HOME » NEWS » Tech » APPLE ONLINE STORE GOOD NEWS FOR GADGET LOVERS APPLES FIRST INDIA ONLINE STORE OPENS TODAY SCT

Apple Online Store: ಗೆಜೆಟ್ ಪ್ರಿಯರಿಗೆ ಸಿಹಿಸುದ್ದಿ; ಭಾರತದಲ್ಲಿ ಮೊದಲ ಆ್ಯಪಲ್ ಆನ್​ಲೈನ್ ಸ್ಟೋರ್ ಆರಂಭ

Apple Online Store: ವಿಶ್ವಾದ್ಯಂತ ಆ್ಯಪಲ್ ತನ್ನ ಆನ್​ಲೈನ್ ಸ್ಟೋರ್ ಹೊಂದಿದೆ. ಪ್ರಸ್ತುತ ಭಾರತದಲ್ಲಿ ಉದ್ಘಾಟನೆಯಾಗುತ್ತಿರುವುದು ಆ್ಯಪಲ್​ನ 38ನೇ ಆನ್​ಲೈನ್ ಸ್ಟೋರ್ ಆಗಿದೆ.

Sushma Chakre | news18-kannada
Updated:September 23, 2020, 10:14 AM IST
Apple Online Store: ಗೆಜೆಟ್ ಪ್ರಿಯರಿಗೆ ಸಿಹಿಸುದ್ದಿ; ಭಾರತದಲ್ಲಿ ಮೊದಲ ಆ್ಯಪಲ್ ಆನ್​ಲೈನ್ ಸ್ಟೋರ್ ಆರಂಭ
ಆ್ಯಪಲ್ ಗೆಜೆಟ್
  • Share this:
ನವದೆಹಲಿ (ಸೆ. 23): ಆ್ಯಪಲ್ ಉತ್ಪನ್ನಗಳ ಬಗ್ಗೆ ಇನ್ನಿಲ್ಲದ ವ್ಯಾಮೋಹ ಹೊಂದಿರುವ ಲಕ್ಷಾಂತರ ಜನರು ಭಾರತದಲ್ಲಿದ್ದಾರೆ. ದೇಶದ ಆ್ಯಪಲ್ ಗೆಜೆಟ್ ಪ್ರಿಯರಿಗೆ ಅಮೆರಿಕ ಮೂಲದ ಆ್ಯಪಲ್ ಕಂಪನಿ ಸಿಹಿಸುದ್ದಿಯನ್ನು ನೀಡಿದೆ. ಭಾರತದಲ್ಲಿ ಇಂದು ಆ್ಯಪಲ್​ನ ಮೊದಲ ಆನ್​ಲೈನ್​ ಸ್ಟೋರ್ ಉದ್ಘಾಟನೆಗೊಳ್ಳಲಿದೆ. ಇನ್ನೇನು ಹಬ್ಬದ ಸೀಸನ್ ಸಮೀಪಿಸುತ್ತಿರುವುದರಿಂದ ಆ್ಯಪಲ್​ನಿಂದ ಎಲ್ಲ ಮಾಡೆಲ್​ಗಳ ಪ್ರಾಡಕ್ಟ್​ಗಳನ್ನು ಭಾರತದ ಎಲ್ಲ ಭಾಗದ ಜನರಿಗೆ ಒದಗಿಸಲಾಗುವುದು. ಬ್ಲೂ ಡಾರ್ಟ್​ ಸಹಯೋಗದಲ್ಲಿ ಆ್ಯಪಲ್ ಈ ಆನ್​ಲೈನ್ ಸ್ಟೋರ್ ಆರಂಭಿಸಿದೆ. ಸದ್ಯಕ್ಕೆ ಬ್ಲೂ ಪ್ರಿಂಟ್ ಆ್ಯಪಲ್​ಗೆ ಲಾಜಿಸ್ಟಿಕ್ ಸಹಾಯ ಮಾತ್ರ ಮಾಡಲಿದೆ. ಮುಂದಿನ ದಿನಗಳಲ್ಲಿ ಆ್ಯಪಲ್ ಜೊತೆ ಪಾರ್ಟನರ್ ಆಗುವ ಸಾಧ್ಯತೆಯೂ ಇದೆ.

ವಿಶ್ವಾದ್ಯಂತ ಆ್ಯಪಲ್ ತನ್ನ ಆನ್​ಲೈನ್ ಸ್ಟೋರ್ ಹೊಂದಿದೆ. ಪ್ರಸ್ತುತ ಭಾರತದಲ್ಲಿ ಉದ್ಘಾಟನೆಯಾಗುತ್ತಿರುವುದು ಆ್ಯಪಲ್​ನ 38ನೇ ಆನ್​ಲೈನ್ ಸ್ಟೋರ್ ಆಗಿದೆ. ಭಾರತದ ಆ್ಯಪಲ್ ಗ್ರಾಹಕರಿಗೆ ತಜ್ಞರ ಸಲಹೆ, ಸರ್ವಿಸ್ ನೀಡುವ ಉದ್ದೇಶದಿಂದ ಈ ಸ್ಟೋರ್ ಅನ್ನು ಆರಂಭಿಸಲಾಗಿದೆ. ಈ ಆ್ಯಪಲ್ ಆನ್​ಲೈನ್ ಸ್ಟೋರ್​ನಲ್ಲಿ ಎಲ್ಲ ಮಾಡೆಲ್​ಗಳ ಐಫೋನ್, ಮ್ಯಾಕ್ ಕಂಪ್ಯೂಟಿಂಗ್ ಡಿವೈಸ್ ಲೈನ್-ಅಪ್, ಐಪ್ಯಾಡ್ ಸರ್ವಿಸ್, ಆ್ಯಪಲ್ ವಾಚ್, ಆ್ಯಪಲ್ ಏರ್​ಪಾಡ್ಸ್​ ಫ್ಯಾಮಿಲಿ, ಹೋಮ್​ಪಾಡ್ ಸ್ಮಾರ್ಟ್​ ಸ್ಪೀಕರ್ ಮತ್ತಿತರೆ ಎಲ್ಲ ಉತ್ಪನ್ನಗಳೂ ದೊರೆಯಲಿವೆ ಎಂದು ಜೀ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: Google: ಗೂಗಲ್​ ಸಹಾಯದಿಂದ ಕಳೆದುಹೋದ ಸ್ಮಾರ್ಟ್​ಫೋನ್​ ಪತ್ತೆಹಚ್ಚಬಹುದು!

ಈ ವೇಳೆ ಮತ್ತೊಂದು ವಿಷಯವನ್ನು ನಾವು ಗಮನಿಸಬೇಕು. ಅದೇನೆಂದರೆ, ಸುಮಾರು 2 ದಶಕಗಳ ಹಿಂದೆ ಆ್ಯಪಲ್ ಕಂಪನಿ ಭಾರತದಲ್ಲಿ ತನ್ನ ಉದ್ಯಮವನ್ನು ಆರಂಭಿಸಿತ್ತು. ಜಗತ್ತಿನಾದ್ಯಂತ ಪ್ರಸ್ತುತ ಆ್ಯಪಲ್ ಸುಮಾರು 500 ರೀಟೇಲ್ ಮಳಿಗೆಗಳನ್ನು ಹೊಂದಿದೆ. ಇದೀಗ ಭಾರತದಲ್ಲಿ ಆರಂಭವಾಗುತ್ತಿರುವ ಆ್ಯಪಲ್ ಆನ್​ಲೈನ್ ಸ್ಟೋರ್ ತನ್ನ ಗ್ರಾಹಕರಿಗೆ ಜಗತ್ತಿನ ಬೇರೆಲ್ಲ ಆ್ಯಪಲ್ ಮಳಿಗೆಗಳಲ್ಲಿರುವ ಪ್ರಾಡಕ್ಟ್​ಗಳ ಗುಣಮಟ್ಟವನ್ನೇ ನೀಡಲಿದೆ.

ಈ ಆನ್​ಲೈನ್ ಸ್ಟೋರ್​ನ ವಿಶೇಷತೆ:

  • ಆ್ಯಪಲ್ ಆನ್​ಲೈನ್ ಸ್ಟೋರ್​ನಲ್ಲಿ ಪ್ರಾಡಕ್ಟ್​​ಗಳನ್ನು ಖರೀದಿಸುವ ಗ್ರಾಹಕರ ಎಲ್ಲ ಪ್ರಶ್ನೆಗಳಿಗೆ, ಸಂದೇಹಗಳಿಗೆ ಆ್ಯಪಲ್ ತಜ್ಞರು ಉತ್ತರಿಸಲಿದ್ದಾರೆ. ನಿಮಗೆ ಯಾವ ಪ್ರಾಡಕ್ಟ್​ ಬೆಸ್ಟ್​, ಯಾವ ರೀತಿಯ ಪೇಮೆಂಟ್ ಆಯ್ಕೆ ಮಾಡಿಕೊಳ್ಳಬಹುದು, ಡೆಲಿವರಿಯ ಸಂಶಯಗಳು ಎಲ್ಲದಕ್ಕೂ ಒಂದೇ ಕಡೆ ಪರಿಹಾರ ಸಿಗಲಿದೆ.
  • ಈ ಆನ್​ಲೈನ್ ಸ್ಟೋರ್​ನಲ್ಲಿ ಫ್ರೀ ಮತ್ತು ಸೇಫ್ ಆದ ಡೆಲಿವರಿ ಸಿಗಲಿದೆ. ನೀವು ಆರ್ಡರ್ ಮಾಡುವ ಪ್ರತಿಯೊಂದು ಉತ್ಪನ್ನವನ್ನೂ ಸ್ಯಾನಿಟೈಸ್ ಮಾಡಿ ಡೆಲಿವರಿ ನೀಡಲಾಗುತ್ತದೆ.

  • ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್​, ಕ್ರೆಡಿಟ್ ಇಎಂಐ, ರೂಪೇ, ಯುಪಿಐ, ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡಬಹುದು. ನೀವು ಯಾವುದಾದರೂ ಸಂಸ್ಥೆಗೆ ಡಿವೈಸ್ ಕೊಳ್ಳಲು ನಿರ್ಧರಿಸಿದ್ದರೆ ಹೆಚ್ಚುವರಿ ಆಫರ್ ಕೂಡ ಸಿಗಲಿದೆ ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ.

  • ನಿಮ್ಮ ಬಳಿ ಇರುವ ಹಳೆಯ ಐಫೋನ್​ಗಳನ್ನು ಹೊಸ ಐಫೋನ್​ಗಳ ಜೊತೆಗೆ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. ನೀವು ಆ್ಯಪಲ್ ಸಂಸ್ಥೆಯ ಕ್ವಿಜ್​ನಲ್ಲಿ ಭಾಗವಹಿಸಿದರೆ ಹೊಸ ಐಫೋನ್​ಗಳ ಮೇಲೆ ಭಾರೀ ರಿಯಾಯಿತಿ ಪಡೆಯಬಹುದು.

  • ನಿಮ್ಮ ಆ್ಯಪಲ್ ಉತ್ಪನ್ನಗಳ ಹಾರ್ಡ್​ವೇರ್, ಸಾಫ್ಟ್​ವೇರ್​ಗಳ ಸಮಸ್ಯೆಯ ಬಗ್ಗೆ ತಜ್ಞರಿಂದ ಸಲಹೆಗಳನ್ನು ಪಡೆಯಬಹುದು. ಹಾಗೇ, ಆ್ಯಪಲ್ ತಜ್ಞರ ಜೊತೆ ಆನ್​ಲೈನ್ ಸೆಷನ್​ನಲ್ಲೂ ಭಾಗಿಯಾಗಬಹುದು.

Published by: Sushma Chakre
First published: September 23, 2020, 10:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories