HOME » NEWS » Tech » APPLE SUES EX EMPLOYEE OVER ALLEGED LEAKED SECRETS STG LG

Apple: ಮಾಜಿ ಉದ್ಯೋಗಿಯ ವಿರುದ್ಧ ಆ್ಯಪಲ್ ಕಂಪನಿ ಮೊಕದ್ದಮೆ

ಕಂಪನಿಯ ರಹಸ್ಯ ಸ್ವಯಂ-ಚಾಲನಾ ಕಾರು ಯೋಜನೆಯಲ್ಲಿ ಕೆಲಸ ಮಾಡಿದ ಇಬ್ಬರು ಮಾಜಿ ಆ್ಯಪಲ್ ಎಂಜಿನಿಯರ್‌ಗಳು ಕ್ರಿಮಿನಲ್ ವ್ಯಾಪಾರ-ರಹಸ್ಯ ಕಳ್ಳತನದ ಆರೋಪಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈಗ ಇಬ್ಬರೂ ತಾವು ಮಾಡಿದ್ದು ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆ.

news18-kannada
Updated:March 12, 2021, 2:46 PM IST
Apple: ಮಾಜಿ ಉದ್ಯೋಗಿಯ ವಿರುದ್ಧ ಆ್ಯಪಲ್ ಕಂಪನಿ ಮೊಕದ್ದಮೆ
ಆ್ಯಪಲ್
  • Share this:
ಬಹುರಾಷ್ಟ್ರೀಯ ಕಂಪನಿಯು ತನ್ನ ಮಾಜಿ ಉದ್ಯೋಗಿಗಳಿಂದ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಆ್ಯಪಲ್ ಕಂಪನಿಯು ಹೊಸ ಆವಿಷ್ಕಾರಗಳನ್ನು ಉತ್ಪಾದಿಸುತ್ತಿದ್ದು ಜಗತ್ತಿನಾದ್ಯಂತ ಗ್ರಾಹರರನ್ನು ಹೊಂದಿದೆ. ಆದರೆ ಈಗ, ಅಚ್ಚರಿ ಎಂಬಂತೆ, ಒಂದು ದಶಕಕ್ಕೂ ಹೆಚ್ಚು ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡಿದ ಮಾಜಿ ಉದ್ಯೋಗಿಯ ವಿರುದ್ಧ ಮೊಕದ್ದಮೆ ಹೂಡಿದೆ. ತಾನು ಹೂಡಿಕೆ ಮಾಡಿದ ವ್ಯಾಪಾರ ರಹಸ್ಯಗಳನ್ನು ಮಾಧ್ಯಮ ಸಂಪರ್ಕದೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದೆ. ಇದರ ಮೂಲಕ ಆ್ಯಪಲ್ ಮತ್ತು ಮಾಜಿ ಉದ್ಯೋಗಿಗಳ ಮಧ್ಯೆ ಸಮರ ಶುರುವಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನ ಫೆಡರಲ್ ನ್ಯಾಯಾಲಯದಲ್ಲಿ ಗುರುವಾರ ಸಲ್ಲಿಸಿದ ದೂರಿನ ಅನ್ವಯ, ಸೈಮನ್ ಲ್ಯಾಂಕಾಸ್ಟರ್ ಅವರು ವರದಿಗಾರರ ಮಾಹಿತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಆ್ಯಪಲ್ ಕಂಪನಿಯನ್ನು ತೊರೆದ ನಂತರ ಮಾರುಕಟ್ಟೆಗೆ ಬಿಡುಗಡೆಯಾಗದ ಯಂತ್ರಾಂಶ, ಅಘೋಷಿತ ವೈಶಿಷ್ಟ್ಯ ಬದಲಾವಣೆಗಳು ಮತ್ತು ಭವಿಷ್ಯದ ಉತ್ಪನ್ನದ ಪ್ರಕಟಣೆಗಳ ವಿವರಗಳನ್ನು ನಿಕಟವಾಗಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. "ಲ್ಯಾಂಕಾಸ್ಟರ್‌ನ ದುರುಪಯೋಗದಿಂದ ಸಕ್ರಿಯಗೊಳಿಸಲಾದ ಆಪಲ್ ಉತ್ಪನ್ನ ವಿವರಗಳು ಮತ್ತು ವಿವರಿಸಲಾಗದ ಬಿಡುಗಡೆಗೆ ಸಿದ್ದವಿದ್ದ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳ ಮೇಲೆ ಶ್ರಮವಹಿಸಿದ ತಂಡಗಳ ಸ್ಥೈರ್ಯವನ್ನು ಹಾಳು ಮಾಡಿದೆ" ಎಂದು ಆ್ಯಪಲ್ ಕಂಪನಿಯು ಹೇಳಿಕೊಂಡಿದೆ.

ಕಂಪನಿಗೆ ದ್ರೋಹ ಮಾಡಿದ ಆರೋಪ ಹೊತ್ತಿರುವುದು ಮಾಜಿ ಆ್ಯಪಲ್ ಉದ್ಯೋಗಿ ಲ್ಯಾಂಕಾಸ್ಟರ್ ಮಾತ್ರವಲ್ಲ. 2019 ರಲ್ಲಿ, ಆ್ಯಪಲ್ ತನ್ನ ಮಾಜಿ ಲೀಡ್ ಚಿಪ್ ಆರ್ಕಿಟೆಕ್ಟ್ ಆಗಿ ಕೆಲಸ ಮಾಡಿದ ಗೆರಾರ್ಡ್ ವಿಲಿಯಮ್ಸ್ III ರ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಆ್ಯಪಲ್ ಉದ್ಯೋಗಿಗಳನ್ನು ಗುರಿಯಾಗಿಸಿ ಷಡ್ಯಂತರ ರೂಪಿಸಿದ ಆರೋಪ ಹೊತ್ತಿರುವ ವಿಲಿಯಮ್ಸ್, ಆ್ಯಪಲ್ ಕಂಪನಿಯು ತನಗೂ ಅದೇ ರೀತಿ ಮಾಡಿದೆ ಎಂದು ನ್ಯಾಯಾಲಯದಲ್ಲಿ ದೂರಿದ್ದಾರೆ.

ಏತನ್ಮಧ್ಯೆ, ಕಂಪನಿಯ ರಹಸ್ಯ ಸ್ವಯಂ-ಚಾಲನಾ ಕಾರು ಯೋಜನೆಯಲ್ಲಿ ಕೆಲಸ ಮಾಡಿದ ಇಬ್ಬರು ಮಾಜಿ ಆ್ಯಪಲ್ ಎಂಜಿನಿಯರ್‌ಗಳು ಕ್ರಿಮಿನಲ್ ವ್ಯಾಪಾರ-ರಹಸ್ಯ ಕಳ್ಳತನದ ಆರೋಪಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈಗ ಇಬ್ಬರೂ ತಾವು ಮಾಡಿದ್ದು ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆ.

ಲೈಂಗಿಕ ಕ್ರಿಯೆ ನಡೆಸದೇ ಗರ್ಭಿಣಿಯಾದ ಮಹಿಳೆ..! ಇದಕ್ಕೆ ಕಾರಣ ಏನು ಗೊತ್ತಾ..?

ದಣಿವರಿಯಿಲ್ಲದೆ ಕೆಲಸ ಮಾಡಲು ಕರೆ

"ನಮ್ಮ ಗ್ರಾಹಕರನ್ನು ಸಂತೋಷಪಡಿಸುವ ಮತ್ತು ಜಗತ್ತನ್ನು ಬದಲಿಸಲು ಉದ್ಯೋಗಿಗಳಿಗೆ ಅಧಿಕಾರ ನೀಡುವ ಭರವಸೆಯಲ್ಲಿ ಹತ್ತಾರು ಆ್ಯಪಲ್ ಉದ್ಯೋಗಿಗಳು ಪ್ರತಿದಿನ ಹೊಸ ಉತ್ಪನ್ನಗಳು, ಸೇವೆಗಳು ಮತ್ತು ವೈಶಿಷ್ಟ್ಯಗಳ ಮೇಲೆ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ" ಎಂದು ಆ್ಯಪಲ್ ವಕ್ತಾರ ಜೋಶ್ ರೋಸೆನ್‌ಸ್ಟಾಕ್ ಹೇಳಿದರು.ನಿರ್ದಿಷ್ಟ ದಾಖಲೆಗಳು ಮತ್ತು ಉತ್ಪನ್ನದ ವಿವರಗಳನ್ನು ಕದಿಯಲು ಮಾಜಿ ಉದ್ಯೋಗಿಗಳು ಸಮನ್ವಯ ಸಾಧಿಸಿದ್ದಾರೆ ಮತ್ತು ಕೆಲವೊಮ್ಮೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ಲ್ಯಾಂಕಾಸ್ಟರ್ ತಮ್ಮ ಮಾಧ್ಯಮ ಮೂಲದೊಂದಿಗೆ 2018 ರ ಕೊನೆಯಲ್ಲಿ ಮತ್ತು 2019 ರವರೆಗೆ ನಿಕಟವಾಗಿ ಕೆಲಸ ಮಾಡಿದ್ದಾರೆ ಎಂದು ಆ್ಯಪಲ್ ಕಂಪನಿಯು ಹೇಳಿಕೊಂಡಿದೆ. ಕ್ಯಾಲಿಫೋರ್ನಿಯಾ ಮೂಲದ ಕ್ಯುಪರ್ಟಿನೊ ಕಂಪನಿಯು ಮಾಧ್ಯಮ ಮೂಲವನ್ನು ಅಥವಾ ಅವರು ಯಾರಿಗಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

2019 ರ ವಸಂತ ಋತುವಿನಲ್ಲಿ, ಹೊಸ ಹಾರ್ಡ್‌ವೇರ್ ಉತ್ಪನ್ನದ ಬಗ್ಗೆ ವದಂತಿಯನ್ನು ವರದಿ ಮಾಡಿದ ಕಾರಣದಿಂದಾಗಿ ಆ್ಯಪಲ್ ಬಗ್ಗೆ ಕಿರಿಕಿರಿ ಉಂಟಾಗಿದೆ ಎಂದು ಲ್ಯಾಂಕಾಸ್ಟರ್ ಸುದ್ದಿಗಾರರಿಗೆ ತಿಳಿಸಿದರು, "ಇದು ನನ್ನ ಏಳಿಗೆಗೆ ತೊಂದರೆಯನ್ನುಂಟು ಮಾಡುತ್ತದೆ" ಎಂದು ಹೇಳಿದ್ದಾರೆ.

ಲ್ಯಾಂಕಾಸ್ಟರ್ ಮೂರನೇ ವ್ಯಕ್ತಿಗೆ ಪತ್ರಕರ್ತರು ಆ್ಯಪಲ್ ಬಗ್ಗೆ ಬಹಿರಂಗಪಡಿಸುತ್ತಿದ್ದ ಸ್ವಾಮ್ಯದ ಮಾಹಿತಿಯ ವಿನಿಮಯಕ್ಕಾಗಿ ತಮ್ಮ ಪ್ರಾರಂಭದ ಬಗ್ಗೆ ಲೇಖನ ಪ್ರಕಟಿಸಲು ಬದ್ಧರಾಗಿದ್ದಾರೆ ಎಂದು ಆ್ಯಪಲ್ ಹೇಳಿಕೊಂಡಿದೆ.

ತನ್ನ ಕಂಪನಿಯಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ ಮಾಜಿ ಉದ್ಯೋಗಿಗಳಿಂದ ತೊಂದರೆಯಾಗಿರುವುದಾಗಿ ಹೇಳಿಕೊಂಡಿರುವ ಆ್ಯಪಲ್ ನ್ಯಾಯಾಲಯಲದ ಬಾಗಿಲು ತಟ್ಟಿದ್ದು ಮುಂದಿನ ಬೆಳವಣಿಗೆಯ ಬಗ್ಗೆ ಕಾದು ನೋಡಬೇಕಾಗಿದೆ.
Youtube Video

ಒಟ್ಟಿನಲ್ಲಿ ಹೇಳುವುದಾದರೆ, ಜಗತ್ತಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದ ಆ್ಯಪಲ್ ಪ್ರಕಾರ , ಕಂಪನಿಯು ಉದ್ಯೋಗಿಗಳಿಂದ ಬೇಸರಗೊಂಡಿರುವುದಂತೂ ನಿಜ.
Published by: Latha CG
First published: March 12, 2021, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories