ಕಡಿಮೆ ಬೆಲೆಗೆ ಆ್ಯಪಲ್​ ಮೊಬೈಲ್​, ಭಾರತದಲ್ಲೇ ನಿರ್ಮಾಣವಾಗುತ್ತಿದೆ iPhone 6s, !


Updated:June 27, 2018, 6:02 PM IST
ಕಡಿಮೆ ಬೆಲೆಗೆ ಆ್ಯಪಲ್​ ಮೊಬೈಲ್​, ಭಾರತದಲ್ಲೇ ನಿರ್ಮಾಣವಾಗುತ್ತಿದೆ iPhone 6s, !

Updated: June 27, 2018, 6:02 PM IST
ಕಳೆದ ವರ್ಷವಷ್ಟೇ SE ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಿರುವ ಆ್ಯಪಲ್​ ಸಂಸ್ಥೆ ಮುಂದಿನ ಕೆಲವೇ ದಿನಗಳಲ್ಲಿ ಮೇಡ್​ ಇನ್ ಇಂಡಿಯಾ ಯೋಜನೆಯಡಿಯಲ್ಲಿ iPhone 6s  ನಿರ್ಮಾಣವ​ನ್ನು ಕಳೆದ ವಾರವೇ ಆರಂಭಿಸಿರುವುದಾಗಿ ವರದಿಯಾಗಿದೆ.

ತೈವಾನ್​ನ ಖ್ಯಾತ ಮೊಬೈಲ್​ ಪಾರ್ಟ್ಸ್​ಗಳ ನಿರ್ಮಾಣದ ಸಂಸ್ಥೆಯಾದ ವಿಸ್ಟ್ರಾನ್​ನೊಂದಿಗೆ ಕೈ ಜೋಡಿಸಿದ್ದು, ಈ ಮೂಲಕ ಇಲ್ಲೇ ಆ್ಯಪಲ್​ ನಿರ್ಮಾಣ ಮಾಡಬಹುದಾಗಿದೆ. ಈ ರೀತಿ ಮಾಡುವುದರಿಂದ ಆಮದು ಸುಂಕವನ್ನು ಉಳಿಸಬಹುದು ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಈಗಿರುವ ಮಾಹಿತಿಗಳ ಪ್ರಕಾರ ಐಫೋನ್​ 6s ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಬೆಂಬಲವನ್ನು ವಿಸ್ಟ್ರಾನ್​ ನೀಡುತ್ತಿಲ್ಲ. ಹೀಗಾಗಿ ಪ್ರಮುಖ ಬಿಡಿಭಾಗಗಳನ್ನು ಆ್ಯಪಲ್​ ತನ್ನ ಮಾತೃ ಸಂಸ್ಥೆಯಿಂದಲೇ ತೆರಬೇಕು. ಆದರೂ ಸಂಸ್ಥೆ ಈಗಿರುವ ಮೂಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ 6s ಮೊಬೈಲ್​ನ್ನು ನಿರ್ಮಾಣ ಮಾಡಬಹುದಾಗಿದೆ. ಲೆಕ್ಕಗಳ ಪ್ರಕಾರ ಭಾರತದಲ್ಲಿ ಮಾರಾಟವಾಗಿರುವ ಆ್ಯಪಲ್​ ಮೊಬೈಲ್​ಗಳಲ್ಲಿ ಐಫೋನ್​ 6sನ್ನು ಅತ್ಯಂತ ಹೆಚ್ಚು ಮತ್ತು ರೆಕಾರ್ಡ್​ ಮಾಡಿರುವ ಮೊಬೈಲ್​ ಆಗಿದೆ.

ಕೆಲ ದಿನಗಳ ಹಿಂದೆ ಏರಿಕೆ ಕಂಡಿದ್ದ ಕಸ್ಟಂ ಸುಂಕದಿಂದಾಗಿ ಆ್ಯಪಲ್​ ಕೂಡಾ ತನ್ನ ಎಲ್ಲಾ ಸರಕುಗಳ ಬೆಲೆಯನ್ನೂ ಏರಿಸಿತ್ತು. ಹೀಗಾಗಿ ಆಮದು ಸುಂಕವನ್ನು ತಡೆಗಟ್ಟಲು ನಿರ್ಧರಿಸಿದ ಸಂಸ್ಥೆ ಅತ್ಯಂತ ಹೆಚ್ಚು ಮಾರಾಟವಾಗುವ ಮೊಬೈಲ್​ನ ನಿರ್ಮಾಣವನ್ನು ಇಲ್ಲಿ ಆರಂಭಿಸಲು ತೀರ್ಮಾನಿಸಿದೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...