• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • IPhone: ಭಾರತದ ಆ್ಯಪಲ್​ ಸ್ಟೋರ್​ನಲ್ಲಿರುವ ಉದ್ಯೋಗಿಗಳು ಓದಿದ್ದೇನು ಗೊತ್ತಾ? ಇವರ ಸಂಬಳ ಕೇಳಿದ್ರೆ ಶಾಕ್​ ಆಗ್ತೀರ!

IPhone: ಭಾರತದ ಆ್ಯಪಲ್​ ಸ್ಟೋರ್​ನಲ್ಲಿರುವ ಉದ್ಯೋಗಿಗಳು ಓದಿದ್ದೇನು ಗೊತ್ತಾ? ಇವರ ಸಂಬಳ ಕೇಳಿದ್ರೆ ಶಾಕ್​ ಆಗ್ತೀರ!

ಐಫೋನ್​

ಐಫೋನ್​

ಸಾಮಾನ್ಯವಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಫೋನ್ ಶೋರೂಂಗಳಿಗೆ ಭೇಟಿ ನೀಡಿದಾಗ ಅಲ್ಲಿರುವ ಗ್ರಾಹಕ ಸಹಕಾರ ಸಿಬ್ಬಂದಿ ವರ್ಗದವರೂ ಅಷ್ಟೊಂದು ದೊಡ್ಡ ಮಟ್ಟದ ಅಥವಾ ಉನ್ನತ ಶೈಕ್ಷಣಿಕ ಪದವಿ ಹೊಂದಿದವರಾಗಿರುವುದಿಲ್ಲ, ಅಲ್ಲದೆ ಅವರ ಸಂಬಳವೂ ಅಂತಹ ದೊಡ್ಡ ಮಟ್ಟದಲ್ಲೇನೂ ಇರುವುದಿಲ್ಲ. ಇದನ್ನು ಸಾಮಾನ್ಯವಾಗಿ ಗಮನಿಸಬಹುದು.

ಮುಂದೆ ಓದಿ ...
  • Share this:

ಇತ್ತೀಚಿಗಷ್ಟೇ ಭಾರತದಲ್ಲಿ ಜಾಗತಿಕವಾಗಿ ಪ್ರತಿಷ್ಠಿತ ಕಂಪನಿ (Company) ಎನಿಸಿಕೊಂಡಿರುವ ಹಾಗೂ ಟೆಕ್ ದಿಗ್ಗಜವಾಗಿರುವ ಆ್ಯಪಲ್​ ಸಂಸ್ಥೆಯು ತನ್ನ ಎರಡು ಸ್ಟೋರ್ ಗಳನ್ನು ಭಾರತದ ಮುಂಬೈ ಹಾಗೂ ದೆಹಲಿಯಲ್ಲಿ ತೆರೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆ್ಯಪಲ್​ ಮೂಲತಃ ತನ್ನ ಐಫೋನ್ ಹಾಗೂ ಐಪ್ಯಾಡ್ ಇತ್ಯಾದಿ ಉತ್ಪನ್ನಗಳಿಗಾಗಿ ಪ್ರಸಿದ್ಧವಾಗಿದ್ದು ಜಗತ್ತಿನೆಲ್ಲೆಡೆ ಮನ್ನಣೆಗಳಿಸಿದೆ. ಈ ಬ್ರ್ಯಾಂಡ್ (Brand) ಎಷ್ಟು ಪ್ರತಿಷ್ಠಿತವಾಗಿದೆ ಎಂಬುದಕ್ಕೆ ಈಗ ಭಾರತದಲ್ಲಿ ತೆರೆದಿರುವ ತನ್ನ ಸ್ಟೋರ್ ನಲ್ಲಿ ಮಾಡಿಕೊಂಡಿರುವ ಸಿಬ್ಬಂದಿ ನೇಮಕಾತಿಯಿಂದ ತಿಳಿದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಫೋನ್ ಶೋರೂಂಗಳಿಗೆ ಭೇಟಿ ನೀಡಿದಾಗ ಅಲ್ಲಿರುವ ಗ್ರಾಹಕ ಸಹಕಾರ ಸಿಬ್ಬಂದಿ ವರ್ಗದವರೂ ಅಷ್ಟೊಂದು ದೊಡ್ಡ ಮಟ್ಟದ ಅಥವಾ ಉನ್ನತ ಶೈಕ್ಷಣಿಕ ಪದವಿ ಹೊಂದಿದವರಾಗಿರುವುದಿಲ್ಲ, ಅಲ್ಲದೆ ಅವರ ಸಂಬಳವೂ (Salary) ಅಂತಹ ದೊಡ್ಡ ಮಟ್ಟದಲ್ಲೇನೂ ಇರುವುದಿಲ್ಲ. ಇದನ್ನು ಸಾಮಾನ್ಯವಾಗಿ ಗಮನಿಸಬಹುದು.


ಆದರೆ, ಇತ್ತೀಚೆಗೆ ಆ್ಯಪಲ್​ ತಾನು ತೆರೆದಿರುವ ಸ್ಟೋರ್ ಗಳಲ್ಲಿ ಬಿಟೆಕ್ ಪದವಿಧರರು, ಮಾಸ್ಟರ್ಸ್ ಮಾಡಿದವರು, ರೊಬೋಟಿಕ್ಸ್ ನಲ್ಲಿ ಕೊಶಲ್ಯ ಹೊಂದಿದವರಂತಹ ಕೌಶಲ್ಯಭರಿತ ಸಿಬ್ಬಂದಿ ವರ್ಗದವರಿದ್ದಾರೆ ಎಂದರೆ ನಂಬಲೇಬೇಕು.


ಇನ್ನು ಅಚ್ಚರಿಯ ಸಂಗತಿ ಎಂದರೆ ಈ ಎರಡು ಸ್ಟೋರ್ ಗಳಲ್ಲಿ ಕೆಲವರು ವಿದೇಶಿ ವಿವಿಗಳಾದ ಕೆಂಬ್ರಿಡ್ಜ್ ಅಥವಾ ಗ್ರಿಫಿತ್ ಗಳಿಂದಲೂ ಶಿಕ್ಷಣ ಪೂರಸಿದ ಉದ್ಯೋಗಿಗಳು ಇದ್ದಾರೆ. ಅಲ್ಲದೆ, ಯುರೋಪ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹಲವು ವರ್ಷಗಳಿಂದ ಆಪಲ್ ಸ್ಟೋರ್ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಹಲವು ಅನುಭವಿ ಅಭ್ಯರ್ಥಿಗಳನ್ನು ಆ್ಯಪಲ್​ ತನ್ನ ಆಂತರಿಕ ಕಾರ್ಯಾಚರಣೆಯ ಭಾಗವಾಗಿ ಭಾರತದ ಸ್ಟೋರ್ ಗಳಲ್ಲಿ ವರ್ಗಾವಣೆ ಮಾಡಿದ್ದು ಅವರ ಲಿಂಕ್ಡ್ ಇನ್ ಪ್ರೊಫೈಲ್ ಮೂಲಕ ಅವರ ಪರಿಣಿತಿ ಹಾಗೂ ಅನುಭವ ತಿಳಿದುಬಂದಿದೆ.


ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಗೂಗಲ್​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​!


ಹಾಗೆ ನೋಡಿದರೆ ಜಗತ್ತಿನ ದೊಡ್ಡ ದೊಡ್ಡ ನಗರಗಳಲ್ಲಿ ಫೋನ್ ಶೋರೂಂಗಳಲ್ಲಿರುವಂತಹ ಗ್ಲ್ಯಾಮರ್ ಅಂಶವು ಭಾರಾತದ ರಿಟೈಲ್ ಅಂಗಡಿಗಳಲ್ಲಿ ಅಷ್ಟೊಂದಾಗಿ ಕಂಡುಬರುವುದಿಲ್ಲ. ಆದರೆ, ಆ್ಯಪಲ್​ ಇದೀಗ ತನ್ನ ಸ್ಟೋರ್ ಮೂಲಕ ಭಾರತದಲ್ಲೂ ಇಂತಹ ಗ್ಲ್ಯಾಮರ್ ಫ್ಯಾಕ್ಟರ್ ಅಳವಡಿಸಲು ಸಜ್ಜಾಗಿರುವಂತೆ ಭಾಸವಾಗಿದೆ.


ಕೆಲ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಆ್ಯಪಲ್​ ತನ್ನ ಈ ಸ್ಟೋರ್ ಗಳಲ್ಲಿ ಕೆಲಸ ಮಾಡುತ್ತಿರುವ ಕೆಲ ಉದ್ಯೋಗಿಗಳಿಗೆ ಮಾಸಿಕ ಲಕ್ಷಕ್ಕಿಂತಲೂ ಹೆಚ್ಚಿನ ವೇತನ ಪಾವತಿಸುತ್ತಿರುವುದಾಗಿ ತಿಳಿದಿದ್ದು ಭಾರತದಲ್ಲಿ ಇದೇ ರೀತಿಯ ಎಲೆಕ್ಟ್ರಾನಿಕ್ಸ್ ಶೋರೂಂಗಳ ಸಿಬ್ಬಂದಿಗಳಿಗೆ ಅದೇ ಪಾತ್ರದಲ್ಲಿ ದೊರೆಯುತ್ತಿರುವ ವೇತನದ ಮೂರ್ನಾಲ್ಕು ಪಟ್ಟು ಇದು ಹೆಚ್ಚಾಗಿದೆ.


ಸದ್ಯ, ಆ್ಯಪಲ್​ ಮುಂಬೈನಲ್ಲಿರುವ ತನ್ನ ಸ್ಟೋರ್ ಆ್ಯಪಲ್​ ಬಿಕೆಸಿ ಹಾಗೂ ದೆಹಲಿಯಲ್ಲಿರುವ ಆ್ಯಪಲ್​ ಸಾಕೇತ್ ಅನ್ನು ನಿರ್ವಹಿಸಲು 170 ಕ್ಕೂ ಅಧಿಕ ಸಿಬ್ಬಮ್ದಿಗಳನ್ನು ನೇಮಕಾತಿ ಮಾಡಿಕೊಂಡಿದೆ. ಅಲ್ಲದೆ, ಸಂಸ್ಥೆಯು ಅವರೆಲ್ಲರಿಗೂ ಜಾಗತಿಕ ಮಟ್ಟದಲ್ಲಿ ಗ್ರಾಹಕ ಸೇವಾ ತರಬೇತಿಯನ್ನೂ ನೀಡಿರುವುದಾಗಿ ತಿಳಿದುಬಂದಿದೆ.


ಇದನ್ನೂ ಓದಿ: ಕೈಗೆಟಕುವ ಬೆಲೆಯಲ್ಲಿ ಖರೀದಿಸಿ ಹೊಸ ಎಲೆಕ್ಟ್ರಿಕ್​ ಸ್ಕೂಟರ್​​!


ಮುಂಬೈನ ಆ್ಯಪಲ್​ ಬಿಕೆಸಿ ಸ್ಟೋರ್ ನಲ್ಲಿರುವ ಉದ್ಯೋಗಿಗಳು 25 ವಿವಿಧ ಭಾಷೆಗಳನ್ನು ಮಾತನಾಡುವ ಸಾಮರ್ಥ್ಯ ಹೊಂದಿದ್ದರೆ ದೆಹಲಿಯಲ್ಲಿರುವ ಸ್ಟೋರ್, ಹದಿನೆಂಟು ರಾಜ್ಯಗಳ ಉದ್ಯೋಗಿಗಳನ್ನು ಹೊಂದಿದ್ದು ಒಟ್ಟು ಹದಿನೈದು ಭಾಷೆಗಳನ್ನಾಡುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ದೇಶದ ಎಲ್ಲ ಪ್ರಮುಖ ಭಾಷೆಗಳನ್ನಾಡುವ ಗ್ರಾಹಕರನ್ನು ಸೆಳೆಯುವ ಮಂತ್ರವನ್ನು ಆ್ಯಪಲ್​ ಬಳಸಿಕೊಂಡಂತಾಗಿದೆ.


ಆ್ಯಪಲ್​ ಸಂಸ್ಥೆಯ ಈ ನಡೆಗೆ ಸ್ಪಂದಿಸುತ್ತ ಐಡಿಸಿ ಇಂಡಿಯಾದ ಉಪಾಧ್ಯಕ್ಷರಾಗಿರುವ ನವಕೆಂದರ್ ಸಿಂಗ್ ಅವರು, "ಆ್ಯಪಲ್​ ಜಾಗತಿಕವಾಗಿ ಒಂದು ದೊಡ್ಡ ಹಾಗೂ ಪ್ರತಿಷ್ಠಿತ ಬ್ರ್ಯಾಂಡ್ ಆಗಿದ್ದು ತನ್ನ ಬ್ರ್ಯಾಂಡ್ ಸಾಮರ್ಥ್ಯದಿಂದಲೇ ಇಷ್ಟೊಂದು ಪ್ರತಿಭಾವಂತ ಹಾಗೂ ಉನ್ನತ ಶಿಕ್ಷಣ ಪಡೆದಿರುವ ಉದ್ಯೋಗಿಗಳನ್ನು ಸೆಳೆದಿದೆ. ಯಾರಿಗೆ ಆಗಲಿ ತಮ್ಮ ವೃತ್ತಿ ಆರಂಭವನ್ನು ಈ ರೀತಿಯ ಪ್ರತಿಷ್ಠಿತ ಸಂಸ್ಥೆಯಿಂದ ಪ್ರಾರಂಭಿಸಿದಾಗ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳು ಸಿಗಲಿವೆ" ಎನ್ನುತ್ತಾರೆ.


ಆ್ಯಪಲ್​  ತನ್ನ ವೆಬ್ ಸೈಟಿನ ಕೆರಿಯರ್ ಪುಟದಲ್ಲಿ ಉದ್ಯೋಗಿಗಳಿಗಾಗಿ ಹಲವಾರು ಸವಲತ್ತುಗಳನ್ನು ನೀಡುತ್ತದೆ. ಪ್ವಾತಿಸಿದ ರಜೆ, ಉದ್ಯೋಗಿಗಳಿಗಾಗಿ ಕೋರ್ಸ್ ಕಲಿಯಬಯಸಿದ್ದಲ್ಲಿ ಟ್ಯೂಷನ್ ಶುಲ್ಕ, ಆರೋಗ್ಯ ಪ್ರಯೋಜನಗಳು, ಸ್ಟಾಕ್ ಗ್ರಾಂಟ್ಸ್ ಹಾಗೂ ಆ್ಯಪಲ್​ ಉತ್ಪನಗಳನ್ನು ಉದ್ಯೋಗಿ ಖರೀದಿಸಬಯಸಿದಾಗ ಉದ್ಯೋಗಿ ರಿಯಾಯಿತಿ ಹೀಗೆ ಹಲವು ಪ್ರಯೋಜನಗಳು ಆ್ಯಪಲ್​ ಸ್ಟೋರ್ ಉದ್ಯೋಗಿಗಳಿಗೆ ಸಿಗಲಿದೆ.
ಈ ಬಗ್ಗೆ ಆ್ಯಪಲ್​ ರಿಟೈಲ್ ಸ್ಟೋರ್ ನಲ್ಲಿ ಸದ್ಯ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರನ್ನು ಮಾಧ್ಯಮವೊಂದು ವಿಚಾರಿಸಿದಾಗ ಹೆಸರು ಹೇಳಲಿಚ್ಛಿಸದ ಉದ್ಯೋಗಿಯು, "ನಾನು ವೆಬ್ ಸೈಟಿನಲ್ಲಿ ಉದ್ಯೋಗ ಪೊಸ್ಟ್ ನೋಡಿ ಅದಕ್ಕಾಗಿ ನನ್ನ ರೆಸ್ಯುಮ್ ಸಲ್ಲಿಸಿದೆ. ನನಗೆ ಕರೆ ಬಂದಿತು ಹಾಗೂ ಆಯ್ಕೆಯಾದೆ. ನನಗೆ ಈ ಹಿಂದೆಯೂ ಸ್ಟೋರ್ ನಲ್ಲಿ ಕೆಲಸ ಮಾಡಿದ ಅನುಭವಿದ್ದು ಈಗಲೂ ಇಲ್ಲಿ ಮಾಡುತ್ತಿರುವ ಕೆಲಸ ಅಷ್ಟೊಂದೇನೂ ಭಿನ್ನವಾಗಿಲ್ಲ. ಆದರೆ ನನ್ನ ಕೆರಿಯರ್ ನಲ್ಲಿ ಈ ಕಂಪನಿಯ ಬ್ರ್ಯಾಂಡ್ ಮಹತ್ವವಾಗಿದ್ದು ಮುಂದೆ ನನಗೆ ಉತ್ತಮ ಅವಕಾಶ ದೊರೆಯಬಹುದು" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

top videos
    First published: