ಆ್ಯಪಲ್ ಕಂಪೆನಿಯ (Apple Company) ಸ್ಮಾರ್ಟ್ಫೋನ್ಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಕೆಲವರು ಮಾತ್ರ ಜೀವನದಲ್ಲಿ ಒಮ್ಮೆಯಾದರೂ ಆ್ಯಪಲ್ ಕಂಪೆನಿಯ ಫೋನ್ಗಳನ್ನು ಖರೀದಿಸಬೇಕೆಂದು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಈ ಕಂಪೆನಿಯ ಡಿವೈಸ್ಗಳ ಬೆಲೆ ದುಬಾರಿಯಾಗಿರುವ ಕಾರಣ ಕೆಲವರಿ ಐಫೋನ್ಗಳನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ ಸರ್ಕಾರ ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಚೀನಾ (China) ಒಡೆತನದಲ್ಲಿರುವ ಆ್ಯಪಲ್ ಕಂಪೆನಿಯಿಂದ ಇದುವರೆಗೆ ಯಾವುದೇ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಆಮದು ಮಾಡಿಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಐಫೋನ್ಗಳ ಬೆಲೆ ದುಬಾರಿ ಎಂದೂ ಹೇಳಲಾಗುತ್ತದೆ. ಆದರೆ ಇನ್ಮುಂದೆ ಕರ್ನಾಟಕದಲ್ಲೇ ಐಫೋನ್ (IPhone) ಘಟಕ ಸ್ಥಾಪನೆಯಾಗುತ್ತಿದೆ.
ಆ್ಯಪಲ್ ಪೋನ್ ಕಂಪನಿಯಿಂದ ಕರ್ನಾಟಕದಲ್ಲಿ ತಯಾರಿಕಾ ಘಟಕ ಸ್ಥಾಪನೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, ಈ ಮೂಲಕ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.
ಸಿಎಂ ಅವರ ಟ್ವೀಟ್ನಲ್ಲಿ ಏನಿತ್ತು?
ರಾಜ್ಯದಲ್ಲಿ ಶೀಘ್ರದಲ್ಲೇ ಆ್ಯಪಲ್ ಫೋನ್‌ಗಳು ನಿರ್ಮಾಣವಾಗಲಿದೆ. ಇದರಿಂದ ಸುಮಾರು 100,000 ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೆ, ಇದು ಕರ್ನಾಟಕಕ್ಕೆ ಸಂಪೂರ್ಣ ಅವಕಾಶಗಳನ್ನು ಸೃಷ್ಟಿಸುತ್ತದೆ. ಮಾನ್ಯ ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ 2025 ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ನಾವು ನಮ್ಮ ಪಾಲನ್ನು ಮಾಡುತ್ತೇವೆ. ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ 300 ಎಕರೆ ಪ್ರದೇಶದಲ್ಲಿ ಆರಂಭ
ಬ್ಲೂಮ್‌ಬರ್ಗ್ ಪ್ರಕಾರ, ಕರ್ನಾಟಕದ ಬೆಂಗಳೂರಿನ ಬಳಿ ಇರುವ 300 ಎಕರೆ ಪ್ರದೇಶದಲ್ಲಿ ಫಾಕ್ಸ್‌ಕಾನ್ ಐಫೋನ್ ಭಾಗಗಳನ್ನು ಉತ್ಪಾದಿಸಲು ನೋಡುತ್ತಿದೆ ಮತ್ತು ವರದಿಗಳ ಪ್ರಕಾರ, ಈ ಸ್ಥಾವರವು ಫಾಕ್ಸ್‌ಕಾನ್‌ನ ಎಲೆಕ್ಟ್ರಿಕ್ ವಾಹನ ಮಹತ್ವಾಕಾಂಕ್ಷೆಗಳನ್ನು ಸಹ ಬೆಂಬಲಿಸುತ್ತದೆ ಎಮದು ಹೇಳಲಾಗಿದೆ.
Apple phones to be built in the state soon. Apart from creating about 100,000 jobs, it will create a whole lot of opportunities for Karnataka. Under the visionary leadership of Hon’ble PM @narendramodi Ji, we will do our share to make India a $5 trillion economy by 2025. https://t.co/bdcVuVHkvT
— Basavaraj S Bommai (@BSBommai) March 3, 2023
ಆ್ಯಪಲ್ ಐಫೋನ್‌ನ ಪ್ರಮುಖ ತಯಾರಕರಾದ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್, ಭಾರತದಲ್ಲಿ ಹೊಸ ಸ್ಥಾವರವನ್ನು ನಿರ್ಮಿಸಲು $700 ಮಿಲಿಯನ್ ವರೆಗೆ ಹೂಡಿಕೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಹೆಚ್ಚುತ್ತಿರುವ ಸಮಸ್ಯೆಯಿಂದಾಗಿ ಚೀನಾದಲ್ಲಿ ಸೌಲಭ್ಯಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಾಗ ಈ ಕ್ರಮವು ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನವಾಗಿ ಕಂಡುಬರುತ್ತದೆ.
ಇದಕ್ಕೆ ಸ್ಪಂದಿಸಿದ ಫಾಕ್ಸ್‌ಕಾನ್ ಸಮೂಹದ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ಅವರು, "ಐಟಿ ಮತ್ತಿತರ ತಂತ್ರಜ್ಞಾನ ವಲಯಗಳಲ್ಲಿ ಹಾಗೂ ಬಂಡವಾಳ ಆಕರ್ಷಣೆಯಲ್ಲಿ ಬೆಂಗಳೂರು ಪ್ರಶಸ್ತ ತಾಣವಾಗಿದೆ. ಹಾಗೆಯೇ ಉದ್ಯೋಗಾವಕಾಶಗಳು ಮತ್ತು ಸಂಶೋಧನೆಯ ದೃಷ್ಟಿಯಿಂದಲೂ ಈ ನಗರವು ಎಲ್ಲರನ್ನೂ ಸೆಳೆಯುತ್ತಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಷ್ಟೇ ಅಲ್ಲದೇ, ಭವಿಷ್ಯದಲ್ಲಿ ರಾಜ್ಯದಲ್ಲಿ ಮತ್ತಷ್ಟು ಉದ್ಯಮ ವಿಸ್ತರಣೆ ಮಾಡುವ ಕುರಿತಂತೆ ಆಶಾಭಾವನೆ ಹೊಂದಿರುವುದಾಗಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ