• Home
  • »
  • News
  • »
  • tech
  • »
  • Apple Smartwatch: ಸಾವು ಬದುಕಿನ ಹೋರಾಟದಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಆ್ಯಪಲ್​ ಸ್ಮಾರ್ಟ್​ವಾಚ್​! ಹೀಗಿದೆ ಫೀಚರ್ಸ್​

Apple Smartwatch: ಸಾವು ಬದುಕಿನ ಹೋರಾಟದಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಆ್ಯಪಲ್​ ಸ್ಮಾರ್ಟ್​ವಾಚ್​! ಹೀಗಿದೆ ಫೀಚರ್ಸ್​

ಆ್ಯಪಲ್​ ವಾಚ್​

ಆ್ಯಪಲ್​ ವಾಚ್​

ಆ್ಯಪಲ್​ ಸ್ಮಾರ್ಟ್​ವಾಚ್​ ಈ ಹಿಂದೆ ಹಲವಾರು ಜನರ ಜೀವ ರಕ್ಷಣೆ ಮಾಡುವಲ್ಲಿ ತೊಡಗಿಗೊಂಡಿದೆ. ಇದೀಗ ಮತ್ತೊಂದು ಅಚ್ಛರಿಯ ಘಟನೆಯೊಂದು ಹೊರಬಿದ್ದಿದೆ. ಕೆಲ ದಿನಗಳ ಹಿಂದೆ ಕಾರು ಅಪಘಾತದಲ್ಲಿ ಸಾವು ಬದುಕಿನ ನಡುವೆ ಇದ್ದಂತಹ ವ್ಯಕ್ತಿಯ ಪ್ರಾಣವನ್ನು ಉಳಿಸಿದೆ. ಹಾಗಿದ್ರೆ  ಆ ಫೀಚರ್​ ಯಾವುದು ಎಂಬುದನ್ನು ನಿಮಗೂ ತಿಳಿಬೇಕಾದ್ರೆ ಈ ಲೇಖನವನ್ನು ಫುಲ್ ಓದಿ.

ಮುಂದೆ ಓದಿ ...
  • Share this:

    ಸ್ಮಾರ್ಟ್​ವಾಚ್​​ಗಳು (Smartwatches) ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹೊಸ ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ. ಹಿಂದೆಲ್ಲಾ ವಾಚ್​ಗಳನ್ನು ಕೈಗಳಿಗೆ ಧರಿಸುವ ಉದ್ದೇಶ ಕೇವಲ ಸಮಯವನ್ನು ನೋಡುವುದಾಗಿತ್ತು. ಆದರೆ ಈಗ ಅದೇ ಒಂದು ಫ್ಯಾಶನ್ ಆಗಿಬಿಟ್ಟಿದೆ. ಅದ್​ರಲ್ಲೂ ಈಗೀಗ ಬಿಡುಗಡೆಯಾಗುತ್ತಿರುವ ಸ್ಮಾರ್ಟ್​ವಾಚ್​ಗಳಂತೂ ಸ್ಮಾರ್ಟ್​ಫೋನ್​ಗಳಂತೆಯೇ ಫೀಚರ್ಸ್​​ಗಳನ್ನು ಹೊಂದಿದೆ. ಆ್ಯಪಲ್​ ಕಂಪೆನಿ ಬಿಡುಗಡೆ ಮಾಡುವಂತಹ ಎಲ್ಲಾ ಟೆಕ್​ ಡಿವೈಸ್​ಗಳಂತೂ (Tech Device) ವಿಶಿಷ್ಟ ಫೀಚರ್ಸ್​ಗಳನ್ನು ಒಳಗೊಂಡಿರುತ್ತದೆ. ಇದೀಗ ಆ್ಯಪಲ್​ ಸ್ಮಾರ್ಟ್​​ವಾಚ್ (Apple Watch)​ ಒಬ್ಬ ವ್ಯಕ್ತಿಯ ಜೀವವನ್ನೇ ಉಳಿಸಿದೆ. ಅಪಘಾತದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಂತಹ ವ್ಯಕ್ತಿ ಜೀವವನ್ನು ಉಳಿಸಿದ ಕೀರ್ತಿ ಆ್ಯಪಲ್​ ವಾಚ್​ಗೆ ಇದೆ. ಇನ್ಮುಂದೆ ಸ್ಮಾರ್ಟ್​ವಾಚ್​ಗಳಲ್ಲೂ ತುರ್ತು ಸಂದರ್ಭದಲ್ಲಿ ನೆರವು ಬೇಕಾದಾಗ  ಸಹಾಯ ಕೇಳಬಹುದಾಗಿದೆ.


    ಆ್ಯಪಲ್​ ಸ್ಮಾರ್ಟ್​ವಾಚ್​ ಈ ಹಿಂದೆ ಹಲವಾರು ಜನರ ಜೀವ ರಕ್ಷಣೆ ಮಾಡುವಲ್ಲಿ ತೊಡಗಿಗೊಂಡಿದೆ. ಇದೀಗ ಮತ್ತೊಂದು ಅಚ್ಛರಿಯ ಘಟನೆಯೊಂದು ಹೊರಬಿದ್ದಿದೆ. ಕೆಲ ದಿನಗಳ ಹಿಂದೆ ಕಾರು ಅಪಘಾತದಲ್ಲಿ ಸಾವು ಬದುಕಿನ ನಡುವೆ ಇದ್ದಂತಹ ವ್ಯಕ್ತಿಯ ಪ್ರಾಣವನ್ನು ಉಳಿಸಿದೆ. ಹಾಗಿದ್ರೆ  ಆ ಫೀಚರ್​ ಯಾವುದು ಎಂಬುದನ್ನು ನಿಮಗೂ ತಿಳಿಬೇಕಾದ್ರೆ ಈ ಲೇಖನವನ್ನು ಫುಲ್ ಓದಿ.


    ಘಟನೆ ಏನು?


    ಅಮೆರಿಕದ ಇಂಡಿಯಾನಾಪೊಲಿಸ್ ನಗರದಲ್ಲಿ ವಾಸಿಸುತ್ತಿರುವ ನೋಲನ್ ಅಬೆಲ್​ ಎಂಬವರು ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ವೇಳೆ, ಅವರ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಕಾರು ಹೋಗಿ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಅಬೆಲ್​ ಅವರು ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ಆದರೆ ಕೊನೆಗೂ ಇವರನ್ನು ಬದುಕಿಸಿದ್ದು ಇವರ ಕೈಯಲ್ಲಿದ್ದ ಆ್ಯಪಲ್ ವಾಚ್​ 8 ಸೀರಿಸ್.




    ವಾಯ್ಸ್​ ಮೂಲಕ ಟ್ರ್ಯಾಕ್​


    ಆ್ಯಪಲ್​ ವಾಚ್​ಗಳಲ್ಲಿ ಕ್ರ್ಯಾಶ್​ ಮತ್ತು ಎಸ್​​ಓಎಸ್​ ಎಂಬ ಫೀಚರ್ಸ್​ಗಳಿವೆ. ನೋಲನ್ ಅಬೆಲ್ ಅವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದಾಗ ತಾನು ಧರಿಸಿದ್ದ ಆ್ಯಪಲ್​ ವಾಚ್​ನಿಂದ ಒಂದು ವಾಯ್ಸ್​ ಬರುತ್ತದೆ. ಅದರಲ್ಲಿ ಕ್ರ್ಯಾಶ್​ ಅನ್ನು ಪತ್ತೆಹೆಚ್ಚಿದ ಆ್ಯಪಲ್​ ವಾಚ್​, ಅಬೆಲ್​ ಅವರಲ್ಲಿ, ನೀವು ಚೆನ್ನಾಗಿದ್ದೀರಾ? ಎಂಬ ವಾಯ್ಸ್​ ನೋಟ್ ಮೂಲಕ ಕೇಳುತ್ತದೆ. ಈ ಮೂಲಕ ಆ ವಾಯ್ಸ್​ಗೆ ಅಬೆಲ್​ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಎಸ್​ಓಎಸ್​ ಎಂಬ ಫೀಚರ್ಸ್​ ಆನ್​ ಆಗಿ ಅಬೆಲ್ ಅವರ ಪ್ರಾಣ ಉಳಿಸುವಲ್ಲಿ ಕೆಲಸ ಮಾಡಿದೆ.


    ಒಂದು ವಾರ ಹಿಂದಷ್ಟೇ ಖರೀದಿ ಮಾಡಿದ ವಾಚ್


    ಅಚ್ಛರಿಯ ವಿಷಯ ಏನಪ್ಪಾ ಅಂತ ಹೇಳಿದ್ರೆ, ನೋಲನ್ ಅಬೆಲ್ ಅವರು ಯಾವುದೇ ಉದ್ದೇಶವನ್ನು ಇಟ್ಟಕೊಳ್ಳದೇ ಒಂದು ವಾರದ ಹಿಂದಷ್ಟೇ ಈ ಆ್ಯಪಲ್​ ವಾಚ್​ 8 ಸೀರಿಸ್​ ಅನ್ನು ಖರೀದಿಸಿದ್ದರಂತೆ. ಆದರೆ ಈಗ ಇದೇ ವಾಚ್ ಅಬೆಲ್ ಅವರ ಪ್ರಾಣವನ್ನು ಉಳಿಸಿರುವುದು ಎಲ್ಲರೂ ಅಚ್ಛರಿ ಮತ್ತು ಸಂತಸ ಪಡುವ ವಿಷಯವಾಗಿದೆ. ಇದಲ್ಲದೆ ಅಬೆಲ್​ ಅವರು ಕೂಡ ಈ ವಾಚ್​ಗೆ ಕೃತಜ್ಞರಾಗಿದ್ದಾರೆ.


    ಆ್ಯಪಲ್​ ವಾಚ್​


    ಹೇಗೆ ಪತ್ತೆ ಮಾಡುತ್ತದೆ?


    ಕ್ರ್ಯಾಶ್ ಫೀಚರ್​ ಎಂಬು ಆ್ಯಪಲ್ ವಾಚ್​ನಲ್ಲಿ ಯಾವುದಾದರು ಅಪಘಾತದ ಸಂದರ್ಭದಲ್ಲಿ ಕೆಲಸ ಮಾಡುತ್ತದೆ.  ಇದು ಆ್ಯಪಲ್​ ಡಿವೈಸ್​ಗಳಲ್ಲಿ ಇನ್​ಬಿಲ್ಟ್​ ಆಯ್ಕೆಯಾಗಿದೆ. ಕ್ರ್ಯಾಶ್​ ಎಂಬ ಹೆಸರೇ ಸುಚಿಸುವಂತೆ ಅಪಘಾತ ಪತ್ತೆ ಫೀಚರ್ಸ್​ ಮೂಲಕ ನೀವು ಗಂಭೀರವಾದ ಕಾರು ಅಪಘಾತದಲ್ಲಿ ಅಥವಾ ಇನ್ಯಾವುದೋ ಅಪಘಾತದಲ್ಲಿ ಒಳಗಾಗಿದ್ದಾಗ ಈ ಫೀಚರ್​ ತುಂಬಾನೇ ಸಹಕಾರಿಯಾಗುತ್ತದೆ.


    ಇದನ್ನೂ ಓದಿ: 21 ಗಂಟೆಗಳ ಬ್ಯಾಟರಿ ಬ್ಯಾಕಪ್​ ಹೊಂದಿದ ಇಯರ್​ಬಡ್ಸ್​ ಬಿಡುಗಡೆ! ಕೇವಲ 3999 ರೂಪಾಯಿ


    ಕೆಲವೇ ಸೆಕೆಂಡುಗಳಲ್ಲಿ ಪತ್ತೆ ಮಾಡುತ್ತದೆ


    ಈ ಫೀಚರ್ಸ್‌ ಇರುವ ಡಿವೈಸ್‌ ಬಳಕೆ ಮಾಡಿದ್ದ ಸಂದರ್ಭದಲ್ಲಿ ಏನಾದರೂ ಅಪಘಾತ ಸಂಭವಿಸಿದರೆ ತಕ್ಷಣವೇ ನೀವು ಚೆನ್ನಾಗಿದ್ದೀರಾ ಎಂದು ಕೇಳುತ್ತದೆ. ಆಗ ಏನಾದರೂ ನೀವು ಪ್ರತಿಕ್ರಿಯೆ ನೀಡಲಿಲ್ಲ ಅಂದರೆ 10 ಸೆಕೆಂಡ್‌ಗಳ ನಂತರ ಎಸ್​​ಓಎಸ್​ ಫೀಚರ್ಸ್‌ ಆ್ಯಕ್ಟಿವ್​ ಆಗುವ ಮೂಲಕ ನಿಮ್ಮನ್ನು ರಕ್ಷಣೆ ಮಾಡಲು ಮುಂದಾಗುತ್ತದೆ. ಅಂದರೆ ಆಟೋಮ್ಯಾಟಿಕ್‌ ಆಗಿ ತುರ್ತು ಕರೆ ಮಾಡುತ್ತದೆ. ಹಾಗೆಯೇ ನಿಮ್ಮ ಸ್ಥಳವನ್ನು ಬೇಕಾದವರ ಜೊತೆಗೆ ಶೇರ್‌ ಮಾಡಿಕೊಳ್ಳುತ್ತದೆ.

    Published by:Prajwal B
    First published: