• Home
 • »
 • News
 • »
 • tech
 • »
 • Apple Smartwatch: ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ಸ್ಮಾರ್ಟ್‌ವಾಚ್, ಏನ್​ ಟೆಕ್ನಾಲಜಿ ಗುರೂ!

Apple Smartwatch: ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ಸ್ಮಾರ್ಟ್‌ವಾಚ್, ಏನ್​ ಟೆಕ್ನಾಲಜಿ ಗುರೂ!

Apple smartwatch

Apple smartwatch

ಯುವಜನರಲ್ಲಿ ಅಸಾಮಾನ್ಯವಾದ ರೋಗಗಳನ್ನು ಕಂಡುಹಿಡಿಯಲು ಈ ಸಾಧನ ಸಹಾಯಕವಾಗಿದೆ. ಆಪಲ್ ವಾಚ್‌ನಲ್ಲಿನ ಹಾರ್ಟ್ ಬೀಟ್ ಮಾನಿಟರಿಂಗ್ ಫೀಚರ್ ಈಗಿನ ಯುವಜನತೆಗೆ ಅರೋಗ್ಯದ ವಿಷಯದಲ್ಲಿ ತುಂಬಾ ಉಪಯೋಗವಾಗಿದೆ.

 • Share this:

  ಇದು ತಂತ್ರಜ್ಞಾನ (Technology) ಯುಗ. ಇಲ್ಲಿ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದೇ ಉದ್ದೇಶವಾಗಿರುತ್ತದೆ. ಈ ಸಂಸ್ಥೆಗಳು ಈ ತಂತ್ರಜ್ಞಾನಗಳು ಅಭಿವೃದ್ಧಿಯಾಗಲು ಕಾರಣಗಳಾಗಿವೆ. ಈ ಕಂಪನಿಗಳಲ್ಲಿ ಆಪಲ್‌ ಕಂಪನಿಯೂ (Apple Company) ಒಂದು. ಇದು ದಿನದಿಂದ ದಿನಕ್ಕೆ ಏನಾದರೊಂದು ಸಂಶೋಧನೆಯನ್ನು (Research) ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಆಪಲ್‌ನ ತಾಂತ್ರಿಕ ಆವಿಷ್ಕಾರಗಳು ಹಲವಾರು ಬಾರಿ ಜೀವಗಳನ್ನು ಉಳಿಸಿವೆ. ಈ ಸಾಲಿಗೆ 12 ವರ್ಷದ ಬಾಲಕಿಯೊಬ್ಬಳು ಸೇರಿದ್ದಾಳೆ. ಆಪಲ್ ವಾಚ್‌ನಿಂದಾಗಿ ಆಕೆ ದೊಡ್ಡ ಆನಾರೋಗ್ಯಕಾರಿ ಗಂಡಾಂತರದಿಂದ ಪಾರಾಗಿದ್ದಾಳೆ. ಹಾಗಾಗಿ, ಬಾಲಕಿಯ ಕುಟುಂಬವು ಆಪಲ್ ವಾಚ್‌ನ (Apple Watch) ಸಾಮರ್ಥ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ.


  ಯುವಜನರಲ್ಲಿ ಅಸಾಮಾನ್ಯವಾದ ಕ್ಯಾನ್ಸರ್ ಅನ್ನು ಕಂಡುಹಿಡಿಯಲು ಈ ಸಾಧನಕ್ಕೆ ಸಾಧ್ಯವಾಗಿದೆ. ಅದೇ ರೀತಿ ತನ್ನ ಜೀವವನ್ನು ಉಳಿಸಿದೆ ಎಂದು ಆ ಬಾಲಕಿಯು ಹೇಳಿದ್ದಾಳೆ. ಆಪಲ್ ವಾಚ್‌ನಲ್ಲಿನ ಹಾರ್ಟ್ ಬೀಟ್ ಮಾನಿಟರಿಂಗ್ ಫೀಚರ್ ಅನ್ನು ನಾವು ವಾಚ್ ಎಸ್‌ಇ, ವಾಚ್ 7 ಮತ್ತು ಇತ್ತೀಚೆಗೆ ಬಿಡುಗಡೆಯಾದ ವಾಚ್ 8 ಮತ್ತು ವಾಚ್ ಅಲ್ಟ್ರಾದಲ್ಲಿ ಕಾಣಬಹುದಾಗಿದೆ.


  ಘಟನೆಯ ವಿವರ: 


  12 ವರ್ಷ ವಯಸ್ಸಿನ ಇಮಾನಿ ಮೈಲ್ ಅವರ ಆಪಲ್ ವಾಚ್ ಒಂದು ಸಂಜೆ ಅಸಾಮಾನ್ಯವಾಗಿ ಹೆಚ್ಚಿನ ಹೃದಯ ಬಡಿತದ ಬಗ್ಗೆ ಎಚ್ಚರಿಸಲು ಪ್ರಾರಂಭಿಸಿತು. ಆಗ ಎಚ್ಚೆತ್ತುಕೊಂಡ ಮೈಲ್ ಅನ್ನು ಆಕೆಯ ತಾಯಿ ಜೆಸ್ಸಿಕಾ ಕಿಚನ್ ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೆ  ಅಪೆಂಡಿಸೈಟಿಸ್  ಇದೆ ಎಂಧು ವೈದ್ಯರು ತಿಳಿಸಿದರು.


  ಇದನ್ನೂ ಓದಿ: ಟ್ರೂ ಕಾಲರ್​ನ ಈ ಫೀಚರ್​​ಗಳನ್ನು ನೀವೊಮ್ಮೆ ನೋಡಲೇ ಬೇಕು


  ಇದನ್ನು ಹೇಳುವುದರ ಜೊತೆಗೆ ಮತ್ತೊಂದು ವಿಷಯವನ್ನು ತಿಳಿಸಿದರು. ಈ ವಿಷಯ ಅವರನ್ನು ಬೆಚ್ಚಿಬೀಳುವಂತೆ ಮಾಡಿತು. ಏಕೆಂದರೆ ಬಾಲಕಿಯ ಅಪೆಂಡಿಕ್ಸ್‌ನಲ್ಲಿ ನ್ಯೂರೋಎಂಡೋಕ್ರೈನ್ ಗಡ್ಡೆ ಕ್ಯಾನ್ಸರ್ ಇರುವುದನ್ನು ವೈದ್ಯರು ಪತ್ತೆ ಹಚ್ಚಿದರು.  ಚಿಕ್ಕ ವಯಸ್ಸಿನಲ್ಲಿ ಕಂಡು ಬರುವುದು ಇದು ಬಹಳ ಕಡಿಮೆ ಎಂದು ವೈದ್ಯರು ತಿಳಿಸಿದರು. ಈ ಕ್ಯಾನ್ಸರ್ ಈಗಾಗಲೇ ಮೈಲ್ ದೇಹದ ಇತರ ಭಾಗಗಳಿಗೆ ಹರಡಿದೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದರು. ತಕ್ಷಣವೇ ಕ್ಯಾನ್ಸರ್ ಅನ್ನು ತೊಡೆದು ಹಾಕಲು ವೈದ್ಯರು ಸಿಎಸ್ ಮೋಟ್ ಚಿಡ್ರೆನ್ಸ್  ಶಸ್ತ್ರಚಿಕಿತ್ಸೆ ಕೈಗೊಂಡರು.


  Apple smart watch that detected cancer Do you read smart too Check once
  Apple smartwatch


  ಅವರ್‌ ಡೆಟ್ರಾಯಿಡ್‌ ಅವರ ವರದಿ ಪ್ರಕಾರ:


  ಈ ಘಟನರ ಕುರಿತಾಗಿ ಅವರ್ ಡೆಟ್ರಾಯಿಟ್ (Hour Detroit) ವರದಿ ಮಾಡಿತ್ತು. ಒಂದು ವೇಳೆ 12 ವರ್ಷದ ಬಾಲಕಿಯು ಆಪಲ್ ಕೈ ಗಡಿಯಾರವನ್ನು ಹೊಂದಿಲ್ಲದಿದ್ದರೆ, ತೀವ್ರ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿತ್ತು ಎಂದು ಆ ವರದಿಯಲ್ಲಿ ವಿವರಿಸಲಾಗಿದೆ.


  ಆಪಲ್‌ ವಾಚ್‌ ತಿಳಿಸಿದ ಇನ್ನೊಂದು ಅಚ್ಚರಿಯ ಸುದ್ದಿ:


  ಇದೇ ರೀತಿಯ ಘಟನೆಯೊಂದು ಈ ತಿಂಗಳ ಆರಂಭದಲ್ಲಿ ವರದಿಯಾಗಿತ್ತು. ಮಹಿಳೆಗೆ ತಾನು ಗರ್ಭವತಿಯಾಗಿರುವುದು ಗೊತ್ತೇ ಇರಲಿಲ್ಲ. ಆಕೆಗೆ ಗೊತ್ತಾಗುವ ಮುಂಚೆಯೇ ಆ ಬಗ್ಗೆ ಆಪಲ್ ವಾಚಿನಿಂದ ಆ ಬಗ್ಗೆ ಸುಳಿವು ನೀಡಿತ್ತು.


  Apple smart watch that detected cancer Do you read smart too Check once
  ಆಪಲ್‌ ಸ್ಮಾರ್ಟ್‌ವಾಚ್


  ರೆಡ್ಡಿಟ್ ಥ್ರೆಡ್ ಈ ಬಗ್ಗೆ ವರದಿ ಮಾಡಿದೆ:


  34 ವರ್ಷದ ಮಹಿಳೆಯೊಬ್ಬರು ಕ್ಲಿನಿಕಲ್ ಪರೀಕ್ಷೆಗೆ ಒಳಗಾಗುವ ಮೊದಲೇ ಗರ್ಭಧಾರಣೆಯನ್ನು ಗುರುತಿಸಲು ತನ್ನ ಆಪಲ್ ವಾಚ್ ಹೇಗೆ ಸಹಾಯ ಮಾಡಿತು ಎಂಬುದನ್ನು ಈ ವರದಿಯಲ್ಲಿ ತಿಳಿಸಿದ್ದಾರೆ. ದಿನಕ್ಕೊಂದು ರೀತಿಯಲ್ಲಿ ಆಪಲ್‌ ವಾಚ್‌ ತನ್ನ ಹೃದಯದ ಬಡಿತವನ್ನು ತೋರಿಸುತ್ತಿತ್ತು. ಇದರಿಂದ ಏನೋ ಸಮಸ್ಯೆಯಾಗಿದೆ ಎಂದು ತನಗೆ ಅನಿಸಲಾರಂಭಿಸಿತು ಎಂದು ಆಕೆ ಹೇಳಿದ್ದಾಳೆ.


  ಮಹಿಳೆಯ ಅನುಭವದ ಮಾತು


  ನನ್ನ ಹಾರ್ಟ್ ಬೀಟ್ ಸಾಮಾನ್ಯವಾಗಿ 57 ಇರುತ್ತದೆ. ಆದರೆ, ಆಪಲ್ ವಾಚಿನಲ್ಲಿ ಅಂದು 72 ತೋರಿಸುತ್ತಿತ್ತು. ಇದೇನು ಅಷ್ಟು ಹೆಚ್ಚಳವಾದಂತೆ ಇರಲಿಲ್ಲ. ಆದರೆ ಸುಮಾರು ದಿನಗಳವರೆಗೆ ಇದು ಹೀಗೆ ಇತ್ತು. ಆಗ ಸ್ವಲ್ಪ ಗಾಬರಿಯಾಗಿ ಯಾಕೆ ಈ ರೀತಿ ಹೃದಯವು ಈ ರೀತಿಯಾಗಿ ಬಡಿದುಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಮುಂದಾದೆ. ಬಹುಶಃ ಕೋವಿಡ್ ಸೋಂಕಿನಿಂದ ಆಗಿರಬಹುದು ಎಂದುಕೊಂಡೆ. ಆದರೆ, ಕೋವಿಡ್ ಪರೀಕ್ಷೆ ಮಾಡಿಸಿದಾಗ ರಿಸಲ್ಟ್ ನೆಗೆಟಿವ್ ಆಗಿತ್ತು ಎಂದು ಮಹಿಳೆ ತಿಳಿಸಿದ್ದಾಳೆ. ಆ ಬಳಿಕ, ಪರಿಕ್ಷೆ  ನಡೆಸಿದಾಗ ಗರ್ಭವತಿಯಾಗಿರುವುದು ಪತ್ತೆಯಾಗಿದೆ.


  ಇದನ್ನೂ ಓದಿ: WhatsApp ತರುತ್ತಿದೆ ಮತ್ತೊಂದು ಹೊಸ ಫೀಚರ್ಸ್, ಒಮ್ಮೆ ಸೆಂಡ್‌ ಮಾಡಿದ ಮೆಸೇಜ್‌ ಮತ್ತೆ ಎಡಿಟ್‌ ಮಾಡ್ಬಹುದಂತೆ!


  ಇದಕ್ಕೆ ಮುಖ್ಯ ಕಾರಣವೇ ಆಪಲ್‌ ವಾಚ್‌ ಎಂದು ಹೇಳಬಹುದು. ಈ ಋಇತಿ ಫೀಚರ್‌ಗಳು ಜನರಿಗೆ ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ಎಂಬುದನ್ನು ನಾವಿಲ್ಲಿ ನೋಡಬಹುದು.

  Published by:Harshith AS
  First published: