ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ ಕಂಪೆನಿಯೆಂದರೆ ಅದು ಆ್ಯಪಲ್ ಕಂಪೆನಿ. ಈ ಕಂಪೆನಿಯಿಂದ ಇದುವರೆಗೆ ಹಲವಾರು ಸ್ಮಾರ್ಟ್ಫೋನ್ಗಳು ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ತನ್ನ ವಿಶೇಷ ವಿನ್ಯಾಸ, ಫೀಚರ್ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಇದು ಆಕರ್ಷಿಸಿದೆ. ಇನ್ನು ಕೆಲವರಿಗೆ ಒಮ್ಮೆಯಾದರೂ ಐಫೋನ್ಗಳನ್ನು (Iphone) ಖರೀದಿಸಬೇಕೆಂದು ಆಸೆ ಇರುತ್ತದೆ. ಅದೇ ರೀತಿ ಎಷ್ಟೇ ದುಬಾರಿ ಬೆಲೆಯಾದ್ರೂ ಈ ಐಫೋನ್ ಅನ್ನು ಖರೀದಿಸುತ್ತಾರೆ. ಇತ್ತೀಚೆಗೆ ಆ್ಯಪಲ್ ಕಂಪೆನಿ (Apple Company) ತನ್ನ ಐಫೋನ್ನಲ್ಲಿ ಹಲವಾರು ಅಪ್ಡೇಟ್ಗಳನ್ನು ಮಾಡಿದೆ. ಇದೀಗ ಐಫೋನ್‌ಗಳ ಕಲರ್ನಲ್ಲೂ ಹೊಸತನವನ್ನು ಪ್ರಯತ್ನಿಸುತ್ತಿದೆ. ಮುಂಬರುವ ಐಫೋನ್ಗಳು ಹಳದಿ ಬಣ್ಣದಲ್ಲೂ ಖರೀದಿಗೆ ಲಭ್ಯವಿರುತ್ತದೆ.
ಕಳೆದ ವರ್ಷ ಆ್ಯಪಲ್ ಕಂಪೆನಿಯಿಂದ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಅದೇ ರೀತಿ ಈ ಎರಡೂ ಸ್ಮಾರ್ಟ್ಫೋನ್ಗಳಿಗೆ ಈಗಲೂ ಭಾರೀ ಬೇಡಿಕೆಯಿದೆ. ಇದೀಗ ಈ ಎರಡು ಸ್ಮಾರ್ಟ್ಫೋನ್ಗಳು ಇನ್ಮುಂದೆ ಹಳದಿ ಬಣ್ಣದಲ್ಲೂ ಖರೀದಿ ಮಾಡಬಹುದು.
ಯಾವಾಗದಿಂದ ಲಭ್ಯ?
ಐಫೋನ್ನ ಈ ಹೊಸ ಹಳದಿ ಬಣ್ಣದ ಮಾದರಿಯನ್ನು ಮಾರ್ಚ್ 10 ರಿಂದ ಪ್ರೀಬುಕಿಂಗ್ ಮಾಡುವ ಮೂಲಕ ಖರೀದಿಗೆ ಲಭ್ಯಗೊಳಿಸಲಾಗಿದೆ. ಅದೇ ರೀತಿ ಮಾರ್ಚ್ 14 ರಂದು ರೀಟೇಲ್ ಶಾಪ್ಗಳಲ್ಲಿ ಮಾರಾಟ ಆರಂಭವಾಗಲಿದೆ. ಐಫೋನ್ 14 ಹಳದಿ ರೂಪಾಂತರದ ಬೆಲೆ ರೂ 79,990 ಮತ್ತು ಐಫೋನ್ 14 ಪ್ಲಸ್ ಹಳದಿ ರೂಪಾಂತರದ ಆರಂಭಿಕ ಬೆಲೆ ರೂ 89,990 ಎಂದು ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ವಾಟ್ಸಾಪ್ ಪ್ರಿಯರಿಗೆ ಗುಡ್ನ್ಯೂಸ್! ಅಡ್ಮಿನ್ಗಳಿಗಾಗಿ ಬರ್ತಿದೆ ಹೊಸ ಫೀಚರ್
ವಿಶೇಷ ಆಫರ್
ವಿಶೇಷವೆಂದರೆ ಈ ಹೊಸ ಐಫೋನ್ ರೂಪಾಂತರಗಳು ಉತ್ತಮ ಡೀಲ್‌ನಲ್ಲಿ ಲಭ್ಯವಾಗುತ್ತಿವೆ. ಈ ಸಂದರ್ಭದಲ್ಲಿ ಆ್ಯಪಲ್ನ ವಿತರಕರಲ್ಲಿ ಒಬ್ಬರಾದ ರೆಡಿಂಗ್‌ಟನ್ ದೊಡ್ಡ ಘೋಷಣೆಯನ್ನು ಮಾಡಿದ್ದಾರೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳ ಮೇಲೆ 15,000 ರೂಪಾಯಿಗಳವರೆಗೆ ರಿಯಾಯಿತಿ ನೀಡಲಾಗುವುದು ಎಂದು ವಿತರಕರು ಹೇಳಿದ್ದಾರೆ. ಸ್ಟೋರ್ ರಿಯಾಯಿತಿಗಳು, ಬ್ಯಾಂಕ್ ಕೊಡುಗೆಗಳು ಮತ್ತು ಹಳೆಯ ಐಫೋನ್‌ಗಳ ವಿನಿಮಯವನ್ನು ಪಡೆಯುವ ಮೂಲಕ ಗ್ರಾಹಕರು ಈ ರಿಯಾಯಿತಿಯನ್ನು ಪಡೆಯಬಹುದು. ವಿಶೇಷವೆಂದರೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಿದರೆ ಈ ರಿಯಾಯಿತಿ ಲಭ್ಯವಿದೆ.
ಐಫೋನ್ 14 ಫೀಚರ್ಸ್
ಐಫೋನ್ 14 ಫೀಚರ್ಸ್ ಬಗ್ಗೆ ಹೇಳುವುದಾದ್ರೆ, ಇದು ಸೂಪರ್ ರೆಟಿನಾ 6.1 ಇಂಚಿನ XDR OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 1200nits ಬ್ರೈಟ್ನೆಸ್ ಅನ್ನು ನೀಡುತ್ತದೆ. ಹಾಗೆಯೇ ಈ ಸ್ಮಾರ್ಟ್ಫೋನ್ A15 ಬಯೋನಿಕ್ ಚಿಪ್ಸೆಟ್ನಿಂದ ಕಾರ್ಯನಿರ್ವಹಿಸುತ್ತದೆ.
ಇನ್ನು ಇದರ ಕ್ಯಾಮೆರಾ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದ್ದು, ಎರಡೂ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು 128ಜಿಬಿ, 256ಜಿಬಿ ಮತ್ತು 512ಜಿಬಿ ಸ್ಟೋರೇಜ್ ಆಯ್ಕೆಗಳಲ್ಲಿದೆ. ಈ ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು ಇ-ಸಿಮ್ ಆಯ್ಕೆಯನ್ನು ಸಹ ಹೊಂದಿದೆ.
ಐಫೋನ್ 14 ಪ್ಲಸ್ ಫೀಚರ್ಸ್
ಇನ್ನು ಐಫೋನ್ 14 ಪ್ಲಸ್ 6.7 ಇಂಚಿನ ಓಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ನಲ್ಲಿಯೂ ಐಫೋನ್ 14 ನಂತೆಯೇ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 12 ಮೆಗಾ ಪಿಕ್ಸೆಲ್ನ ಕ್ಯಾಮೆರಾವನ್ನು ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ