804 ಕೋಟಿ ಪರಿಹಾರ ಕೋರಿ ಆ್ಯಪಲ್ ಮೇಲೆ ಮೊಕದ್ದಮೆ


Updated:December 28, 2017, 4:43 PM IST
804 ಕೋಟಿ ಪರಿಹಾರ ಕೋರಿ ಆ್ಯಪಲ್ ಮೇಲೆ ಮೊಕದ್ದಮೆ

Updated: December 28, 2017, 4:43 PM IST
ಆ್ಯಪಲ್ ಸಂಸ್ಥೆ ಉದ್ದೇಶಪೂರ್ವಕವಾಗಿಯೇ ಹಳೇ ಐ ಫೋನ್‍ಗಳ ಕಾರ್ಯವನ್ನು ನಿಧಾನಗೊಳಿಸುವ ಸಾಫ್ಟ್‍ವೇರ್ ಅನ್ನು ಬಿಡುಗಡೆ ಮಾಡಿದೆ ಎಂದು ಇಬ್ಬರು ಇಸ್ರೇಲಿಯನ್ನರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. 804 ಕೋಟಿ ರೂ. ಪರಿಹಾರ ಕೋರಿ ದಾಖಲಿಸಿರುವ ಪ್ರಕರಣದ ಕುರಿತಾಗಿ ಇಸ್ರೇಲ್‍ನ ಹರೆಟ್ಜ್ ಪತ್ರಿಕೆ ಪ್ರಕಟಿಸಿದೆ.
ಹಳೇ ಆ್ಯಪಲ್ ಫೋನ್‍ಗಳ ಬ್ಯಾಟರಿ ಹಳೆಯದಾಗುತ್ತಿದ್ದಂತೆ ಬಹಳ ಬೇಗ ಫೋನ್ ಆಫ್‍ಆಗಿ ಹೋಗುತ್ತದೆ. ಅದನ್ನು ತಪ್ಪಿಸಲು ಫೋನ್‍ನ ಕಾರ್ಯವನ್ನು ನಿಧಾನಗೊಳಿಸುವ ಸಾಫ್ಟ್ ವೇರ್ ಅನ್ನು ಬಿಡುಗಡೆ ಮಾಡಿರುವುದಾಗಿ ಆ್ಯಪಲ್ ಸಂಸ್ಥೆ ಹೇಳಿಕೆ ನೀಡಿದ ನಂತರ ಈ ಮೊಕದ್ದಮೆ ದಾಖಲಿಸಲಾಗಿದೆ.
ಸಾಫ್ಟ್ವೇರ್ ಅಪ್‍ಡೇಟ್ ಮಾಡುವುದರಿಂದ ಫೋನ್‍ನಲ್ಲಿ ಇ-ಮೇಲ್, ಬ್ರೌಸಿಂಗ್ ಸೇರಿದಂತೆ ಇತರೆ ಅಪ್ಲಿಕೇಷನ್‍ಗಳ ಕಾರ್ಯ ನಿಧಾನವಾಗುತ್ತದೆ ಎಂಬ ವಿಷಯವನ್ನು ಫೋನ್ ಬಳಕೆದಾರರಿಗೆ ಮೊದಲೇ ತಿಳಿಸಬೇಕಿತ್ತು. ಅದನ್ನು ತಿಳಿಸದೆ, ಅಪ್‍ಡೇಟ್ ಬಿಡುಗಡೆ ಮಾಡಿದ್ದು ತಪ್ಪು. ಈ ಸತ್ಯವನ್ನು ತಿಳಿಯುವ ಹಕ್ಕು ಬಳಕೆದಾರನಿಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಕಳೆದ ಶುಕ್ರವಾರ ಇಬ್ಬರು ಅಮೆರಿಕನ್ನರೂ ಸಹ ಇದೇ ವಿಷಯವಾಗಿ ಮೊಕದ್ದಮೆ ದಾಖಲಿಸಿದ್ದಾರೆ. ಅಮೆರಿಕದ ಇಲೆನಾಯ್ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಅಟ್ಲಾಸ್ ಕನ್ಸೂಮರ್ ಲಾ ಅಮೆರಿಕದಲ್ಲಿ ಫೋನ್ ಬಳಕೆದಾರರ ಪರವಾಗಿ ಮೊಕದ್ದಮೆ ನಡೆಸುತ್ತಿದೆ. ಅದು ಹೇಳುವ ಪ್ರಕಾರ ಆ್ಯಪಲ್ ಸಂಸ್ಥೆ ಉದ್ದೇಶಪೂರ್ವಕವಾಗಿ ಹೊಸ ಫೋನ್‍ಗಳನ್ನು ಗ್ರಾಹಕರು ಖರೀದಿಸಲೆಂದು ಹುನ್ನಾರ ಮಾಡಿ, ಹಳೇ ಫೋನ್‍ಗಳ ಕಾರ್ಯವನ್ನು ನಿಧಾನಗೊಳಿಸಿದೆ. ಆದರೆ ಈ ಎಲ್ಲ ಸಮಸ್ಯೆಗೆ ಪರಿಹಾರವಾಗಿ 10.2.1 ಹೊಸ ಸಾಫ್ಟ್ ವೇರ್ ಅನ್ನು ಬಿಡುಗಡೆ ಮಾಡಿದ್ದು, ಇದರಿಂದಾಗಿ ಫೋನ್ ಮೊದಲಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಆ್ಯಪಲ್ ಹೇಳಿಕೆ ನೀಡಿದೆ.
First published:December 28, 2017
ಮತ್ತಷ್ಟು ಓದಿರಿ
ಮುಂದಿನ ಸುದ್ದಿ