ಭಾರತೀಯರು ಆ್ಯಪಲ್ ಉತ್ಪನ್ನಗಳಾದ ಐಫೋನ್, ಐಪ್ಯಾಡ್ಗಳನ್ನ ಥರ್ಟ್ ಪಾರ್ಟಿ ರಿಟೇಲರ್ ಮತ್ತು ಇ-ಕಾಮರ್ಸ್ ತಾಣಗಳ ಮೂಲಕ ಖರೀದಿಸುತ್ತಿದ್ದರು. ಆದರೀಗ ಸ್ವಂತ ಆನ್ಲೈನ್ ಸ್ಟೋರ್ ಆರಂಭವಾಗಿದ್ದು, ಗ್ರಾಹಕರ ಕೊರತೆಯನ್ನು ನೀಗಿಸಿದೆ.
ಆ್ಯಪಲ್ ಸ್ಟೋರ್ನಲ್ಲಿ ಖರೀದಿಸಿದರೆ ಸಿಗಲಿದೆ ಇಷ್ಟೇಲ್ಲಾ ಪ್ರಯೋಜನ:
ಇಂದಿನಿಂದ ಆ್ಯಪಲ್ ಆನ್ಲೈನ್ ಸ್ಟೋರ್ ಪ್ರಾರಂಭವಾಗಿದ್ದು, ಗ್ರಾಹಕರಿಗೆ ಎಲ್ಲಾ ಉತ್ಪನ್ನಗಳು ನೋ ಕ್ವಾಂಟ್ಯಾಕ್ಟ್ ಡೆಲಿವರಿ ಮೂಲಕ ಉಚಿತವಾಗಿ ಸಿಗಲಿದೆ. ಅಮೆಜಾನ್, ಫ್ಲಿಪ್ಕಾರ್ಟ್ನಂತೆ ಆ್ಯಪಲ್ ಉತ್ಪನ್ನಗಳು ಮನೆ ಬಾಗಿಲಿನಲ್ಲಿ ಖರೀದಿಸಬಹುದಾಗಿದೆ.
ಆದರೆ ಆ್ಯಪಲ್ ಸ್ಟೋರ್ ಮತ್ತು ಥರ್ಡ್ ಪಾರ್ಟಿ ಸ್ಟೋರ್ಗಳಲ್ಲಿ ಮಾರಾಟ ಮಾಡುವ ಆ್ಯಪಲ್ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಾಸವಿರಬಹುದು, ಉದಾ: ಆ್ಯಪಲ್ ಸ್ಟೋರ್ನಲ್ಲಿ ಐಫೋನ್ 11 (64ಜಿಬಿ) ಮಾಡೆಲ್ ಬೆಲೆ 1,17,100 ರೂ ಆಗಿದೆ. ಆದರೆ ಅಮೆಜಾನ್ 1,09,099 ರೂ.ಗೆ ಮಾರಾಟ ಮಾರಾಟ ಮಾಡುತ್ತಿದೆ.
ಥರ್ಡ್ ಪಾರ್ಟಿ ಸ್ಟೋರ್ಗಳಲ್ಲಿ ಬೆಲೆ ಏರಿಳಿತ ಕಾಣುತ್ತದೆ. ಕೆಲವೊಮ್ಮೆ ಆಫರ್ ಬೆಲೆಗೆ ಮಾರಾಟ ಮಾಡುತ್ತದೆ. ಇನ್ನು ಆ್ಯಪಲ್ ಶೇ.6 ರಷ್ಟು (10 ಸಾವಿರದಷ್ಟು) ಆಫರ್ ನೀಡುತ್ತಿದೆ. ಹೆಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಈ ಆಫರ್ ಸಿಗಲಿದೆ.
ಆ್ಯಪಲ್ ಸ್ಟೋರ್ ಮೂಲಕ ಉತ್ಪನ್ನ ಖರೀದಿಸಿದರೆ ಹೆಚ್ಚಿನ ಪ್ರಯೋಜನ ಸಿಗಲಿದೆ. ಪಾವತಿ ಮತ್ತು ವಿತರಣೆ ಹೆಚ್ಚು ಸೆಕ್ಯೂರ್ ಆಗಿ ಇರಲಿದೆ. ಅಷ್ಟು ಮಾತ್ರವಲ್ಲದೆ ಟ್ರೇಡ್-ಇನ್ ಎಂಬ ಆಯ್ಕೆ ಮೂಲಕ ಹಳೆಯ ಫೋನ್ ಎಕ್ಸ್ಜೇಂಜ್ ಮಾಡಿ ಐಫೋನ್ ಖರೀದಿಸುವ ಅವಕಾಶ ನೀಡುತ್ತಿದೆ.
ಇನ್ನು ಥರ್ಡ್ ಪಾರ್ಟಿ ಸ್ಟೋರ್ಗಳಲ್ಲಿ ಸಿಗದ ಆ್ಯಪಲ್ ಉತ್ಪನ್ನಗಳು ಆ್ಯಪಲ್ ಸ್ಟೋರ್ಗಳಲ್ಲಿ ಸಿಗಲಿದೆ. ಇದರಿಂದ ಬಳಕೆದಾರರು ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ