲಾಗಿದ್ದು, ಶೇ. 30 ರಷ್ಟು ಉತ್ಪನ್ನಗಳನ್ನು ಭಾರತದಿಂದಲೇ ತಯಾರಿಸಬೇಕು ಎಂಬ ನಿಯಮವನ್ನು ರೂಪಿಸಿತ್ತು. ಈ ನಿಯಮವನ್ನು ಆ್ಯಪಲ್​ ಕಂಪೆನಿ ವಿರೋಧಿಸಿತ್ತು.

ಅಮೆರಿಕಾ ಹಾಗೂ ಚೀನಾ ನಡುವೆ ವಾಣಿಜ್ಯ ಸಮರ ನಡೆಯುತ್ತಿದೆ. ಭಾರತವು ಈ ಕಂಪೆನಿಗಳ ಹೂಡಿಕೆಯನ್ನು ಮಾಡುತ್ತಿದೆ. ಇದೀಗ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಭಾರತದಲ್ಲೇ ಮಾರುಕಟ್ಟೆಯನ್ನು ನಿರ್ಮಿಸಲು ಭಾರತವು ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ: ಡಿಕೆಶಿ ಅಳುವ ಮೂಲಕ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದ್ದಾರೆ; ಮತ್ತೆ ಹರಿಹಾಯ್ದ ಡಿಸಿಎಂ ಅಶ್ವತ್ಥ್ ನಾರಾಯಣ

ಆ್ಯಪಲ್​ ​ಫೋನ್​ ದುಬಾರಿಯಾಗಿದ್ದು, ಭಾರವು ವಿದೇಶದಿಂದ ಈ ಫೋನ್​ ಅನ್ನು ಖರೀದಿಸುವಾ ಆಮದು ಸುಂಕ ಸೇರಿ ಇನ್ನು ದುಬಾರಿಯಾಗುತ್ತದೆ. ಹಾಗಾಗೀ ಭಾರತೀಯರು ಆ್ಯಪಲ್​​ ಫೋನ್​ ಅನ್ನು ಕೊಂಡುಕೊಳ್ಳಲು ಹಿಂದೆ ಸರಿಯುತ್ತಾರೆ. ಅದಕ್ಕಾಗಿ ಬೆಂಗಳೂರು ಮತ್ತು ಚೆನೈನಲ್ಲಿ ಆ್ಯಪಲ್​ ಫೋನ್​ ಅನ್ನು ಉತ್ಪಾದಿಸಲು ಮುಂದಾಗಿದೆ.

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆ್ಯಪಲ್​​​ ಮುಂದಿನ ದಿನಗಳಲ್ಲಿ ಆನ್​ಲೈನ್​ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದೆ. ಅಂತೆಯೇ, ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಆ್ಯಪಲ್​ ತೆರೆಯಲಿದೆ ಎಂದು ಹೇಳಲಾಗುತ್ತಿದೆ.
First published:September 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ