iPhone: ಬೆಂಗಳೂರಿನಲ್ಲಿ ಐಫೋನ್ ಉತ್ಪಾದನೆ ಆರಂಭಿಸಿದ ಟಾಟಾ ಗ್ರೂಪ್!

ಫೋನ್​

ಫೋನ್​

ಟಾಟಾ ಗ್ರೂಪ್ ಈಗಾಗಲೇ ವಿಸ್ಟ್ರಾನ್ ಫ್ಯಾಕ್ಟ್ರಿಯಲ್ಲಿ ಐಫೋನ್ ತಯಾರಿಕೆಯಲ್ಲಿ ತೊಡಗಿದ್ದು ಅವರ ಪ್ರತಿನಿಧಿಗಳು, ಅಧಿಕಾರಿಗಳು, ಮಾನವ ಸಂಪನ್ಮೂಲ ವಿಭಾಗ ಆಡಳಿತ ವರ್ಗ ಕೂಡ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.

  • Share this:

ಭಾರತದಲ್ಲಿ (India) ಐಫೋನ್ (IPhone) ತಯಾರಿಸುವ ಮಹಾತ್ವಾಕಾಂಕ್ಷೆಯ ಉತ್ಪಾದನಾ ಕ್ರಮವಾಗಿ ಟಾಟಾ ಗ್ರೂಪ್ (Tata Group)ಭಾರತದಲ್ಲಿಯೇ ಆ್ಯಪಲ್ ಐಫೋನ್ ತಯಾರಿಯ ಕಾರ್ಯದಲ್ಲಿ ಸನ್ನದ್ಧವಾಗಿದ್ದು ತೈವಾನ್ ದೈತ್ಯ ವಿಸ್ಟ್ರಾನ್‌ನ ಬೆಂಗಳೂರು ಹೊರವಲಯದ ನರಸಾಪುರ ಫ್ಯಾಕ್ಟ್ರಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.


ಆ್ಯಪಲ್ ಸಿಇಒ ಟಿಮ್ ಕುಕ್ ಏಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಟಾಟಾ ಸನ್ಸ್ ಚೇರ್‌ಮೆನ್ ಎನ್ ಚಂದ್ರಶೇಖರನ್ ಅವರೊಂದಿಗೆ ಮುಂಬೈಯಲ್ಲಿ ಈ ಬಗ್ಗೆ ಸಭೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದ್ದು ತರುವಾಯ ದೇಶದಲ್ಲಿಯೇ ಐಫೋನ್ ತಯಾರಿಕೆಗೆ ಟಾಟಾ ಗ್ರೂಪ್ ಮುಂದಾಗಿದೆ.


ತೈವಾನಿ ದೈತ್ಯ ವಿಸ್ಟ್ರಾನ್ ನಿರ್ಗಮನ


ತಂತ್ರಜ್ಞಾನ ರಂಗದ ಇಬ್ಬರು ಪ್ರಮುಖ ಮೇಧಾವಿ ವ್ಯಕ್ತಿಗಳು ಟಾಟಾ ಗ್ರೂಪ್‌ನ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ತಯಾರಿಕಾ ಯೋಜನೆಗಳ ಬಗ್ಗೆ ಚರ್ಚಿಸಿದ್ದು ಪಾಲುದಾರಿಕೆಯಿಂದ ಯಾವ ಬಗೆಯ ನಿರೀಕ್ಷೆಯನ್ನಿರಿಸಿಕೊಂಡಿದೆ ಎಂಬುದು ತಿಳಿದು ಬಂದಿಲ್ಲ.


ವಿಸ್ಟ್ರಾನ್ ಗ್ರೂಪ್ ಬೆಂಗಳೂರಿನಿಂದ ಸಂಪೂರ್ಣವಾಗಿ ನಿರ್ಗಮಿಸಲಿದೆಯೇ ಎಂಬುದು ಇನ್ನೂ ನಿಖರವಾಗಿಲ್ಲ ಆದರೆ ಸಂಸ್ಥೆಯ ವಕ್ತಾರರು ತಿಳಿಸಿರುವಂತೆ ತೈವಾನಿ ದೈತ್ಯ ಇನ್ನು ಕೆಲವೊಂದು ಬ್ಯುಸಿನೆಸ್‌ನತ್ತ ಗಮನ ಹರಿಸುವುದಕ್ಕಾಗಿ ಬೆಂಗಳೂರಿನಿಂದ ನಿರ್ಗಮಿಸಲಿದೆ ಎಂಬ ವರದಿಯೂ ದೊರಕಿದೆ. ಆ್ಯಪಲ್ ರಹಿತ ಪ್ರಾಡಕ್ಟ್‌ಗಳ ಮೇಲೆ ಗಮನ ಹರಿಸಲಿದೆ ಎಂಬ ಮಾಹಿತಿ ದೊರಕಿದೆ.


ಐಫೋನ್‌ಗಳ ತಯಾರಿಗೆ ಮುಂದಾದ ಟಾಟಾ


ಆ್ಯಪಲ್ ಸಿಇಒ ಟಿಮ್ ಕುಕ್ ಭಾರತಕ್ಕೆ ಭೇಟಿ ನೀಡಿದ ವಾರಗಳ ನಂತರ ಕೋಲಾರ ಜಿಲ್ಲೆಯಲ್ಲಿರುವ ವಿಸ್ಟ್ರಾನ್‌ನ ನರಸಾಪುರ ಫ್ಯಾಕ್ಟ್ರಿಯಲ್ಲಿ ಟಾಟಾ ಗ್ರೂಪ್ ಐಫೋನ್‌ಗಳನ್ನು ತಯಾರಿಸಲು ಮುಂದಾಗಿದೆ.


ತೈವಾನಿ ಗ್ರೂಪ್ ವಿಸ್ಟ್ರಾನ್ ಕೂಡ ತನ್ನ ಇನ್ನಿತರ ಕಾರ್ಯಾಚರಣೆಗಳ ಮೇಲೆ ಸಂಪೂರ್ಣ ಗಮನಹರಿಸುವುದಕ್ಕಾಗಿ ಆ್ಯಪಲ್ ಕಾರ್ಯಾಚರಣೆಗಳಿಂದ ಸಂಪೂರ್ಣವಾಗಿ ನಿರ್ಗಮಿಸುವುದಾಗಿ ತಿಳಿಸಿದೆ.
ಕಾರ್ಯಾಚರಣೆ ಆರಂಭ


ಟಾಟಾ ಗ್ರೂಪ್‌ನ ಆಯ್ದ ಅಧಿಕಾರಿಗಳು ಈಗಾಗಲೇ ಬೆಂಗಳೂರಿನಲ್ಲಿರುವ ವಿಸ್ಟ್ರಾನ್‌ ಫ್ಯಾಕ್ಟ್ರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಗ್ರೂಪ್‌ನ ಚೇರ್‌ಮೆನ್ ಆಗಿರುವ ಚಂದ್ರಶೇಖರ್ ಅವರ ಮುಂದಾಳತ್ವದಲ್ಲಿ ಕಾರ್ಯಾಚರಣೆಗಳು ನಡೆಯಲಿದ್ದು ಇವರ ನೇತೃತ್ವದಲ್ಲಿಯೇ ತಯಾರಿಕಾ ಕಾರ್ಯಾಚರಣೆಗಳು ನಡೆಯಲಿವೆ ಎಂಬುದು ಸುದ್ದಿಯಾಗಿದೆ.


ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತರಬೇತಿ


ಟಾಟಾ ಗ್ರೂಪ್ ಈಗಾಗಲೇ ವಿಸ್ಟ್ರಾನ್ ಫ್ಯಾಕ್ಟ್ರಿಯಲ್ಲಿ ಐಫೋನ್ ತಯಾರಿಕೆಯಲ್ಲಿ ತೊಡಗಿದ್ದು ಅವರ ಪ್ರತಿನಿಧಿಗಳು, ಅಧಿಕಾರಿಗಳು, ಮಾನವ ಸಂಪನ್ಮೂಲ ವಿಭಾಗ ಆಡಳಿತ ವರ್ಗ ಕೂಡ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.


ಕಾರ್ಯಾಚರಣೆ ಹಾಗೂ ಪ್ರಕ್ರಿಯೆಗಳ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಗಳಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಸ್ಥೆಯ ಹಳೆಯ ಮಾರಾಟಗಾರ ಸಂಸ್ಥೆಗಳಾದ ಫಾಕ್ಸ್‌ಕಾನ್, ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಮಾತ್ರ ಭಾರತದಲ್ಲಿ ಎಂಡ್ ಟು ಎಂಡ್ ಐಫೋನ್‌ಗಳ ತಯಾರಿಸುತ್ತಿದೆ.


ಬೇಸ್ ಮೆಟಲ್‌ನಂತಹ ಸಣ್ಣ ವಿಷಯಗಳಿಗೆ ಪ್ರಾಮುಖ್ಯತೆ


ಆರ್ಥಿಕ ವರ್ಷ 23 ರಲ್ಲಿ, ಭಾರತವು ಐಫೋನ್‌ನ ಒಟ್ಟು ಜಾಗತಿಕ ಉತ್ಪಾದನೆಯಲ್ಲಿ 5% ರಷ್ಟನ್ನು ಹೊಂದಿದೆ ಮತ್ತು $ 5 ಶತಕೋಟಿ ಮೌಲ್ಯದ ಫೋನ್‌ಗಳನ್ನು ರಫ್ತು ಮಾಡಿದೆ, ಇದು ಒಂದು ವರ್ಷದ ಹಿಂದೆ ಹೋಲಿಸಿದರೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.


ಆಪಲ್ ಗುಣಮಟ್ಟ, ವಿನ್ಯಾಸ ಪ್ರಕ್ರಿಯೆ ಮತ್ತು ಲೋಹದ ಮೂಲ ಮತ್ತು ಬಳಸಿದ ದರ್ಜೆಯ ಮೇಲೆ ಕಟ್ಟುನಿಟ್ಟಾದ ನಿಯಂತ್ರಣಗಳನ್ನು ಹೊಂದಿದೆ. ಆದ್ದರಿಂದ ಟಾಟಾಗಳನ್ನು ಒಳಗೊಂಡಂತೆ ಆಪಲ್‌ನ ಎಲ್ಲಾ ಗುತ್ತಿಗೆ ತಯಾರಕರಿಂದ ಬೇಸ್ ಮೆಟಲ್‌ನಂತಹ ಸಣ್ಣ ವಿಷಯಗಳಿಗೆ ಪ್ರಾಮುಖ್ಯತೆಗಳನ್ನು ನೀಡಲಾಗಿದೆ.


ಇದನ್ನೂ ಓದಿ: IIT Madras ರೂಪಿಸಿದೆ ‘ಶಕ್ತಿಮಾನ್’ ಪ್ರೊಸೆಸರ್! ಏನಿದೆ ಇದರ ವಿಶೇಷತೆ?


ಚೀನೀ ಮಾರಾಟಗಾರರಿಂದ ಆಮದು


ಗರಿಷ್ಠ ಉತ್ಪಾದನೆಗೆ ಸಂಬಂಧಿಸಿದಂತೆ, ದಿನಕ್ಕೆ 20,000-25,000 ಅಲ್ಯೂಮಿನಿಯಂ ಸೆಟ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಅಥವಾ ತಿಂಗಳಿಗೆ 7-8 ಲಕ್ಷ ಯೂನಿಟ್‌ಗಳನ್ನು ಈ ಆ್ಯಪ‌ಲ್ -ಪರಿಶೀಲಿಸಿದ ಚೀನೀ ಮಾರಾಟಗಾರರಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

First published: