Apple: ಇದೇ ವರ್ಷ ಆ್ಯಪಲ್​ ಲಾಂಚ್ ಮಾಡಲಿದೆಯಂತೆ ಹೊಸ ಹೊಸ ಪ್ರಾಡೆಕ್ಟ್! ಇಲ್ಲಿದೆ ವಿವರ!

ಆ್ಯಪಲ್ ಚಿಪ್‌ಸೆಟ್ ಇರುವ ಮರುವಿನ್ಯಾಸಗೊಳಿಸಲಾದ ಮ್ಯಾಕ್‌ಬುಕ್ ಏರ್, ಕೈಗೆಟಕುವ ಬೆಲೆಯಲ್ಲಿ ಐಪ್ಯಾಡ್, ಹೊಸ ಐಪ್ಯಾಡ್ ಪ್ರೋ ಮಾಡೆಲ್‌ಗಳನ್ನು ಲಾಂಚ್ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಆ್ಯಪಲ್

ಆ್ಯಪಲ್

  • Share this:
ಆ್ಯಪಲ್ (Apple) ತನ್ನ ಇತಿಹಾಸದಲ್ಲೇ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ ಎಂಬುದಾಗಿ ವರದಿಯಾಗಿದೆ. ಪತ್ರಕರ್ತ ಹಾಗೂ ಪ್ರಖ್ಯಾತ ಆ್ಯಪಲ್ ಟ್ರ್ಯಾಕರ್ ಮಾರ್ಕ್ ಗುರ್ಮನ್ ಪ್ರಕಾರ ಆ್ಯಪಲ್ ನಾಲ್ಕು ಐಫೋನ್ ಮಾಡೆಲ್‌ಗಳಾದ ಐಫೋನ್ 14 (iPhone 14), ಐಫೋನ್ 14 ಮ್ಯಾಕ್ಸ್ (iPhone 14 Max), ಐಫೋನ್ 14 ಪ್ರೋ (iPhone 14 Pro), ಐಫೋನ್ 14 ಪ್ರೋ ಮ್ಯಾಕ್ಸ್ (iPhone 14 Pro Max) ಕಾರ್ಯನಿರ್ವಹಿಸುತ್ತಿದೆ. ಅದೂ ಅಲ್ಲದೆ ಕಂಪನಿ ಕಡಿಮೆ ಬೆಲೆಯ ಮ್ಯಾಕ್‌ಬುಕ್ ಪ್ರೋ, ದೊಡ್ಡ ಸ್ಕ್ರೀನ್ ಉಳ್ಳ ಐಮ್ಯಾಕ್, ಹೊಸ ಮ್ಯಾಕ್ ಪ್ರೋ, ಏರ್‌ಪಾಡ್ಸ್ ಪ್ರೋ 2, ಹಾಗೂ ಮೂರು ಆ್ಯಪಲ್ ವಾಚ್ ಮಾಡೆಲ್‌ಗಳನ್ನು ಬಿಡುಗಡೆ (Launch ) ಮಾಡುವ ಯೋಜನೆಯಲ್ಲಿದೆ ಎಂಬುದಾಗಿ ತಿಳಿಸಿದ್ದಾರೆ.

ಕಂಪನಿಯ ಲಾಂಚ್‌ಗಳಾವುವು?

ಇದಲ್ಲದೆ ಕಂಪನಿಯು ಆ್ಯಪಲ್ ಚಿಪ್‌ಸೆಟ್ ಇರುವ ಮರುವಿನ್ಯಾಸಗೊಳಿಸಲಾದ ಮ್ಯಾಕ್‌ಬುಕ್ ಏರ್, ಕೈಗೆಟಕುವ ಬೆಲೆಯಲ್ಲಿ ಐಪ್ಯಾಡ್, ಹೊಸ ಐಪ್ಯಾಡ್ ಪ್ರೋ ಮಾಡೆಲ್‌ಗಳನ್ನು ಲಾಂಚ್ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ. ಗುರ್ಮನ್ ತಿಳಿಸಿರುವಂತೆ ಹೆಚ್ಚಿನ ಪ್ರಾಡಕ್ಟ್‌ಗಳು ಶರತ್ಕಾಲದಲ್ಲಿ ಲಾಂಚ್ ಆಗಬಹುದಾದರೂ ಹೊಸ ಐಮ್ಯಾಕ್ ಅನ್ನು ಈ ವರ್ಷದ ಆರಂಭದಲ್ಲಿ ಲಾಂಚ್ ಆಗಬಹುದೆಂಬ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಐಫೋನ್ ಎಸ್‌ಇ 3 (iPhone SE 3) ಹಾಗೂ ಐಪ್ಯಾಡ್ ಏರ್ 2022 (iPad Air 2022) ನೊಂದಿಗೆ ಇದು ಲಾಂಚ್ ಆಗಬಹುದು ಎಂಬ ನಿರೀಕ್ಷೆ ಇದ್ದು ಎರಡೂ ಕೂಡ ಆ್ಯಪಲ್ ಬಯೋನಿಕ್ ಎ 15 ಚಿಪ್‌ಸೆಟ್ ಅನ್ನು ಒಳಗೊಂಡಿದ್ದು ಐಫೋನ್ 13 ಸೀರೀಸ್ ಅನ್ನು ಚಾಲನೆ ಮಾಡಲಿದೆ.

ಇದನ್ನೂ ಓದಿ: Apple Airpod: 8 ಅಡಿ ಎತ್ತರದಿಂದ ಬಿದ್ದ ಹುಡುಗಿಯ ಜೀವ ಉಳಿಸಿದ ಆ್ಯಪಲ್ ಏರ್​​ಪಾಡ್! ಹೇಗೆ ಗೊತ್ತೇ?

9 ಐಪ್ಯಾಡ್ ಲಾಂಚ್ ಮಾಡುವ ನಿರೀಕ್ಷೆ:

ಹೆಚ್ಚುವರಿಯಾಗಿ ಹೊಸ ಐಪ್ಯಾಡ್ ಪ್ರೋ ಮಾಡೆಲ್‌ಗಳನ್ನು ಹಿಂದಿನ ಐಪ್ಯಾಡ್ ಪ್ರೋಗಳಂತೆಯೇ ಮೊದಲಾರ್ಧದಲ್ಲಿ ಪ್ರಾರಂಭಿಸಬಹುದು. 2022 ಐಪ್ಯಾಡ್ ಪ್ರೋ ಮಾಡೆಲ್‌ಗಳನ್ನು ಸಾಮರ್ಥ್ಯವನ್ನೊದಗಿಸುವ ಎಮ್‌2 ಚಿಪ್‌ಸೆಟ್ ಅನ್ನು ಅನಾವರಣಗೊಳಿಸಬಹುದು. ಆಸಕ್ತಿಕರವಾದ ಇನ್ನೊಂದು ಅಂಶವೆಂದರೆ 9 ಐಪ್ಯಾಡ್‌ಗಳನ್ನು ಲಾಂಚ್ ಮಾಡುವುದನ್ನು ಸೂಚಿಸುವ ನಿಯಂತ್ರಕ ಫೈಲಿಂಗ್‌ಗಳನ್ನು ಸಂಸ್ಥೆ ಇತ್ತೀಚೆಗೆ ಯುರೇಷಿಯನ್ ಆರ್ಥಿಕ ಆಯೋಗದಲ್ಲಿ ಸಲ್ಲಿಸಿದೆ.

ಆ್ಯಪಲ್ ತನ್ನ ಮೊದಲ VR/AR ಹೆಡ್‌ಸೆಟ್ ಅನ್ನು ಇದೇ ವರ್ಷ ಲಾಂಚ್ ಮಾಡುವ ಸುದ್ದಿ ಕೂಡ ಇದ್ದು, ಸಂಸ್ಥೆಯ ಸಿಇಒ ಟಿಮ್ ಕುಕ್ ನಿವೃತ್ತರಾಗುವ ಮುನ್ನ ಆ್ಯಪಲ್ ಕಾರನ್ನು ಲಾಂಚ್ ಮಾಡಲಿದ್ದಾರೆ ಎಂಬ ವದಂತಿ ಇದ್ದು ಇದು ಅತಿದೊಡ್ಡ ಬಿಡುಗಡೆ ಎಂದೆನಿಸಲಿದೆ. ಅದೂ ಅಲ್ಲದೆ ಆ್ಯಪಲ್ ಐಫೋನ್‌ಗಳನ್ನು AR ಹೆಡ್‌ಸೆಟ್‌ಗಳೊಂದಿಗೆ ಬದಲಾಯಿಸಬಹುದೆಂಬ ಸುದ್ದಿ ಕೂಡ ಇದೆ.

ಐಫೋನ್ 14 ಸೀರೀಸ್ ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗುವ ನಿರೀಕ್ಷೆ:

ಮುಂದಿನ ಐಫೋನ್ 14 ಸೀರೀಸ್ ಕುರಿತು ಗುರ್ಮನ್ ನಿರ್ದಿಷ್ಟ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಆದರೂ, ಹಿಂದಿನ ಕೆಲವೊಂದು ಐಫೋನ್ ಲಾಂಚ್‌ಗಳನ್ನು ಹೋಲಿಸಿ ಹೇಳುವುದಾದರೆ ಇದು ಸಪ್ಟೆಂಬರ್‌ನಲ್ಲಿ ಲಾಂಚ್ ಆಗಬಹುದೆಂಬ ನಿರೀಕ್ಷೆ ಇದೆ. ಆ್ಯಪಲ್ ಕಾಂಪ್ಯಾಕ್ಟ್ ಐಫೋನ್ ಮಿನಿ ಮಾಡೆಲ್‌ಗೆ ತಿಲಾಂಜಲಿ ಇಡುವಂತೆ ತೋರುತ್ತಿದ್ದು ಬದಲಿಗೆ ಮ್ಯಾಕ್ಸ್ ಆವೃತ್ತಿಯನ್ನು ಪರಿಚಯಿಸುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: Iphone: ಐಫೋನ್​ ಕ್ಯಾಮೆರಾದ ಬಳಿ ಇರುವ ‘ಬ್ಲ್ಯಾಕ್​ ಡಾಟ್‘​​ ಏನು ಕೆಲಸ ಮಾಡುತ್ತೆ ಗೊತ್ತಾ?

ಡಿವೈಸ್ ವಿಶೇಷತೆಗಳು ಸ್ಪಷ್ಟವಾಗಿಲ್ಲದೇ ಇದ್ದರೂ ಹಳೆಯ ಸುದ್ದಿ ಸೋರಿಕೆಗಳು ತಿಳಿಸಿರುವಂತೆ ನಾನ್-ಪ್ರೋ ಐಫೋನ್ ಮಾಡೆಲ್‌ಗಳು ಅಂತಿಮವಾಗಿ 120Hz ಡಿಸ್‌ಪ್ಲೇ ಪಡೆದುಕೊಳ್ಳಲಿದ್ದು, ಆ್ಯಪಲ್ ಇದನ್ನು ಪ್ರಮೋಶನ್ ಡಿಸ್‌ಪ್ಲೇ ಎಂದು ಉಲ್ಲೇಖಿಸಿದೆ. AR/VR ಹೆಡ್‌ಸೆಟ್ 8K ಡಿಸ್‌ಪ್ಲೇಗಳನ್ನು ಹೊಂದಿದ್ದು ಕೈ ಸನ್ನೆಗಳನ್ನು ಗುರುತಿಸುವ 3D ಸಂವೇದಕಗಳು ಮತ್ತು ಕಣ್ಣಿನ ಟ್ರ್ಯಾಕಿಂಗ್‌ಗಾಗಿ 15 ಕ್ಯಾಮೆರಾ ಮಾಡ್ಯೂಲ್‌ಗಳನ್ನು ಹೊಂದಿರುತ್ತದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
Published by:vanithasanjevani vanithasanjevani
First published: