Mac Webcam ಸಮಸ್ಯೆ ಪತ್ತೆ ಹಚ್ಚಿದ ವಿದ್ಯಾರ್ಥಿ.. ಆ್ಯಪಲ್ ಕಂಪನಿ ಈತನಿಗೆ ನೀಡಿದ ಬಹುಮಾನ ಎಂತದ್ದು ನೋಡಿ!

Mac Webcam: ವಿದ್ಯಾರ್ಥಿ ರಿಯಾನ್ ಪಿಕ್ರೆನ್ ಬ್ಲಾಗ್ ಪೋಸ್ಟ್‌ನಲ್ಲಿ ದುರ್ಬಲತೆಯ ಬಗ್ಗೆ ಮಾತನಾಡಿದ್ದು, ಹ್ಯಾಕರ್‌ಗಳು ಐಕ್ಲೌಡ್ ಶೇರಿಂಗ್ ಮತ್ತು ಸಫಾರಿ 15ರೊಂದಿಗಿನ ಸಮಸ್ಯೆಗಳನ್ನು ಬಳಸಿಕೊಳ್ಳುವ ಮೂಲಕ ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ವೆಬ್‌ಕ್ಯಾಮ್‌ಗಳಿಗೆ ಪ್ರವೇಶವನ್ನು ಸಾಧಿಸಬಹುದು ಎಂದು ಹೇಳಿದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ತನ್ನ ಗ್ರಾಹಕರಿಗಾಗಿ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಲೇ ಬಂದಿರುವ ಆ್ಯಪಲ್ ಕಂಪನಿಯು (Apple Company) ತನ್ನ ಉತ್ಪನ್ನಗಳನ್ನು ತಯಾರಿಸುವುದಲ್ಲದೆ, ಅವುಗಳನ್ನು ಉಪಯೋಗಿಸುವ ಗ್ರಾಹಕರಿಗೆ ಅದರಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಅವರನ್ನು ಕಾಡದೆ ಇರಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆ್ಯಪಲ್ ಕಂಪನಿ ತಾನು ತಯಾರಿಸಿದ ಮ್ಯಾಕ್ ವೆಬ್‌ಕ್ಯಾಮ್‌ನಲ್ಲಿರುವ (Mac Webcam) ಸಮಸ್ಯೆಯನ್ನು ಪತ್ತೆ ಹಚ್ಚಿದ್ದಕ್ಕೆ ಸೈಬರ್ ಸೆಕ್ಯೂರಿಟಿ (Cyber Security) ವಿದ್ಯಾರ್ಥಿಗೆ ಎಷ್ಟು ಹಣ ಬಹುಮಾನ ನೀಡಿದೆ ಎಂದು ನೀವು ತಿಳಿದುಕೊಂಡರೆ ಬೆಚ್ಚಿ ಬೀಳ್ತೀರಾ. ಮ್ಯಾಕ್ ಕಂಪ್ಯೂಟರ್‌ನ ವೆಬ್‌ಕ್ಯಾಮ್‌ಗಳಲ್ಲಿ ದುರ್ಬಲತೆಯನ್ನು ಕಂಡುಕೊಂಡಿದ್ದಕ್ಕಾಗಿ ಆ್ಯಪಲ್ ಸೈಬರ್ ಸೆಕ್ಯೂರಿಟಿ (Apple Cyber Security) ವಿದ್ಯಾರ್ಥಿಗೆ 1,00,500 ಡಾಲರ್ ಹಣವನ್ನು ಬಹುಮಾನವಾಗಿ ನೀಡಿದೆ ಅಂತೆ. ಇದು ಭಾರತೀಯ ರೂಪಾಯಿಯಲ್ಲಿ ಸುಮಾರು 75,54,000 ರೂಪಾಯಿ ಆಗುತ್ತದೆ.

    ವಿದ್ಯಾರ್ಥಿ ರಿಯಾನ್ ಪಿಕ್ರೆನ್ ಬ್ಲಾಗ್ ಪೋಸ್ಟ್‌ನಲ್ಲಿ ದುರ್ಬಲತೆಯ ಬಗ್ಗೆ ಮಾತನಾಡಿದ್ದು, ಹ್ಯಾಕರ್‌ಗಳು ಐಕ್ಲೌಡ್ ಶೇರಿಂಗ್ ಮತ್ತು ಸಫಾರಿ 15ರೊಂದಿಗಿನ ಸಮಸ್ಯೆಗಳನ್ನು ಬಳಸಿಕೊಳ್ಳುವ ಮೂಲಕ ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ವೆಬ್‌ಕ್ಯಾಮ್‌ಗಳಿಗೆ ಪ್ರವೇಶವನ್ನು ಸಾಧಿಸಬಹುದು ಎಂದು ಹೇಳಿದರು. ಈ ದುರ್ಬಲತೆಗಳನ್ನು ಈಗ ಆ್ಯಪಲ್ ಕಂಪನಿಯವರು ಸರಿಪಡಿಸಿದ್ದಾರೆ ಎಂದು ಪಿಕ್ರೆನ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    1,00,500 ಡಾಲರ್ ಹಣದ ಬಹುಮಾನ ನೀಡುತ್ತಿರುವ ಕ್ಯುಪರ್ಟಿನೋ ಮೂಲದ ದೈತ್ಯ ಕಂಪನಿ ಹೀಗೆ ಸಮಸ್ಯೆಯನ್ನು ಪತ್ತೆ ಹಚ್ಚಲು ಇದು ಅತಿ ದೊಡ್ಡ ಮೊತ್ತದ ಬಹುಮಾನ ನೀಡುತ್ತಿದೆ ಎಂದು ವರದಿಯಾಗಿದೆ. ಪಿಕ್ರೆನ್ ಈ ಹಿಂದೆ ಐಫೋನ್ ಮತ್ತು ಮ್ಯಾಕ್ ಕ್ಯಾಮೆರಾ ದುರ್ಬಲತೆಯನ್ನು ಸಹ ಕಂಡು ಹಿಡಿದಿದ್ದರು ಎಂದು ಹೇಳಲಾಗುತ್ತಿದೆ.

    ಈ ಸಮಸ್ಯೆಯನ್ನು ಆ್ಯಪಲ್ ಕಂಪನಿಯವರು ಸರಿಪಡಿಸುವ ಮೊದಲು, ದುರುದ್ದೇಶಪೂರಿತ ವೆಬ್‌ಸೈಟ್ ಈ ದೋಷಗಳನ್ನು ಬಳಸಿಕೊಂಡು ದಾಳಿ ನಡೆಸಬಹುದು ಎಂದು ಅವರು ಹೇಳಿದರು. ತನ್ನ ಬ್ಲಾಗ್ ಪೋಸ್ಟ್‌ನಲ್ಲಿ, ದುರ್ಬಲತೆಯು ದಾಳಿಕೋರನಿಗೆ ಐಕ್ಲೌಡ್‌ನಿಂದ ಪೇ ಪಾಲ್‌ವರೆಗಿನ ಎಲ್ಲಾ ವೆಬ್-ಆಧಾರಿತ ಖಾತೆಗಳಿಗೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆ, ಜೊತೆಗೆ ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಮೈಕ್ರೋಫೋನ್‌, ಕ್ಯಾಮೆರಾ ಮತ್ತು ಸ್ಕ್ರೀನ್ ಶೇರಿಂಗ್ ಬಳಸಲು ಅನುಮತಿ ನೀಡುತ್ತದೆ ಎಂದು ಪಿಕ್ರೆನ್ ವಿವರಿಸಿದರು.

    ಇದನ್ನು ಓದಿ: Apple iOS 15.3 Update‌: ಈ ಅಪ್‌ಡೇಟ್‌ನ ವೈಶಿಷ್ಟ್ಯತೆಗಳೇನು ನೋಡಿ..

    ಅದೇ ಹ್ಯಾಕ್ ಅಂತಿಮವಾಗಿ ಸಫಾರಿಯ "ವೆಬ್ ಆರ್ಕೈವ್" ಫೈಲ್‌ಗಳನ್ನು ಬಳಸಿಕೊಳ್ಳುವ ಮೂಲಕ ದಾಳಿಕೋರನು ಸಾಧನದ ಸಂಪೂರ್ಣ ಫೈಲ್ ಸಿಸ್ಟಂಗೆ ಸಂಪೂರ್ಣ ಪ್ರವೇಶ ಪಡೆಯಬಹುದು ಎಂದು ಅವರು ಹೇಳಿದರು.

    ಈ ಫೈಲ್‌ಗಳ ಪ್ರಾರಂಭದ ಲಕ್ಷಣಗಳೆಂದರೆ, ವಿಷಯವನ್ನು ಸೇರಿಸುವ ವೆಬ್ ಮೂಲವನ್ನು ಅವರು ನಿರ್ದಿಷ್ಟಪಡಿಸುತ್ತಾರೆ. ಉಳಿಸಿದ ವೆಬ್‌ಸೈಟ್ ಮಾಹಿತಿಯನ್ನು ಸಫಾರಿ ಪುನರ್ನಿರ್ಮಿಸಲು ಇದು ಅದ್ಭುತ ತಂತ್ರವಾಗಿದೆ, ಆದರೆ ಮೆಟಾಸ್ಪ್ಲಾಯ್ಟ್ ಲೇಖಕರು 2013ರಲ್ಲಿ ಸೂಚಿಸಿದಂತೆ, ಆಕ್ರಮಣಕಾರನು ಹೇಗಾದರೂ ಈ ಫೈಲ್ ಅನ್ನು ಮಾರ್ಪಡಿಸಲು ಸಾಧ್ಯವಾದರೆ, ಅವರು ವಿನ್ಯಾಸದ ಮೂಲಕ ಯುಎಕ್ಸ್ಎಸ್ಎಸ್ (ಕ್ರಾಸ್ ಸೈಟ್ ಸ್ಕ್ರಿಪ್ಟಿಂಗ್) ಅನ್ನು ಪರಿಣಾಮಕಾರಿಯಾಗಿ ಸಾಧಿಸಬಹುದು" ಎಂದು ಪಿಕ್ರೆನ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಇದನ್ನು ಓದಿ: Yezdi Adventure vs KTM 250 Adventure – ಇವೆರಡರಲ್ಲಿ ಯಾವುದು ಬೆಸ್ಟ್​​? ಇಲ್ಲಿದೆ ಮಾಹಿತಿ

    ಆದರೆ ಆ್ಯಪಲ್ ಕಂಪನಿಯವರು ಇನ್ನೂ ಈ ದುರ್ಬಲತೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ, ಆದರೆ ಕಂಪನಿಯು ತನ್ನ ಬಗ್ ಬೌಂಟಿ ಪ್ರೋಗ್ರಾಂನಿಂದ ಪಿಕ್ರೆನ್‌ಗೆ 1,00,500 ಡಾಲರ್ ಮೊತ್ತವನ್ನು ಬಹುಮಾನವಾಗಿ ಪಾವತಿಸಿದೆ.

    ಆ್ಯಪಲ್‌ನಿಂದ ಬಗ್ ಬೌಂಟಿ ಪ್ರೋಗ್ರಾಂ ಕಂಪನಿಯ ಸಾಫ್ಟ್‌ವೇರ್‌ ಅಥವಾ ಗ್ಯಾಜೆಟ್‌ಗಳಲ್ಲಿ ದೋಷಗಳನ್ನು ಕಂಡು ಕೊಳ್ಳುವವರಿಗೆ ಅಧಿಕೃತವಾಗಿ 1 ಮಿಲಿಯನ್ ಡಾಲರ್‌ವರೆಗೆ ನೀಡಬಹುದು ಎಂದರೆ ಭಾರತೀಯ ಮೌಲ್ಯದಲ್ಲಿ ಇದು ಸುಮಾರು 7,51,00,000 ರೂಪಾಯಿ ಆಗುತ್ತದೆ. ಆ್ಯಪಲ್ ಸೆಕ್ಯೂರಿಟಿ ಸಂಬಂಧಿತ ವರದಿಗಳ ವರ್ಗಕ್ಕೆ ಗರಿಷ್ಠ ಮೊತ್ತಗಳ ಪಟ್ಟಿಯನ್ನು ಪ್ರಕಟಿಸುತ್ತದೆ.
    Published by:Harshith AS
    First published: